Spot the Animal: ಈ ಚಿತ್ರದಲ್ಲಿ ಹಿಮ ಚಿರತೆ ಇದೆ.. ಎಲ್ಲಿದೆ ಹುಡುಕಿ ನೋಡೋಣ ! ಕಣ್ಣಿಗೊಂದು ಕಸರತ್ತು

ಎಷ್ಟರಮಟ್ಟಿಗೆ ಇದು ಸುತ್ತಲಿನ ವಾತಾವರಣದ ಜೊತೆ ಬೆರೆತುಹೋಗಿಬಿಡುತ್ತದೆ ಎಂದರೆ ನಿಮ್ಮ ಪಕ್ಕದಲ್ಲೇ ಇದ್ದರೂ ನಿಮಗದು ಕಾಣುವುದಿಲ್ಲ. ನೇರವಾಗೇ ಗುರುತು ಹಿಡಿಯುವುದು ಕಷ್ಟ ಎಂದಮೇಲೆ ಚಿತ್ರದಲ್ಲಿ ಗುರುತಿಸೋದು ಅಷ್ಟೊಂದು ಸುಲಭ ಅಲ್ಲ ಬಿಡಿ.

ಈ ಚಿತ್ರದಲ್ಲಿರುವ ಹಿಮಚಿರತೆ ಕಂಡು ಹಿಡಿಯಿರಿ

ಈ ಚಿತ್ರದಲ್ಲಿರುವ ಹಿಮಚಿರತೆ ಕಂಡು ಹಿಡಿಯಿರಿ

 • Share this:
  Solve the Puzzle: ಕಣ್ಕಟ್ಟು ಅಥವಾ ಎದುರಿಗೇ ಇದ್ರೂ ಕಾಣದೇ ಇರೋ ಚಿತ್ರಗಳು ಒಂಥರಾ ಕಣ್ಣಿಗೆ ಮತ್ತು ಬುದ್ಧಿಗೆ ಎರಡಕ್ಕೂ ಸಖತ್ ವ್ಯಾಯಾಮ ಕೊಟ್ಟಂತೆ ಆಗುತ್ತದೆ. ಇತ್ತೀಚೆಗಷ್ಟೇ ಮರದ ಮೇಲೆ ಚಿರತೆ ಮರಿಯೊಂದು ಬಚ್ಚಿಟ್ಟುಕೊಂಡ ಚಿತ್ರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜನ ಎಲ್ಲಾ ಫೋಟೋನ ಜೂಮ್ ಮಾಡಿ ನೋಡಿದ್ದೇ ನೋಡಿದ್ದು. ಈಗ ಅಂಥದ್ದೇ ಮತ್ತೊಂದು ಚಿತ್ರ ಇಂಟರ್ನೆಟ್​ನಲ್ಲಿ ಓಡಾಡ್ತಾ ಇದೆ. ಆದ್ರೆ ಇದು ಹಿಮ ಚಿರತೆ (Snow Leopard) ದು. ದೊಡ್ಡದಾದ ಕಲ್ಲಿನ ಪರ್ವತ.. ಎಲ್ಲೆಡೆ ಸುರಿದ ಹಿಮರಾಶಿ.. ನಡುವಿನಲ್ಲಿ ಬೇಟೆಗಾಗಿ ಹೊಂಚು ಹಾಕಿ ಕುಳಿತ ಹಿಮಚಿರತೆ. ಇನ್ನೇನು ಬೇಟೆ ಹತ್ತಿರದಲ್ಲಿದೆ ಎಂದರೆ ಒಂದೇ ನೆಗೆತಕ್ಕೆ ಪಂಜಿನಲ್ಲಿ ಚೀರಿ ಹಾಕೋಕೆ ಸಜ್ಜಾದಂತೆ ಕುಳಿತ ಈ ಪ್ರಾಣಿಯನ್ನು ಹುಡುಕೋಕೆ ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಿದ್ದಾರೆ ಜನ.

  ಅಂದ್ಹಾಗೆ ಇದನ್ನು ಫ್ಯಾಂಟಮ್ ಕ್ಯಾಟ್ ಎಂದೂ ಕರೆಯುತ್ತಾರಂತೆ. ಅಂದ್ರೆ ಹಿಮಗಳಲ್ಲಿನ ಭೂತ ಎನ್ನುವಂತೆ. ಎಷ್ಟರಮಟ್ಟಿಗೆ ಇದು ಸುತ್ತಲಿನ ವಾತಾವರಣದ ಜೊತೆ ಬೆರೆತುಹೋಗಿಬಿಡುತ್ತದೆ ಎಂದರೆ ನಿಮ್ಮ ಪಕ್ಕದಲ್ಲೇ ಇದ್ದರೂ ನಿಮಗದು ಕಾಣುವುದಿಲ್ಲ. ನೇರವಾಗೇ ಗುರುತು ಹಿಡಿಯುವುದು ಕಷ್ಟ ಎಂದಮೇಲೆ ಚಿತ್ರದಲ್ಲಿ ಗುರುತಿಸೋದು ಅಷ್ಟೊಂದು ಸುಲಭ ಅಲ್ಲ ಬಿಡಿ.

  ಹಾಗಂತ ಜನ ಸುಮ್ಮನಿರ್ತಾರಾ? ಕಷ್ಟ ಎಂದಿದ್ದನ್ನೇ ಇಷ್ಟ ಪಟ್ಟು ಮಾಡುವವರು ಹೆಚ್ಚು. ಈ ಚಿತ್ರವೂ ಹಾಗೇ ಆಗಿದೆ. ಟ್ವಿಟರ್ ನಲ್ಲಿ ಐಎಫ್​ಎಸ್ ಅಧಿಕಾರಿ ರಮೇಶ್ ಪಾಂಡೆ ಈ ಚಿತ್ರ ಶೇರ್ ಮಾಡಿದ್ದೇ ತಡ, ಕೆಲವರು ಹುಡುಕಿದೆ ಎಂದು ಮಾರ್ಕ್ ಮಾಡಿದ ಚಿತ್ರ ಕಳಿಸಿದ್ರೆ ಮತ್ತೆ ಕೆಲವರು ಬಂಡೆಕಲ್ಲ ಮೇಲೆ ಹಿಮ ಬಿದ್ದಿರೋದನ್ನೇ ಹಿಮಚಿರತೆ ಅಂತ ತಪ್ಪಾಗಿ ಗುರುತಿಸಿದ್ದಾರೆ. ಅದಕ್ಕೆ ತಕ್ಕಂತೆ ಮತ್ತಷ್ಟು ಜನ ಕಾಲೂ ಎಳೆದಿದ್ದಾರೆ. ಆ ಚಿತ್ರ ಯಾವ್ದು ನೀವೂ ಒಂದ್ಸಲ ನೋಡ್ಬಿಡಿ.

  ಈ ಚಿತ್ರವನ್ನು ಗಮನವಿಟ್ಟು ನೋಡಿ. ಬೇಕಿದ್ರೆ ಜೂಮ್ ಮಾಡಿ ಗಮನಿಸಿ. ಹಿಮಗಳ ರಾಶಿಯೊಳಗೆ ಬಚ್ಚಿಟ್ಟುಕೊಂಡಿರುವ ಹಿಮಚಿರತೆಯನ್ನು ನೀವು ಬೇಗ ಕಂಡುಹಿಡಿದ್ರೆ ಎಂದರೆ ಒಂದು ನಿಮ್ಮ ಕಣ್ಣು ಸಿಕ್ಕಾಪಟ್ಟೆ ಶಾರ್ಪ್, ಮತ್ತೊಂದು ನಿಮ್ಮ ಮೆದುಳು ಕೂಡಾ ಅಷ್ಟೇ ಚುರುಕು ಎಂದರ್ಥ. ಆಗಾಗ ಇಂಥಾ ಕಸರತ್ತುಗಳನ್ನು ಮಾಡುತ್ತಿರುವುದು ಒಳ್ಳೆಯದೇ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: