• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Finland: ಫಾಸ್ಟ್​ ಡ್ರೈವಿಂಗ್​ ಮಾಡಿದ್ದಕ್ಕೆ ಮಲ್ಟಿ-ಮಿಲಿಯನೇರ್‌ಗೆ ಬಿತ್ತು ದಂಡ, ಲೈಸೆನ್ಸ್‌ ಕೂಡಾ ರದ್ದು!

Finland: ಫಾಸ್ಟ್​ ಡ್ರೈವಿಂಗ್​ ಮಾಡಿದ್ದಕ್ಕೆ ಮಲ್ಟಿ-ಮಿಲಿಯನೇರ್‌ಗೆ ಬಿತ್ತು ದಂಡ, ಲೈಸೆನ್ಸ್‌ ಕೂಡಾ ರದ್ದು!

ಮಲ್ಟಿ-ಮಿಲಿಯನೇರ್‌

ಮಲ್ಟಿ-ಮಿಲಿಯನೇರ್‌

ಇತ್ತೀಚೆಗೆ ವಾಹನವನ್ನು ತುಂಬಾ ವೇಗವಾಗಿ ಓಡಿಸಿದ್ದಕ್ಕೆ ಶ್ರೀಮಂತ ವ್ಯಕ್ತಿಗೆ ಭಾರಿ ದಂಡವನ್ನು ವಿಧಿಸಿದೆ. ಎಲ್ಲಾ ದೇಶಗಳಲ್ಲಿ ಅದರದ್ದೇ ವೇಗದ ಮಿತಿ ಇರುತ್ತದೆ. ಫಿನ್‌ಲ್ಯಾಂಡ್‌ ಕೂಡ ಇದಕ್ಕೆ ಹೊರತಾಗಿಲ್ಲ.

  • Share this:

ಪುಟಾಣಿ ದೇಶ ಫಿನ್‌ಲ್ಯಾಂಡ್‌ (Finland) ಹಲವು ವಿಚಾರಗಳಲ್ಲಿ ಜಗತ್ತಿಗೆ ಮಾದರಿ ದೇಶವಾಗಿದೆ. ಶಿಕ್ಷಣ ವಿಚಾರದಲ್ಲಂತೂ ಪ್ರತಿ ದೇಶ ಅನುಸರಿಸಬಹುದಾದ ಮಾದರಿಯನ್ನು ಹೊಂದಿದೆ.  ಅದೇ ರೀತಿ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವ ಬಗ್ಗೆ ಆದ್ಯತೆಯನ್ನು ಹೊಂದಿದೆ. ಇತ್ತೀಚಿಗೆ ಒಬ್ಬ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ (Reason) ಆತನಿಗೆ ವಿಧಿಸಿದ ದಂಡ ಗಮನಿಸಿದರೆ ಫಿನ್‌ಲ್ಯಾಂಡ್‌ ಹೇಗೆ ಶಿಸ್ತುಬದ್ಧವಾಗಿರಲು ತನ್ನ ನಾಗರೀಕರನ್ನು ಒತ್ತಾಯಿಸುತ್ತದೆ ಎಂಬುದನ್ನು ನೋಡಬಹುದು. ಇತ್ತೀಚೆಗೆ ವಾಹನವನ್ನು ತುಂಬಾ ವೇಗವಾಗಿ ಓಡಿಸಿದ್ದಕ್ಕೆ ಶ್ರೀಮಂತ ವ್ಯಕ್ತಿಗೆ (Richest Person) ಭಾರಿ ದಂಡವನ್ನು ವಿಧಿಸಿದೆ. ಎಲ್ಲಾ ದೇಶಗಳಲ್ಲಿ ಅದರದ್ದೇ ವೇಗದ ಮಿತಿ ಇರುತ್ತದೆ. ಫಿನ್‌ಲ್ಯಾಂಡ್‌ ಕೂಡ ಇದಕ್ಕೆ ಹೊರತಾಗಿಲ್ಲ.


ಈ ನಿಯಮಗಳನ್ನು ಗಾಳಿಗೆ ತೂರಿ ಹೋಗುವ ವಾಹನ ಸವಾರರು ಇದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅಂದು ದಂಡ ಬೀಳೋದು ಪಕ್ಕಾ. ಇದೇ ರೀತಿ ಫಿನ್‌ಲ್ಯಾಂಡ್‌ನ ಟಿಮಿಲಿಯನೇರ್‌ನಲ್ಲಿ ವೇಗವಾಗಿ ಗಾಡಿ ಓಡಿಸಿ ವ್ಯಕ್ತಿಯೊಬ್ಬರು ಭಾರಿ ದಂಡ ತೆತ್ತಿದ್ದಾರೆ.


ವೇಗವಾಗಿ ವಾಹನ ಚಾಲನೆ, ಉದ್ಯಮಿಗೆ ಬಿತ್ತು 1 ಕೋಟಿಗೂ ಹೆಚ್ಚಿನ ದಂಡ


ಫಿನ್‌ಲ್ಯಾಂಡ್‌ ರಸ್ತೆಯೊಂದರಲ್ಲಿ 76 ವರ್ಷದ ಬಹು-ಮಿಲಿಯನೇರ್‌ ಮತ್ತು ಉದ್ಯಮಿ ಆಂಡರ್ಸ್ ವಿಕ್ಲೋಫ್ ಎಂಬುವವರು ವೇಗವಾಗಿ ತಮ್ಮ ವಾಹನ ಓಡಿಸಿದ್ದಾರೆ.


ವೇಗದ ಮಿತಿಗಿಂತ ಗಂಟೆಗೆ 30 ಕಿ.ಮೀ ಹೆಚ್ಚಾಗಿ ಓಡಿಸುತ್ತಿದ್ದ ವಿಕ್ಲೋಫ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ದಂಡ ಅಂದರೆ ಒಂದೆರೆಡು ನೂರಲ್ಲ, ಬದಲಿಗೆ ಬರೋಬ್ಬರಿ ಒಂದು ಕೋಟಿ.


ಹೌದು, ವೇಗವಾಗಿ ವಾಹನ ಚಲಾಯಿಸುತ್ತಿದ್ದ ಉದ್ಯಮಿಗೆ 121,000 ಯುರೋ (1 ಕೋಟಿಗೂ ಹೆಚ್ಚು) ದಂಡವನ್ನು ಪಾವತಿಸುವಂತೆ ಫಿನ್‌ಲ್ಯಾಂಡ್‌ ಹೇಳಿದೆ. ಇದರ ಜೊತೆಗೆ ಉದ್ಯಮಿಯ ಚಾಲನಾ ಪರವಾನಗಿಯನ್ನು 10 ದಿನಗಳವರೆಗೆ ಅಮಾನತುಗೊಳಿಸಲಾಗಿದೆ.


ಈ ದೇಶದಲ್ಲಿ ಅಪರಾಧಿಯ ಆದಾಯ ಮತ್ತು ಅಪರಾಧದ ತೀವ್ರತೆಯ ಆಧಾರದ ಮೇಲೆ ದಂಡವನ್ನು ನಿರ್ಧರಿಸಲಾಗುತ್ತದೆ. ವಿಕ್ಲೋಫ್‌ ಅವರಿಗೆ ವಿಧಿಸಲಾದ ದಂಡದ ಮೊತ್ತವು ಅವರ 14 ದಿನದ ಆದಾಯದ ಅರ್ಧಕ್ಕೆ ಸಮನಾಗಿದೆ ಎಂದು ಹೇಳಲಾಗಿದೆ.


ನನ್ನ ದಂಡದ ಮೊತ್ತ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಲಿ - ವಿಕ್ಲೋಫ್‌


ದಂಡದ ಬಗ್ಗೆ ವಿಕ್ಲೋಫ್ ಮಾತನಾಡಿದ್ದು, ಈ ಬಗ್ಗೆ ವಿಷಾದಿಸುವುದಾಗಿ ಹೇಳಿದ್ದಾರೆ. ನನ್ನ ವಾಹನ ಚಾಲನೆ ಅಷ್ಟೊಂದು ವೇಗವಾಗಿ ಇರಲಿಲ್ಲ ಎಂದಿದ್ದಾರೆ. ನನ್ನ ದಂಡದ ಮೊತ್ತವನ್ನು ಉತ್ತಮ ಕಾರ್ಯಕ್ಕೆ ಬಳಸಲಿ ಎಂದು ನಾನು ಆಶಿಸುತ್ತೇನೆ.


ಫಿನ್‌ಲ್ಯಾಂಡ್‌ನಲ್ಲಿ ಆರೋಗ್ಯ ರಕ್ಷಣೆಯಲ್ಲಿ 1.5 ಶತಕೋಟಿ ಯುರೋಗಳನ್ನು ಉಳಿಸಲು ಸರ್ಕಾರವು ಬಯಸಿದೆ. ನನ್ನ ಹಣವು ಈ ಅಂತರವನ್ನು ತುಂಬಬಹುದು. ಸರ್ಕಾರದ ಈ ಕಾರ್ಯಕ್ಕೆ ನನ್ನ ಹಣ ಉಪಯೋಗವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಉದ್ಯಮಿ ಹೇಳಿದರು.


ಆದಾಯ, ಅಪರಾಧದ ತೀವ್ರತೆಯ ಮೇಲೆ ದಂಡ ನಿರ್ಧಾರ


ಈ ದೇಶದಲ್ಲಿ ಅಪರಾಧಿಯ ಆದಾಯ ಮತ್ತು ಅಪರಾಧದ ತೀವ್ರತೆಯ ಆಧಾರದ ಮೇಲೆ ವೇಗದ ದಂಡವನ್ನು ಲೆಕ್ಕಹಾಕಲಾಗುತ್ತದೆ. ಪೊಲೀಸರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಕೇಂದ್ರ ತೆರಿಗೆದಾರರ ಡೇಟಾಬೇಸ್‌ಗೆ ಸಂಪರ್ಕಿಸುವ ಮೂಲಕ ತಕ್ಷಣವೇ ಅವರ ಆದಾಯ ಪರಿಶೀಲಿಸಿ ದಂಡದ ಮೊತ್ತವನ್ನು ನಿರ್ಧರಿಸುತ್ತಾರೆ.


ಆದಾಯವು ಸಾಮಾನ್ಯವಾಗಿ ದೈನಂದಿನ ನಿವ್ವಳ ಆದಾಯದ ಅರ್ಧವನ್ನು ಸೂಚಿಸುತ್ತದೆ. ಈ ಪ್ರಮಾಣಾನುಗುಣ ದಂಡದ ವ್ಯವಸ್ಥೆಯನ್ನು ಇತರ ನಾರ್ಡಿಕ್ ದೇಶಗಳಲ್ಲಿಯೂ ಅನುಸರಿಸಲಾಗುತ್ತದೆ.
ವಿಕ್ಲೋಫ್ ಅವರು ಹೀಗೆ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ ಅವರು 2013 ರಲ್ಲಿ 95,000 ಯುರೋ ದಂಡವನ್ನು ಮತ್ತು ಐದು ವರ್ಷಗಳ ನಂತರ 2018 ರಲ್ಲಿ ಸುಮಾರು 64,000 ಯೂರೋ ದಂಡವನ್ನು ವಿಧಿಸಿದ್ದರು. ಇದೇ ಕಾರಣಕ್ಕೆ ಮೂರನೇ ಬಾರಿಯ ತಪ್ಪಿಗೆ ಈ ಮೊತ್ತದ ದಂಡ ಹಾಕಿದ್ದು, ಚಾಲನಾ ಪರವಾನಗಿಯನ್ನು ಸಹ 10 ದಿನಗಳವರೆಗೆ ಅಮಾನತುಗೊಳಿಸಲಾಗಿದೆ.

First published: