Viral Photo: ಅಬ್ಬಬ್ಬಾ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 16 ಅಡಿ ಉದ್ದವಿದೆಯಂತೆ ಈ ಮೀನು!

ಈ ಮೀನು ಒಂದಲ್ಲ, ಎರಡಲ್ಲ ಬರೋಬ್ಬರಿ 16 ಅಡಿ ಇರುವುದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು. ಇದನ್ನು ನಂತರ ಕಡಲ ತೀರದಿಂದ ಕ್ರೇನ್ ನ ಸಹಾಯದಿಂದ ಮೇಲಕ್ಕೆತ್ತುವ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

16 ಅಡಿ ಉದ್ದದ ಮೀನು

16 ಅಡಿ ಉದ್ದದ ಮೀನು

  • Share this:
ಈ ಮೀನುಗಾರರು ತಮ್ಮ ಹೊಟ್ಟೆಪಾಡಿಗಾಗಿ ಮೀನುಗಳನ್ನು (Fish) ಹಿಡಿಯಲು ಸಮುದ್ರಕ್ಕೆ ಇಳಿದಾಗ ಅನೇಕ ರೀತಿಯ ವಿಭಿನ್ನವಾದ ಜಲಚರಗಳು ಪತ್ತೆಯಾಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಅವರು ಊಹಿಸಲು ಸಾಧ್ಯವಾಗದ ದೈತ್ಯ ಮೀನುಗಳು ಅವರ ಬಲೆಗೆ ಬೀಳುತ್ತವೆ. ಆ ಬಲೆಯನ್ನು ಮೇಲಕ್ಕೆ ಎತ್ತಿದಾಗಲೆ ಗೊತ್ತಾಗುತ್ತೆ ಎಂತಹ ವಿಭಿನ್ನವಾದ ಜಲಚರಗಳು (Creature) ಇವೆಯಂತ. ಇಲ್ಲಿಯೂ ಸಹ ಒಂದು ವೈರಲ್ (Viral) ಆಗುತ್ತಿರುವ ಫೋಟೋದಲ್ಲಿ ದೈತ್ಯ ಮೀನುವೊಂದು ಮೀನುಗಾರನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಮೀನುಗಾರರ ಗುಂಪೊಂದು ಚಿಲಿಯಲ್ಲಿ ಮೀನುಗಳನ್ನು ಹಿಡಿಯಲು ಸಮುದ್ರಕ್ಕೆ ಇಳಿದಾಗ ಅವರಿಗೆ ನಂಬಲು ಅಸಾಧ್ಯವಾದ ಉದ್ದನೆಯ ಮೀನುವೊಂದು ದೊರಕಿದೆ.

16 ಉದ್ದದ ಮೀನು ಪತ್ತೆ 
ಈ ಮೀನು ಒಂದಲ್ಲ, ಎರಡಲ್ಲ ಬರೋಬ್ಬರಿ 16 ಅಡಿ ಇರುವುದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು. ಇದನ್ನು ನಂತರ ಕಡಲ ತೀರದಿಂದ ಕ್ರೇನ್ ನ ಸಹಾಯದಿಂದ ಮೇಲಕ್ಕೆತ್ತುವ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

ಅಲ್ಲೇ ಸಮುದ್ರ ತೀರದಲ್ಲಿರುವ ಕಾರ್ಮಿಕರು ಅದನ್ನು ನೆಲದ ಮೇಲೆ ಹಾಕುವಾಗ ಅದು ತುಂಬಾನೇ ಉದ್ದನೆಯ, ಎಲುಬಿನ ಮೀನಿನಂತೆ ಕಾಣುತ್ತದೆ ಮತ್ತು ಇದರ ತಲೆಯನ್ನು ಹಿಡಿದು ಮೇಲೆ ಎತ್ತುತ್ತಿರುವುದನ್ನು ಈ ಕ್ಲಿಪ್ ತೋರಿಸುತ್ತದೆ. ಸುದ್ದಿ ಮಾಧ್ಯಮದ ಪ್ರಕಾರ, ಓರ್ ಫಿಶ್ ಎಂದು ಗುರುತಿಸಲಾದ ಈ ಮೀನು ಐದು ಮೀಟರ್ ಎಂದರೆ 16 ಅಡಿಗಿಂತಲೂ ಹೆಚ್ಚು ಉದ್ದವಿದೆ.

ಸಿಕ್ಕಾಪಟ್ಟೆ ವೈರಲ್ ಆಯ್ತು ಮೀನಿನ ಫೋಟೋ ವಿಡಿಯೋ 
ಈ ಫೋಟೋ ಹಾಗೂ ವಿಡಿಯೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗಳಲ್ಲಿ ಹಂಚಿಕೊಳ್ಳಲಾಗಿದೆ, ಆದರೆ ಈ ವಿಡಿಯೋವನ್ನು ಮೊದಲು ಟಿಕ್‌ಟಾಕ್ ನಲ್ಲಿ ಪೋಸ್ಟ್ ಮಾಡಲಾಯಿತು. ಅಲ್ಲಿ ಇದು ಸುಮಾರು 10 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಈ ದೈತ್ಯ ಮೀನನ್ನು ಸಾಂಪ್ರದಾಯಿಕವಾಗಿ ಸುನಾಮಿಗಳು ಮತ್ತು ಭೂಕಂಪಗಳಿಗೆ ಕೆಟ್ಟ ಶಕುನವಾಗಿ ನೋಡುತ್ತಿರುವುದರಿಂದ ಈ ಪೋಸ್ಟ್ ಜನರಲ್ಲಿ ಕಳವಳವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!

"ಇದು ಭಯಾನಕ ಮತ್ತು ಅದ್ಭುತ ಮೀನು" ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು ತಮ್ಮ ಕಳವಳವನ್ನು ವಿವರಿಸುತ್ತಾ "ಓರ್ ಫಿಶ್ ಸಮುದ್ರದ ಆಳದಲ್ಲಿ ವಾಸಿಸುತ್ತದೆ. ಅವು ಮೇಲ್ಮೈಗೆ ಬರಲು ಆರಂಭಿಸಿವೆ ಎಂದರೆ ಟೆಕ್ಟೋನಿಕ್ ಫಲಕಗಳು ಚಲನೆಯಲ್ಲಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ" ಎಂದು ಹೇಳಿದ್ದಾರೆ.

ಕಡಲ ತೀರಕ್ಕೆ ಜೀವಿಯ ಸಾಮೀಪ್ಯವು ಸನ್ನಿಹಿತ ನೀರೊಳಗಿನ ಭೂಕಂಪಗಳನ್ನು ಸಂಕೇತಿಸುತ್ತದೆ ಎಂದು ಅನೇಕ ಇಂಟರ್ನೆಟ್ ಬಳಕೆದಾರರು ನಂಬುತ್ತಾರೆ.

ಈ ಮೀನುಗಳು ಭೂಕಂಪಗಳು ಮತ್ತು ಸುನಾಮಿಗಳ ಮುನ್ಸೂಚನೆಗಳಾಗಿವೆ
ಓರ್ ಫಿಶ್ ಗಳು ಭೂಕಂಪಗಳು ಮತ್ತು ಸುನಾಮಿಗಳ ಮುನ್ಸೂಚನೆಗಳಾಗಿವೆ ಎಂಬ ದಂತ ಕಥೆಗಳಲ್ಲಿ ಈ ನಂಬಿಕೆಯು ಬೇರೂರಿದೆ. ಈ ಸಿದ್ಧಾಂತವನ್ನು ವಿಜ್ಞಾನವು ಇಂದಿಗೂ ದೃಢಪಡಿಸಿಲ್ಲ. ಆದರೆ ಸ್ಥಳೀಯ ಅಧಿಕಾರಿಗಳು ಈಗ ಈ ದೈತ್ಯ ಮೀನು ಸಮುದ್ರದಲ್ಲಿನ ಅಳವಾದ ಪ್ರದೇಶವನ್ನು ಬಿಟ್ಟು ನೀರಿನ ಮೈಲ್ಮೈಗೆ ಬಂದಿದ್ದಾದರೂ ಏಕೆ ಎಂಬುದರ ಬಗ್ಗೆ ಸ್ವಲ್ಪ ಪರಿಶೀಲಿಸುವುದು ಒಳ್ಳೆಯದು.

ಓರ್ ಫಿಶ್ ಸಾಮಾನ್ಯವಾಗಿ ಸುಮಾರು 11 ಮೀಟರ್ ಉದ್ದದವರೆಗೆ ಬೆಳೆಯುತ್ತವೆ ಎಂದು ಹೇಳಲಾಗುತ್ತದೆ. ಅವು ಸಾಮಾನ್ಯವಾಗಿ ಆಳವಾದ ನೀರಿನಲ್ಲಿ ವಾಸಿಸುತ್ತವೆ ಮತ್ತು ಅವುಗಳು ಅನಾರೋಗ್ಯಕ್ಕೊಳಗಾದಾಗ ಅಥವಾ ಸಾಯುವ ಸ್ಥಿತಿ ತಲುಪಿದಾಗ ಮತ್ತು ಸಂತಾನೋತ್ಪತ್ತಿ ಮಾಡಿದಾಗ ಮಾತ್ರ ನೀರಿನ ಮೇಲ್ಮೈಗೆ ಬರುತ್ತವೆ ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ: Pitbull​ ಶ್ವಾನವನ್ನು ಬ್ಯಾನ್​ ಮಾಡಿರುವ ದೇಶಗಳಿವು! ಕೆಣಕಿದ್ರೆ ಯಾರನ್ನೂ ಬಿಡಲ್ಲ ಇದು!

ಸಾಮಾನ್ಯವಾಗಿ ಹೇಳುವುದಾದರೆ ಈ ದೈತ್ಯವಾದ ಮೀನುಗಳು ನೋಡಲು ಸಿಗುವುದು ತುಂಬಾನೇ ಅಪರೂಪವಂತೆ. ಈ ಹಿಂದೆ ಒಮ್ಮೆ ಏಪ್ರಿಲ್ ತಿಂಗಳಿನಲ್ಲಿ ನ್ಯೂಜಿಲೆಂಡ್ ದೇಶದ ಒಂದು ಕಡಲ ತೀರದಲ್ಲಿ ಓರ್ ಫಿಶ್ ಕಂಡು ಬಂದಿತ್ತು, ಅಲ್ಲಿ ಅದನ್ನು ಸ್ಥಳೀಯರು ಕಡಲ ತೀರದಲ್ಲಿ ಅಡ್ಡಾಡುವಾಗ ಗುರುತಿಸಿದ್ದರು ಎಂದು ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿತ್ತು.
Published by:Ashwini Prabhu
First published: