Viral Video: ಇಂಟರ್ನೆಟ್ ಸೆನ್ಸೇಷನ್ ಆದ ಪುಟ್ಟ ವರದಿಗಾರ್ತಿ; ಈಕೆ ಮಾತಿಗೆ ಮನಸೋಲದವರಿಲ್ಲ

ಈ ಪುಟ್ಟ ಹುಡುಗಿಯ ವಿಡಿಯೋದಲ್ಲಿ ಆಕೆ ಇದ್ದಂತಹ ಸ್ಥಳದ ರಸ್ತೆಗಳ ಶೋಚನೀಯ ಸ್ಥಿತಿಯನ್ನು ತನ್ನ ಮುದ್ದಾದ ಮಾತುಗಳಿಂದ ಎತ್ತಿ ತೋರಿಸಿದ್ದಾಳೆ.

ಕಾಶ್ಮೀರಿ ಹುಡುಗಿ ವೈರಲ್ ವಿಡಿಯೋ

ಕಾಶ್ಮೀರಿ ಹುಡುಗಿ ವೈರಲ್ ವಿಡಿಯೋ

  • Share this:
ಸಾಮಾನ್ಯವಾಗಿ ಈ ಚಿಕ್ಕ ಮಕ್ಕಳು (Small Children) ಸುಮ್ಮನೆ ಮಾತಾಡಿದರೂ ಸಹ ನಮಗೆ ಅದು ತುಂಬಾನೇ ಮುದ್ದಾಗಿ ಕಾಣುತ್ತದೆ. ಅದರಲ್ಲೂ ಕೆಲವು ಮಕ್ಕಳು ಹುಟ್ಟಿನಿಂದಲೇ ಬುದ್ದಿವಂತ ಮಕ್ಕಳಾಗಿರುತ್ತವೆ ಮತ್ತು ಸುತ್ತ ಮುತ್ತಲಿನಲ್ಲಿ ನಡೆಯುವ ಪ್ರತಿಯೊಂದನ್ನು ಗಮನಿಸುತ್ತಾ ಇರುತ್ತವೆ ಮತ್ತು ಅವರಿಗೆ ಏನು ಹೇಳಿ ಕೊಟ್ಟರೂ ಅವರು ಅದನ್ನು ಬೇಗನೆ ಕಲಿಯುತ್ತಾರೆ. 

ಈಗಂತೂ ಈ ಚಿಕ್ಕ ಮಕ್ಕಳಲ್ಲಿ ಎಷ್ಟೆಲ್ಲಾ ಪ್ರತಿಭೆ ಇದೆ ಅಂದರೆ ಅವು ಸಣ್ಣ ವಯಸ್ಸಿನಲ್ಲಿಯೇ ಮುದ್ದಾಗಿ ಹಾಡು ಹೇಳುತ್ತವೆ, ತುಂಬಾ ಮುದ್ದಾಗಿ ಡ್ಯಾನ್ಸ್ ಮಾಡುತ್ತವೆ. ಒಟ್ಟಿನಲ್ಲಿ ಅವುಗಳು ಏನೇ ಮಾಡಿದರೂ ಆ ವಿಡಿಯೋ ತುಣುಕುಗಳನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಲು ತುಂಬಾನೇ ಇಷ್ಟಪಡುತ್ತಾರೆ ಮತ್ತು ಅವುಗಳು ಬಹು ಬೇಗನೆ ವೈರಲ್ ವಿಡಿಯೋಗಳಾಗುತ್ತವೆ.

ನೆಟ್ಟಿಗರ ಮನಸೆಳೆದ ಕಾಶ್ಮೀರದ ಬಾಲೆ

ನಾವು ಈ ಪುಟ್ಟ ಮಕ್ಕಳ ಬಗ್ಗೆ ಈಗೇಕೆ ಮಾತಾಡುತಿದ್ದೇವೆ ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು, ಇಲ್ಲೊಬ್ಬಳು 5 ವರ್ಷದ ಕಾಶ್ಮೀರದ ಪುಟ್ಟ ಹುಡುಗಿಯ (Kashmiri Girl Video) ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ. ಈ ಪುಟ್ಟ ಹುಡುಗಿ ತುಂಬಾ ಮುದ್ದಾಗಿ ಮಾತನಾಡಿದ ಕಾರಣಕ್ಕಾಗಿ ಅಂತರ್ಜಾಲದಲ್ಲಿ ಇವಳ ವಿಡಿಯೋ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಪುಟ್ಟ ಹುಡುಗಿ ಕ್ಯೂಟ್ ಆದ ಮಾಧ್ಯಮ ವರದಿಗಾರಳಾಗಿದ್ದಾಳೆ ನೋಡಿ.

ತನ್ನೂರಿನ ರಸ್ತೆ ಕುರಿತು ವರದಿ ಮಾಡಿದ ಪೋರಿ

ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪುಟ್ಟ ಹುಡುಗಿಯ ವಿಡಿಯೋದಲ್ಲಿ ಆಕೆ ಇದ್ದಂತಹ ಸ್ಥಳದ ರಸ್ತೆಗಳ ಶೋಚನೀಯ ಸ್ಥಿತಿಯನ್ನು ತನ್ನ ಮುದ್ದಾದ ಮಾತುಗಳಿಂದ ಎತ್ತಿ ತೋರಿಸಿದ್ದಾಳೆ. ಈ ಪುಟ್ಟ ಮಾಧ್ಯಮ ವರದಿಗಾರ್ತಿಯ ಹೆಸರು ಹಫೀಜಾ ಆಗಿದ್ದು, ಇವಳ ಈ ವಿಡಿಯೋವನ್ನು ಆಕೆಯ ತಾಯಿ ಶೈಸ್ತಾ ಹಿಲಾಲ್ ಸೆರೆ ಹಿಡಿದಿದ್ದಾರೆ.

ಇದನ್ನು ಓದಿ: I&B Ministry Twitter: ಕೇಂದ್ರ ಸರ್ಕಾರದ ಟ್ವಿಟರ್​ ಖಾತೆ ಹ್ಯಾಕ್​; ಮಾಡಿದ್ದು ಯಾರು ಗೊತ್ತಾ?

ಈ 5 ವರ್ಷದ ಮಗು ಹಫೀಜಾ ಬಿಲಾಲ್ ಅಹ್ಮದ್ ಖಾನ್ ಮತ್ತು ಶೈಸ್ತಾ ಹಿಲಾಲ್ ಅವರ ಮಗಳು. ಕಾಶ್ಮೀರದಲ್ಲಿ ಇತ್ತೀಚಿನ ಹಿಮಪಾತ ಮತ್ತು ಮಳೆಯ ನಂತರ ಅವಳ ಮನೆಯ ಪಕ್ಕದ ರಸ್ತೆಯ ಸ್ಥಿತಿಯು ತುಂಬಾನೇ ಹದಗೆಟ್ಟಿದ್ದು ಅಲ್ಲಿನ ಜನರ ಮೇಲೆ ಇದು ತೀವ್ರವಾಗಿ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಹಿಮಪಾತದ ನಂತರ ರಸ್ತೆಗಳ ಕೆಟ್ಟ ಸ್ಥಿತಿಯನ್ನು ತೋರಿಸಲು ಈ ಪುಟ್ಟ ಹುಡುಗಿಯು ವರದಿಗಾರ್ತಿಯಾಗಿ ತೋರಿಸಲು ನಿರ್ಧರಿಸಿತು. ಅವಳು ತನ್ನ ಮನೆಯ ಪಕ್ಕದ ರಸ್ತೆಯಲ್ಲಿ ಹೋಗಿ ಅದನ್ನು ನೋಡಿದಳು ಮತ್ತು ಕ್ಯಾಮೆರಾದ ಹಿಂದಿನ ವ್ಯಕ್ತಿ ಬೇರಾರೂ ಅಲ್ಲ ಅವಳ ತಾಯಿ ಎಂದು ಹೇಳಲಾಗುತ್ತಿದೆ.

ಹುಡುಗಿ ವರದಿ ಮನಸೋತ ಜನರು

ಸುಮಾರು 2 ನಿಮಿಷಗಳ ಈ ವಿಡಿಯೋದಲ್ಲಿ, ಕೆಂಪು ಜಾಕೆಟ್ ಧರಿಸಿದ್ದ ಪುಟ್ಟ ಹುಡುಗಿ, ಭಾರಿ ಮಳೆ ಮತ್ತು ಹಿಮಪಾತವು ರಸ್ತೆಗಳನ್ನು ಹೇಗೆ ನಾಶಪಡಿಸಿದೆ ಎಂದು ಹೇಳುವುದನ್ನು ನಾವು ಇದರಲ್ಲಿ ನೋಡಬಹುದಾಗಿದೆ. ಅದರಿಂದ ಅತಿಥಿಗಳು ತನ್ನನ್ನು ಭೇಟಿ ಮಾಡಲು ತಮ್ಮ ಮನೆಗೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆಯೂ ಅವಳು ಕಳವಳ ವ್ಯಕ್ತಪಡಿಸಿದ್ದಾಳೆ.

ಇದನ್ನು ಓದಿ: ಚುನಾವಣೆಗೆ ಮುನ್ನ Punjab Model ಅನಾವರಣಗೊಳಿಸಿದ Aravind Kejriwal ; ಉದ್ಯೋಗ, ಭಷ್ಟಚಾರ ಮುಕ್ತ ಸರ್ಕಾರದ ಭರವಸೆ

ಆ ಪುಟ್ಟ ಹುಡುಗಿ ಆ ವೀಡಿಯೋದಲ್ಲಿ “ಈ ರಸ್ತೆ ತುಂಬಾ ಕೆಟ್ಟದಾಗಿದೆ, ಅತಿಥಿಗಳು ಸಹ ನಮ್ಮ ಮನೆಗೆ ಬರಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದಳು. ಹಫೀಜಾ ಅವರ ತಾಯಿ ಕ್ಯಾಮೆರಾ ಹಿಡಿದುಕೊಂಡು ಮಗಳ ವಿನಂತಿಯ ಮೇರೆಗೆ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಅವರು ಹೇಳಿದರು.

"ನಾನು ಅವಳ ವಿನಂತಿಯ ಮೇರೆಗೆ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ. ವಿಡಿಯೋದಲ್ಲಿ ನೀವು ಕ್ಯಾಮೆರಾವನ್ನು ಯಾವ ಕಡೆಗೆ ಸರಿಸಬೇಕು ಎಂದು ಹಫೀಜಾ ನನಗೆ ಮಾರ್ಗದರ್ಶನ ಮಾಡುತ್ತಿದ್ದುದ್ದನ್ನು ನೀವು ಕೇಳಬಹುದು” ಎಂದು ಶೈಸ್ತಾ ಹೇಳಿದರು.
Published by:Seema R
First published: