(VIDEO): ಲುಂಗಿ ಉಟ್ಟ ಅಜ್ಜನ ಕಾಲ್ಚೆಂಡಿನಾಟಕ್ಕೆ ಫುಟ್ಭಾಲ್ ಅಭಿಮಾನಿಗಳು ಫಿದಾ

news18
Updated:June 18, 2018, 10:46 PM IST
(VIDEO): ಲುಂಗಿ ಉಟ್ಟ ಅಜ್ಜನ ಕಾಲ್ಚೆಂಡಿನಾಟಕ್ಕೆ ಫುಟ್ಭಾಲ್ ಅಭಿಮಾನಿಗಳು ಫಿದಾ
news18
Updated: June 18, 2018, 10:46 PM IST
ನ್ಯೂಸ್ 18 ಕನ್ನಡ

ಮೊನ್ನೆಯಷ್ಟೇ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ದೊರಕಿದ್ದು, ಕಾಲ್ಚೆಂಡಿನ ರೋಚಕ ಕಾಳಗ ಕುತೂಹಲ ಕೆರಳಿಸುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಲುಂಗಿ ಉಟ್ಟ ಅಜ್ಜನ ಫುಟ್ಭಾಲ್ ಅಭ್ಯಾಸದ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಕಿರಣ್ ಕೆ. ಎಸ್ ಎಂಬವರು ಈ ವಿಡಿಯೋವನ್ನು ತಮ್ಮ ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸುಮಾರು 60 ವರ್ಷದ ವ್ಯಕ್ತಿಯೊಬ್ಬರು ಲುಂಗಿಯುಟ್ಟು ತಮ್ಮ ಕಾಲ್ಚೆಳಕ ಪ್ರದರ್ಶಿಸಿದ್ದಾರೆ. ಎರಡೂ ಕಾಲುಗಳಲ್ಲಿ ಚೆಂಡನ್ನು ನಿಯಂತ್ರಿಸುವುದರ ಜೊತೆಗೆ ಬೆನ್ನ ಹಾಗೂ ತಲೆಯ ಮೇಲೆ ವೃತ್ತಿಪರರು ಅಭ್ಯಾಸ ಮಾಡುವ ರೀತಿ ಸುಲಭವಾಗಿ ಈ ವ್ಯಕ್ತಿ ಮಾಡಿ ಬಿಡುತ್ತಾರೆ.



ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, 'ಬರಿಗಾಲಿನಲ್ಲಿ ಲುಂಗಿ ಉಟ್ಟು ಇಂಥಹ ಅದ್ಭುತ ಪ್ರದರ್ಶನ ತೋರುತ್ತಿರುವ ಈತನಿಗೆ ಹಣ ಬಲ, ಹೆಸರು ಹಾಗೆ ಲಿಯೋನೆಲ್ ಮೆಸ್ಸಿ ಅವರಿಗೆ ಸಿಕ್ಕ ಬೆಂಬಲ ದೊರಕಿದರೆ ಯಾವ ಮಟ್ಟಕ್ಕೆ ಬೆಳೆಯುತ್ತಿದ್ದರು?' ಎಂದು ಕಿರಣ್ ಅವರು ಬರೆದು ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
First published:June 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ