ಸಾಮಾನ್ಯವಾಗಿ ವಿಮಾನದಲ್ಲಿ(Flight)ಪ್ರಯಾಣಿಸಲು(Travel)ಅವರಿಗೆ ವಿಮಾನದ ಪ್ರಯಾಣದ ಬಗ್ಗೆ ಹಲವಾರು ಕುತೂಹಲಗಳು ಇರುತ್ತವೆ.. ವಿಮಾನದಲ್ಲಿ ಪ್ರಯಾಣ ಮಾಡುವುದು ಹೇಗೆ ಎನ್ನುವುದರಿಂದ, ಒಂದುವೇಳೆ ವಿಮಾನದಲ್ಲಿ ಆರೋಗ್ಯ(Health) ಹದಗೆಟ್ಟರೆ ಏನು ಮಾಡುತ್ತಾರೆ ಒಂದು ವೇಳೆ ಯಾರಾದರೂ ಸತ್ತರೆ(Death)ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಹಲವಾರು ಜನರಲ್ಲಿ ಇರುತ್ತವೆ.. ವಿಮಾನದಲ್ಲಿ ಆರೋಗ್ಯ ಹದಗೆಟ್ಟಾಗ ಹತ್ತಿರದಲ್ಲಿ ಇರುವ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್(Land) ಆಗಿ ರೋಗಿಗೆ ತುರ್ತು ಚಿಕಿತ್ಸೆಯನ್ನು(Treatment)ನೀಡಲಾಗುತ್ತದೆ.. ಆದರೆ ಒಂದು ವೇಳೆ ವಿಮಾನದಲ್ಲಿ ಯಾರಾದರೂ ಮೃತಪಟ್ಟರೆ ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಅಷ್ಟಾಗಿ ಇರುವುದಿಲ್ಲ.. ಹೀಗಾಗಿ ಇದರ ಬಗ್ಗೆ ಮಾಹಿತಿ ಇಲ್ಲಿದೆ.
ವಿಮಾನದಲ್ಲಿಯೇ ಮೃತಪಟ್ಟವರ ಮೃತದೇಹ ಏನು ಮಾಡಲಾಗುತ್ತೆ..?
ವರ್ಜಿನ್ ಆಸ್ಟ್ರೇಲಿಯಾದ ಫ್ಲೈಟ್ ಅಟೆಂಡೆಂಟ್ ಬ್ರೆನ್ನಾ ಯಂಗ್ ಅವರು ವಿಮಾನದಲ್ಲಿ ಪ್ರಯಾಣ ಮಾಡುವಾಗ ಯಾರಾದರೂ ಸಾವನ್ನಪ್ಪಿದರೆ ಅವರ ಮೃತದೇಹವನ್ನು ಏನು ಮಾಡಲಾಗುತ್ತದೆ ಹಾಗೂ ಯಾವ ಯಾವ ರೀತಿಯ ಕ್ರಿಯೆಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹ ಕೆಳಗೆ ಬೀಳದಂತೆ ಎಚ್ಚರ ವಹಿಸುವ ಸಿಬ್ಬಂದಿ
ವಿಮಾನದಲ್ಲಿ ಪ್ರಯಾಣ ಮಾಡುವಾಗ ಇದ್ದಕ್ಕಿದ್ದಂತೆ ಯಾರಾದರೂ ಮೃತಪಟ್ಟರೆ, ಎಲ್ಲಾ ರೀತಿಯ ಗೌರವಗಳನ್ನು ಸಲ್ಲಿಕೆ ಮಾಡಲಾಗುತ್ತದೆ. ಬಹುಮುಖ್ಯವಾಗಿ ಮೃತಪಟ್ಟ ವ್ಯಕ್ತಿಯ ಮೃತದೇಹ ಕೆಳಗೆ ಬೀಳದಂತೆ ವಿಮಾನದ ಸಿಬ್ಬಂದಿಗಳು ಎಚ್ಚರ ವಹಿಸುತ್ತಾರೆ.. ಹೀಗಾಗಿ ಮೃತಪಟ್ಟ ವ್ಯಕ್ತಿಯು ಕುಳಿತಿದ್ದ ಜಾಗದಲ್ಲಿ ಸೀಟ್ ಬೆಲ್ಟ್ ಭದ್ರಾ ಮಾಡಲಾಗುತ್ತದೆ.ಬಳಿಕ ವಿಮಾನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ,ತನಿಖೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.. ಅಲ್ಲದೆ ಮಾಮೂಲಿಯಾಗಿ ಕ್ರೈಂ ಸೀನ್ನಲ್ಲಿ ತನಿಖೆ ಹೇಗೆ ನಡೆಯುತ್ತದೋ ಅದೇ ರೀತಿಯಾಗಿ ತನಿಖೆ ನಡೆಸಲಾಗುತ್ತದೆ.
ಇದನ್ನೂ ಓದಿ: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇರುವುದಿಲ್ಲ
ಪೊಲೀಸರ ನಿಯಂತ್ರಣಕ್ಕೆ ಬರುವ ವಿಮಾನ
ಇನ್ನು ಒಬ್ಬ ವ್ಯಕ್ತಿ ವಿಮಾನದಲ್ಲಿ ಮೃತಪಟ್ಟ ಅಂದರೆ, ವಿಮಾನ ಹಾಗೂ ವಿಮಾನದಲ್ಲಿನ ಸಂಪೂರ್ಣ ಪ್ರಯಾಣಿಕರು, ಪೊಲೀಸರ ತನಿಖೆ ವ್ಯಾಪ್ತಿಗೆ ಬರುತ್ತಾರೆ.. ವಿಮಾನ ಇಳಿದ ವಿಮಾನ ನಿಲ್ದಾಣಕ್ಕೆ ತನಿಕೆಗೆ ಬರುವ, ಪೊಲೀಸರು ತಮ್ಮ ತನಿಖೆಯನ್ನು ಸಂಪೂರ್ಣ ಮಾಡುವವರೆಗೂ ಎಲ್ಲಾ ಪ್ರಯಾಣಿಕರು ವಿಮಾನದಲ್ಲಿಯೇ ಇರಬೇಕಾಗುತ್ತದೆ.. ತನಿಖೆ ಮುಗಿಯುವುದು ಎಷ್ಟು ಸಮಯವಾದರೂ ಸಹ ಅಷ್ಟು ಸಮಯದವರೆಗೆ ಪ್ರಯಾಣಿಕರೆಲ್ಲರೂ ಸಂಪೂರ್ಣ ವಿಮಾನದಲ್ಲಿ ಕುಳಿತು ಕಾಯಬೇಕಾಗುತ್ತದೆ..
ಸಹಪ್ರಯಾಣಿಕರಿಗೆ ಮೃತದೇಹದ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ..
ವಿಮಾನದಲ್ಲಿ ಪ್ರಯಾಣ ಮಾಡುವಾಗ ವ್ಯಕ್ತಿ ಮೃತಪಟ್ಟರೆ ಆತನ ಬಗ್ಗೆ ಮಾಹಿತಿಯನ್ನು ಯಾರಿಗೂ ನೀಡಲಾಗುವುದಿಲ್ಲ.. ಸಹಪ್ರಯಾಣಿಕರಿಗೆ ಈ ವಿಷಯ ತಿಳಿದರೆ ಗಾಬರಿಯಾಗುವ ಸಾಧ್ಯತೆ ಇರುತ್ತದೆ.. ಹೀಗಾಗಿ ಸಹಪ್ರಯಾಣಿಕರಿಗೆ ವಿಮಾನದಲ್ಲಿ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುವುದಿಲ್ಲ.. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕವೇ ಈ ಮಾಹಿತಿಯನ್ನು ಬಹಿರಂಗ ಮಾಡಲಾಗುತ್ತದೆ.ಜೊತೆಗೆ ಮೃತದೇಹಗಳಿಗೆ ನಿಕ್ ನೇಮ್ ನೀಡಲಾಗುತ್ತದೆ. ಅಂತಹ ದೇಹವನ್ನು HR(Human Remains) ಎಂದು ಕರೆಯಲಾಗುತ್ತದೆ, ಅಂದರೆ ಮಾನವ ಅವಶೇಷಗಳು.
ಇದನ್ನೂ ಓದಿ: ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ..!
ಪ್ರಯಾಣಿಕರಿಗೆ ವಿಷಯ ತಿಳಿದರೆ ಗಾಬರಿಯಾಗುವ ಸಾಧ್ಯತೆ
ಇನ್ನು ವಿಮಾನದಲ್ಲಿ ಪ್ರಯಾಣ ಮಾಡುವಾಗ ವಿಷಯ ತಿಳಿದರೆ ಪ್ರಯಾಣಿಕರು ಗಾಬರಿಯಾಗುವ ಸಾಧ್ಯತೆ ಹೆಚ್ಚು.. ಇದೇ ರೀತಿಯ ಘಟನೆ ಟರ್ಕಿಯಿಂದ ರಷ್ಯಾ ನಡುವೆ ಪ್ರಯಾಣಮಾಡುವಾಗ ನಡೆದಿತ್ತು.
50 ವರ್ಷದ ಮಧುಮೇಹಿ ಮಹಿಳೆಯೊಬ್ಬರು ಪ್ರಯಾಣ ಆರಂಭಿಸಿದ 45 ನಿಮಿಷಗಳ ನಂತರ ಇನ್ಸುಲಿನ್ ಇಲ್ಲದ ಕಾರಣ ಸಾವನ್ನಪ್ಪಿದ್ದರು. ಈ ಪ್ರಯಾಣವು ಮೂರೂವರೆ ಗಂಟೆಗಳಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರ ದೇಹವು ಹೊದಿಕೆಯಿಂದ ಮುಚ್ಚಲ್ಪಟ್ಟಿತ್ತು ಆದರೆ ಅವರೊಂದಿಗೆ ಕುಳಿತಿದ್ದ ಪ್ರಯಾಣಿಕನಿಗೆ ತುಂಬಾ ಭಯದ ಅನುಭವವಾಗಿತ್ತು ಎಂದೂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ