• Home
  • »
  • News
  • »
  • trend
  • »
  • ಹಳೆಯ 5 ರೂ. ನೋಟಿನಿಂದ ಗಳಿಸಬಹುದು 30,000 ರೂ.! ಹೇಗೆ?

ಹಳೆಯ 5 ರೂ. ನೋಟಿನಿಂದ ಗಳಿಸಬಹುದು 30,000 ರೂ.! ಹೇಗೆ?

Five Rupee

Five Rupee

RS 5: ನಿಮ್ಮ ಬಳಿ ಇರುವ 5 ರೂ. ನೋಟಿನಲ್ಲಿ ಟ್ರ್ಯಾಕ್ಟರ್‌ ಚಿತ್ರ ಇರಬೇಕು. ಅಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರಡಿಸಿದ ನೋಟಿನ ಮೇಲೆ 786 ಎಂಬ ಸಂಖ್ಯೆಯನ್ನು ಬರೆದರೆ ಅದನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗುತ್ತದೆ.

  • Share this:

ಒಂದು ವೇಳೆ ನೀವು ಹಳೆಯ 5 ರೂ. ನೋಟು ಹೊಂದಿದ್ದರೆ, ಮನೆಯಲ್ಲಿ ಕುಳಿತುಕೊಂಡೇ 30,000 ರೂ. ಗಳಿಸುವ ಅವಕಾಶವಿದೆ. ಇದು ವಿಚಿತ್ರವೆನಿಸಬಹುದು. ಸುಳ್ಳು ಎನ್ನಲೂ ಬಹುದು. ಆದರೆ, ಇದು ಸತ್ಯ. ನಿಮ್ಮ ಪಿಗ್ಗಿ ಬ್ಯಾಂಕ್ ಅಥವಾ ಜೇಬಿನಲ್ಲಿ ಹಳೆಯ 5 ರೂ. ನೋಟು ಇದ್ದರೆ, ನೀವು ಎಲ್ಲಿಯೂ ಹೋಗದೆ ಕೆಲವೇ ನಿಮಿಷಗಳಲ್ಲಿ 30,000 ರೂ.ಗಳನ್ನು ಪಡೆಯಬಹುದು ಎಂಬುದು ನಿಜ. ಹಳೆಯ ಮತ್ತು ಅಪರೂಪದ 5 ರೂ. ನೋಟಿನ ಉತ್ತಮ ಬೆಲೆಗಳನ್ನು ತಿಳಿಯಲು ನೀವು antiques and collectables ಎಂಬ ಎರಡು ವೆಬ್‌ಸೈಟ್‌ಗಳಿಗೆ ಭೇಟಿ ಮಾಡಬಹುದು. ಆದರೆ, 5 ರೂ ನೋಟಿನಿಂದ ನೀವು 30,000 ರೂಗಳವರೆಗೆ ಗಳಿಸಲು ಕೆಲವು ವೈಶಿಷ್ಟ್ಯಗಳನ್ನು ಹೊಂದಿರಬೇಕು. ಅದೇನು ಅಂತೀರಾ..ಇಲ್ಲಿದೆ ಓದಿ..


ನಿಮ್ಮ ಬಳಿ ಇರುವ 5 ರೂ. ನೋಟಿನಲ್ಲಿ ಟ್ರ್ಯಾಕ್ಟರ್‌ ಚಿತ್ರ ಇರಬೇಕು. ಅಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರಡಿಸಿದ ನೋಟಿನ ಮೇಲೆ 786 ಎಂಬ ಸಂಖ್ಯೆಯನ್ನು ಬರೆದರೆ ಅದನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗುತ್ತದೆ.


ನೀವು ಸೂಚಿಸಿದ ವೈಶಿಷ್ಟ್ಯಗಳೊಂದಿಗೆ 5 ರೂ. ನೋಟುಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ಆನ್‌ಲೈನ್‌ನಲ್ಲಿ coinbazzar.com ನಲ್ಲಿ ಮಾತ್ರ ಮಾರಾಟ ಮಾಡಬಹುದು. ಈ ಪ್ಲಾಟ್‌ಫಾರ್ಮ್ ಹಳೆಯ ನೋಟುಗಳಿಗೆ ಬದಲಾಗಿ ಅನೇಕ ಪಟ್ಟು ಹೆಚ್ಚು ಹಣವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತಿದೆ.


Coinbazzar.com ನಲ್ಲಿ ಹಳೆಯ 5 ರೂ ನೋಟುಗಳನ್ನು ಹೇಗೆ ಮಾರಾಟ ಮಾಡುವುದು ನೋಡಿ..


ಹಂತ 1: ಅಧಿಕೃತ ವೆಬ್‌ಸೈಟ್ coinbazzar.com ಗೆ ಭೇಟಿ ನೀಡಿ
ಹಂತ 2: ನಿಮ್ಮನ್ನು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಿ
ಹಂತ 3: ನಿಮ್ಮ ನೋಟಿನ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಿ. ನೊಟನ್ನು ಮಾರಾಟ ಮಾಡುವ ನಿಮ್ಮ ಜಾಹೀರಾತನ್ನು ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸಲಾಗುತ್ತದೆ
ಹಂತ 4: ನಿಮ್ಮ ಜಾಹೀರಾತನ್ನು ನೋಡಿದ ನಂತರ ಆಸಕ್ತರು ನಿಮ್ಮನ್ನು ಸಂಪರ್ಕಿಸುತ್ತಾರೆ. ನೀವು ಅವರೊಂದಿಗೆ ಮಾತನಾಡಬಹುದು ಮತ್ತು ನೋಟನ್ನು ಮಾರಾಟ ಮಾಡಬಹುದು.


ಹಳೆಯ 1 ರೂ. ನೋಟಿನಿಂದ ಗಳಿಸಿ 45,000 ರೂ..!


ಕಾಯಿನ್‌ ಬಜಾರ್‌ ಪ್ಲಾಟ್‌ಫಾರ್ಮ್‌ನಲ್ಲಿ, ನೀವು 5 ರೂ. ಹಳೆಯ ನೋಟು ಮಾತ್ರವಲ್ಲ, 1 ರೂಪಾಯಿಯ ಹಳೆಯ ನೋಟು ಹೊಂದಿರುವ ವ್ಯಕ್ತಿಗಳು ನೋಟು ಮಾರಾಟ ಮಾಡಿ 45,000 ರೂ. ಪಡೆಯಬಹುದು. ಆದರೆ, ಈ ನೋಟಿನಲ್ಲಿ ಅಂದಿನ ರಾಜ್ಯಪಾಲ ಎಚ್‌.ಎಂ ಪಟೇಲ್ ಅವರು 1957 ರಲ್ಲಿ ಸಹಿ ಹಾಕಿರಬೇಕು ಮತ್ತು ಈ ನೋಟಿನ ಸರಣಿ ಸಂಖ್ಯೆ 123456 ಆಗಿರಬೇಕು.

ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ರೂ 1 ಬಂಡಲ್‌ನ ಬೆಲೆ 49,999 ರೂ. ಆಗಿದೆ. ಆದರೆ, ಕಾಯಿನ್‌ ಬಜಾರ್‌ ಪ್ಲಾಟ್‌ಫಾರ್ಮ್‌ ನೀಡುವ ರಿಯಾಯಿತಿಯ ನಂತರ ಬೆಲೆ 44,999 ರೂ. ಆಗಲಿದೆ.




26 ವರ್ಷಗಳ ಹಿಂದೆ ಭಾರತ ಸರ್ಕಾರ ಒಂದು ರೂಪಾಯಿ ಕರೆನ್ಸಿ ನೋಟುಗಳನ್ನು ನಿಲ್ಲಿಸಿತ್ತು. ಇದರ ಮುದ್ರಣವು ಜನವರಿ 1, 2015 ರಂದು ಮತ್ತೆ ಪ್ರಾರಂಭವಾಯಿತು ಮತ್ತು ಈ ನೋಟು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿತು. ಆದರೂ, ಜನರು ಇನ್ನೂ ಹಳೆಯ ನೋಟುಗಳನ್ನು ಹೊಂದಿದ್ದಾರೆ, ಅದನ್ನು ಅವರು ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಬಹುದಾಗಿದೆ.


First published: