• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Video: ಗಗನಯಾತ್ರಿಗಳಿಗೂ ಫುಡ್ ಡೆಲಿವರಿ! ಅಂತರಿಕ್ಷಕ್ಕೆ ಹೋಗಿ ಊಟ ಕೊಟ್ಟು ಬಂದ ಜಪಾನ್ ವ್ಯಕ್ತಿ

Video: ಗಗನಯಾತ್ರಿಗಳಿಗೂ ಫುಡ್ ಡೆಲಿವರಿ! ಅಂತರಿಕ್ಷಕ್ಕೆ ಹೋಗಿ ಊಟ ಕೊಟ್ಟು ಬಂದ ಜಪಾನ್ ವ್ಯಕ್ತಿ

ಯುಸಾಕು ಮೇಜಾವಾ

ಯುಸಾಕು ಮೇಜಾವಾ

ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರು ಉಬರ್ ಈಟ್ಸ್ ಪರವಾಗಿ ಈ ಆಹಾರವನ್ನು ವಿತರಿಸಿದ್ದಾರೆ. ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಗಗನಯಾತ್ರಿಗಳಿಗೆ ಆಹಾರವನ್ನು ತಲುಪಿಸಿದರು. ಡಿಸೆಂಬರ್ 11 ರಂದು, ಸುಮಾರು 9 ಗಂಟೆಗಳ ರಾಕೆಟ್ ಪ್ರಯಾಣದ ನಂತರ ಮಜಾವಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದರು.

ಮುಂದೆ ಓದಿ ...
  • Share this:

ಆಹಾರ ವಿತರಣಾ ಕಂಪನಿ ಉಬರ್ ಈಟ್ಸ್ (Uber Eats) ಬಾಹ್ಯಾಕಾಶಕ್ಕೆ (Space) ಆಹಾರವನ್ನು ತಲುಪಿಸುವ (Food Delivery) ಮೂಲಕ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಆಹಾರ ಸಾಗಿಸಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ವೀಡಿಯೊವನ್ನು ಉಬರ್ ಈಟ್ಸ್ ಬಿಡುಗಡೆ ಮಾಡಿದೆ.


9 ಗಂಟೆಗಳ ಪ್ರಯಾಣ


ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ (Japanese bilionaire Yusaku Maezawa) ಅವರು ಉಬರ್ ಈಟ್ಸ್ ಪರವಾಗಿ ಈ ಆಹಾರವನ್ನು ವಿತರಿಸಿದ್ದಾರೆ. ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಗಗನಯಾತ್ರಿಗಳಿಗೆ ಆಹಾರವನ್ನು ತಲುಪಿಸಿದರು. ಡಿಸೆಂಬರ್ 11 ರಂದು, ಸುಮಾರು 9 ಗಂಟೆಗಳ ರಾಕೆಟ್ ಪ್ರಯಾಣದ ನಂತರ ಮಜಾವಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದರು. ಮೇಜಾವಾ (Maezawa) ಡಿಸೆಂಬರ್ 8 ರಂದು ಗಗನಯಾತ್ರಿಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಡಬ್ಬಿಯಲ್ಲಿ ಆಹಾರಗಳನ್ನು ಹೊಂದಿರುವ ಕಂಪನಿಯ ಚೀಲವನ್ನು ತೆಗೆದುಕೊಂಡು ಹೋದರು. ಯುಸಾಕು ಮೇಜಾವಾ ಅವರು ISS ನಲ್ಲಿ ಸುಮಾರು 12 ದಿನಗಳನ್ನು ಉಳಿಯಲಿದ್ದಾರೆ.


ಧನ್ಯವಾದ ಹೇಳಿದ ಗಗನಯಾತ್ರಿಗಳು


ಉಬರ್ ಈಟ್ಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಎಲ್ಲಾ ಪ್ರಯಾಣಿಕರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ, ಆ ಸಮಯದಲ್ಲಿ ಮೆಜಾವಾ ಬಾಗಿಲು ತೆರೆದು ಆಹಾರದ ಪ್ಯಾಕೆಟ್‌ಗಳನ್ನು ಗಗನಯಾತ್ರಿಗಳ ಕಡೆಗೆ ಎಸೆಯುತ್ತಾರೆ. ISS ನಲ್ಲಿ ಗುರುತ್ವಾಕರ್ಷಣೆ ಇಲ್ಲ, ಈ ಕಾರಣದಿಂದಾಗಿ ಪ್ಯಾಕೆಟ್ ಎಸೆಯುವ ಮೂಲಕ ಗಗನಯಾತ್ರಿಗಳನ್ನು ತಲುಪುತ್ತದೆ. ಆಹಾರದ ವಿತರಣೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಗಗನಯಾತ್ರಿ, 'ಹೇ ಉಬರ್ ಈಟ್ಸ್, ಧನ್ಯವಾದಗಳು' ಎಂದು ಹೇಳಿದರು.



ಫುಡ್ ಪ್ಯಾಕೆಟ್ ನಲ್ಲಿ ಏನಿತ್ತು?


ಆಹಾರದ ಪ್ಯಾಕೆಟ್‌ನಲ್ಲಿ ಸಿಹಿ ಸಾಸ್‌ ಜೊತೆಗೆ ಬೇಯಿಸಿದ ಮಾಂಸವಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನು ಗಗನಯಾತ್ರಿಗಳು ತಿನ್ನಲು ಸಾಧ್ಯವಾಗುವಂತೆ ಸ್ಥಿರ ಮಾನದಂಡಗಳೊಂದಿಗೆ ತಯಾರಿಸಲಾಯಿತು. ಆಹಾರ ವಿತರಣೆಯನ್ನು ಎಲ್ಲಾ ಕಡೆ ತಲುಪಿಸುವುದು ಕಂಪನಿಯ ಮುಖ್ಯ ಗುರಿಯಾಗಿದ್ದು, ಆ ಗುರಿಯನ್ನು ಈಗ ಈಡೇರಿಸಲಾಗಿದೆ ಎಂದು ಉಬರ್ ಸಿಇಒ ಹೇಳಿದ್ದಾರೆ.





ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ

top videos


    ಗಮನಾರ್ಹವಾಗಿ, ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಭೂಮಿಯವರೆಗಿನ ವಿಡಿಯೋ ಲ್ಯಾಪ್ಸ್ ಅನ್ನು ಹಂಚಿಕೊಂಡಿದ್ದಾರೆ. ಮೆಜಾವಾ ಅವರು ಈ ವೀಡಿಯೊದ ಶೀರ್ಷಿಕೆಯಲ್ಲಿ, ‘ಇದು ನಿಖರವಾಗಿ ಭೂಮಿಯ ಒಂದು ಸುತ್ತು’ಎಂದು ಬರೆದಿದ್ದಾರೆ.

    First published: