Dolphin Lover Malcolm Brenner: ದಿನಕ್ಕೊಂದು ವಿಚಿತ್ರವಾದ ಸಂಗತಿಗಳು ಹೊರಬರುತ್ತಿರುತ್ತವೆ. ಇತ್ತೀಚೆಗೆ 47 ವರ್ಷದ ಮಹಿಳೆ ತನ್ನ ಪತಿಗೆ ವಿಚ್ಛೇದನ (Divorce) ನೀಡಿ ಸಾಕು ನಾಯಿಯನ್ನು (Pet Dog) ವಿವಾಹವಾದ ಸಂಗತಿಯನ್ನು ಕೇಳಿರುಬಹುದು. ಪತಿಗಿಂತ ನಾಯಿಯ ಮೇಲೆ ಹೆಚ್ಚಿನ ನಂಬಿಕೆ ಇರಿಸಿ ಕೊನೆಗೆ ಆ ಸಾಕುಪ್ರಾಣಿಯನ್ನು ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಮಹಿಳೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಳು. ಆದರಂತೆ ಮತ್ತೊಂದು ಸುದ್ದಿ ಇದೀಗ ವೈರಲ್ ಆಗಿದ್ದು, ವ್ಯಕ್ತಿಯೋರ್ವ ತನಗೆ ಡಾಲ್ಫಿನ್ (Dolphin) ಜತೆಗೆ ಸಂಬಂಧವಿದೆ ಎಂಬ ಬಹಿರಂಗ ಹೇಳಿಕೆ ನೀಡಿದ್ದಾನೆ.
ಫ್ಲೋರಿಡಾ ಮೂಲದ 63 ವರ್ಷ ಪ್ರಾಯದ ಮಾಲ್ಕಮ್ ಬ್ರೆನ್ನರ್ ಎಂಬ ವ್ಯಕ್ತಿ ಡಾಲ್ಫಿನ್ ಜೊತೆ ತನಗೆ ಸಂಬಂಧದಲ್ಲಿದ್ದೆ ಎಂದು ಹೇಳಿರುವುದು ಮಾತ್ರವಲ್ಲದೆ, ಡಾಲ್ಫಿನ್ ಜತೆಗಿನ ಸಂಬಂಧದ ಕುರಿತು ಪುಸ್ತಕವನ್ನು ಬರೆದಿದ್ದಾನೆ.
ಶುರುವಾಯ್ತು ಪ್ರೀತಿ!
ಮಾಲ್ಕಮ್ ಬ್ರೆನ್ನರ್ ಅವರು ಫ್ಲೋರಿಡಾ ವಾಟರ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದಾಗ ಡಾಲ್ಫಿನ್ ವರ್ತನೆಗೆ ಮಾರುಹೋಗಿದ್ದರು. ನಂತರ ಹೆಣ್ಣು ಡಾಲ್ಫಿನ್ನೊಂದಿಗೆ ಸಂಪರ್ಕದಲ್ಲಿದ್ದೆ ಎಂದು ಹೇಳಿದ್ದಾರೆ.
1970 ರ ದಶಕದಲ್ಲಿ ಸರಸೋಟಾದ ಥೀಮ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದಾಗ, ಸಿಟಾಸಿಯನ್ ಡಾಲ್ಫಿನ್ನೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಈ 'ಸಂಬಂಧ' ಸುಮಾರು 6 ತಿಂಗಳ ಕಾಲ ನಡೆಯಿತು ಎಂದು ಮಾಲ್ಕಮ್ ಹೇಳಿದರು.
ಆ ಸಮಯದಲ್ಲಿ, ಕಾಲೇಜು ವಿದ್ಯಾರ್ಥಿ ಮಾಲ್ಕಮ್ ಬ್ರೆನ್ನರ್ಗೆ ಡಾಲ್ಫಿನ್ಗಳಿರುವ ಪೂಲ್ಗೆ ಹೋಗಲು ಅವಕಾಶ ನೀಡಲಾಯಿತು. ಏಕೆಂದರೆ ಅವರಿಗೆ ಡಾಲ್ಫಿನ್ಗಳ ಚಿತ್ರಗಳನ್ನು ತೆಗೆದುಕೊಳ್ಳುವ ಕೆಲಸವನ್ನು ನಿಯೋಜಿಸಲಾಯಿತು. ಈ ಡಾಲ್ಫಿನ್ ಈಜುವಾಗ ತನ್ನ ಬಳಿಗೆ ಬರುತ್ತಿತ್ತು ಎಂದು ಮಾಲ್ಕಮ್ ತಿಳಿಸಿದ್ದಾರೆ.
ಪ್ರೀತಿಯ ಡಾಲಿ!
ಮಾಲ್ಕಮ್ ಬ್ರೆನ್ನರ್ ಈ ಬಗ್ಗೆ ಮಾತನಾಡುತ್ತಾ, ಆರಂಭದಲ್ಲಿ ನಾನು ಡಾಲ್ಫಿನ್ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ನಂತರ ನಾನು ಪ್ರೀತಿಸಲು ಶುರು ಮಾಡಿದೆ ಮತ್ತು ನಾನು ಹೆಣ್ಣು ಡಾಲ್ಫಿನ್ ಒಂದಕ್ಕೆ ‘‘ಡಾಲಿ’’ ಎಂದು ಹೆಸರಿಟ್ಟೆ ಎಂದು ಮಾಲ್ಕಮ್ ಹೇಳಿದರು.
ಇದನ್ನು ಓದಿ:Viral Story: ಗಂಡನಿಗೆ ವಿಚ್ಛೇದನ ನೀಡಿ ನಾಯಿಯನ್ನು ಮದುವೆಯಾದ 47 ವರ್ಷದ ಮಹಿಳೆ!
ಡಾಲ್ಫಿನ್ ಆತ್ಮಹತ್ಯೆ ಮಾಡಿಕೊಂಡಿತು
ಬ್ರೆನ್ನರ್ ಪ್ರಕಾರ, ಡಾಲ್ಫಿನ್ ಜೊತೆಗಿನ ಪ್ರೀತಿ ಬಹಳ ಸೂಕ್ಷ್ಮವಾದದ್ದು. ಅದಕ್ಕೆ ಏಕ್ ರಿಶ್ತಾ ಎಂದು ಹೆಸರಿಟ್ಟಿದ್ದೇನೆ. ಡಾಲ್ಫಿನ್ ಅನ್ನು ಬೇರೆಡೆಗೆ ಸ್ಥಳಾಂತರಿಸಿದಾಗ, ಒಂಬತ್ತು ತಿಂಗಳ ನಂತರ ಅದು ಆತ್ಮಹತ್ಯೆ ಮಾಡಿಕೊಂಡಿತು ಎಂದು ಬ್ರೆನ್ನರ್ ಹೇಳಿದ್ದಾರೆ. ಡಾಲಿಯ ಮರಣದ ನಂತರ, ಬ್ರೆನ್ನರ್ ಐದು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದೆ ಎಂದರು.
ಇದನ್ನು ಓದಿ: Virtual real estate plot sell: ಇಲ್ಲದೇ ಇರೋ ಫ್ಲಾಟ್ 1 ಬಿಲಿಯನ್ ಗೆ ಮಾರಾಟ, ಎಲ್ಲಾ Meta ಮಹಿಮೆ!
ಸಾಕುನಾಯಿಯೊಂದಿಗೂ ಸಂಬಂಧ
ಬ್ರೆನ್ನರ್ ಅವರು ಹದಿಹರೆಯದವರಾಗಿದ್ದಾಗ ಅವರ ಮನೆಯ ನಾಯಿಯೊಂದಿಗೆ ಸಂಬಂಧವನ್ನು ಹೊಂದಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ