HOME » NEWS » Trend » FITTING STEEL DRUM IN BIKE DESI ROAD ROLLER VIDEO VIRAL STG HG

ಬೈಕ್‌ ಮುಂಭಾಗದ ಚಕ್ರದ ಬದಲು ಡ್ರಮ್‌ ಅಳವಡಿಸಿದ ಯೂಟ್ಯೂಬ್‌ ವ್ಲಾಗರ್: ಈ ವಿಚಿತ್ರ ಬೈಕ್‌ ಸವಾರಿಯ ವೈರಲ್‌ ವಿಡಿಯೋ ನೋಡಿ

ಕ್ರೇಜಿ XYZ ಎಂಬ ಚಾನೆಲ್‌ ಹೆಸರಿನ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಆ ವಿಡಿಯೋ ಕ್ಲಿಪ್‌ ಆರಂಭದಲ್ಲಿ ಅವನೊಂದಿಗೆ ಪ್ರಾರಂಭವಾಗುತ್ತದೆ, ಎರಡು ರಾಡ್ ಮತ್ತು ಪೈಪ್ ಅನ್ನು ಕೆಂಪು ಡ್ರಮ್‌ಗೆ ಹೇಗೆ ಸಂಪರ್ಕಿಸಿದ್ದಾನೆ ಎಂಬುದನ್ನು ತೋರಿಸುತ್ತದೆ.

news18-kannada
Updated:April 5, 2021, 12:22 PM IST
ಬೈಕ್‌ ಮುಂಭಾಗದ ಚಕ್ರದ ಬದಲು ಡ್ರಮ್‌ ಅಳವಡಿಸಿದ ಯೂಟ್ಯೂಬ್‌ ವ್ಲಾಗರ್: ಈ ವಿಚಿತ್ರ ಬೈಕ್‌ ಸವಾರಿಯ ವೈರಲ್‌ ವಿಡಿಯೋ ನೋಡಿ
(Credit: YouTube)
  • Share this:
ಉತ್ಸಾಹಿ ಬೈಕ್‌ ಸವಾರರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬದಲಾವಣೆಗಳನ್ನು ಮಾಡಿಸುವುದು ಸಾಮಾನ್ಯವಾಗಿದೆ. ಅನೇಕ ಜನರು ತಮ್ಮ ಮೋಟರ್ ಸೈಕಲ್‌ಗಳ ಭಾಗಗಳನ್ನು ಅಪ್‌ಗ್ರೇಡ್ ಮಾಡುವುದನ್ನು ಕಾಣಬಹುದು ಮತ್ತು ಕೆಲವರು ತಮ್ಮ ಮಷಿನ್‌ನ ಲುಕ್‌ ಚೆನ್ನಾಗಿ ಕಾಣಿಸುವತ್ತ ಹೆಚ್ಚು ಒಲವು ತೋರುತ್ತಾರೆ. ಆದರೆ, ಇತ್ತೀಚಿನ ವಿಡಿಯೋವೊಮದರಲ್ಲಿ, ವ್ಯಕ್ತಿಯೊಬ್ಬ ತನ್ನ ಬೈಕ್‌ನ ಮುಂಭಾಗದ ಟೈರ್ ಅನ್ನು ತೆಗೆದು ಆ ಜಾಗದಲ್ಲಿ ಲೋಹದ ಡ್ರಮ್‌ ಅನ್ನು ಅಳವಡಿಸಿದ್ದಾನೆ. ಆ ವಿಚಿತ್ರ ಬೈಕ್‌ ಸವಾರಿಯ ಪ್ರಯೋಗ ಆತನ ಪ್ರಕಾರ ಯಶಸ್ವಿಯಾಗಿದ್ದು, ಆದರೆ ವಿಡಿಯೋದಲ್ಲಿ ಸವಾರಿ ಮಾಡುವಾಗ ಆತ ಸ್ವಲ್ಪ ಕಷ್ಟಪಡುವುದನ್ನು ನೋಡಬಹುದು. ಆ ವಿಡಿಯೋವನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಿದ್ದು, ಇದಲ್ಲದೆ, ಸುರಕ್ಷತಾ ದೃಷ್ಟಿಕೋನದಿಂದ ಇದು ತುಂಬಾ ಅಪಾಯಕಾರಿಯಾದ ಕಾರಣ ಇದನ್ನು ಯಾರೂ ಪ್ರಯತ್ನಿಸಬೇಡಿ ಎಂದೂ ಅವರು ಸಲಹೆ ನೀಡಿದ್ದಾರೆ.

ಕ್ರೇಜಿ XYZ ಎಂಬ ಚಾನೆಲ್‌ ಹೆಸರಿನ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಆ ವಿಡಿಯೋ ಕ್ಲಿಪ್‌ ಆರಂಭದಲ್ಲಿ ಅವನೊಂದಿಗೆ ಪ್ರಾರಂಭವಾಗುತ್ತದೆ, ಎರಡು ರಾಡ್ ಮತ್ತು ಪೈಪ್ ಅನ್ನು ಕೆಂಪು ಡ್ರಮ್‌ಗೆ ಹೇಗೆ ಸಂಪರ್ಕಿಸಿದ್ದಾನೆ ಎಂಬುದನ್ನು ತೋರಿಸುತ್ತದೆ. ಇದರಿಂದ ಅದನ್ನು ಮುಂಭಾಗದ ಚಕ್ರದ ಸ್ಥಳದಲ್ಲಿ ಜೋಡಿಸಬಹುದು. ರಾಡ್‌ನ ಮೇಲೆ ಎರಡು ಟೊಳ್ಳಾದ ರಚನೆಗಳು ಜೋಡಿಸಲ್ಪಟ್ಟಿದ್ದು, ಅದರಲ್ಲಿ

ವ್ಲಾಗ್ಗರ್ ತನ್ನ ಬೈಕ್‌ನ ಶಾಕ್‌ ಅಬ್ಸಾರ್ಬರ್‌ ಅನ್ನಾಗಿ ಹಾಕಲು ಹೊರಟಿದ್ದ. . ಈ ಪ್ರಯೋಗವನ್ನು ಮಾಡಲು ಅವನು ಕೆಂಪು ಬಣ್ಣದ ಟಿವಿಎಸ್ ವಿಕ್ಟರ್ ಅನ್ನು ಬಳಸಿದ್ದಾನೆ.

ಡ್ರಮ್ ಅನ್ನು ಸಂಪರ್ಕಿಸುವ ಸಲುವಾಗಿ, ಮುಂಭಾಗದ ಚಕ್ರ, ಮುಂಭಾಗದ ಮಡ್‌ಗಾರ್ಡ್ ಮತ್ತು ಡಿಸ್ಕ್ ಬ್ರೇಕ್ ಸೇರಿದಂತೆ ದ್ವಿಚಕ್ರ ವಾಹನಗಳ ಅಗತ್ಯ ಭಾಗಗಳನ್ನು ತೆಗೆದುಹಾಕಿದ್ದಾನೆ. ಅದನ್ನು ತೆಗೆದುಹಾಕಿದ ನಂತರ ಅವನು ದೊಡ್ಡ ಬೋಲ್ಟ್ ಸಹಾಯದಿಂದ ಬೈಕ್‌ಗೆ ಡ್ರಮ್ ಅನ್ನು ಜೋಡಿಸುತ್ತಾನೆ. ಅವನು ಬೈಕು ಪ್ರಾರಂಭಿಸಿ ಸವಾರಿ ಮಾಡಲು ಪ್ರಾರಂಭಿಸಿದಾಗ, ಅವನು ಮುಂದೆ ಸಾಗುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ ಎಂದು ನಾವು ನೋಡಬಹುದು. ಆದರೂ, ಸ್ವಲ್ಪ ಸಮಯದ ನಂತರ, ಅದು ಸಾಕಷ್ಟು ಯೋಗ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರುತ್ತದೆ. ಆದರೂ, ಮುಂದೆ ಬ್ರೇಕ್ ಇಲ್ಲದ ಕಾರಣ ಸವಾರನಿಗೆ ಹಿಂಭಾಗದ ಬ್ರೇಕ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದನ್ನು ಸಹ ಗಮನಿಸಬೇಕು.

ಆ ಡ್ರಮ್‌ ಬೈಕ್‌ಗೆ ಅನುಪಾತದಲ್ಲಿಲ್ಲದ ಕಾರಣ, ಇದು ದ್ವಿಚಕ್ರ ವಾಹನಗಳ ಗುರುತ್ವ ಮತ್ತು ನಿರ್ವಹಣೆಯ ಕೇಂದ್ರವನ್ನು ನಿರಂತರವಾಗಿ ಹಾಳುಮಾಡುತ್ತಿದೆ. ನೋಟದಿಂದಲೇ, ಸ್ಟೀರಿಂಗ್ ಇನ್‌ಪುಟ್‌ಗಳಲ್ಲಿ ಸಂಪೂರ್ಣ ಅವ್ಯವಸ್ಥೆ ಇದೆ ಎಂದು ಒಬ್ಬರು ಸುಲಭವಾಗಿ ಹೇಳಬಹುದು. ಸವಾರನು ನಿಜವಾಗಿಯೂ ಎಡಕ್ಕೆ ತಿರುಗಬೇಕಾದಾಗ ಬಲಕ್ಕೆ ಸ್ಟೀರಿಂಗ್ ಮಾಡುತ್ತಿರುವಂತೆ ತೋರುತ್ತಿದೆ. ಈ ತೊಂದರೆಗಳು ಗೋಚರಿಸುತ್ತಿದ್ದರೂ, ಮುಂಭಾಗದ ಟೈರ್ ಅನ್ನು ಡ್ರಮ್‌ನಿಂದ ಬದಲಾಯಿಸಬಹುದೇ ಎಂದು ನೋಡುವುದು ಅವರ ಏಕೈಕ ಕಾರ್ಯಸೂಚಿಯಾಗಿರುವುದರಿಂದ ಅವರ ಪ್ರಯೋಗವು ಯಶಸ್ವಿಯಾಗಿದೆ ಎಂದು ವ್ಲಾಗ್ಗರ್ ಹೇಳಿಕೊಂಡಿದ್ದಾರೆ.

ಸವಾರನು ನಿಜವಾಗಿಯೂ ಎಡಕ್ಕೆ ತಿರುಗಬೇಕಾದಾಗ ಬಲಕ್ಕೆ ಸ್ಟೀರಿಂಗ್ ಮಾಡುತ್ತಿರುವಂತೆ ತೋರುತ್ತಿದೆ. ಈ ತೊಂದರೆಗಳು ಗೋಚರಿಸುತ್ತಿದ್ದರೂ, ಮುಂಭಾಗದ ಟೈರ್ ಅನ್ನು ಡ್ರಮ್‌ನಿಂದ ಬದಲಾಯಿಸಬಹುದೇ ಎಂದು ನೋಡುವುದು ಅವರ ಏಕೈಕ ಕಾರ್ಯಸೂಚಿಯಾಗಿರುವುದರಿಂದ ಅವರ ಪ್ರಯೋಗವು ಯಶಸ್ವಿಯಾಗಿದೆ ಎಂದು ವ್ಲಾಗ್ಗರ್ ಹೇಳಿಕೊಂಡಿದ್ದಾರೆ.

ಇನ್ನು, 8 ನಿಮಿಷ 6 ಸೆಕೆಂಡ್‌ಗಳಷ್ಟು ದೊಡ್ಡದಿರುವ ಈ ವಿಡಿಯೋ ಅನ್ನು ಈವರೆಗೆ 44 ಲಕ್ಷ 23 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅಲ್ಲದೆ, 6,700 ಕ್ಕೂ ಅಧಿಕ ಮಂದಿ ನೆಟ್ಟಿಗರು ಆ ವಿಡಿಯೋಗೆ ಯೂಟ್ಯೂಬ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಅಲ್ಲದೆ, ಕ್ರೇಜಿ XYZ ಎಂಬ ಆ ಯೂಟ್ಯೂಬ್‌ ಚಾನೆಲ್‌ಗೆ 10 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್‌ಗಳು ಇದ್ದಾರೆ.
First published: April 5, 2021, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories