ಈ ಜಾಕೆಟ್ ಧರಿಸಿದರೆ ನೀವೂ ಕೂಡ ಐರನ್ ಮ್ಯಾನ್​ನಂತೆ ಹಾರಬಹುದು

news18
Updated:October 7, 2018, 12:24 PM IST
ಈ ಜಾಕೆಟ್ ಧರಿಸಿದರೆ ನೀವೂ ಕೂಡ ಐರನ್ ಮ್ಯಾನ್​ನಂತೆ ಹಾರಬಹುದು
@youtube
  • Advertorial
  • Last Updated: October 7, 2018, 12:24 PM IST
  • Share this:
-ನ್ಯೂಸ್ 18 ಕನ್ನಡ

ಬಾನೆತ್ತರ ಹಾರುವ ಆಸೆ ಯಾರಿಗಿಲ್ಲ ಹೇಳಿ? ಅದಕ್ಕಾಗಿಯೇ ಅಲ್ವಾ ವಿಮಾನಗಳು ಪ್ಯಾರಾಚೂಟ್​​ಗಳು ಇರುವುದು ಎಂದು ನೀವು ಹೇಳಿದರೆ, ಅದೆಲ್ಲವೂ ಹಳೆಯ ಯುಗಕ್ಕೆ ಸೇರಿದೆ ಎಂದೇಳಬಹುದು. ಏಕೆಂದರೆ ಇನ್ನು ಮುಂದೆ ಸಿನಿಮಾಗಳಲ್ಲಿ ಸೂಪರ್​ ಮ್ಯಾನ್​ಗಳು ಮಾಡುತ್ತಿದ್ದ ಸಾಹಸಗಳನ್ನು ನೀವೂ ಕೂಡ ಮಾಡಬಹುದು. ಹೌದು, ಖ್ಯಾತ ಆ್ಯಕ್ಷನ್ ಫಿಕ್ಷನ್ ಸಿನಿಮಾ 'ಐರನ್ ಮ್ಯಾನ್' ಶೈಲಿಯ ಹಾರುವ ಜೆಟ್​ ಸೂಟ್​ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

@youtube


ಈ ಹಿಂದೆಯೇ ಸುದ್ದಿಯಾಗಿದ್ದ ಜೆಟ್ ಜಾಕೆಟ್​​ಗಳನ್ನು ಬ್ರಿಟನ್​ನ ರಿಚರ್ಡ್​ ಬ್ರೌನಿಂಗ್ ನಿರ್ಮಿಸಿದ್ದಾರೆ. ಈ ನೂತನ ಜಾಕೆಟ್​ಗಳಲ್ಲಿ ಜೆಟ್​ ಮಾದರಿಯ ಇಂಜಿನ್​ಗಳನ್ನು ಅಳವಡಿಸಲಾಗಿದ್ದು ಅದರ ಸಹಾಯದಿಂದ ಸೂಟ್​ ಧರಿಸಿರುವವರು ಬಯಸಿದಾಗ ಬಾನೆತ್ತರಕ್ಕೆ ಹಾರಬಹುದು.

ಜೆಟ್​ ಇಂಧನ ಅಥವಾ ಡೀಸಲ್​ನಲ್ಲಿ ಚಲಿಸುವ ಈ ಜೆಟ್ ಸೂಟ್​ ಗಂಟೆಗೆ 51 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಅಲ್ಲದೆ 12 ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ಹಾರುವ ಸೂಟ್​ಗಳಲ್ಲಿ ಐದು ಮಿನಿ ಜೆಟ್​ ಇಂಜಿನ್​ಗಳನ್ನು ಅಳವಡಿಸಿದ್ದು, ಇದು ಧರಿಸುವ ವ್ಯಕ್ತಿಯ ಕೈಗಳ ಭಾಗಗಳಿಗೆ ಮತ್ತು ಬೆನ್ನಿಗಿರಿಸಲಾಗುತ್ತದೆ. ಎಲೆಕ್ಟ್ರಾನಿಕ್ಸ್ ಭಾಗಗಳು ಮತ್ತು 3D ವಿನ್ಯಾಸಗಳಿಂದ ಕೂಡಿರುವ ಈ ಸೂಟ್​ನ ಒಟ್ಟು ತೂಕ 59 lbs.

@nextbigfuture.com


ಐರನ್ ಮ್ಯಾನ್​ ಸಿನಿಮಾದಲ್ಲಿ ರಾಬರ್ಟ್​ ಡ್ಯಾನಿ ಜೂನಿಯರ್. ಧರಿಸಿದ್ದ ಪವರ್ ಜಾಕೆಟ್​ಗಳನ್ನು ಹೋಲುವ ಈ ಸೂಟ್​ಗಳು ಲಂಡನ್ ಡಿಪಾರ್ಟ್ಮೆಂಟ್ ಸ್ಟೋರ್​ಗಳಲ್ಲಿ ಲಭ್ಯವಿದೆ. ಇದರ ಬೆಲೆಯು 3,40,000 ಪೌಂಡ್ ( ಸುಮಾರು 3,29,80000 ರೂ.) ಆಗಿದ್ದು, ಶೀಘ್ರದಲ್ಲೇ ವಿಶ್ವದ ಎಲ್ಲ ಮಾರುಕಟ್ಟೆಯಲ್ಲೂ ಈ ಹಾರುವ ಜಾಕೆಟ್​ ಸಿಗುವಂತೆ ಮಾಡುವ ಇರಾದೆಯಲ್ಲಿದ್ದಾರೆ ರಿಚರ್ಡ್​ ಬ್ರೌನಿಂಗ್.
@nextbigfuture.com


ಏರೋನಾಟಿಕಲ್ ಟೆಕ್ನಾಲಜಿ ಬಳಸಿ ಸಿದ್ದಡಿಸಿರುವ ಈ ಜಾಕೆಟ್​ಗಳ ಬಗ್ಗೆ ಈಗಾಗಲೇ ಆಂಗ್ಲರ ನಾಡಿನ ಜನರಲ್ಲಿ ಕುತೂಹಲ ಕೆರಳಿದ್ದು, ಮುಂಬರುವ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳಿಗೆ ಜೆಟ್​ ಸೂಟ್​ ಪರಿಹಾರವಾಗಲಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ವಿಮಾನ, ಹೆಲಿಕಾಪ್ಟರ್​, ಪ್ಯಾರಚೂಟ್​ಗಳ ಮೂಲಕ ಹಾರಬೇಕೆಂಬ ಕನಸು ಕಾಣುತ್ತಿದ್ದ ಜನರಿಗೆ ನಿಂತಲ್ಲಿಂದಲೇ ಹಾರುವ ಹೊಸ ಕನಸೊಂದು ಶುರುವಾಗಿರುವುದಂತು ಸುಳ್ಳಲ್ಲ.
First published:October 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ