Interesting Fact: ಮಾರ್ಚ್ 28ರಂದು ಬಾಹ್ಯಾಕಾಶದಲ್ಲಿ ಕೌತುಕ! ಅಪರೂಪದ ದೃಶ್ಯ ನೋಡಲು ಮರೆಯದಿರಿ

ವೈರಲ್​ ನ್ಯೂಸ್​

ವೈರಲ್​ ನ್ಯೂಸ್​

ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಮಾರ್ಚ್ 28 ರಂದು ಸೂರ್ಯಾಸ್ತದ ನಂತರ ಗೋಚರಿಸುತ್ತವೆ.

  • Share this:
  • published by :

ನಮಗೆಷ್ಟೋ ಗೊತ್ತಿಲ್ಲದ ವಿಸ್ಮಯ ಹಾಗೂ ಕೌತುಕವನ್ನು ಬ್ರಹ್ಮಾಂಡ ಒಳಗೊಂಡಿದೆ. ಸಂಶೋಧಕರು ಹಾಗೂ ವಿಜ್ಞಾನಿಗಳು (Scientist) ಈ ಕೌತುಕವನ್ನು ಬಗೆದಷ್ಟು ಅದು ಇನ್ನಷ್ಟು ರಹಸ್ಯವಾದ ಆಶ್ಚರ್ಯಕರ ಪವಾಡಗಳನ್ನು ನಮ್ಮ ಮುಂದೆ ಇರಿಸುತ್ತದೆ. ಇದೀಗ ಇಂತಹುದೇ ಇನ್ನೊಂದು ವಿಸ್ಮಯಕಾರಿ ಅಂಶ ಮಾರ್ಚ್ 28 ರಂದು ನಡೆಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಾರ್ಚ್ 28, ಈ ದಿನ ಚಂದ್ರನೂ (Moon) ಒಳಗೊಂಡಂತೆ ಐದು ಗ್ರಹಗಳು ಒಂದೇ ಸಾಲಿನಲ್ಲಿ  ಬಹುತೇಕ ಕಮಾನಿನ ರೂಪದಲ್ಲಿ ಗೋಚರಿಸಲಿವೆ, ಈ ರೀತಿಯಾಗಿ ಮತ್ತೊಂದು ಬ್ರಹ್ಮಾಂಡದ ದರ್ಶನ ಕಂಡುಬರಲಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ  ವರದಿಯ ಪ್ರಕಾರ  ಈ ಅಪರೂಪದ ಖಗೋಳ ಘಟನೆಯನ್ನು ವಿವಿಧ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಐದು ರೇಖೆಗಳು ನೇರವಾದ ರೇಖೆಯಲ್ಲಿರದೆ ಕಮಾನಿನ ರೂಪದಲ್ಲಿ ಕಂಡುಬರಲಿವೆ.


ಯಾವ ಎಲ್ಲಾ ಗ್ರಹಗಳು ಗೋಚರಿಸುತ್ತವೆ?


ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಮಾರ್ಚ್ 28 ರಂದು ಸೂರ್ಯಾಸ್ತದ ನಂತರ ಗೋಚರಿಸುತ್ತವೆ.


ಗುರು ಗ್ರಹವು ಬುಧಕ್ಕಿಂತ ಪ್ರಕಾಶಮಾನವಾಗಿ ಕಾಣಿಸುತ್ತದೆ. ಇಡೀ ಗುಂಪಿನಲ್ಲಿ ಶುಕ್ರವು ಪ್ರಕಾಶಮಾನವಾದ ಗ್ರಹವಾಗಿ ಕಂಡುಬರಲಿದೆ. ಗುರು ಮತ್ತು ಬುಧದ ಮೇಲಿನ ಎಡಭಾಗದಲ್ಲಿ ಶುಕ್ರವು ಪ್ರಕಾಶಮಾನವಾಗಿರುತ್ತದೆ.


ಪ್ರಕಾಶಮಾನವಾಗಿರುವ ಶುಕ್ರ ಗ್ರಹ


ಶುಕ್ರವು ಬರಿಗಣ್ಣಿನಿಂದ ಗೋಚರಿಸುತ್ತದೆ ಏಕೆಂದರೆ ಅದು ಎಲ್ಲಾ ಇತರ ಗ್ರಹಗಳಿಗಿಂತ ಪ್ರಕಾಶಮಾನವಾಗಿರುತ್ತದೆ. ದೃಶ್ಯ ಪರಿಕರಗಳಿಲ್ಲದೆ ಯುರೇನಸ್ ಅನ್ನು ವೀಕ್ಷಿಸುವುದು ಕಷ್ಟಕರವಾಗಲಿದೆ.


ಯುರೇನಸ್ ಶುಕ್ರನ ಬಳಿ ಕಂಡುಬಂದರೂ ಇದು ದುರ್ಬಲವಾಗಿರುತ್ತದೆ ಎಂದು ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ ಮತ್ತು ಮಂಗಳವು ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಅತ್ಯಂತ ಆಕರ್ಷಕವಾದ ಬಣ್ಣವನ್ನು ಹೊಂದಿರುತ್ತದೆ.


ಇದನ್ನೂ ಓದಿ: ಈ ದೇಶಕ್ಕೆ ಭೇಟಿ ನೀಡಬೇಕಾದ್ರೆ ಒಂದಷ್ಟು ರಹಸ್ಯಗಳನ್ನು ತಿಳಿದುಕೊಂಡಿರಲೇಬೇಕು!


ಮಾರ್ಚ್ 1 ರಂದು, ಶುಕ್ರ ಮತ್ತು ಗುರು ಒಟ್ಟಿಗೆ ಸೇರಿಕೊಂಡಿದ್ದವು. ಫೆಬ್ರವರಿ ತಿಂಗಳಿನಾದ್ಯಂತ ಗುರು ಹಾಗೂ ಶುಕ್ರ ಚಂದ್ರನೊಂದಿಗೆ ಜೋಡಿಸಲ್ಪಟ್ಟಿದ್ದರೆ ಆಗಾಗ್ಗೆ ಸಮೀಪವಾಗುತ್ತಿದ್ದವು.


ಹೊಸ ಧೂಮಕೇತು ಪತ್ತೆಹಚ್ಚಿದ್ದ ಖಗೋಳಶಾಸ್ತ್ರಜ್ಞರು


ಗ್ರಹದ ನಡುವಿನ ಈ ಜೋಡಣೆ ಆಗಾಗ್ಗೆ ನಡೆಯುತ್ತದೆ ಎಂದು ನಾಸಾ ತಿಳಿಸಿದೆ. ಗ್ರಹಗಳು ಸೂರ್ಯನ ಸುತ್ತ ಸರಿಸುಮಾರು ಒಂದೇ ಸಮತಲದಲ್ಲಿ ಸುತ್ತುತ್ತವೆ ಹಾಗೂ ಆಕಾಶದಾದ್ಯಂತ ಇಂತಹುದೇ ಮಾರ್ಗಗಳನ್ನು ಪತ್ತೆಹಚ್ಚುತ್ತವೆ ಎಂದು ನಾಸಾ ತಿಳಿಸಿದೆ.


ಇಷ್ಟೇ ಅಲ್ಲದೆ, ಖಗೋಳಶಾಸ್ತ್ರಜ್ಞರು ಕಳೆದ ವಾರ ಹೊಸ ಧೂಮಕೇತು C/2023 A3 ಅನ್ನು ಪತ್ತೆಹಚ್ಚಿದ್ದಾರೆ. ಧೂಮಕೇತುವನ್ನು ಖಗೋಳಶಾಸ್ತ್ರಜ್ಞರು ಚೀನಾದಲ್ಲಿನ ಪರ್ಪಲ್ ಮೌಂಟೇನ್ ಅಬ್ಸರ್ವೇಟರಿ ಮತ್ತು ಕ್ಷುದ್ರಗ್ರಹ ಟೆರೆಸ್ಟ್ರಿಕಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ ಮೂಲಕ ಪತ್ತೆಹಚ್ಚಿದ್ದಾರೆ.


ಧೂಮಕೇತು, ಪ್ರಸ್ತುತ ಭೂಮಿಯಿಂದ ಶತಕೋಟಿ ಕಿಲೋಮೀಟರ್ ದೂರದಲ್ಲಿರುವ ಗುರು ಮತ್ತು ಶನಿಯ ಕಕ್ಷೆಗಳ ನಡುವೆ ಇದೆ. 2024 ರಲ್ಲಿ ಸೂರ್ಯನಿಂದ 59 ಮಿಲಿಯನ್ ಕಿಲೋಮೀಟರ್ ಒಳಗಿನ ಕಕ್ಷೆಯಲ್ಲಿ ಚಲಿಸುತ್ತದೆ. ಧೂಮಕೇತು ತುಂಬಾ ದೂರದಲ್ಲಿದ್ದಾಗ ಕಂಡುಬಂದಿರುವುದು ಖಗೋಳಶಾಸ್ತ್ರಜ್ಞರ ಉತ್ಸಾಹಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ!


ಪ್ರಸ್ತುತ ಬರಿಗಣ್ಣಿನಿಂದ ನೋಡಲು ಸುಮಾರು 60,000 ಪಟ್ಟು ಹೆಚ್ಚು ದುರ್ಬಲವಾಗಿದ್ದರೂ, ಧೂಮಕೇತುವು ಸೂರ್ಯನಿಂದ ದೂರವಿರುವ ಪ್ರಕಾಶಮಾನವಾದ ವಸ್ತುವಿನಂತೆ ಗೋಚರಿಸಿದೆ. ಮತ್ತು ಇದು ಕಕ್ಷೆಯನ್ನು ಅನುಸರಿಸುತ್ತಿದೆ ಎಂದು ಅವಲೋಕನಗಳು ಸೂಚಿಸುತ್ತವೆ ಇದರಿಂದ ಇದು ನಿಜವಾಗಿಯೂ ಅದ್ಭುತವಾಗಿ ಕಂಡುಬಂದಿದೆ.


ದೂರದರ್ಶಕ ಬಳಸಿ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.


ಮಾರ್ಚ್ 28 ರಂದು ಕಂಡುಬರುವ ಈ ಅತ್ಯದ್ಭುತ ದೃಶ್ಯವನ್ನು ಕಾಣಲು ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಗ್ರಹಗಳು ಒಟ್ಟಾಗಿ ಸಂಯೋಜನೆಯಾಗುವ ಈ ದಿನ ಎಲ್ಲಿಯಾದರೂ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿದ್ದರೆ ದೂರದರ್ಶಕವನ್ನು ಬಳಸಿ ಅವುಗಳನ್ನು ಕೆಲವು ದಿನಗಳವರೆಗೆ ವೀಕ್ಷಿಸಬಹುದು ಎಂದು ನಾಸಾ ತಿಳಿಸಿದೆ.


top videos



    ಗ್ರಹಗಳು ಜೊತೆಯಾಗಿ ಒಂದೇ ರೇಖೆಯಲ್ಲಿ ಕಂಡುಬಂದಾಗ ಅವು ಸಂಪೂರ್ಣವಾಗಿ ನೇರವಾಗಿರುವುದಿಲ್ಲ ಎಂದು ನಾಸಾ ತಿಳಿಸಿದೆ.

    First published: