ಬಹಳಷ್ಟು ಜನರ ಪಾಲಿಗೆ ಸ್ವಂತ ಮನೆಗೆ ಖರೀದಿ ಅಂದರೆ ಅದು ಜೀವನದಲ್ಲಿ ಒಮ್ಮೆ ಮಾತ್ರ. ಸಾಲ ಸೋಲ ಮಾಡಿ ಇರುವಂಥ ಉಳಿತಾಯವನ್ನೆಲ್ಲ ಕೂಡಿಟ್ಟು ತಮ್ಮದೇ ಆದ ಸ್ವಂತ ಮನೆಯನ್ನು ಕೊಂಡುಕೊಳ್ಳುತ್ತಾರೆ. ಮನೆ ಅಂದ ಮೇಲೆ ಅಲ್ಲಿ ಕೀಟಗಳು, ಜೇಡಗಳೆಲ್ಲ ಸಾಮಾನ್ಯ. ಆದರೆ ಮನೆಯಲ್ಲಿ ಒಂದಾದ ಮೇಲೊಂದರಂತೆ ಹಾವುಗಳು ಕಾಣಿಸಿಕೊಂಡರೆ ಅಂಥ ಮನೆಯಲ್ಲಿ ಅದ್ಹೇಗೆ ವಾಸಿಸೋದು ಇಲ್ಲೊಬ್ಬರು ಮಹಿಳೆಗೆ ಇದೇ ಪರಿಸ್ಥಿತಿ ಎದುರಾಗಿದೆ. 42 ವರ್ಷದ ಅಂಬೆರ್ ಹಾಲ್ ಎಂಬುವವರು ಅಮೆರಿಕದ ಕೊಲೊರಾಡೋದಲ್ಲಿ ನಾಲ್ಕು ಬೆಡ್‌ರೂಂಗಳ (Bed Room) ಮನೆ ಖರೀದಿಸಿದ್ದರು. ಆದರೆ ಮೊದಲ ಬಾರಿಗೆ ಹೊಸ ಮನೆಗೆ ಬಂದಾಗ ಅವರಿಗೆ ಶಾಕ್ (Shock) ಕಾದಿತ್ತು. ಎಂದೆಂದೂ ನಿರೀಕ್ಷಿಸದಂತಹ ಅತಿಥಿಗಳು ಆ ಮನೆಯಲ್ಲಿ (Home) ಮೊದಲೇ ವಾಸವಿದ್ದರು.
ಅನಿರೀಕ್ಷಿತ ಅತಿಥಿಗಳನ್ನು ಕಂಡು ಶಾಕ್!
ಮಾಧ್ಯಮದ ಜೊತೆಗಿನ ಸಂವಾದಲ್ಲಿ ಅಂಬೆರ್ ಹಾಲ್ ಅವರು ತಮಗಾದ ಆಘಾತವನ್ನು ಬಿಚ್ಚಿಟ್ಟರು. “ನಾನು ಲಗ್ಗೇಜ್‌ಗಳನ್ನು ಅನ್‌ಪ್ಯಾಕ್ ಮಾಡುತ್ತಿದ್ದೆ. ನನ್ನ ಜೊತೆಗೆ ನನ್ನ ನಾಯಿ ಕೂಡ ಇತ್ತು.
ಅದು ಗಾಬರಿಗೊಂಡಂತೆ ಹಿಂದೆ ಮುಂದೆ ಓಡಾಡಲು ಆರಂಭಿಸಿತ್ತು. ಆದರೆ ನಾನು ಜೇಡ ಅಥವಾ ಇನ್ಯಾವುದೋ ಕೀಟವನ್ನು ನೋಡಿದೆ ಎಂದುಕೊಂಡರೆ ಆದರೆ ಅಲ್ಲಿ ಗೋಡೆಗಳ ಮೇಲೆ ಹಾವುಗಳು ಓಡಾಡುತ್ತಿರುವುದನ್ನು ನೋಡಿ ತೀವ್ರವಾಗಿ ಗಾಬರಿಗೊಂಡೆ” ಎಂದು ಹೇಳಿದ್ದಾರೆ.
ಮನೆಯಲ್ಲಿಯೇ ಇದೆ ಹಾವಿನ ಬಿಲ!
ಗೋಡೆಯ ಸಂದಿಯಲ್ಲಿ ಬಾಗಿಲಿನ ಪಕ್ಕದಲ್ಲಿ ಹಾವುಗಳು ಸುತ್ತಿಕೊಂಡಿರುವುದನ್ನು ನೋಡಿದೆ, ತುಂಬಾ ಗಾಬರಿಯಾಯಿತು. 10 ದಿನಗಳ ಹಿಂದೆ ಮೊದಲ ಹಾವು ಪತ್ತೆಯಾಗಿದ್ದು, ಅಂದಿನಿಂದ ಒಟ್ಟು 10 ಹಾವುಗಳು ಕಾಣಿಸಿಕೊಂಡಿವೆ.
ತಮ್ಮ ಹೊಸ ಮನೆಯನ್ನು ಬುಕ್ ಮಾಡಿದಾಗ ಮನೆಯಲ್ಲಿ ಹಾವಿನ ಬಿಲವಿರಬಹುದು ಎಂಬ ಸುಳಿವು ಕೂಡ ನನಗೆ ಇರಲಿಲ್ಲ ಎಂಬುದಾಗಿ ಹಾಲ್ ಅವರು ಅಲವತ್ತುಕೊಂಡರು.
"ಮನೆಯಲ್ಲಿ ಹಾವಿನ ಬಿಲವಿದೆ ಎಂಬುದು ನನಗೆ ಆಘಾತ ತಂದಿದೆ. ಸಂಶೋಧನೆಯ ನಂತರ ಅದು ಒಂದು ರೀತಿಯ ಗಾರ್ಟರ್ ಹಾವು ಎಂದು ಹೇಳುತ್ತಾರೆ. ಆದರೆ ಯಾರೂ ಕೂಡ ಅಷ್ಟು ದೊಡ್ಡ ಗಾರ್ಟರ್ ಹಾವನ್ನು ನೋಡಿಲ್ಲ ಎಂದು ಹೇಳುತ್ತಿದ್ದಾರೆ”
ಹಾವುಗಳನ್ನು ಓಡಿಸಲು ಸಾವಿರ ಡಾಲರ್ ಖರ್ಚು!
ಇನ್ನು, ಹೇಗಾದರೂ ಸರಿ, ಹಾವುಗಳನ್ನು ಓಡಿಸಿ ನೆಮ್ಮದಿಯಿಂದ ವಾಸಿಸಬೇಕು ಎಂದುಕೊಂಡಿರುವ ಹಾಲ್ ಅವರು, ಅದಕ್ಕಾಗಿ ಹಾವು ಹಿಡಿಯುವವರನ್ನು ಕೂಡ ನೇಮಿಸಿಕೊಂಡರು. ಜೊತೆಗೆ ಇದುವರೆಗೆ ಹಾವುಗಳನ್ನು ಓಡಿಸಲು ಅವರು ಸುಮಾರು ಸಾವಿರ ಡಾಲರ್ ಖರ್ಚು ಮಾಡಿದ್ದಾರೆ.
ಇದನ್ನೂ ಓದಿ: ತುಂಡು ಬಟ್ಟೆ ತೊಟ್ಟಿದ್ದಕ್ಕೆ ವಿಮಾನ ಹತ್ತಿಸದ ಸಿಬ್ಬಂದಿ! ಏರ್‌ಪೋರ್ಟ್ ಗೇಟ್‌ನಲ್ಲೇ ಡ್ರೆಸ್ ಬದಲಿಸಿದ ಮಹಿಳೆಯರು!
ಇನ್ನು, ಈ ಬಗ್ಗೆ ಕೀಟ ನಿಯಂತ್ರಣ ತಜ್ಞರು, ಕೆಲವು ಹಾವುಗಳು ಈ ಮನೆಯೊಳಗೆ ವಾಸಿಸುತ್ತಿವೆ. ಕನಿಷ್ಠ ಎರಡು ವರ್ಷಗಳಿಂದ ಇಲ್ಲಿನ ಬಿಲ ಮಾಡಿಕೊಂಡು ವಾಸಿಸುತ್ತಿವೆ ಎಂದು ಹೇಳಿದ್ದಾರೆ.
ಮನೆಯೊಳಗಿದ್ದರೆ ಸಾವಿರ ಭಯ
ಮನೆಯನ್ನು ಬಿಟ್ಟು ಬೇರೆ ಹೋಗಿ ವಾಸಿಸೋಣ ಅನ್ನೋಕೆ….. ಈ ಮನೆ ಖರೀದಿಗೆ ಹಾಲ್ ಅವರು ತಮ್ಮ ಸಂಪೂರ್ಣ ಉಳಿತಾಯವನ್ನು ವ್ಯಯಿಸಿದ್ದಾರೆ. ಆದರೆ ಹಾವುಗಳ ಭಯದಿಂದ ಅವರಿಗೆ ನೆಮ್ಮದಿಯಿಂದ ಇಲ್ಲಿ ಉಳಿಯಲೂ ಸಾಧ್ಯವಾಗುತ್ತಿಲ್ಲ. ಶೌಚಾಲಯದಿಂದ ಹಾವು ಹೊರಬರುತ್ತದೆ ಎಂಬ ಭಯದಿಂದ ಅವರ ಕುಟುಂಬವು ಬಾತ್‌ರೂಂ ಗೆ ಹೋಗಲೂ ಭಯಪಡುವಂತಾಗಿದೆ.
"ಆ ಮನೆಯಲ್ಲಿ ವಾಸಿಸಲು ನನಗೆ ಭಯವಾಗುತ್ತದೆ. ಎಲ್ಲಿ ಹೋದರೂ ಹಾವುಗಳ ಭಯ. ಪೆಟ್ಟಿಗೆಗಳ ಕೆಳಗೆ, ಬಾಲಿಗಿನ ಪಕ್ಕದಲ್ಲಿ ಹಾವುಗಳು ಕಾಣಿಸಿಕೊಳ್ಳಬಹುದು ಎಂದು ಭಯಭೀತಳಾಗುತ್ತೇನೆ.
ಅವುಗಳು ಹಾಸಿಗೆಯ ಮೇಲೆ ತೆವಳುತ್ತಿವೆಯೇನೋ ಎನಿಸುತ್ತವೆ. ಪಾದಕ್ಕೆ ಏನಾದರೂ ಸ್ಪರ್ಶವಾದರೆ ಸಾಕು ಹಾವೇ ತಾಕಿತೇನೋ ಎನಿಸುತ್ತದೆ" ಎಂದು ಅವರು ಹೇಳುತ್ತಾರೆ. ಇನ್ನು, ಮನೆಯಲ್ಲಿ ಹಾವುಗಳನ್ನು ನೋಡಿ ನೆಮ್ಮದಿಯೇ ಹಾಳಾಗಿದೆ. ಮನೆಯೊಳಗಿದ್ದುಕೊಂಡೇ ಸಾವಿನ ಭಯದೊಂದಿಗೆ ವಾಸಿಸುತ್ತಿದ್ದೇನೆ ಎಂಬುದಾಗಿ ಹಾಲ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ