• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಇಂಡಿಗೋ ಮೂಲಕ ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದೀರಾ? ಇಲ್ಲಿದೆ ಮಾರ್ಗಸೂಚಿಗಳು

ಇಂಡಿಗೋ ಮೂಲಕ ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದೀರಾ? ಇಲ್ಲಿದೆ ಮಾರ್ಗಸೂಚಿಗಳು

ಇಂಡಿಗೋ

ಇಂಡಿಗೋ

IndiGo Flight: ಮಾಲ್ಡೀವ್ಸ್ ಪ್ರವೇಶಿಸಬೇಕಿದ್ದರೆ, ಪ್ರವಾಸಿಗರು ನೆಗೆಟಿವ್ ಪಿಸಿಆರ್ ಫಲಿತಾಂಶ ಹೊಂದಿರಬೇಕು. ಉಳಿದ ಮಾಹಿತಿಗಳು ಅದಕ್ಕೆ ಅನುಸಾರವಾಗಿರುವುದು” ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಟ್ವೀಟ್‍ನಲ್ಲಿ ತಿಳಿಸಲಾಗಿದೆ.

  • Share this:

    ಜಗತ್ತಿನಾದ್ಯಂತ ಕೋವಿಡ್ -19 ಕೊಂಚ ನಿಯಂತ್ರಣಕ್ಕೆ ಬಂದಿರುವುದರಿಂದ, ಹಲವಾರು ದೇಶಗಳು ತಮ್ಮ ಗಡಿಯನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ತೆರೆಯುತ್ತಿವೆ. ಕಡಿಮೆ ದರದ ಪ್ರಮುಖ ಏರ್‌ಲೈನ್‌ ಇಂಡಿಗೋ , ಮಾಲೆ (ಮಾಲ್ಡೀವ್ಸ್) , ಕೊಲಂಬೋ (ಶ್ರೀಲಂಕಾ), ದುಬೈ, ಶಾರ್ಜಾ, ಅಬು ಧಾಬಿ, ಕುವೈಟ್ ಪಟ್ಟಣ, ಮಸ್ಕತ್ ಮತ್ತು ಢಾಕಾ(ಬಾಂಗ್ಲಾದೇಶ)ಗೆ ವಿಮಾನ ಹಾರಾಟವನ್ನು ಆರಂಭಿಸಿದೆ.ಕೊರೋನಾ ವೈರಸ್ 3ನೇ ಅಲೆಯ ಸಾಧ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಇಂಡಿಗೋ ಏರ್‌ಲೈನ್ಸ್ ತಮ್ಮ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ನಗರವಾರು ಮಾರ್ಗಸೂಚಿಗಳನ್ನು ಪಟ್ಟಿ ಮಾಡಿದೆ. ಸರಕಾರದ ಮಾರ್ಗಸೂಚನೆಗಳನ್ನು ಅನುಸರಿಸದವರಿಗೆ ವಿಮಾನ ಹತ್ತಲು ಅವಕಾಶ ನೀಡುವುದಿಲ್ಲ ಎಂದು ಇಂಡಿಗೋ ಎಚ್ಚರಿಕೆ ನೀಡಿದೆ. ನೀವು ಇಂಡಿಗೋ ಏರ್‌ಲೈನ್ಸ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದ್ದರೆ, ನಿಮಗಾಗಿ ಈ ಕೆಳಗಿದೆ ಒಂದಿಷ್ಟು ಮಾಹಿತಿ.


    ಮಾಲ್ಡೀವ್ಸ್


    ಭಾರತದಿಂದ ಮಾಲ್ಡೀವ್ಸ್‌ಗೆ ಪ್ರಯಾಣಿಸುವವರು, ಪ್ರಪ್ರಥಮವಾಗಿ ಕೋವಿಡ್ -19 ಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ನೀಡಲೇಬೇಕು. “ಮಾಲ್ಡೀವ್ಸ್ ಜುಲೈ 15ರಿಂದ ದಕ್ಷಿಣ ಆಫ್ರಿಕಾದಿಂದ ಬರುವ ಪ್ರವಾಸಿಗರಿಗಾಗಿ ಆನ್ ಅರೈವಲ್ ಟೂರಿಸ್ಟ್ ವೀಸಾ ನೀಡುವುದನ್ನು ಮತ್ತೆ ಆರಂಭಿಸಲಿದೆ. ಮಾಲ್ಡೀವ್ಸ್ ಪ್ರವೇಶಿಸಬೇಕಿದ್ದರೆ, ಪ್ರವಾಸಿಗರು ನೆಗೆಟಿವ್ ಪಿಸಿಆರ್ ಫಲಿತಾಂಶ ಹೊಂದಿರಬೇಕು. ಉಳಿದ ಮಾಹಿತಿಗಳು ಅದಕ್ಕೆ ಅನುಸಾರವಾಗಿರುವುದು” ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಟ್ವೀಟ್‍ನಲ್ಲಿ ತಿಳಿಸಲಾಗಿದೆ.


    ಶ್ರೀಲಂಕಾ


    ಭಾರತದಿಂದ ಕೊಲೊಂಬೋಗೆ ಪ್ರಯಾಣಿಸಲು ಅವಕಾಶವಿರುವ ಪ್ರಯಾಣಿಕರಲ್ಲಿ, ಶ್ರೀಲಂಕಾದ ಪ್ರಜೆಗಳು ಮತ್ತು ನಿವಾಸಿಗಳು, ಉದ್ಯಮಿಗಳು, ಭಾರತೀಯ ಆರೋಗ್ಯ ವೃತ್ತಿಪರರು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಸೇರಿದ್ದಾರೆ. ಪ್ರಯಾಣಿಕರು ವಿಮಾನ ನಿಲ್ದಾಣ ಆರೋಗ್ಯ ಕೌಂಟರ್‌ಗಳಲ್ಲಿ, ವಿಮಾನ ನಿಲ್ದಾಣ ಆರೋಗ್ಯ ಕಚೇರಿಯ ಸಿಬ್ಬಂದಿಗೆ ಪೂರ್ಣಗೊಳಿಸಿದ ಆರೋಗ್ಯ ಗೋಷಣೆ ನಮೂನೆಯನ್ನು ಸಲ್ಲಿಸಬೇಕು. ಶ್ರೀಲಂಕಾಗೆ ತಲುಪಿದ 10 ಗಂಟೆಯ ಒಳಗೆ ಸಂಪರ್ಕ ವಿಮಾನದ ಸಮಯ ನಿಗದಿ ಆಗಿದ್ದರೆ, ಶ್ರೀಲಂಕಾ ಮೂಲಕ ಪ್ರಯಾಣಿಸಲು ಕೂಡ ಅವಕಾಶ ಇದೆ. ಅದಲ್ಲದೆ, ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್ ಪಡೆದ ಪ್ರಯಾಣಿಕರನ್ನು ಪರೀಕ್ಷೆ ಮತ್ತು ಕ್ವಾರಂಟೈನ್ ನಿರ್ಬಂಧಗಳಿಂದ ಹೊರಗಿಡಲು ಅವಕಾಶವಿರಬಹುದು.


    ಢಾಕಾ (ಬಾಂಗ್ಲಾದೇಶ)


    ಬಾಂಗ್ಲಾದೇಶಕ್ಕೆ ಹೋಗುವ ಎಲ್ಲಾ ಪ್ರಯಾಣಿಕರು, ಅಲ್ಲಿ ತಲುಪಿದ ನಂತರ ಸ್ವಯಂ-ಆರೋಗ್ಯ ಘೋಷಣಾ ನಮೂನೆಯನ್ನು ಅಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಬೇಕು.ಬಾಂಗ್ಲಾದೇಶದ ವೀಸಾ ಹೊಂದಿರುವ ವಿದೇಶಿ ಪ್ರಯಾಣಿಕರಿಗೆ ಬಾಂಗ್ಲಾ ದೇಶಕ್ಕೆ ಪ್ರಯಾಣಿಸಲು ಅನುಮತಿ ಇದೆ ಮತ್ತು ಅವರ ಪ್ರಯಾಣದ 72 ಗಂಟೆಗಳ ಒಳಗೆ ನೀಡಲಾದ ನೆಗೆಟಿವ್ ಆರ್ಟಿ‌ ಪಿಸಿಆರ್ ವರದಿ ಹೊಂದಿರುವುದು ಕಡ್ಡಾಯ. ಸೂಕ್ತ ನೆಗೆಟಿವ್ ಆರ್‌ಟಿ ಪಿಸಿಆರ್ ವರದಿ ಹೊಂದಿಲ್ಲದ ಪ್ರಯಾಣಿಕರಿಗೆ ವಿಮಾನ ಹತ್ತಲು ಅವಕಾಶ ನೀಡಲಾಗುವುದಿಲ್ಲ.


    ಗಮನಿಸಿ:10 ವರ್ಷದ ಒಳಗಿನ ಮಕ್ಕಳಿಗೆ ಪೂರ್ವ-ಕೋವಿಡ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
    ಡಬ್ಲ್ಯುಹೆಚ್‍ಓ ಪಟ್ಟಿ ಮಾಡಿದ / ಅನುಮೋದಿತ ಲಸಿಕೆ ಪಡೆದ ಪ್ರಯಾಣಿಕರು (ಲಸಿಕೆಯ ಎರಡೂ ಡೋಸ್ ಪಡೆದಿರಬೇಕು ಮತ್ತು ಎರಡನೇ ಡೋಸ್ ಪಡೆದು 14 ದಿನಗಳನ್ನು ಪೂರೈಸಿರಬೇಕು) ಪೂರ್ವ - ನಿರ್ಗಮನದ ಆರ್‌ಟಿ ಪಿಸಿಆರ್ ಪರೀಕ್ಷೆಯಿಂದ ವಿನಾಯಿತಿ ಪಡೆಯುವುದಿಲ್ಲ. ನಿರ್ಗಮನದ 72 ಗಂಟೆಗಳ ಒಳಗೆ ಅದನ್ನು ನಡೆಸಿರಬೇಕು. ಪ್ರವಾಸಿ ವೀಸಾ ಹೊಂದಿರುವವರಿಗೆ ಮುಂದಿನ ಸೂಚನೆಗಳು ಬರುವವರೆಗೂ ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ಅವಕಾಶ ಇರುವುದಿಲ್ಲ.

    top videos
      First published: