ಸತತ ಆರನೇ ಬಾರಿಗೆ ವಿಶ್ವದ (World) ಅತ್ಯಂತ ಸಂತೋಷದ (Happiness) ದೇಶವಾಗಿ ಫಿನ್‌ಲ್ಯಾಂಡ್ (Finland) ಸ್ಥಾನ ಗಳಿಸಿದೆ. ಈ ವಾರ ಪ್ರಕಟವಾದ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2023 ರ ಪ್ರಕಾರ, ಫಿನ್‌ಲ್ಯಾಂಡ್ ಇತರ ದೇಶಗಳಿಗಿಂತ ಗಮನಾರ್ಹವಾಗಿ ಮುಂದಿದೆ ಹಾಗೂ ಉತ್ತಮ ಸ್ಕೋರ್‌ನೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ವರದಿ ಹೇಗೆ ಸಿದ್ಧಪಡಿಸಲಾಗುತ್ತದೆ?
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್ ಹಾಗೂ ಸ್ವತಂತ್ರ ತಜ್ಞರ ತಂಡವು ತಯಾರಿಸಿದ ವರದಿಯು ಸರಾಸರಿ ಆದಾಯ ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದಂತಹ ಅಂಶಗಳನ್ನು ಮಾಪನ ಮಾಡುತ್ತದೆ. ಈ ವರದಿಗೆ ಬೇಕಾದ ಅಂಕಿಅಂಶಗಳನ್ನು ಗ್ಯಾಲಪ್‌ನ ವರ್ಲ್ಡ್ ಪೋಲ್‌ನಿಂದ ತೆಗೆದುಕೊಳ್ಳಲಾಗುತ್ತದೆ ಹಾಗೂ ನಂತರ ಫಲಿತಾಂಶ ನೀಡಲಾಗುತ್ತದೆ.
ವಿಸಿಟ್ ಫಿನ್‌ಲ್ಯಾಂಡ್‌ನಿಂದ ಸಖತ್ ಆಫರ್
ದೇಶವು ಸತತ ಆರನೇ ಬಾರಿಯೂ ಸಂತೋಷಕರ ದೇಶ ಎಂಬ ಬಿರುದಿಗೆ ಮನ್ನಣೆಗೆ ಒಳಗಾದ ಹಿನ್ನಲೆಯಲ್ಲಿ ಟ್ರಾವೆಲ್ ಸಂಸ್ಥೆ ವಿಸಿಟ್ ಫಿನ್‌ಲ್ಯಾಂಡ್ ಹತ್ತು ಜನರಿಗೆ ತನ್ನ ದೇಶಕ್ಕೆ ಬರುವ ಆಹ್ವಾನವಿತ್ತಿದ್ದು ಇಲ್ಲಿನ ನಿವಾಸಿಗಳಂತೆ ಹೇಗೆ ಸಂತೋಷವಾಗಿರಬಹುದೆಂಬುದನ್ನು ಕಲಿತುಕೊಳ್ಳುವ ಅವಕಾಶವನ್ನು ನೀಡುತ್ತದೆ.
ಫಿನ್ನಿಗರಂತೆ ನೀವೂ ಸಂತೋಷವಾಗಿರಬಹುದು
ಫಿನ್‌ಲ್ಯಾಂಡ್‌ನ ಲೇಕ್ ಡಿಸ್ಟ್ರಿಕ್ಟ್‌ನಲ್ಲಿರುವ ಕುರು ಐಷಾರಾಮಿ ರಿಟ್ರೀಟ್ ಸೆಂಟರ್‌ನಲ್ಲಿ ಜೂನ್‌ನಲ್ಲಿ 4 ದಿನಗಳವರೆಗೆ ವಿಸಿಟ್ ಫಿನ್‌ಲ್ಯಾಂಡ್‌ನ "ಮಾಸ್ಟರ್‌ಕ್ಲಾಸ್ ಆಫ್ ಹ್ಯಾಪಿನೆಸ್" ಕಾರ್ಯಕ್ರಮ ನಡೆಯಲಿದೆ.
ವಿಸಿಟ್ ಫಿನ್‌ಲ್ಯಾಂಡೇ ಸ್ವತಃ ಪ್ರಯಾಣದ ಖರ್ಚುವೆಚ್ಚಗಳನ್ನು ನೋಡಿಕೊಳ್ಳಲಿದ್ದು, ಖಾಸಗಿ ಕೊಠಡಿ, ಖಾಸಗಿ ಸೌನಾ ಮತ್ತು ಸ್ಪಾಗೆ ಪ್ರವೇಶ ಮತ್ತು ಎಲ್ಲಾ ಇತರ "ಅಗತ್ಯ ಸೌಲಭ್ಯಗಳು" ಸೇರಿದಂತೆ ಎಲ್ಲಾ ಸೌಲಭ್ಯಗಳ ಖರ್ಚುವೆಚ್ಚಗಳನ್ನು ಭರಿಸಲಿದೆ ಎಂದು ತಿಳಿಸಿದೆ. ಈ ಕುರಿತಾಗಿ ವಿಸಿಟ್ ಫಿನ್‌ಲ್ಯಾಂಡ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ಒದಗಿಸಿದೆ.
ತಜ್ಞರೊಂದಿಗೆ ಸೆಷನ್‌ಗಳೂ ಇರುತ್ತವೆ
ಪ್ರವಾಸವು ವೆಬ್‌ಸೈಟ್‌ನ ಪ್ರಕಾರ ಪ್ರಕೃತಿ ಕರಕುಶಲ, ಆಹಾರ ಮತ್ತು ಯೋಗಕ್ಷೇಮ ಮತ್ತು ಆರೋಗ್ಯ ಮತ್ತು ಸಮತೋಲನದ ಬಗ್ಗೆ ತಿಳಿದುಕೊಳ್ಳಲು ಫಿನ್ನಿಷ್ ತಜ್ಞರೊಂದಿಗೆ ಅನೇಕ ಸೆಷನ್‌ಗಳನ್ನು ಒಳಗೊಂಡಿರುತ್ತದೆ.
ಭಾಗವಹಿಸುವವರು ಸ್ಪರ್ಧೆಯಲ್ಲಿ ಜಯಶಾಲಿಗಳಾಗಬೇಕು
ವೆಬ್‌ಸೈಟ್ ತಿಳಿಸಿರುವಂತೆ, ಅಪ್ಲಿಕೇಶನ್‌ಗಳು ಈಗ ಏಪ್ರಿಲ್ 2 ರವರೆಗೆ ತೆರೆದಿದ್ದು, ಆಸಕ್ತರು ಹಾಗೂ ಭಾಗವಹಿಸುವವರು ಇದಕ್ಕಾಗಿ ಟ್ರಾವೆಲ್ ಸಂಸ್ಥೆ ಏರ್ಪಡಿಸುವ ಸ್ಪರ್ಧೆಯಲ್ಲಿ ಜಯಶಾಲಿಗಳಾಗಬೇಕು.
ಅಪ್ಲಿಕೇಶನ್ ಭಾಗವಾಗಿ ಭಾಗವಹಿಸುವವರು ನಿಮ್ಮೊಳಗೆ ಅವಿತಿರುವ ಸಂತೋಷದ ವ್ಯಕ್ತಿ (ಫಿನ್ನಿಗ) ಯನ್ನು ತೋರ್ಪಡಿಸುವ ರೀಲ್ ಅಥವಾ ಟಿಕ್‌ಟಾಕ್ ಅನ್ನು ಮಾಡಿ ಕಳುಹಿಸಬೇಕು.
ಇದನ್ನೂ ಓದಿ: ಈ ರಸ್ತೆಗಳಲ್ಲಿ ಓಡಾಡೋದಕ್ಕೂ ಧಮ್ ಇರ್ಬೇಕ್, ಫೋಟೋಸ್ ನೋಡಿನೇ ಬೆಚ್ಚಿಬೀಳ್ತೀರ!
ಭಾಗವಹಿಸುವವರು ಫಿನ್‌ಲ್ಯಾಂಡ್‌ಗೆ ಭೇಟಿ ನೀಡಿದಾಗ ವಿಸಿಟ್ ಫಿನ್‌ಲ್ಯಾಂಡ್ ಜಾಹೀರಾತಿಗಾಗಿ ಅವರನ್ನು ಚಿತ್ರೀಕರಿಸಲಾಗುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ.
ಸಂತೋಷವೆಂಬುದು ಸಂಪನ್ಮೂಲವಿದ್ದಂತೆ
ಬ್ಯುಸಿನೆಸ್ ಫಿನ್‌ಲ್ಯಾಂಡ್‌ನ ಸರ್ಕಾರಿ ಸಂಸ್ಥೆಯ ಹಿರಿಯ ನಿರ್ದೇಶಕ ಹೆಲಿ ಜಿಮೆನೆಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಫಿನ್‌ಲ್ಯಾಂಡ್‌ನ ರಾಷ್ಟ್ರೀಯ ಸಂತೋಷವು ಪ್ರಕೃತಿಯೊಂದಿಗಿನ ನಿಕಟ ಸಂಬಂಧ ಮತ್ತು ನಮ್ಮ ಪ್ರಾಮಾಣಿಕ ಜೀವನಶೈಲಿಯಿಂದ ಸಂಭವಿಸಿದೆ.
ಇದೇನೂ ಅತೀಂದ್ರಿಯ ಸ್ಥಿತಿಯಲ್ಲ ಎಂದು ತಿಳಿಸಿದ್ದಾರೆ. ಸಂತೋಷವೆಂಬುದು ಸಂಪನ್ಮೂಲವಿದ್ದಂತೆ ಎಂದು ತಿಳಿಸಿರುವ ಹೆಲಿ, ಆ ಸಂತೋಷವನ್ನು ಗ್ರಹಿಸುವುದೇ ಇರುವ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಸಂತೋಷ ಹಂಚಿಕೊಂಡಾಗ ಇಮ್ಮಡಿಗೊಳ್ಳುತ್ತದೆ
2022 ರ ಜಾಗತಿಕ ಒರಾಕಲ್ ಹ್ಯಾಪಿನೆಸ್ ವರದಿಯ ಪ್ರಕಾರ, 45% ಜನರು ಎರಡು ವರ್ಷಗಳಿಂದ ನಿಜವಾದ ಸಂತೋಷವನ್ನು ಅನುಭವಿಸಿಲ್ಲ ಮತ್ತು 25% ಜನರು ನಿಜವಾದ ಸಂತೋಷವನ್ನು ಅನುಭವಿಸುವುದರ ಅರ್ಥವೇನೆಂದು ತಿಳಿದಿಲ್ಲ ಇಲ್ಲವೇ ಅದನ್ನು ಮರೆತಿದ್ದಾರೆ ಎಂಬುದಾಗಿ ವರದಿಯಾಗಿದೆ. ಸಂತೋಷವನ್ನು ಹಂಚಿಕೊಂಡಾಗ ಅದು ವೃದ್ಧಿಗೊಳ್ಳುತ್ತದೆ ಎಂಬುದಾಗಿ ಸಂಶೋಧನೆ ಸೂಚಿಸಿದೆ.
ಇದನ್ನೂ ಓದಿ: ಎಲ್ರೂ ತೂಕ ಇಳಿಸೋಕೆ ಊಟ ಬಿಟ್ರೆ, ತಿಂದು ತಿಂದೂ ತೂಕ ಇಳಿಸಿದ್ರು ಈ ಜೋಡಿ!
ಫಿನ್‌ಲ್ಯಾಂಡ್ ಸಂತೋಷಮಯ ದೇಶ ಎಂಬ ಬಿರುದು ಪಡೆದುಕೊಳ್ಳಲು ಕಾರಣ ಅಲ್ಲಿನ ನಿವಾಸಿಗಳು ಹಾಗೂ ಅವರು ತಮ್ಮೊಳಗಿನ ಖುಷಿಯನ್ನು ಕಂಡುಹಿಡಿಯುವಲ್ಲಿ ಸಮರ್ಥರಾಗಿರುವುದಾಗಿದೆ ಎಂದು ಹೆಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ