• Home
  • »
  • News
  • »
  • trend
  • »
  • Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್‌! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!

Flipkart Delivery Boy: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್‌! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆತ ನಾಪತ್ತೆಯಾಗುವಾಗ ತನ್ನೊಂದಿಗೆ ಬರೋಬ್ಬರಿ 61 ದುಬಾರಿ ಗ್ಯಾಜೆಟ್ಗಳನ್ನು ತೆಗೆದುಕೊಂಡು ಹೋಗಿದ್ದ! ಅಂದಹಾಗೆ ಅದರ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ! ಇದೀಗ ನಾಪತ್ತೆಯಾಗಿರುವ ಡೆಲಿವರಿ ಬಾಯ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ!

ಮುಂದೆ ಓದಿ ...
  • Share this:

ಬೆಂಗಳೂರು: ಆ ಗ್ರಾಹಕರೆಲ್ಲ (customers) ಫ್ಲಿಪ್‌ಕಾರ್ಟ್‌ನಲ್ಲಿ (Flipkart) ದುಬಾರಿ ಬೆಲೆ (Costly), ಆಧುನಿಕ ತಂತ್ರಜ್ಞಾನದ (technology), ಬ್ರ್ಯಾಂಡೆಡ್ ಗ್ಯಾಜೆಟ್‌ (branded gadget) ಬುಕ್ ಮಾಡಿದ್ರು. ಇಂಥದ್ದೇ ದಿನ, ಇಂಥದ್ದೇ ತಾರೀಖು, ಇಷ್ಟೇ ಹೊತ್ತಿಗೆ ಬರುತ್ತೆ ಅಂತ ಕಂಪನಿಯೂ (Company) ಅವರಿಗೆ ಭರವಸೆ ನೀಡಿತ್ತು. ಆದರೆ ಆ ದಿನ, ದಿನಾಂಕ, ಟೈಮ್ ಬಂದ್ರೂ ಆ ಗ್ಯಾಜೆಟ್‌ ಮಾತ್ರ ಅವರ ಮನೆ ಸೇರಲೇ ಇಲ್ಲ. ಯಾಕೆಂದ್ರೆ ಅವರೆಲ್ಲರ ಮನೆಗೆ ಆ ದುಬಾರಿ ಬೆಲೆಯ ಗ್ಯಾಜೆಟ್‌ ತಲುಪಿಸ ಬೇಕಿದ್ದ ಡೆಲಿವರಿ ಬಾಯ್ (Delivery Boy) ಎಸ್ಕೇಪ್ ಆಗಿದ್ದ. ಬರೀ ಆತನೊಬ್ಬನೇ ಎಸ್ಕೇಪ್ (Escape) ಆದರೆ ತೊಂದರೆ ಇರಲಿಲ್ಲ. ಆತ ನಾಪತ್ತೆಯಾಗುವಾಗ ತನ್ನೊಂದಿಗೆ ಬರೋಬ್ಬರಿ 61 ದುಬಾರಿ ಗ್ಯಾಜೆಟ್‌ಗಳನ್ನು ತೆಗೆದುಕೊಂಡು ಹೋಗಿದ್ದ! ಅಂದಹಾಗೆ ಅದರ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ! ಇದೀಗ ನಾಪತ್ತೆಯಾಗಿರುವ ಡೆಲಿವರಿ ಬಾಯ್‌ಗಾಗಿ ಪೊಲೀಸರು (Police) ಬಲೆ ಬೀಸಿದ್ದಾರೆ. ಅಂದಹಾಗೆ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru)!


4 ಲಕ್ಷ ಮೌಲ್ಯದ ಗ್ಯಾಜೆಟ್‌ನೊಂದಿಗೆ ಡೆಲಿವರಿ ಬಾಯ್ ಎಸ್ಕೇಪ್


ಫ್ಲಿಪ್‌ಕಾರ್ಟ್‌ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಲಾಗಿದ್ದ ಐಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ 61 ಗ್ಯಾಜೆಟ್‌ಗಳೊಂದಿಗೆ ಡೆಲಿವರಿ ಬಾಯ್ ಒಬ್ಬ ಓಡಿಹೋಗಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅಂದಹಾಗೆ ಆ 61 ಗ್ಯಾಜೆಟ್‌ಗಳ ಒಟ್ಟೂ ಮೌಲ್ಯ ಬರೋಬ್ಬರಿ 4 ಲಕ್ಷ ರೂಪಾಯಿಗಳು ಎನ್ನಲಾಗಿದೆ.


ಎಸ್ಪೇಪ್ ಆದ ಆರೋಪಿ ಯಾರು?


ಆರೋಪಿಯನ್ನು ಡೆಲಿವರಿ ಬಾಯ್ ಬಾಬಾ ಜಾನ್ ಎಂದು ಗುರುತಿಸಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ವಿವಿಧ ಗ್ರಾಹಕರು ಬುಕ್ ಮಾಡಿದ್ದ 4 ಲಕ್ಷ ಮೌಲ್ಯದ 61 ಗ್ಯಾಜೆಟ್‌ಗಳನ್ನು ಗಂಗಾನಗರಕ್ಕೆ ತಲುಪಿಸುವಂತೆ ಆರೋಪಿ ಶೇಕ್ ಬಾಬಾಜಾನ್‌ಗೆ ಡೆಲಿವರಿ ವಿಭಾಗದ ಮುಖ್ಯಸ್ಥರು ಹೇಳಿದ್ದರು.


ಇದನ್ನೂ ಓದಿ: Long Eared Goat: ಈ ಮೇಕೆ ಮರಿಗಿಂತ ಅದರ ಕಿವಿಗಳೇ ಉದ್ದ! ಮುದ್ದು ಪ್ರಾಣಿ ಫೋಟೋ ಸಖತ್ ವೈರಲ್


ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿದ್ದ ಆರೋಪಿ


ಆರೋಪಿ ಬಾಬಾ ಜಾನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬಾಬಾ ಜಾನ್ ನನ್ನು ಇತ್ತೀಚೆಗೆ ನೇಮಕ ಮಾಡಲಾಗಿತ್ತು ಎಂದು ಫ್ಲಿಪ್‌ಕಾರ್ಟ್‌ಗೆ ಲಿಂಕ್ ಮಾಡಲಾದ ಲಾಜಿಸ್ಟಿಕ್ಸ್ ಕಂಪನಿಯ ಕಾರ್ಯಾಚರಣೆಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಆದರೆ ಕೆಲಸಕ್ಕೆ ಸೇರಿದ ಹೊಸತರಲ್ಲೇ ಆದ ಯಡವಟ್ಟು ಮಾಡಿಕೊಂಡಿದ್ದಾನೆ.


ಆರೋಪಿಗಾಗಿ ಪೊಲೀಸರಿಂದ ಹುಡುಕಾಟ


ಸದ್ಯ 4 ಲಕ್ಷ ರೂಪಾಯಿ ಮೌಲ್ಯದ 61 ಗ್ಯಾಜೆಟ್‌ಗಳೊಂದಿಗೆ ಎಸ್ಕೇಪ್ ಆಗಿರುವ ಆರೋಪಿ ಬಾಬಾ ಜಾನ್ ವಿರುದ್ಧ ಕಂಪನಿ ದೂರು ನೀಡಿದೆ. ಆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.


ಫ್ಲಿಪ್‌ಕಾರ್ಟ್‌ ಹೆಸರಲ್ಲಿ ಬರುವ ಮೆಸೇಜ್‌ಗಳ ಬಗ್ಗೆ ಹುಷಾರ್


ಫ್ಲಿಪ್‌ಕಾರ್ಟ್‌ನಿಂದ ನಂಬಲಾಗದ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಒದಗಿಸುವ ಯಾವುದೇ ಇತರ ಸಾಮಾಜಿಕ ಮಾಧ್ಯಮ ಸಂದೇಶವನ್ನು ಸ್ವೀಕರಿಸಿದ್ದೀರಾ ? ಮತ್ತೊಮ್ಮೆ ನೋಡಿ, ಮತ್ತು ಸಂದೇಶವು ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಅಂತಹ ಸಂದೇಶಗಳನ್ನು ಅಧಿಕೃತ ಫ್ಲಿಪ್‌ಕಾರ್ಟ್ ಚಾನಲ್‌ಗಳು ಕಳುಹಿಸುವುದಿಲ್ಲ, ಆದರೆ ನಿಮ್ಮನ್ನು ಮೋಸಗೊಳಿಸಲು ಉದ್ದೇಶಿಸಿರುವ ವಂಚಕರು ಮತ್ತು ವಂಚಕರು. ನೀವು ಜಾಗರೂಕರಾಗಿರದಿದ್ದರೆ, ನೀವು ವಂಚನೆಗೆ ಬಲಿಯಾಗಬಹುದು ಮತ್ತು ನಿಮ್ಮ ಹಣ ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ನೀವು ಕಳೆದುಕೊಳ್ಳಬಹುದು.


ಇದನ್ನೂ ಓದಿ: Iphone 14: ಅರ್ಡರ್​ ಮಾಡಿದ್ದು ಐಫೋನ್​ 13, ಮನೆಗೆ ಬಂತು ಐಫೋನ್ 14! ಈತ ಅದೃಷ್ಟವಂತ ಕಂಡ್ರಿ


ಗ್ರಾಹಕರಿಗೆ ಎಚ್ಚರಿಕೆ ನೀಡಿದ ಫ್ಲಿಪ್‌ಕಾರ್ಟ್


ಫ್ಲಿಪ್‌ಕಾರ್ಟ್‌ನ ಪರಿಚಿತ ಮತ್ತು ವಿಶ್ವಾಸಾರ್ಹ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಂಚಕರು ವೇಗವಾಗಿ ಹಣವನ್ನು ಗಳಿಸಲು ಉದ್ದೇಶಿಸಿದ್ದಾರೆ ಅಂತ ಕಂಪನಿ ಎಚ್ಚರಿಸಿದೆ. ನಿಮ್ಮ ಹಣ ಅಥವಾ ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯೊಂದಿಗೆ ಈ ಮೋಸದ ವ್ಯಕ್ತಿಗಳು ಅಥವಾ ಏಜೆನ್ಸಿಗಳನ್ನು ನಂಬಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಯಾವಾಗಲೂ ಮೊದಲು ಅಧಿಕೃತ ಮತ್ತು ಮೂಲ ಫ್ಲಿಪ್‌ಕಾರ್ಟ್ ಮೂಲಗಳನ್ನು ಪರಿಶೀಲಿಸಿ ಅಂತ ಫ್ಲಿಪ್‌ಕಾರ್ಟ್ ತಿಳಿಸಿದೆ.

Published by:Annappa Achari
First published: