ವಿಮಾನದೊಳಕ್ಕೆ ಸೆಖೆ ಎಂದು ಮಹಿಳೆ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿ

ಮಹಿಳೆ ಸೆಖೆಯೆಂದು ವಿಮಾನದಿಂದ ಹೊರ ಹೋಗಿದ್ದಾಳೆ. ಅಂದರೆ ವಿಮಾನದ ಬಾಗಿಲು ತೆಗೆದು ರೆಕ್ಕೆ ಮೇಲೆ ನಡೆದಾಡಿದ್ದಾಳೆ. ಮಹಿಳೆಯ ಹುಚ್ಚು ಸಾಹಸ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

news18-kannada
Updated:September 6, 2020, 2:49 PM IST
ವಿಮಾನದೊಳಕ್ಕೆ ಸೆಖೆ ಎಂದು ಮಹಿಳೆ ಮಾಡಿದ್ದೇನು ಗೊತ್ತಾ? ಈ ವಿಡಿಯೋ ನೋಡಿ
Photo: Google
  • Share this:
ಬಿಸಿಲ ಬೇಗೆ ಹೆಚ್ಚುತ್ತಿದೆ. ಸೆಖೆಯ ವಾತಾವರಣ ಸೃಷ್ಟಿಯಾಗಿದೆ. ಇಂತದ ಸಮಯದಲ್ಲಿ ಬೆವರುವುದು, ಸೆಖೆಯಾಗುವು ಮಾಮೂಲಿ. ಕಾರಿನಲ್ಲಿ ಪ್ರಯಾಣಿಸುವವರು ಇಂತಹ ಸಮಯದಲ್ಲಿ ಏಸಿ ಬಳಸುತ್ತಾರೆ. ಏಸಿ ಇಲ್ಲದವರು ಕಾರಿನಿಂದ ಹೊರ ಹೋಗಿ ನೆರಳಿರುವ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಆ ಮೂಲಕ ತಮಗಾಗಿರುವ ಸೆಖೆಯ ನಿವಾರಣೆ ಮಾಡುತ್ತಾರೆ. ಅದರೆ ಇಲ್ಲೊಬ್ಬಳು ಮಹಿಳೆ ವಿಮಾನದೊಳಕ್ಕೆ ಸೆಖೆಯಾಗುತ್ತಿದೆ ಎಂದು ಏನು ಮಾಡಿದ್ದಾಳೆ ಗೊತ್ತಾ?. ಮಹಿಳೆ ಸೆಖೆಯೆಂದು ವಿಮಾನದಿಂದ ಹೊರ ಹೋಗಿದ್ದಾಳೆ. ಅಂದರೆ ವಿಮಾನದ ಬಾಗಿಲು ತೆಗೆದು ರೆಕ್ಕೆ ಮೇಲೆ ನಡೆದಾಡಿದ್ದಾಳೆ. ಮಹಿಳೆಯ ಹುಚ್ಚು ಸಾಹಸ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಉಕ್ರೇನ್​​ ಮೂಲದ ಮಹಿಳೆ ಈ ಹುಚ್ಚು ಸಾಹಸ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅನೇಕರು ಮಹಿಳೆಯ ಸಾಹಸ ವಿಡಿಯೋ  ನೋಡಿ ಬೈಗುಳದ ಸುರಿಮಳೆ ಸುರಿಸಿದ್ದಾರೆ.

ಟರ್ಕಿಯಲ್ಲಿ ರಜಾ ದಿನಗಳನ್ನು ಕಳೆದಿದ್ದ ಈ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಬೋಯಿಂಗ್​ 737-86 ಎನ್​​ ವಿಮಾನದಲ್ಲಿ ಬಂದಿದ್ದರು. ವಿಮಾನವು ಉಕ್ರೇನ್​ ಕೈವ್​​ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗಿತ್ತು. ಈ ವೇಳೆ ವಿಮಾನದಿಂದ ಇಳಿಯುವವರ ದೊಡ್ಡ ಕ್ಯೂ ಇತ್ತು. ಕ್ಯೂನಲ್ಲಿ ನಿಂತ ಮಹಿಳೆಗೆ ಸೆಖೆ ಜಾಸ್ತಿಯಾಗಿದೆ.ಸೆಖೆ ಹೋಗಲಾಡಿಸಲು ತುರ್ತು ನಿರ್ಗಮನ ದ್ವಾರವನ್ನು ತೆರೆದು ಸ್ವಲ್ಪ ಹೊತ್ತು ರೆಕ್ಕೆಯ ಮೇಲೆ ಓಡಾಡಿದ್ದಾಳೆ. ಇದನ್ನು ಕಂಡು ಅನೇಕರು ವಿಡಿಯೋ ಮಾಡಿದ್ದಾರೆ. ಮಹಿಳೆಯ ಹುಚ್ಚು ಸಾಹಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Published by: Harshith AS
First published: September 6, 2020, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading