• Home
  • »
  • News
  • »
  • trend
  • »
  • ಆಕಾಶದಿಂದ ಬಿದ್ದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಮೀನು..! ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದ ವಿಡಿಯೋ

ಆಕಾಶದಿಂದ ಬಿದ್ದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಮೀನು..! ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದ ವಿಡಿಯೋ

ಕಾರಿನ ಮೇಲೆ ಹಾರಿ ಬಿದ್ದ ಮೀನು

ಕಾರಿನ ಮೇಲೆ ಹಾರಿ ಬಿದ್ದ ಮೀನು

Viral Video: ಮನೆಯ ಬಳಿ ಪಾರ್ಕ್ ಮಾಡಿದ ಕಾರಿನ ಮೇಲೆ ಮೀನೊಂದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • Share this:

ಹಲವು ವಿಲಕ್ಷಣ ಹಾಗೂ ನಂಬಲಾಗದ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಈ ಪೈಕಿ ಕೆಲವು ಎಡಿಟೆಟ್‌ ವಿಡಿಯೋ ಆಗಿದ್ದರೆ, ಇನ್ನು ಕೆಲವು ನೈಜ ಘಟನೆಗಳು ಸಹ ವಿಸ್ಮಯ ಮೂಡಿಸುತ್ತೆ. ಹಾಗೂ ಗೊಂದಲ ಮೂಡಿಸುತ್ತದೆ. ಇದೇ ರೀತಿ, ಮೀನು ಆಕಾಶದಿಂದ ಬಿದ್ದಿದೆ ಎಂದು ಸುಮ್ಮನೆ ಹೇಳಿದರೆ ನೀವು ನಂಬುತ್ತೀರಾ..? ಆಧರೆ, ಇನ್ನು ನೀವು ನಂಬ್ಲೇಬೇಕು. ಯಾಕೆ ಅಂತೀರಾ..? ವಿಲಕ್ಷಣ ಘಟನೆಯೊಂದರಲ್ಲಿ ಅಮೆರಿಕದ ವರ್ಜೀನಿಯಾ ಬೀಚ್ ಬಳಿ ಸಾಕಷ್ಟು ನೆರೆಹೊರೆಯಲ್ಲಿ ನಿಂತಿದ್ದ ಕಾರಿನ ಮೇಲೆ ಆಕಾಶದಿಂದ ಮೀನೊಂದು ಬಿದ್ದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಕಾರಿನ ಭಾಗ ಸ್ವಲ್ಪ ಡೆಂಟ್‌ ಆಗಿದೆ. ಅಲ್ಲದೆ, ಈ ಘಟನೆಯು ಎಷ್ಟು ನಂಬಲಾಗದಿದೆಯೆಂದರೆ, ಕಾರಿನ ಮಾಲೀಕರು ಇನ್ಶೂರೆನ್ಸ್ ಕ್ಲೈಮ್‌ ಮಾಡಿಕೊಳ್ಳಲು ತಮ್ಮ ಕಾರಿಗಾಗಿರುವ ಹಾನಿಯನ್ನು ವಿವರಿಸಲು ಸೆಕ್ಯೂರಿಟಿ ಕ್ಯಾಮೆರಾದ ವಿಡಿಯೋ ತುಣುಕನ್ನು ಪರಿಶೀಲಿಸಬೇಕಾಗಿತ್ತು. ಆಕಾಶದಿಂದ ಮೀನು ಹೇಗೆ ಬೀಳುತ್ತೆ..! ಇದೆಲ್ಲ ಸುಳ್ಳು ಅಂತೀರಾ..? ನೀವು ಒಮ್ಮೆ ಈ ವಿಡಿಯೋ ನೋಡಿ.. ಗೊಂದಲಕ್ಕೊಳಗಾಗುವುದು ಖಂಡಿತ.


ಆಕಾಶದ ಕಡೆಯಿಂದ ಅಂದರೆ ಮೇಲಿಂದ ಬಿದ್ದ ಮೀನು ನಿಂತಿದ್ದ ವಾಹನಕ್ಕೆ ಅಪ್ಪಳಿಸುವುದನ್ನು ಈ ಚಿಕ್ಕ ವಿಡಿಯೋ ಕ್ಲಿಪ್‌ ತೋರಿಸುತ್ತದೆ. ಮನೆಯೊಂದರಲ್ಲಿ ಭದ್ರತಾ ಕ್ಯಾಮರಾ ಅಳವಡಿಸಲಾಗಿದ್ದು, ಆ ಕ್ಯಾಮೆರಾದಲ್ಲಿ ಈ ಘಟನೆಯನ್ನು ಸೆರೆಹಿಡಿದಿದೆ. ಇನ್ನು, ಈ ಘಟನೆ ಬಗ್ಗೆ ಯಾವುದೇ ಸರಿಯಾದ ವಿವರಣೆ ಸಿಕ್ಕಿಲ್ಲ. ಪಾರ್ಕ್ ಮಾಡಿದ ಕಾರಿನ ಮೇಲೆ ಮೀನೊಂದು ಬಿದ್ದಿರುವ ವಿಡಿಯೋವನ್ನು ವೈರಲ್‌ಹಾಗ್ ಯೂಟ್ಯೂಬ್‌ ಚಾನೆಲ್‌ ಶೇರ್‌ ಮಾಡಿಕೊಂಡಿದೆ."ಕಾರನ್ನು ಮನೆ ಮುಂದೆ ಪಾರ್ಕ್ ಮಾಡಲಾಗಿತ್ತು. ಕಾರಿನ ಇನ್ನೊಂದು ಭಾಗದಲ್ಲಿ ಈಗಾಗಲೇ ಹಾನಿಯಾಗಿದ್ದು, ಇನ್ಶೂರೆನ್ಸ್ ಕ್ಲೈಮ್‌ ಮಾಡಿಕೊಳ್ಳುವುದು ಬಾಕಿ ಇದೆ. ಇದೇ ಸಮಯದಲ್ಲಿ ಆಕಾಶದಿಂದ ಮೀನು ಬಿದ್ದು ಕಾರಿನ ಮತ್ತೊಂದು ಭಾಗಕ್ಕೆ ಹಾನಿ ಮಾಡಿದೆ. ಇನ್ನು, ನೆರೆಹೊರೆಯವರು ಗನ್‌ನಿಂದ ಬುಲೆಟ್‌ ಹಾರಿದಂತೆ ಶಬ್ದವಾಯಿತು. ಈ ಹಿನ್ನೆಲೆ ಪರಿಶೀಲನೆ ಮಾಡಲು ಬಂದಿರುವುದಾಗಿ ಹೇಳಿಕೊಂಡರು. ಅವರು ನಂತರ ಮೀನು ನೋಡಿ ನಮ್ಮ ಮನೆಯ ಬಾಗಿಲು ಬಡಿದರು. ನಾವು 'ಹೌದು, ಆಕಾಶದಿಂದ ಒಂದು ಮೀನು ಬಿದ್ದಿತು??' ಎಂದುಕೊಂಡೆವು.

ನಂತರ ನಾವು ಸೆಕ್ಯೂರಿಟಿ ಕ್ಯಾಮರಾದಲ್ಲಿ ವಿಡಿಯೋ ನೋಡಿದೆವು. ಮತ್ತು ಆಕಾಶದಿಂದ ಮೀನು ಬಿದ್ದು ಕಾರನ್ನು ಹೊಡೆಯುವುದನ್ನು ನೋಡಿದೆ. ನಂತರ ನಾನು ಸ್ಟೇಟ್‌ಫಾರ್ಮ್‌ಗೆ ಕರೆ ಮಾಡಿ, ನಾನು ಇನ್ಶೂರೆನ್ಸ್‌ಗೆ ಕ್ಲೈಮ್‌ ಮಾಡಿಕೊಂಡೆ. ಕನಿಷ್ಠ ಈ ಕತೆಯನ್ನು ಸಾಬೀತುಪಡಿಸಲು ನಮ್ಮ ಬಳಿ ವಿಡಿಯೋ ಇದೆ'' ಎಂದೂ ಮನೆಯ ಮಾಲೀಕ ಕಾರ್ಲೋಸ್ ಮಾಲ್ಡೊನಾಡೊ, ವೈರಲ್‌ಹಾಗ್‌ ಯೂಟ್ಯೂಬ್‌ ಚಾನೆಲ್‌ಗೆ ಹೇಳಿದರು.


ಇದನ್ನೂ ಓದಿ: ಪೊಲೀಸರನ್ನು ಬೆಚ್ಚಿ ಬೀಳಿಸಿದ ರೌಡಿ ಶೀಟರ್‌ನ ವೈರಲ್ 'ಗನ್' ವಿಡಿಯೋ..!

ಯೂಟ್ಯೂಬ್‌ನಲ್ಲಿನ ವಿಡಿಯೋವನ್ನು 39 ಸಾವಿರಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಇದು ನೆಟ್ಟಿಗರಲ್ಲಿ ಸಾಕಷ್ಟು ಗಮನ ಸೆಳೆದಿದೆ. ಅಲ್ಲದೆ, ಹಲವರು ಕಮೆಂಟ್‌ ಮಾಡಿದ್ದಾರೆ. ಕೆಲವರು ವಿಡಿಯೋ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ, ಹಲವರು ಟ್ರೋಲ್‌ ಮಾಡಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


 

Published by:Sandhya M
First published: