Kacha Badam: ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡು ನುಡಿಸಿದ ಬಲೂನ್ ವ್ಯಾಪಾರಿ! ನೀವೂ ಒಮ್ಮೆ ಕೇಳಿ

ವೈರಲ್ ಜಿಂಗಲ್‌ನ ಕೊಳಲು ಆವೃತ್ತಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸೂರ್ಯವಚನ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ಕಿರು ವೀಡಿಯೋದಲ್ಲಿ ಒಬ್ಬ ಬಲೂನ್ ಮತ್ತು ಆಟಿಕೆ ಸಾಮಾನುಗಳ ಮಾರಾಟಗಾರನು ತನ್ನ ಒಂದು ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡನ್ನು ನುಡಿಸುತ್ತಿರುವುದನ್ನು ನಾವು ನೋಡಬಹುದು.

ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡನ್ನು ನುಡಿಸಿರುವ ಬಲೂನ್ ವ್ಯಾಪಾರಿ

ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡನ್ನು ನುಡಿಸಿರುವ ಬಲೂನ್ ವ್ಯಾಪಾರಿ

  • Share this:
ಕೆಲವು ಹಾಡುಗಳು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಬಹು ಬೇಗನೆ ಹಿಟ್ ಆಗುತ್ತವೆ ಮತ್ತು ಜನರಿಂದ ಜನರಿಗೆ ಬೇಗ ಈ ಹಾಡುಗಳು (Song) ಹೇಗಿವೆ ಅಂತ ಮಾಹಿತಿ ರವಾನೆ ಆಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲವು ಹಾಡುಗಳು ಬಿಡುಗಡೆಯಾದ ಅನೇಕ ದಿನಗಳು ಆದ ಮೇಲೆ ನಿಧಾನವಾಗಿ ಜನಪ್ರಿಯವಾಗುತ್ತವೆ. ‘ಕಚ್ಚಾ ಬಾದಾಮ್’ (Kacha Badam) ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ವಿಳಂಬವಾಗಿ ವೈರಲ್ (Viral Video) ಆದ ಹಾಡುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಇದು ಇಂದು ವಿಶ್ವದೆಲ್ಲೆಡೆಯ ಜನರ ಮನ ಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಹಳ್ಳಿಯಿಂದ ದಿಲ್ಲಿಯವರೆಗೆ ಬಹುತೇಕರು ಈ ಹಾಡನ್ನು ಹಾಡುತ್ತಾ ಇರುತ್ತಾರೆ ಎಂದು ಹೇಳಬಹುದು.

ಇದನ್ನು ಯಾರೋ ಜನಪ್ರಿಯ ರ್‍ಯಾಪರ್ ಬರೆದು, ಹಾಡಿರುವ ಹಾಡೆಂದು ತಪ್ಪಾಗಿ ತಿಳಿದುಕೊಳ್ಳಬೇಡಿ, ವಾಸ್ತವದಲ್ಲಿ, ಕಡಲೇಕಾಯಿ ಮಾರುವ ವ್ಯಾಪಾರಿಯೊಬ್ಬರು ಹಾಡಿದ ಹಾಡಿದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅವರೇ ಈ ಹಾಡಿನ ಸೃಷ್ಟಿಕರ್ತ ಮತ್ತು ಸಂಗೀತ ಸಂಯೋಜಕರೆಂದು ಹೇಳಬಹುದು.

ಕಡಲೇಕಾಯಿ ವ್ಯಾಪಾರಿಯ ವೈರಲ್ ಹಾಡು
ಆ ಕಡಲೇಕಾಯಿ ವ್ಯಾಪಾರಿ ಪಶ್ಚಿಮ ಬಂಗಾಳದ ಬೀರ್‍ಭೂಮ್ ಜಿಲ್ಲೆಯ ನಿವಾಸಿಯಾಗಿದ್ದು ಅವರ ಹೆಸರು ಭುಬನ್ ಬಡ್ಯಾಕರ್ ಅಂತ. ಇದೆಲ್ಲಾ ಈಗ ಬಹುತೇಕರಿಗೆ ತಿಳಿದಿರುವ ಮಾಹಿತಿ ಬಿಡಿ. ಈ ಹಾಡು ವೈರಲ್ ಆಗಿ ಈಗಾಗಲೇ ತುಂಬಾ ಸಮಯವಾದರೂ ಸಹ ಇದರ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ ಎಂದು ಹೇಳುವುದಕ್ಕೆ ಇಲ್ಲೊಂದು ಹೊಸ ಸಾಕ್ಷಿ ಸಿಕ್ಕಿದೆ ನೋಡಿ.

ಕಳೆದ ಕೆಲವು ತಿಂಗಳುಗಳಲ್ಲಿ, ಪಶ್ಚಿಮ ಬಂಗಾಳದ ಬೀರ್‍ಭೂಮ್ ಜಿಲ್ಲೆಯ ಕಡಲೇಕಾಯಿ ಮಾರಾಟಗಾರರಾದ ಭುಬನ್ ಅವರು ಸಂಯೋಜಿಸಿದ ಮತ್ತು ಹಾಡಿರುವ ಜಿಂಗಲ್ ಈಗ ಹಲವಾರು ಕವರ್‌ಗಳು ಮತ್ತು ಆವೃತ್ತಿಗಳನ್ನು ಕಂಡಿದೆ ಎಂದು ಹೇಳಬಹುದು.

ಕೊಳಲಿನಲ್ಲಿ ಕಚ್ಚಾ ಬಾದಾಮ್ ಹಾಡನ್ನು ನುಡಿಸಿದ ಬಲೂನ್ ಮಾರಾಟಗಾರ
ಸೋಮವಾರ, ವೈರಲ್ ಜಿಂಗಲ್‌ನ ಕೊಳಲು ಆವೃತ್ತಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸೂರ್ಯವಚನ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ಕಿರು ವೀಡಿಯೋದಲ್ಲಿ ಒಬ್ಬ ಬಲೂನ್ ಮತ್ತು ಆಟಿಕೆ ಸಾಮಾನುಗಳ ಮಾರಾಟಗಾರನು ತನ್ನ ಒಂದು ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡನ್ನು ನುಡಿಸುತ್ತಿರುವುದನ್ನು ನಾವು ನೋಡಬಹುದು.

ಇದನ್ನೂ ಓದಿ:  Bedroom Life: ಬೆಡ್​​ರೂಂಗೆ ಬಂದು ಫೋಟೋ ಕ್ಲಿಕ್ಕಿಸೋ ಕಳ್ಳ ಫೋಟೋಗ್ರಫರ್ ಭಾರೀ ಫೇಮಸ್

20 ಸೆಕೆಂಡುಗಳ ಚಿಕ್ಕ ವೀಡಿಯೋವನ್ನು ಒಡಿಶಾದ ಕರಾವಳಿ ನಗರವಾದ ಪುರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಈ ವ್ಯಕ್ತಿಯ ಕೊಳಲು ನುಡಿಸುವ ಕೌಶಲ್ಯಕ್ಕೆ ತುಂಬಾನೇ ಶ್ಲಾಘನೆಯೂ ಬಂದಿದೆ. ಟ್ವಿಟರ್ ಬಳಕೆದಾರರೊಬ್ಬರು ಇದನ್ನು ನೋಡಿ “ಅದ್ಭುತ ಪ್ರದರ್ಶನ, ಪ್ರತಿಭಾವಂತ ಭಾರತೀಯ” ಎಂದು ಬರೆದಿದ್ದಾರೆ.ಉತ್ತಮ ಸಂಗೀತವು ಭಾಷೆ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಹೇಗೆ ಮೀರಿಸುತ್ತದೆ ಎಂಬುದಕ್ಕೆ ‘ಕಚ್ಚಾ ಬಾದಾಮ್’ ಎಂಬ ಹಾಡು ಒಂದು ಪರಿಪೂರ್ಣ ಉದಾಹರಣೆಯಾಗಿದೆ ಎಂದು ಹೇಳಬಹುದು. ನವೆಂಬರ್ 2021 ರಲ್ಲಿ ಇದು ವೈರಲ್ ಆದಾಗಿನಿಂದಲೂ ದೇಶಾದ್ಯಂತ ಜನರು ಲೆಕ್ಕವಿಲ್ಲದಷ್ಟು ವೀಡಿಯೋಗಳಲ್ಲಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಹೇಳಬಹುದು.

ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಜಿಂಗಲ್ ಸಿದ್ಧಪಡಿಸಿದ ಭುಬನ್
ಹಳೆಯ ಮರುಬಳಕೆ ಮಾಡಬಹುದಾದ ವಸ್ತುಗಳು ಮತ್ತು ಪಾತ್ರೆಗಳನ್ನು ಮಾರಾಟ ಮಾಡುವ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಭುಬನ್ ಅವರು ಈ ಜನಪ್ರಿಯವಾದ ಜಾನಪದ ರಾಗದಲ್ಲಿ ಜಿಂಗಲ್ ಅನ್ನು ಸಿದ್ಧಪಡಿಸಿದ್ದರು. ಫೆಬ್ರವರಿಯಲ್ಲಿ, ಪ್ರಸಿದ್ಧ ಹರಿಯಾಣದ ಗಾಯಕ ಮತ್ತು ನಟರಾದ ಅಮಿತ್ ಧುಲ್ ಅವರು ಭುಬನ್ ಒಳಗೊಂಡ ಹಾಡಿನ ದ್ವಿಭಾಷಾ ಮ್ಯಾಶಪ್ ಅನ್ನು ರಚಿಸಿದರು.

ಇದನ್ನೂ ಓದಿ:  Viral Video: ಮೊದಲ ಬಾರಿಗೆ ತನ್ನಷ್ಟಕ್ಕೆ ತಾನೇ ಎದ್ದು ನಿಂತ ಮಗನನ್ನು ಕಂಡು ಭಾವುಕಳಾದ ತಾಯಿ! ಈ ಮುದ್ದಾದ ವಿಡಿಯೋ ನೋಡಿ

ಪಾಕಿಸ್ತಾನಿ ಗಾಯಕ ಯಾಸಿರ್ ಸೊಹರ್‌ವರ್ದಿ ಅವರು ಈ ‘ಕಚ್ಚಾ ಬಾದಾಮ್’ ಹಾಡಿನ ರಾಗವನ್ನು ಆಧರಿಸಿ ರಂಜಾನ್ ವಿಶೇಷ ಹಾಡನ್ನು ರಚಿಸಿದಾಗ ಈ ಹಾಡಿನ ಖ್ಯಾತಿಯು ರಾಷ್ಟ್ರೀಯ ಗಡಿಗಳನ್ನು ಮೀರಿ ಹೋಗಿತ್ತು. ರೋಜಾ ರಖುಂಗಾ ಶೀರ್ಷಿಕೆಯ ಹಾಡು ಬಿಡುಗಡೆಯಾದ ಒಂದು ವಾರದೊಳಗೆ ಯೂಟ್ಯೂಬ್‌ನಲ್ಲಿ 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿತ್ತು.
Published by:Ashwini Prabhu
First published: