800 ಮಿಲಿಯನ್ ಡಾಲರ್ ಹೂಡಿಕೆ ಪಡೆದ Swiggy, 5 ಬಿಲಿಯನ್ ಡಾಲರ್ ಮುಟ್ಟಲಿರುವ ಸಂಸ್ಥೆಯ ಒಟ್ಟು ಮೌಲ್ಯ !

ಈ ಹೊಸಾ ಹೂಡಿಕೆಯಿಂದಾಗಿ ಸ್ವಿಗ್ಗಿಯ ಒಟ್ಟಾರೆ ಮೌಲ್ಯ 4.9 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಇದಿಷ್ಟಲ್ಲದೇ GIC ಪ್ರೈವೇಟ್ ಲಿಮಿಟೆಡ್ ಮತ್ತು ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಇಂದಲೂ ಸಂಸ್ಥೆ ಮತ್ತಷ್ಟು ಹೂಡಿಕೆಯ ನಿರೀಕ್ಷೆಯಲ್ಲಿದೆಯಂತೆ. ಈ ಎರಡೂ ಸಂಸ್ಥೆಗಳ ಜೊತೆಗಿನ ವಹಿವಾಟಿನ ನಂತರ ಹೊಸಾ ಹೂಡಿಕೆಗಳನ್ನು ತೆಗೆದುಕೊಳ್ಳದೇ ಇರಲು ಸ್ವಿಗ್ಗಿ ನಿರ್ಧರಿಸಿದೆ.

ಸ್ವಿಗ್ಗಿ ಲೊಗೊ

ಸ್ವಿಗ್ಗಿ ಲೊಗೊ

  • Share this:
Trending: ಆನ್​ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ 800 ಮಿಲಿಯನ್ ಡಾಲರ್​​ ಮೊತ್ತವನ್ನು ಹೂಡಿಕೆದಾರರಿಂದ ಪಡೆದಿದೆ. ಗೋಲ್ಡ್​ಮನ್ ಸಾಕ್ಸ್​​, ಅಮಾನ್ಸ ಕ್ಯಾಪಿಟಲ್, ಥಿಂಕ್ ಇನ್ವೆನ್ಸ್​​ಮೆಂಟ್ಸ್, ಫ್ಯಾಲಕ್ನ್ ಎಡ್ಜ್ ಮತ್ತು ಕಾರ್ಮಿಗ್ನ್ಯಾಕ್ ಸಂಸ್ಥೆಗಳು ಸ್ವಿಗ್ಗಿಯಲ್ಲಿ ಹಣ ಹೂಡಿವೆ. ಸಂಸ್ಥೆಯ ಉದ್ಯೋಗಿಗಳಿಗೆ ಸ್ವಿಗ್ಗಿ ಸಂಸ್ಥಾಪಕ ಶ್ರೀಹರ್ಷ ಮಜೇಟಿ ಕಳಿಸಿರುವ ಆಂತರಿಕ ಮೇಲ್​ನಲ್ಲಿ ಈ ವಿಚಾರ ತಿಳಿಸಿದ್ದಾರೆ.

‘ಮಿಂಟ್’​ನ ವರದಿಯ ಪ್ರಕಾರ, ಈ ಹೊಸಾ ಹೂಡಿಕೆಯಿಂದಾಗಿ ಸ್ವಿಗ್ಗಿಯ ಒಟ್ಟಾರೆ ಮೌಲ್ಯ 4.9 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಇದಿಷ್ಟಲ್ಲದೇ GIC ಪ್ರೈವೇಟ್ ಲಿಮಿಟೆಡ್ ಮತ್ತು ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಇಂದಲೂ ಸಂಸ್ಥೆ ಮತ್ತಷ್ಟು ಹೂಡಿಕೆಯ ನಿರೀಕ್ಷೆಯಲ್ಲಿದೆಯಂತೆ. ಈ ಎರಡೂ ಸಂಸ್ಥೆಗಳ ಜೊತೆಗಿನ ವಹಿವಾಟಿನ ನಂತರ ಹೊಸಾ ಹೂಡಿಕೆಗಳನ್ನು ತೆಗೆದುಕೊಳ್ಳದೇ ಇರಲು ಸ್ವಿಗ್ಗಿ ನಿರ್ಧರಿಸಿದೆ.

ಉದ್ಯೋಗಿಗಳಿಗೆ ಸ್ವಿಗ್ಗಿ ಸಂಸ್ಥಾಪಕ ಶ್ರೀಹರ್ಷ ಮmಜೇಟಿ ಬರೆದಿರುವ ಪತ್ರದಲ್ಲಿ“ಈ ಹೂಡಿಕೆ ನಾವು ಒಟ್ಟಾರೆ ವಹಿವಾಟಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ವೇಗ ಮತ್ತು ಶಕ್ತಿ ತುಂಬಲಿದೆ" ಎಂದಿದ್ದಾರೆ. ಅಲ್ಲದೇ ಸಂಸ್ಥೆಯು ಭವಿಷ್ಯದಲ್ಲಿ ಹೊಸಾ ಸೇವೆಗಳ ಆರಂಭದ ಬಗ್ಗೆಯೂ ಗಮನ ಹರಿಸಲಿದ್ದು ಆಗ ಮತ್ತಷ್ಟು ಹೂಡಿಕೆಯತ್ತ ಗಮನ ಹರಿಸಲಿದೆ ಎಂದಿದ್ದಾರೆ.

ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಾದ್ಯಂತ ಲಾಕ್​ಡೌನ್ ಇದ್ದಾಗ ಫುಡ್ ಡೆಲಿವರಿ ಸಂಸ್ಥೆಗಳಾದ Zomato ಮತ್ತು Swiggy ವಹಿವಾಟಿಗೆ ಭಾರೀ ಹೊಡೆತ ಬಿದ್ದಿತ್ತು. ಬೇರೆ ದಾರಿ ಇಲ್ಲದೆ ನಷ್ಟ ಭರಿಸಲು ಎರಡೂ ಸಂಸ್ಥೆಗಳು ಸಾಕಷ್ಟು ಉದ್ಯೋಗಿಗಳಿಗೆ ಗೇಟ್​ಪಾಸ್ ನೀಡಿದ್ದವು. ಆದರೆ ವರ್ಷಾಂತ್ಯದ ವೇಳೆಗೆ ಈ ಎರಡೂ ಸಂಸ್ಥೆಗಳು ದಾಖಲೆಯ ಮಟ್ಟದ ದೈನಂದಿನ ಆರ್ಡರ್ ಪಡೆದಿರುವುದಾಗಿ ತಿಳಿಸಿದ್ದವು.

ಅಲ್ಲದೇ, ಸ್ವಿಗ್ಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವ ಗ್ರಾಹಕರಿಗಾಗಿ Health Hub ಎನ್ನುವ ವಿಭಿನ್ನ ವಿಭಾಗ ಆರಂಭಿಸಿದೆ. ಜೊತೆಗೆ ದೇಶದ ಕೆಲ ಭಾಗಗಳಲ್ಲಿ ಬೇಕರಿಗಳಿಂದಲೂ ಆಹಾರ ವಿತರಣೆ ಮಾಡಲು ಆರಂಭಿಸಿದೆ.

ಕಳೆದ ವರ್ಷ ಏಪ್ರಿಲ್​ನಲ್ಲಿ ಸೀರೀಸ್ 1ರಲ್ಲಿ ಸ್ವಿಗ್ಗಿ158 ಮಿಲಿಯನ್ ಡಾಲರ್ ಹೂಡಿಕೆ ಪಡೆದಿತ್ತು. Tencent, Meituan Dianping, Prosus NV, Ark Impact ಮತ್ತು ಕೊರಿಯಾ ಇನ್ವೆನ್ಸ್ಟ್​ಮೆಂಟ್ ಪಾರ್ಟ್ನರ್ಸ್ ಗಳು ಸ್ವಿಗ್ಗಿಯಲ್ಲಿ ಹಣ ಹೂಡಿದ್ದರು.
Published by:Soumya KN
First published: