Optical Illusions: ಈ ಚಿತ್ರದಲ್ಲಿರುವ 16 ವೃತ್ತಗಳು ನಿಮಗೆ ಕಾಣಿಸುತ್ತಿವೆಯೇ?

ಮೊದಲ ಪ್ರಯತ್ನದಲ್ಲಿಯೇ ಎಲ್ಲ 16 ವೃತ್ತಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಸಮಯ ಬೇಕಾಗುತ್ತದೆ. ಈ ಭ್ರಮಾ ಲೋಕ ಪ್ರವೇಶಿಸಲುಬ ತಾಳ್ಮೆಯ ಅಗತ್ಯವಿದೆ ಎಂದು ಹೇಳುತ್ತಾರೆ.

ವೈರಲ್ ಆಗಿರುವ ಚಿತ್ರ

ವೈರಲ್ ಆಗಿರುವ ಚಿತ್ರ

  • Share this:
ಇತ್ತೀಚೆಗೆ ನಮ್ಮ ಕಣ್ಣುಗಳ (Eyes) ಕ್ಷಮತೆ ಸ್ಪರ್ಧೆ ನೀಡುವ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುತ್ತವೆ. ಇದನ್ನ ಆಪ್ಟಿಕಲ್ ಇಲ್ಯೂಶನ್ (Optical Illusions) ಎಂದು ಸಹ ಕರೆಯಲಾಗುತ್ತದೆ. ಈ ರೀತಿಯ ಫೋಟೋಗಳನ್ನು (Photos) ನೋಡುತ್ತಿದ್ರೆ ಗೊಂದಲಗಳು (Confuse) ನಿಮ್ಮ ಕಣ್ಮುಂದೆಯೇ ಅಪ್ಪಳಿಸುತ್ತವೆ. ಇದರಿಂದ ಚಿತ್ರದಲ್ಲಿ ಹುಡುಕಲು ಹೇಳಿರುವ ಪ್ರಮುಖ ಗುರಿಯನ್ನ ತಲುಪಲು ಸಾಧ್ಯವಾಗಲ್ಲ. ಕೆಲವೊಮ್ಮೆ ಎಲ್ಲವೂ ಗೊತ್ತಿದ್ರೂ ಕಣ್ಣುಗಳು ಮೋಸಗೊಳ್ಳುತ್ತವೆ. ಇಂತಹ ಚಿತ್ರಗಳನ್ನು ನೋಡುಗರನ್ನ ಒಂದು ರೀತಿ ಭ್ರಮಾಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಸದ್ಯ ಅಂತಹವುದೇ ಒಂದು ಚಿತ್ರ ವೈರಲ್ (Viral) ಆಗಿದ್ದು, ಇದರಲ್ಲಿರುವ ವೃತ್ತಗಳನ್ನು ಕಂಡು ಹಿಡಿಯುವುದ ಕಠಿಣ ಸವಾಲಾಗಿದೆ.

ಆಪ್ಟಿಕಲ್ ಭ್ರಮೆಯ ಸೃಷ್ಟಿಕರ್ತ ಆಂಥೋನಿ ನಾರ್ಸಿಯಾ ಕೂಡ ಇದನ್ನು ಕಠಿಣ ಸವಾಲಾಗಿ ಪರಿಗಣಿಸಿದ್ದಾರೆ. ಚಿತ್ರದಲ್ಲಿ ಮಾಡಿದ 16 ವೃತ್ತಗಳ (Circle) ಬದಲಿಗೆ, ಜನರು ಆಯತಾಕಾರದ ಆಕಾರವನ್ನು ನೋಡುತ್ತಾರೆ ಎಂದು ಹೇಳುತ್ತಾರೆ. ಬಹುತೇಕರಿಗೆ ಈ ಚಿತ್ರದಲ್ಲಿಯ ವೃತ್ತಗಳು ಮಾತ್ರ ಇನ್ನು ಸಿಕ್ಕಿಲ್ಲ.

ಈ ಚಿತ್ರದಲ್ಲಿ ಅಡಗಿವೆ 16 ಸರ್ಕಲ್!

ಒಟ್ಟು 16 ವೃತ್ತಾಕಾರಗಳು ಈ ಆಪ್ಟಿಕಲ್ ಇಲ್ಯೂಶನ್ ಚಿತ್ರದಲ್ಲಿವೆ. ನಿಮಗೆ ಮೊದಲ ನೋಟದಲ್ಲಿ ಇಲ್ಲಿರುವ ವೃತ್ತಗಳ ನಿಮಗೆ ಕಾಣಿಸಲ್ಲ. ಇಲ್ಲಿ ವೃತ್ತದ ಬಗ್ಗೆ ತಿಳಿದ ಜನರು ಫೋಟೋ ತೆಲೆಕೆಳಗಾಗಿ ಮಾಡಿ ಹುಡುಕಲು ಆರಂಭಿಸಿದ್ದಾರೆ. ಭ್ರಮೆಯ ಗೂಡು ಅಗಿರುವ ಈ ಚಿತ್ರದಲ್ಲಿ ಎಲ್ಲರಿಗೂ 16 ವೃತ್ತಗಳು ಸಿಕ್ಕಿಲ್ಲ.

ಮೊದಲ ಪ್ರಯತ್ನದಲ್ಲಿಯೇ ಎಲ್ಲ 16 ವೃತ್ತಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಸಮಯ ಬೇಕಾಗುತ್ತದೆ. ಈ ಭ್ರಮಾ ಲೋಕ ಪ್ರವೇಶಿಸಲುಬ ತಾಳ್ಮೆಯ ಅಗತ್ಯವಿದೆ ಎಂದು ಹೇಳುತ್ತಾರೆ.

finding-the-circle-in-the-picture-but-most-of-the-people-showed-the-square
ವೈರಲ್ ಚಿತ್ರ


ಇದೇ ರೀತಿಯ ಅನುಭವವು ಹೆಚ್ಚಿನ ಜನರಿಗೆ ಆಗಿದೆ. ಪ್ರತಿಯೊಬ್ಬರೂ ಈ ಚಿತ್ರವನ್ನು ಆಯತಾಕಾರದ ಬಾಗಿಲಿನ ಫಲಕದಂತೆ ದುಂಡಗಿನ ಬದಲು ಚೌಕದ ವಿನ್ಯಾಸದೊಂದಿಗೆ ಸುಲಭವಾಗಿ ಗೋಚರಿಸುತ್ತೆ ಅಂತ ಹೇಳಿದ್ದಾರೆ.

ಇದನ್ನೂ ಓದಿ:  Bride Dance: ಫುಲ್ ಜೋಶ್​ನಲ್ಲಿ ಮದುಮಗಳು! ಬಿಜ್ಲೀ ಬಿಜ್ಲೀ ಹಾಡಿಗೆ ಭರ್ಜರಿ ಡ್ಯಾನ್ಸ್, ವರ ಫಿದಾ

ಮಿದುಳಿನ ಜೊತೆಗೆ ಕಣ್ಣುಗಳಿಗೂ ಕಸರತ್ತು

ಈ ಚಿತ್ರದಲ್ಲಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳುವುದು ದೊಡ್ಡ ಸವಾಲು ಆಗಿದೆ. ಒಮ್ಮೆ ಎಚ್ಚರಿಕೆಯಿಂದ ನೋಡಿದರೆ ಅಲ್ಲಿರುವ ವೃತ್ತಗಳು ನಿಮಗೆ ಕಾಣಿಸುತ್ತವೆ. ತದನಂತರ ಒಂದೊಂದೆ ವೃತ್ತಗಳು ನಿಮ್ಮ ಕಣ್ಮುಂದೆ ಗೋಚರಿಸಲು ಆರಂಭಗೊಳ್ಳುತ್ತವೆ. ಇದಕ್ಕಾಗಿ ನಿಮ್ಮ ದೃಷ್ಟಿ ನೇರವಾಗಿರಬೇಕು. ದೃಷ್ಟಿ ಬದಲಿಸದೇ ಚಿತ್ರ ಗಮನಿಸಿದರೆ ಅದರಲ್ಲಿರುವ 16 ವೃತ್ತಗಳನ್ನು ಸರಳವಾಗಿ ಪತ್ತೆ ಮಾಡಬಹುದು. ಇದು ನಿಮ್ಮ ಕಣ್ಣು ಮತ್ತು ಮೆದುಳಿಗೂ ಕೆಲಸ ನೀಡುತ್ತದೆ.

ಅಕ್ಕತಂಗಿಯರ ವಿಡಿಯೋಗೆ 7 ಮಿಲಿಯನ್​ಗೂ ಹೆಚ್ಚು ವ್ಯೂಸ್

ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ತೋರಿಸುವ ಅನೇಕ ವಿಡಿಯೋಗಳು ಸದಾ ಹರಿದಾಡುತ್ತಲೇ ಇರುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ಇದೆ ನೋಡಿ. ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ಅಕ್ಕ ಪ್ರಶಸ್ತಿ ಗೆದ್ದಾಗ ಅದನ್ನು ತೆಗೆದುಕೊಂಡು ಬರಲು ವೇದಿಕೆಯ ಕಡೆಗೆ ಹೋಗುವಾಗ ಆಕೆಯನ್ನು ಹೇಗೆ ಹಿಂಬಾಲಿಸಿಕೊಂಡು ಹೋಗಿದ್ದಾಳೆ ನೋಡಿ.

ಇದನ್ನೂ ಓದಿ:  Viral News: 16 ವರ್ಷದ ಬಳಿಕ ಮದುವೆ ಗೌನ್ ಗೆ ಬೆಂಕಿ ಇಟ್ಟ ಮಹಿಳೆ: ಕಾರಣ ಕೇಳಿದ ಬಳಿಕ ಜನರ ಪ್ರತಿಕ್ರಿಯೆ ಹೀಗಿತ್ತು

ಅಕ್ಕನ ಬೆನ್ನ ಹಿಂದೆಯೇ ಹೋಗೋ ತಂಗಿ

ದೊಡ್ಡ ಅಕ್ಕನಿಗೆ ಪ್ರಶಸ್ತಿ ಸಿಕ್ಕಿತು ಮತ್ತು ಇದು ಒಡಹುಟ್ಟಿದವರಿಗೆ ನೀಡುವ ಪ್ರಶಸ್ತಿ, ತನಗೂ ನೀಡುತ್ತಿದ್ದಾರೆ ಎಂದು ಆ ಪುಟ್ಟ ತಂಗಿ ತಿಳಿದುಕೊಂಡು ಅವಳು ಸಹ ಆಕೆಯ ಅಕ್ಕನನ್ನು ಹಿಂಬಾಲಿಸಿಕೊಂಡು ವೇದಿಕೆಯ ಮೇಲೆ ಹೋದಳು. "ನೀವು ನನ್ನನ್ನು ಬಿಟ್ಟು ಹೋಗುವುದಿಲ್ಲ" ಎಂದು ವಿಡಿಯೋದಲ್ಲಿರುವ ಪಠ್ಯವು ಹೇಳುತ್ತದೆ.

ಈ ವಿಡಿಯೋದಲ್ಲಿ ಹಿರಿಯ ಸಹೋದರಿ ಪ್ರಶಸ್ತಿ ಗೆದ್ದಾಗ ವೇದಿಕೆಯ ಮೇಲೆ ಹೋಗುವುದನ್ನು ಮತ್ತು ಅವಳ ಪುಟ್ಟ ಸಹೋದರಿ ಅವಳನ್ನು ಹಿಂಬಾಲಿಸುವುದನ್ನು ನಾವು ನೋಡಬಹುದಾಗಿದೆ. ಅವಳು ವೇದಿಕೆಯವರೆಗೆ ಹೇಗೆ ನಡೆದುಕೊಂಡು ಹೋಗುತ್ತಾಳೆ, ಅಲ್ಲಿ ಅವಳನ್ನು ಒಬ್ಬ ವ್ಯಕ್ತಿ ಸ್ವಾಗತಿಸುತ್ತಾನೆ.
Published by:Mahmadrafik K
First published: