​ಫ್ಲಿಪ್​ಕಾರ್ಟ್​ನೊಂದಿಗೆ 15 ಶತಕೋಟಿಗೆ ಡೀಲ್ ಕುದುರಿಸಿದ ವಾಲ್ ಮಾರ್ಟ್

news18
Updated:May 5, 2018, 7:19 PM IST
​ಫ್ಲಿಪ್​ಕಾರ್ಟ್​ನೊಂದಿಗೆ 15 ಶತಕೋಟಿಗೆ ಡೀಲ್ ಕುದುರಿಸಿದ ವಾಲ್ ಮಾರ್ಟ್
news18
Updated: May 5, 2018, 7:19 PM IST
ನ್ಯೂಸ್ 18 ಕನ್ನಡ

ಮುಂಬೈ : ಇ-ಕಾಮರ್ಸ್ ಸಂಸ್ಥೆ ಫ್ಲಿಪ್​ಕಾರ್ಟ್​ನ ಶೇ.75 ರಷ್ಟು ಷೇರನ್ನು ಖರೀದಿಸಲು ವಾಲ್​ಮಾರ್ಟ್ ಸಂಸ್ಥೆ ಮುಂದಾಗಿದೆ. ಈ ಸಂಸ್ಥೆಯ ಪಾಲುದಾರಿಕೆಯನ್ನು ಸಿಂಗಾಪೂರದ​​ ಮೂಲದ ಇ-ಕಾಮರ್ಸ್ ಸಂಸ್ಥೆ ವಾಲ್​​ಮಾರ್ಟ್​ಗೆ​ 15 ಬಿಲಿಯನ್ ಡಾಲರ್​ (ಶತಕೋಟಿ) ಮೊತ್ತಕ್ಕೆ ಮಾರಾಟ ಮಾಡಲು ಒಪ್ಪಂದವಾಗಿದೆ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಫ್ಲಿಫ್​ಕಾರ್ಟ್​ ಪಾಲುದಾರ ಸಂಸ್ಥೆಯಾದ ಸಾಫ್ಟ್​ಬ್ಯಾಂಕ್ ತನ್ನ ಶೇ.20 ರಷ್ಟು ಷೇರನ್ನು ಮಾರಾಟ ಮಾಡಲು ತಯಾರಾಗಿದೆ. ವಾಲ್​ಮಾರ್ಟ್​ ಕಂಪನಿಯ ಹೂಡಿಕೆಯಲ್ಲಿ ಪಾಲುದಾರ ಆಗಲು ಗೂಗಲ್​ನ ಆಲ್ಫಬೆಟ್ ಇಂಕ್​ ಸಂಸ್ಥೆಯು ಸಹ ಆಸಕ್ತಿವಹಿಸಿದೆ. ಷೇರು ವ್ಯವಹಾರದ ನಿಯಮಗಳಂತೆ ಮುಂದಿನ ಹತ್ತು ದಿನಗಳ ಒಳಗಾಗಿ ಈ ಒಪ್ಪಂದ ನಡೆಯುವ ನಿರೀಕ್ಷೆಯಿದ್ದು, ಈ ಕುರಿತಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಂಸ್ಥೆಗಳು ನಿರಾಕರಿಸಿರುವುದಾಗಿ  ಬ್ಲೂಮ್​ಬರ್ಗ್ ವರದಿ ತಿಳಿಸಿದೆ.

ಈ ಹಿಂದೆ ಅಮೆಜಾನ್ ಸಂಸ್ಥೆ ಕೂಡ ಫ್ಲಿಪ್​ಕಾರ್ಟ್​ ​ನ ಶೇ.60ರಷ್ಟು ಷೇರನ್ನು ಖರೀದಿಸಲು ಮುಂದಾಗಿತ್ತು. ಆದರೆ ವಾಲ್​ಮಾರ್ಟ್​ ಸಂಸ್ಥೆಯು ದೊಡ್ಡ ಮೊತ್ತದ ಹೂಡಿಕೆಯ ಪ್ರಸ್ತಾವನೆಯನ್ನು  ಬೆಂಗಳೂರು ಮೂಲದ ಫ್ಲಿಪ್​ಕಾರ್ಟ್​ ಸಂಸ್ಥೆಯ ಮುಂದಿಟ್ಟಿತು. ಹೀಗಾಗಿ ಈ ಎರಡು ಇ-ಕಾಮರ್ಸ್​ ಕಂಪನಿಗಳ ನಡುವೆ ಡೀಲ್ ಕುದುರುವ ಸಾಧ್ಯತೆ ಹೆಚ್ಚಿದೆ.
First published:May 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ