HOME » NEWS » Trend » FIVE YEAR OLD BOY FROM PAKISTAN IMITATES ACTION

ಬುಮ್ರಾ ಬೌಲಿಂಗ್ ಶೈಲಿ ಕಾಪಿ ಮಾಡಿದ ಪಾಕ್ ಬಾಲಕ: ವಿಡಿಯೋ ವೈರಲ್

Vinay Bhat | news18
Updated:October 22, 2018, 1:09 PM IST
ಬುಮ್ರಾ ಬೌಲಿಂಗ್ ಶೈಲಿ ಕಾಪಿ ಮಾಡಿದ ಪಾಕ್ ಬಾಲಕ: ವಿಡಿಯೋ ವೈರಲ್
  • News18
  • Last Updated: October 22, 2018, 1:09 PM IST
  • Share this:
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ಸ್ಟಾರ್ ಬೌಲರ್, ಯಾರ್ಕರ್ ಸ್ಪೆಷಲಿಸ್ಟ್​​​ ಜಸ್​ಪ್ರೀತ್ ಬುಮ್ರಾ ಅವರು ಬೌಲಿಂಗ್ ಮಾಡುವ ಶೈಲಿಯೇ ವಿಭಿನ್ನ. ಇವರ ಈ ಸ್ಟೈಲ್​​​ಗೆ ಭಾರತ ದೇಶದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: ಹೇಗಿತ್ತು ರೋಹಿಟ್-ವಿರಾಟ್ ದ್ವಿಶತಕದ ಜೊತೆಯಾಟ..?

ಪಾಕ್​​ನ ಐದು ವರ್ಷದ ಬಾಲಕನೊಬ್ಬ ಬುಮ್ರಾ ರೀತಿಯಲ್ಲೇ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬುಮ್ರಾ ಶೈಲಿಯಲ್ಲೇ ಬೌಲಿಂಗ್ ಮಾಡುವ ಈ ಯುವಕನ ವಿಡಿಯೋವನ್ನು ಟ್ವಿಟರ್​ನಲ್ಲಿ ಅಪ್​ಲೋಡ್ ಮಾಡಲಾಗಿದ್ದು, ಎಲ್ಲಡೆ ಹರಿದಾಡುತ್ತಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಏಷ್ಯಾಕಪ್​​ನಲ್ಲಿ ಬುಮ್ರಾ ಅವರು ಬೌಲಿಂಗ್ ಮಾಡುವ ಶೈಲಿ ನೋಡಿ ಅದನ್ನೇ ಕಲಿತು ಈ ಯುವಕ ಕಾಪಿ ಹೊಡೆದಿದ್ದಾನಂತೆ. ಈ ಟ್ವೀಟ್​ಗೆ ಬುಮ್ರಾ ಅವರು ಕೂಡ ರೀ ಟ್ವೀಟ್ ಮಾಡಿ ಖುಷಿ ಪಟ್ಟಿದ್ದಾರೆ.

  ಬುಮ್ರಾ ಅವರು ಟೀಂ ಇಂಡಿಯಾದ ಪ್ರಮುಖ ವೇಗಿ ಬೌಲರ್ ಆಗಿದ್ದು, ಡೆತ್ ಓವರ್ ಸ್ಪೆಷಲಿಸ್ಟ್​ ಎಂದೇ ಖ್ಯಾತಿ ಆಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 41 ಪಂದ್ಯಗಳನ್ನು ಆಡಿರುವ ಬುಮ್ರಾ ಈಗಾಗಲೇ 72 ವಿಕೆಟ್ ಕಬಳಿಸಿದ್ದು, ಐಸಿಸಿ ಏಕದಿನ ಕ್ರಿಕೆಟ್​ ರ್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.

First published: October 22, 2018, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories