Crocodile and Dog: ವಾಕಿಂಗ್ ಹೋಗಿದ್ದ ಸಾಕು ನಾಯಿಯನ್ನು ಎಳೆದೊಯ್ದ ದೈತ್ಯ ಮೊಸಳೆ

ಫ್ಲೋರಿಡಾದ ವ್ಯಕ್ತಿಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಅಲ್ಲೇ ಹತ್ತಿರದಲ್ಲಿರುವಂತಹ ಉದ್ಯಾನವನಕ್ಕೆ ವಾಕಿಂಗ್ ಗೆ ಎಂದು ಕರೆದುಕೊಂಡು ಹೋಗಿದ್ದರು ಮತ್ತು ಅಲ್ಲಿ ಆ ನಾಯಿಯ ಮೇಲೆ 9 ಅಡಿ ಉದ್ದದ ಮೊಸಳೆಯೊಂದು ದಿಢೀರ್ ದಾಳಿ ನಡೆಸಿ ಆ ನಾಯಿಯನ್ನು ಕೊಂದೇ ಹಾಕಿತು ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

ದೈತ್ಯ ಮೊಸಳೆ

ದೈತ್ಯ ಮೊಸಳೆ

  • Share this:
ಕೆಲವು ವಾರಗಳ ಹಿಂದೆಯಷ್ಟೆ ಒಂದು ಮನೆಯ ಈಜುಕೊಳದಲ್ಲಿ (Swimming Pool) ಉದ್ದವಾದ ಮೊಸಳೆ ಇರುವುದನ್ನು ನೋಡಿ ಫ್ಲೋರಿಡಾದ (Florida) ಒಂದು ಕುಟುಂಬವು ಬೆಚ್ಚಿ ಬಿದ್ದಿದ್ದ ವೈರಲ್ ಪೋಸ್ಟ್ (Viral Post) ಅನ್ನು ನಾವು ನೋಡಿದ್ದೆವು. ಈ ಮೊಸಳೆಗಳನ್ನು (Crocodile) ನೋಡಿದರೆ ಯಾರಿಗೆ ತಾನೇ ಭಯ ಆಗುವುದಿಲ್ಲ ಹೇಳಿ? ಈ ಮೊಸಳೆಗಳು ಹಾಗೆಯೇ ನದಿಯ ದಡದಲ್ಲಿ ಕಲ್ಲು ಬಂಡೆಯ ರೀತಿಯಂತೆ ಸ್ವಲ್ಪವೂ ಅಲುಗಾಡದೆ ತನ್ನ ಬೇಟೆಗಾಗಿ ಕಾದು ಕುಳಿತು ಯಾವುದಾದರೂ ಪ್ರಾಣಿಗಳು (Animal) ಹತ್ತಿರ ಸುಳಿದರೆ ಸಾಕು ಗಬಕ್ಕನೆ ಬಾಯಲ್ಲಿ ಹಿಡಿದುಕೊಂಡು ನೀರಿನೊಳಕ್ಕೆ (Water) ಎಳೆದುಕೊಂಡು ಹೋಗುತ್ತವೆ.

ನಾಯಿಯ ಮೇಲೆ ದೈತ್ಯ ಮೊಸಳೆ ದಿಢೀರ್ ದಾಳಿ
ಜೂನ್ 9 ರಂದು ಕೂಡ ಇಂತಹದೇ ಒಂದು ಅಹಿತಕರವಾದ ಘಟನೆ ನಡೆದಿದೆ ನೋಡಿ. ಫ್ಲೋರಿಡಾದ ವ್ಯಕ್ತಿಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಅಲ್ಲೇ ಹತ್ತಿರದಲ್ಲಿರುವಂತಹ ಉದ್ಯಾನವನಕ್ಕೆ ವಾಕಿಂಗ್ ಗೆ ಎಂದು ಕರೆದುಕೊಂಡು ಹೋಗಿದ್ದರು ಮತ್ತು ಅಲ್ಲಿ ಆ ನಾಯಿಯ ಮೇಲೆ 9 ಅಡಿ ಉದ್ದದ ಮೊಸಳೆಯೊಂದು ದಿಢೀರ್ ದಾಳಿ ನಡೆಸಿ ಆ ನಾಯಿಯನ್ನು ಕೊಂದೇ ಹಾಕಿತು ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ನ ತಲ್ಲಾಹಾಸಿ ಮೂಲದ ಜೋಶುವಾ ವೆಲ್ಸ್ ತನ್ನ 18 ಕೆಜಿ ತೂಕದ ಲ್ಯಾಬ್ರಡಾರ್ ನಾಯಿಯೊಂದಿಗೆ ವಾಯುವಿಹಾರಕ್ಕೆ ಅಂತ ಹೋಗಿದ್ದರು. ಈ ವಾಯುವಿಹಾರ ಆ ನಾಯಿಯ ಜೀವಕ್ಕೆ ಮುಳುವಾಗಬಹುದು ಎಂದು ಯಾರು ಊಹಿಸಿರಲು ಸಹ ಸಾಧ್ಯವಿಲ್ಲ. ಈ ನಾಯಿಯ ಹೆಸರು ಟೋಬಿ ಎಂದು ಗುರುತಿಸಲಾಗಿದೆ. ಅಲ್ಲೇ ತಿರುಗಾಡುತ್ತಿದ್ದಾಗ 9 ಅಡಿಗಿಂತ ಹೆಚ್ಚು ಉದ್ದದ ಮೊಸಳೆಯೊಂದು ಎಲ್ಲಿಂದ ಬಂತು ಅಂತ ಸಹ ಗೊತ್ತಾಗಿಲ್ಲ, ದಿಢೀರನೆ ಬಂದು ನಾಯಿಯ ಮೇಲೆ ದಾಳಿ ಮಾಡಿದೆ.

ವಾಯುವಿಹಾರಕ್ಕೆ ಹೋಗಿದ್ದ ವೇಳೆ ನಡೆದ ಘಟನೆ
ರಾಜ್ಯ ರಾಜಧಾನಿಯ ಜನಪ್ರಿಯ ಉದ್ಯಾನವನವಾದ ಜೆ.ಆರ್. ಆಲ್ಫೋರ್ಡ್ ಗ್ರೀನ್ ವೇ ಟ್ರಯಲ್ ನಲ್ಲಿ ತನ್ನ ನಾಯಿಯನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಈ ಜೋಡಿ ಎಂದಿನಂತೆ ಆ ಪಾರ್ಕ್ ನಲ್ಲಿ ಅಡ್ಡಾಡುತ್ತಿರುವಾಗ ದೊಡ್ಡ ಸರೀಸೃಪವು ಹತ್ತಿರದಲ್ಲಿರುವ ನೀರಿನಿಂದ ಛಂಗನೆ ಜಿಗಿದು, ನಾಯಿಯ ತಲೆಯನ್ನು ಹಿಡಿದು ನೀರಿಗೆ ಎಳೆದೊಯ್ದಿತು.

"ನೋಡು ನೋಡುತ್ತಿದ್ದಂತೆಯೇ ಒಂದೇ ಕ್ಷಣದಲ್ಲಿ ನೀರಿನಲ್ಲಿ ಒಂದು ರೀತಿಯ ಸ್ಫೋಟವಾಗಿದೆ" ಎಂದು ನಾಯಿಯ ಒಡೆಯ ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದವರಿಗೆ ಈ ಘಟನೆಯನ್ನು ವಿವರಿಸಿದರು. "ನನ್ನ ನಾಯಿ ಬಾಯಿ ತೆಗೆದು ಬೊಗಳುವುದಕ್ಕೂ ಅವಕಾಶ ನೀಡಲಿಲ್ಲ. ಅದು ಏನೂ ಅಲ್ಲವೆಂಬಂತೆ ನಾಯಿಯನ್ನು ಹಿಡಿದು ನೀರಿಗೆ ಇಳಿಯಿತು” ಎಂದು ಫ್ಲೋರಿಡಾದ ವ್ಯಕ್ತಿ ಹೇಳಿದರು.

ಇದನ್ನೂ ಓದಿ: Cats Eat Woman: ಮಹಿಳೆಯನ್ನು ಕಚ್ಚಿಕೊಂದು ತಿಂದುಹಾಕಿದ 20 ಬೆಕ್ಕುಗಳು!

ಆದಾಗ್ಯೂ, ನಾಯಿಯನ್ನು ರಕ್ಷಿಸುವ ಕೊನೆಯ ಪ್ರಯತ್ನದಲ್ಲಿ, ವೆಲ್ಸ್ ಆ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಿದರೆ ಅದು ತನ್ನ ನಾಯಿಯನ್ನು ಬಿಡಬಹುದು ಎಂದು ಯೋಚಿಸಿದನು, ಆದರೆ ಮೊಸಳೆ ಗಾತ್ರವನ್ನು ನೋಡಿ ಅದಕ್ಕೆ ತಾನು ಸರಿಸಾಟಿಯಲ್ಲ ಎಂದು ನೋಡಿ ತನ್ನ ನಿರ್ಧಾರವನ್ನು ತಕ್ಷಣವೇ ಬದಲಾಯಿಸಿದರು.

ಮೊಸಳೆಯನ್ನು ಸೆರೆಹಿಡಿದ ಟ್ರ್ಯಾಪರ್ ಗಳು
"ಇದು ಒಳ್ಳೆಯ ಮಾರ್ಗವಲ್ಲ ಎಂದು ಅವರು ಶೀಘ್ರದಲ್ಲಿಯೇ ಅರಿತುಕೊಂಡರು ಮತ್ತು ಮೊಸಳೆಯನ್ನು ಹೋಗಲು ಬಿಟ್ಟರು" ಎಂದು ಸುದ್ದಿ ಸಂಸ್ಥೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ. ಎಫ್ ಡಬ್ಲ್ಯೂಸಿ ಪ್ರಕಾರ, 9 ಅಡಿ, 2 ಇಂಚು ಉದ್ದವಿರುವ ಮೊಸಳೆಯನ್ನು ನಂತರ ಟ್ರ್ಯಾಪರ್ ಗಳು ಸೆರೆಹಿಡಿದರು. ನಂತರ, ಟೋಬಿಯ ಅವಶೇಷಗಳನ್ನು ನೀರಿನಿಂದ ಹೊರ ತೆಗೆಯಲಾಯಿತು ಮತ್ತು ಅವನ ಮಾಲೀಕರಿಗೆ ಹಿಂದಿರುಗಿಸಲಾಯಿತು.

ಇದನ್ನೂ ಓದಿ: Sarus Crane: ಎರಡು ಮೊಟ್ಟೆಯ ಕಥೆ! ಈ ಹಳ್ಳಿಯ ಜನ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಅಂತ ಒಮ್ಮೆ ನೀವೇ ನೋಡಿ

ಈ ನಾಯಿಯ ಮೇಲೆ ಮೊಸಳೆ ದಾಳಿ ಮಾಡಿದಾಗ ಆ ನಾಯಿಯನ್ನು ಒಂದೆಡೆ ಕಟ್ಟಿ ಹಾಕದೇ ಹಾಗೆ ಉದ್ಯಾನವನದಲ್ಲಿ ಅಡ್ಡಾಡಲು ಬಿಟ್ಟಿದ್ದರು ಎಂದು ವರದಿಯಾಗಿದೆ. ಸ್ಥಳೀಯ ಅಧಿಕಾರಿಗಳು ಈ ರೀತಿಯಾಗಿ ನಾಯಿಗಳನ್ನು ಉದ್ಯಾನವನದಲ್ಲಿ ಕರೆದುಕೊಂಡು ಬಂದರೆ ಅವುಗಳ ಕುತ್ತಿಗೆಗೆ ಬೆಲ್ಟ್ ಕಟ್ಟುವುದಾಗಿ ಬಲವಾಗಿ ಶಿಫಾರಸು ಮಾಡಿದ್ದಾರೆ.
Published by:Ashwini Prabhu
First published: