ನವದೆಹಲಿ(ಆ.06): ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಬಹಳ ವಿಶೇಷವಾಗಿದೆ. ಒಬ್ಬ ವ್ಯಕ್ತಿಯು ಸಾಕುಪ್ರಾಣಿಗಳನ್ನು ಇಟ್ಟುಕೊಂಡಾಗ, ಆತ ಅದನ್ನು ತುಂಬಾ ಪ್ರೀತಿಸುತ್ತಾನೆ, ಅದನ್ನು ಉಳಿಸಲು ಆತ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತಿ್ದೆ ಇಂದಿನ ವೈರಲ್ ಆದ ವಿಡಿಯೋ. ಕುಟುಂಬವೊಂದು ತಮ್ಮ ಮುದ್ದಿನ ಸಾಕು ನಾಯಿಯ ಜೀವಕ್ಕೆ ಅಪಾಯವಿದೆ ಎಂದು ಅರಿತಾಗ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅದನ್ನು ರಕ್ಷಿಸಿದೆ.
ಮೀಡಿಯಾ ಖಾತೆ ವೈರಲ್ ಹಾಗ್‌ನಲ್ಲಿ ಆಗಾಗ್ಗೆ ಆಶ್ಚರ್ಯಕರ ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಇತ್ತೀಚೆಗೆ ಈ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದು ಭಯಾನಕ ಮತ್ತು ಆಘಾತಕಾರಿಯಾಗಿದೆ. ಈ ವಿಡಿಯೋದಲ್ಲಿ ಕುಟುಂಬವೊಂದು ತಮ್ಮ ಸಾಕುನಾಯಿಯನ್ನುಕರಡಿಯಿಂದ ರಕ್ಷಿಸುವಲ್ಲಿ ತೊಡಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ಕರಡಿಗಳು ತುಂಬಾ ಅಪಾಯಕಾರಿ ಜೀವಿಗಳು ಮತ್ತು ಅವು ಮನುಷ್ಯರ ಮೇಲೂ ದಾಳಿ ಮಾಡಬಹುದು, ಆದರೆ ಈ ಕುಟುಂಬವು ತಮ್ಮ ಸಾಕು ನಾಯಿಯ ಪ್ರಾಣ ಕಾಪಾಡುವುದನ್ನು ಬಿಟ್ಟು ಬೇರೇನನ್ನೂ ಏನನ್ನೂ ಯೋಚಿಸಲಿಲ್ಲ ಮತ್ತು ಅದರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದೆ.
ಇದ್ನೂ ಓದಿ: Pitbull Dog Attack:13ರ ಬಾಲಕನ ಮೇಲೆ ದಾಳಿ ಮಾಡಿದ ಪಿಟ್‍ಬುಲ್ ಡಾಗ್: ಈ ನಾಯಿಗಳು ಅಪಾಯಕಾರಿನಾ?
ಫ್ಲೋರಿಡಾ ವಿಡಿಯೋ ವೈರಲ್
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಿಂದ ಹೊರಗೆ ಬಂದು ಫೋನ್ ನಲ್ಲಿ ಮಾತನಾಡುತ್ತಿದ್ದಾರೆ. ಬಹುಶಃ ಆಕೆ ಸಂಶಯಾಸ್ಪದ ಧ್ವನಿಯನ್ನು ಕೇಳಿರಬಹುದು, ಹೀಗಾಗೇ ಏಕಾಏಕಿಏನನ್ನೋ ನೋಡಿ ಕಿರುಚಲು ಶುರುಮಾಡುತ್ತಾಳೆ ಮತ್ತು ಅವಳ ಮುಖಭಾವದಿಂದ ಅವಳು ತುಂಬಾ ಭಯಗೊಂಡಿದ್ದಾಳೆಂದು ತೋರುತ್ತದೆ. ಆಕೆ ಕ್ಯಾಮೆರಾದ ವ್ಯಾಪ್ತಿಯಿಂದ ಹೊರಗೆ ಹೋಗುತ್ತಾಳೆ. ಆದರೆ ಇದಾಧ ಕೆಲ ಕ್ಷಣಗಳಲ್ಲೇ ತನ್ನ ಮನೆಯ ಕಡೆಗೆ ಓಡಿ ಬಂದು ಯಾರನ್ನೋ ಕರೆಯುತ್ತಾಳೆ. ಅಷ್ಟರಲ್ಲಿ ನಾಯಿ ಓಡುತ್ತಿರುವುದು ಕಂಡು ಬಂದಿದ್ದು, ಆದರ ಹಿಂದೆ ಕರಡಿ ಕೂಡಾ ಅದರನ್ನು ಬೇಟೆಯಾಡಲು ಯತ್ನಿಸುತ್ತಿರುವುದು ಕಂಡು ಬರುತ್ತದೆ.
View this post on Instagram
ಮಹಿಳೆ ಕತ್ತಲೆಯಲ್ಲಿ ನಾಯಿಯ ಹಿಂದೆ ಓಡುತ್ತಾಳೆ, ಆದರೆ ಕರಡಿ ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿದಾಗ, ಮಹಿಳೆ ಕೂಡ ಹಿಂತಿರುಗುತ್ತಾಳೆ. ಅದೃಷ್ಟವಶಾತ್ ನಾಯಿಯೂ ಓಡಿ ಬಂದು ಮನೆಯೊಳಗೆ ಸೇರಿಕೊಳ್ಳುತ್ತದೆ. ಆ ಸಮಯದಲ್ಲಿ, ಮಹಿಳೆಯ ಪತಿ ಹೊರಗೆ ಬರುತ್ತಾನೆ, ಅವನು ಧೈರ್ಯದಿಂದ ತನ್ನ ಕುಟುಂಬ ಮತ್ತು ಕರಡಿಗಳ ಮಧ್ಯೆ ನಿಂತು ಅದನ್ನು ಎದುರಿಸುತ್ತಾನೆ. ಅವನು ಕರಡಿಯನ್ನು ಹೆದರಿಸಿ ಓಡಿಸುತ್ತಿರುವುದು ಕಂಡುಬರುತ್ತದೆ. ಕರಡಿ ಒಳಗೆ ಪ್ರವೇಶಿಸದಂತೆ ತಡೆಯಲು, ಅವನು ಅದನ್ನು ಬೆನ್ನಟ್ಟುತ್ತಿರುವುದನ್ನೂ ನೋಡಬಹುದು.
ಇದ್ನೂ ಓದಿ: Attack: ನಾಯಿ ಬೊಗಳಿದ್ದಕ್ಕೆ ಅದರ ಮಾಲೀಕರ ಮೇಲೆ ಹಲ್ಲೆ! ಕಬ್ಬಿಣದ ರಾಡ್‌ನಿಂದ ಥಳಿಸಿದ ಪಕ್ಕದ ಮನೆ ಪಾಪಿ
ವಿಡಿಯೋಗೆ ಜನರು ಫಿದಾ
ಈ ವೀಡಿಯೊ 73 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ, ಆದರೆ ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವಿಡಿಯೋದಲ್ಲಿ ತಂದೆ ಗೆದ್ದಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಪ್ರತಿಯೊಬ್ಬರೂ ಈ ಕುಟುಂಬದಿಂದ ಕಲಿಯಬೇಕು ಮತ್ತು ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ