NEET ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಬುಡಕಟ್ಟು ಯುವಕ.. ಈತ ಎಂಥವರಿಗೂ ಸ್ಪೂರ್ತಿ

ತುಫೈಲ್ ಅಹ್ಮದ್.. ನೀಟ್ ಪರೀಕ್ಷೆ ಪಾಸಾದ ಬುಡಕಟ್ಟು ಸಮುದಾಯದ ಮೊದಲ ಯುವಕ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.

 ತುಫೈಲ್ ಅಹ್ಮದ್

ತುಫೈಲ್ ಅಹ್ಮದ್

 • Share this:
  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶ್ರೀನಗರದ (Srinagar) ಮುಲ್ನಾರ್ ಹರ್ವಾನ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು (Tribal) ಸಮುದಾಯದ ಹುಡುಗನೊಬ್ಬ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪಾಸು ಮಾಡಿದ ಮೊದಲ ಬುಡಕಟ್ಟು ಸಮುದಾಯದ ಹುಡುಗ (Boy) ಎಂಬ ಖ್ಯಾತಿ ಪಡೆದಿದ್ದಾನೆ. ಜೊತೆಗೆ ತನ್ನ ಸಾಧನೆಯಿಂದ ಇಡೀ ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ, ಕೀರ್ತಿ ತಂದಿದ್ದಾನೆ. ಎಷ್ಟೋ ಬಾರಿ ಎಲ್ಲಾ ಸೌಕರ್ಯಗಳಿದ್ದರೂ ಪರೀಕ್ಷೆಯಲ್ಲಿ ಪಾಸಾಗುವುದು ಕಠಿಣವಾಗುತ್ತದೆ. ಅಂಥದ್ದರಲ್ಲಿ ತನಗೆ ಸಿಕ್ಕ ಸೌಕರ್ಯ, ಸೌಲಭ್ಯಗಳನ್ನೇ ಚೆನ್ನಾಗಿ ಬಳಸಿಕೊಂಡು ನೀಟ್ ಪರೀಕ್ಷೆಯನ್ನು ಪಾಸು ಮಾಡಿ, ಈ ಹುಡುಗ ಎಲ್ಲರಿಗೂ ಮಾದರಿಯಾಗಿದ್ದಾನೆ.

   ತುಫೈಲ್ ಅಹ್ಮದ್ ಸಾಧನೆ: ಅಂದ ಹಾಗೇ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಬುಡಕಟ್ಟು ಸಮುದಾಯದಲ್ಲಿ ನೀಟ್ ಪರೀಕ್ಷೆ ಪಾಸಾದ ಮೊದಲ ಹುಡುಗ ಎಂಬ ಖ್ಯಾತಿಗೆ ಒಳಗಾದ ಈತನ ಹೆಸರು ತುಫೈಲ್ ಅಹ್ಮದ್ (Tufail Ahmad). ತುಫೈಲ್ ಅಹ್ಮದ್, ಶ್ರೀನಗರದ ಹರ್ವಾನ್ ನಲ್ಲಿನ ಮಿಷನ್ ಸ್ಕೂಲ್ ನ್ಯೂ ಥೀದ್ ನಲ್ಲಿ 8ನೇ ತರಗತಿಯವರೆಗೆ ಶಿಕ್ಷಣ ಪಡೆದುಕೊಂಡ. ನಂತರ 12 ನೇ ತರಗತಿಗಾಗಿ ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರವೇಶ ಪಡೆದ.

  ಇದನ್ನೂ ಓದಿ: ಸ್ಥಳೀಯ ಮಟ್ಟದಲ್ಲಿ ಶಿಕ್ಷಣ ಅಭಿವೃದ್ಧಿಗೊಳಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳೇನು..?

  ಕಷ್ಟ, ಹೋರಾಟದ ಜೀವನಾನುಭವ: ಎಎನ್‌ಐ ಜೊತೆ ಮಾತನಾಡಿದ ಅಹ್ಮದ್, ತಾನು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ತನ್ನ ಜೀವನದಲ್ಲಿ ಎದುರಿಸಿದ ಕಷ್ಟ ಮತ್ತು ಹೋರಾಟಗಳ ಬಗ್ಗೆ ಹೇಳಿಕೊಂಡಿದ್ದಾರೆ. ತಾನು ಶಾಲೆಗೆ ಹೋಗಲು ಸಾಕಷ್ಟು ಕಷ್ಟ ಪಡಬೇಕಾಗಿತ್ತು. ಕಿಲೋಮೀಟರ್ ಗಟ್ಟಲೇ ನಡೆದು ದಿನವೂ ಶಾಲೆಗೆ ತೆರಳುತ್ತಿದ್ದುದಾಗಿ ತಿಳಿಸಿದ್ದಾರೆ. ಜೊತೆಗೆ ಇಂಟರ್ ನೆಟ್ ಸೌಲಭ್ಯ ಪಡೆಯಲು ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಓಡಾಡುವ ಸ್ಥಿತಿಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

  ತಮ್ಮ ಕಷ್ಟದಲ್ಲಿಯೂ ಶಾಲೆ ಮತ್ತು ಕಾಲೇಜನ್ನು, ಓದು, ಅಭ್ಯಾಸಗಳನ್ನು ಸಮರ್ಪಕವಾಗಿ ನಿರ್ವಹಿಸಿರುವ್ ತುಫೈಲ್ ಇಂದು ತಮ್ಮ ಯಶಸ್ಸಿನಿಂದ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಶ್ರದ್ಧೆ, ಪರಿಶ್ರಮ ಮತ್ತು ಗುರಿಯತ್ತ ಲಕ್ಷ್ಯವಿದ್ದರೆ ಸಾಧನೆ ಸರಳ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

  ಹೊಸ ಪುಸ್ತಕ ಖರೀದಿಗೆ ಹಣವಿಲ್ಲ: ನಾನು ಇಂಟರ್ ನೆಟ್ ಸೌಲಭ್ಯ ಪಡೆಯಲು ನಾವು ವಾಸವಿರುವ ಸ್ಥಳದಿಂದ ಶ್ರೀನಗರದವರೆಗೆ ನಡೆಯುತ್ತಿದ್ದೆ. ಇಂಟರ್ ನೆಟ್ ನಿಂದ ಪರೀಕ್ಷೆ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟು ಹಾಗೂ ತೊಂದರೆ ಇತ್ತು. ತಾವು ಮೂರು ಮತ್ತು ನಾಲ್ಕನೇ ತರಗತಿ ಓದುತ್ತಿದ್ದಾಗ ಹೊಸ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

  ನೀಟ್‌ಗೆ ಸ್ಫೂರ್ತಿ ಸಿಕ್ಕಿತು

  ಎಲ್ಲಾ ಸವಾಲುಗಳ ನಡುವೆ ನೀಟ್‌ನಂತಹ ಪರೀಕ್ಷೆಗೆ ನಿಮಗೆ ಸ್ಫೂರ್ತಿ ಎಲ್ಲಿಂದ ಬಂತು? ಈ ಪ್ರಶ್ನೆಗೆ ಉತ್ತರಿಸಿದ ತುಫೈಲ್ ಅಹ್ಮದ್, ತಾವು ಎದುರಿಸಿದ ಕಷ್ಟಗಳಿಂದಾಗಿ ತನಗಾಗಿ ಹಾಗೂ ಬುಡಕಟ್ಟು ಸಮುದಾಯಕ್ಕಾಗಿ ಏನಾದರೂ ಮಾಡಲೇಬೇಕು ಎಂಬ ಪಣ ತೊಟ್ಟೆ. ನನಗೆ ಎದುರಾದ ಸವಾಲುಗಳಿಂದಲೇ  ಸ್ಫೂರ್ತಿ ಸಿಕ್ಕಿತು ಎಂದು ಹೇಳಿದರು.

  ತಾಯಿ ಅವಿದ್ಯಾವಂತೆಯಾದರೂ ಪ್ರೇರೇಪಣೆ ನೀಡಿದರು 

  ಬುಡಕಟ್ಟು ಸಮುದಾಯದ ಪ್ರಕಾರ ನಾವಿನ್ನೂ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸಬೇಕಾಗಿದೆ. ಶ್ರೀನಗರದ ಮುಲ್ನಾರ್ ಹರ್ವಾನ್ ಪ್ರದೇಶವನ್ನು ಉಲ್ಲೇಖಿಸಿದ ತುಫೈಲ್, ಇಲ್ಲಿನ ಜನರು ವಿದ್ಯುತ್ ಮತ್ತು ಇಂಟರ್ ನೆಟ್ ಸಂಪರ್ಕದ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು. ಇಲ್ಲಿನ ಜನರಿಗಾಗಿ ಒಳ್ಳೆಯ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂಬುದು ನನ್ನ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು

  ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ ತಂದಿದೆ

  ನೀಟ್‌ನಂತಹ ರಾಷ್ಟ್ರೀಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀನಗರದ ಮೊದಲ ಬುಡಕಟ್ಟು ಯುವಕ ತುಫೈಲ್ ಅಹ್ಮದ್  ಸಾಧನೆಯ ಬಗ್ಗೆ ಆತನ ಸಹೋದರ ಮಾತನಾಡಿ, "ಇದು ಕುಟುಂಬ ಮತ್ತು ಇಡೀ ಸಮುದಾಯ ಹೆಮ್ಮೆ ಪಡುವ ವಿಷಯ" ಎಂದು ಹೇಳಿದರು. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ತುಫೈಲ್‌ ನೀಟ್‌ನಲ್ಲಿ ಯಶಸ್ಸು ಕಂಡಿದ್ದಾರೆ ಎಂದರು. ನಮಗೆ ತುಂಬಾ ಸಂತೋಷವಾಗಿದೆ. ತುಫೈಲ್ ಸಾಧನೆ ಮಾಡುವ ಬಗ್ಗೆ ನಾವು ಎಂದಿಗೂ ಯೋಚಿಸಿರಲಿಲ್ಲ. ಆದರೆ ತುಫೈಲ್ ತಮ್ಮ ಸ್ವಂತ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಇದನ್ನು ಮಾಡಿ ತೋರಿಸಿದ್ದಾರೆ.
  Published by:renukadariyannavar
  First published: