Sanna Marin: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವಿಡಿಯೋ ವೈರಲ್, ಡ್ರಗ್ಸ್ ಟೆಸ್ಟ್​ಗೆ ಒತ್ತಾಯ!

ಫಿನ್‌ಲ್ಯಾಂಡ್‌ನ ಚಿತ್ತಾಕರ್ಷಕ ಪ್ರಧಾನಿಯಾಗಿರುವ ಸನ್ನಾ ಮರಿನ್ ತಮ್ಮ ಸೆಲೆಬ್ರಿಟಿ ಸ್ನೇಹಿತರೊಂದಿಗೆ ಹುಚ್ಚುಚ್ಚಾಗಿ ಪಾರ್ಟಿಮಾಡುತ್ತಿರುವ ನರ್ತಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಮೊಬೈಲ್ ಫೋನ್‌ನಲ್ಲಿ ಸೆರೆಹಡಿದಿರುವ ವಿಡಿಯೋ ತುಣುಕುಗಳಲ್ಲಿ 36 ರ ಹರೆಯದ ಸನ್ನಾ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಮೋಜುಮಾಡುತ್ತಿದ್ದು ಹೆಚ್ಚು ಉತ್ಸಾಹಭರಿತರಾಗಿ ಕಂಡುಬಂದಿದ್ದಾರೆ.

ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್

ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್

  • Share this:

ಫಿನ್‌ಲ್ಯಾಂಡ್‌ನ (Finland) ಚಿತ್ತಾಕರ್ಷಕ ಪ್ರಧಾನಿಯಾಗಿರುವ ಸನ್ನಾ ಮರಿನ್ (Sanna Marin) ತಮ್ಮ ಸೆಲೆಬ್ರಿಟಿ ಸ್ನೇಹಿತರೊಂದಿಗೆ  ಪಾರ್ಟಿಮಾಡುತ್ತಿರುವ (Friends Party) ನರ್ತಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಮೊಬೈಲ್ ಫೋನ್‌ನಲ್ಲಿ ಸೆರೆಹಡಿದಿರುವ ವಿಡಿಯೋ ತುಣುಕುಗಳಲ್ಲಿ 36 ರ ಹರೆಯದ ಸನ್ನಾ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಮೋಜುಮಾಡುತ್ತಿದ್ದು ಹೆಚ್ಚು ಉತ್ಸಾಹಭರಿತರಾಗಿ ಕಂಡುಬಂದಿದ್ದಾರೆ. ಕೋವಿಡ್-19 ಗೆ ಪ್ರಧಾನಿಯವರು ತುತ್ತಾಗಿದ್ದರೂ ಮುಂಜಾನೆ 4 ರವರೆಗೆ ಸನ್ನಾ ಕ್ಲಬ್‌ಗೆ ತೆರಳಿರುವ ಹಿನ್ನಲೆಯಲ್ಲಿ ಕ್ಷಮೆಕೋರಬೇಕೆಂಬ ಒತ್ತಾಯಿಸಿದ ಕೆಲವೇ ದಿನಗಳ ನಂತರ ಈ ವಿಡಿಯೋ (Video) ಸೋರಿಕೆಯಾಗಿದೆ. ಪ್ರಧಾನಿಯಾಗಿ ಕೋವಿಡ್‌ (Covid) ಸಂಪರ್ಕಕ್ಕೆ ಬಂದಿದ್ದರೂ ನಿವಾಸದಲ್ಲಿರದೆ ಸಾರ್ವಜನಿಕ ಸಂಪರ್ಕಕ್ಕೆ ಬಂದಿದ್ದು ತೀವ್ರ ಟೀಕೆಗೆ ಒಳಗಾಗಿತ್ತು. 


ಮುಜುಗರಕ್ಕೆ ಕಾರಣವಾಗಿದೆಯಂತೆ ಈ ವಿಡಿಯೋ 
ಸೋರಿಕೆಯಾಗಿರುವ ವಿಡಿಯೋವು ಮುಜುಗರಕ್ಕೆ ಕಾರಣವಾಗಿರುವುದು ಖಚಿತವಾಗಿದೆ ಏಕೆಂದರೆ ಇದನ್ನು ಖಾಸಗಿ ಖಾತೆಯ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಿಂದ ತೆಗೆದುಕೊಳ್ಳಲಾಗಿದ್ದು ಫಿನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಮತ್ತು ಅವರ ಫಿನ್ನಿಷ್ ಸೆಲೆಬ್ರಿಟಿ ಸ್ನೇಹಿತರ ಗುಂಪು ಸಂಪೂರ್ಣ ಅಸುರಕ್ಷಿತವಾಗಿದೆ ಎಂಬುದು ಕಂಡುಬಂದಿದೆ.


ಪಾರ್ಟಿಯಲ್ಲಿ ಯಾರ‍್ಯಾರು ಭಾಗಿಯಾಗಿದ್ದರು
ವಿಡಿಯೋದಲ್ಲಿ ಕಂಡುಬಂದಿರುವ ಗಣ್ಯ ವ್ಯಕ್ತಿಗಳಲ್ಲಿ ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರಾಪರ್ ಪೆಟ್ರಿ ನೈಗಾರ್ಡ್, ಟಿವಿ ಹೋಸ್ಟ್ ಟಿನ್ನಿ ವಿಕ್ಸ್ಟ್ರೋಮ್, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಅವರದ್ದೇ ಆದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಇದ್ದಾರೆ. ವಿಶೇಷವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಫಿನ್‌ಲ್ಯಾಂಡ್ NATO ಗೆ ಸೇರಲು ತಟಸ್ಥ ಧೋರಣೆಯನ್ನು ಕೊನೆಗೊಳಿಸುತ್ತಿರುವಾಗ ಹಾಗೂ ರಷ್ಯಾದೊಂದಿಗೆ ಸೆಣಸಾಡುತ್ತಿರುವಾಗ ವಿನೋದ ಪ್ರಿಯ ನಡವಳಿಕೆಯು ನಾಯಕರಿಗೆ ಶೋಭನೀಯವಾದುದಲ್ಲ ಎಂಬ ಟೀಕೆಗೆ ಗುರಿಯಾಗಿದೆ.


ಇದನ್ನೂ ಓದಿ: Emilia Clarke: ಅಯ್ಯೋ, ಈ ನಟಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು 14 ಸಾವಿರ ರೂಪಾಯಿ ಪಾವತಿಸಬೇಕಂತೆ!



ಜರ್ಮನಿಯ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಮರಿನ್ ಅವರ ಶಾಂತಿಯುತ ನಾಯಕತ್ವ ಮತ್ತು ವಿಧೇಯ ನಡವಳಿಕೆಗಾಗಿ ವಿಶ್ವದಲ್ಲಿಯೇ ಅತ್ಯಂತ ಶಾಂತಮಯಿ ರಾಜಕಾರಣಿ ಎಂದು ಹೊಗಳಿತು ಆದರೆ ಇನ್ನು ಕೆಲವು ಟೀಕಾಕಾರರು ಮರಿನ್ ಅವರದ್ದು ಅಸಡ್ಡೆಯ ನಡವಳಿಕೆ ಎಂದು ದೂಷಿಸಿದ್ದಾರೆ.


ಈ ಬಗ್ಗೆ ಮರಿನ್ ಅವರು ಏನು ಹೇಳಿದ್ದಾರೆ?
ವಿಡಿಯೋದಲ್ಲಿ ಗುಂಪು ಅಸಭ್ಯ ಪದ ಪ್ರಯೋಗಗಳ ಬಳಕೆಯನ್ನು ಮಾಡುತ್ತಿದೆ ಹಾಗೂ ಕೊಕೇನ್‌ನಂತಹ ಮಾದಕ ಪದಾರ್ಥಗಳಿಗೆ ಒಳಗಾಗಿದ್ದಾರೆ ಎಂಬುದು ತಿಳಿದುಬಂದಿದೆ. ಸೋರಿಕೆಯಾದ ವಿಡಿಯೋ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಮರಿನ್ ತಾವು ಮಾದಕ ವಸ್ತುಗಳನ್ನು ಬಳಸಿರುವುದನ್ನು ನಿರಾಕರಿಸಿದ್ದಾರೆ ಮತ್ತು ಮರೆಮಾಚಲು ಏನೂ ಇಲ್ಲ ಎಂದೇ ಹೇಳಿದ್ದಾರೆ. ನಾನು ನೃತ್ಯ ಹಾಗೂ ಹಾಡಿನಂತಹ ಕಾನೂನು ಬದ್ಧ ಕೆಲಸಗಳನ್ನೇ ಪಾರ್ಟಿಯಲ್ಲಿ ಮಾಡಿರುವೆ ಹಾಗೂ ತಾವು ಹೆಚ್ಚು ಕುಡಿದಿರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Viral Story: ಆತನದ್ದು ಆಂಧ್ರ ಪ್ರದೇಶ, ಆಕೆಯದ್ದು ಜರ್ಮನಿ! ಇಬ್ಬರ ಲವ್​ ಮ್ಯಾರೇಜ್​ ನಡೆದದ್ದು ಅಮೆರಿಕದಲ್ಲಿ

ವಿಡಿಯೋಗಳು ಖಾಸಗಿಯಾಗಿರುವುದರಿಂದ ಖಾಸಗಿಯಾಗಿ ಅವುಗಳನ್ನು ಪ್ರಕಟಿಸಲಾಗಿರುವುದರಿಂದ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲವೆಂದು ತಿಳಿಸಿದ ಮರಿನ್ ವೈಯಕ್ತಿಕ ವಿಡಿಯೋಗಳನ್ನು ಬಹಿರಂಗಪಡಿಸಿರುವುದು ಅತ್ಯಂತ ಕೆಟ್ಟ ಭಾವನೆಯಾಗಿದೆ ಎಂದಿದ್ದಾರೆ. ಹೆಚ್ಚಿನ ಯುವಜನರಿಗೆ ಪ್ರಧಾನಿಯ ಈ ನೃತ್ಯ ವಿಡಿಯೋ ಪ್ರಚೋದನಕಾರಿಯಾಗಿರುತ್ತದೆ ಎಂಬುದು ಇಲ್ಲಿ ಸತ್ಯವಾದ ಮಾತಾಗಿದೆ. ಮರಿನ್ 2019 ರಲ್ಲಿ ತಮ್ಮ 34 ನೇ ಹರೆಯದಲ್ಲಿ ಪ್ರಧಾನಿಯಾಗಿದ್ದು ವಿಶ್ವದ ಅತ್ಯಂತ ಕಿರಿಯ ವಿಶ್ವನಾಯಕರಲ್ಲಿಒಬ್ಬರಾಗಿದ್ದಾರೆ.

Published by:Ashwini Prabhu
First published: