Viral Photo: ಈ ಚಿತ್ರದಲ್ಲಿ 4 ಹುಳಗಳಿವೆ, ಹುಡುಕಿ ನೋಡೋಣ...!

Find the insect: ಇದೊಂದು ಸರಳವಾದ ಫೋಟೋ.. ಆ ಫೋಟೋದೊಳಗೆ ಅಡಗಿ ಕುಳಿತಿರುವುದು ಏನು ಅನ್ನೋದನ್ನ ನೀವು ಹುಡುಕಬೇಕು. ಇದು ಕೇವಲ ನಿಮ್ಮ ಕಣ್ಣಿಗೆ ಮಾತ್ರ ಸಿಗುವ ಕಸರತ್ತಲ್ಲ, ಇದು ನಿಮ್ಮ ಮೆದುಳಿಗೂ ಕಸರತ್ತು.

ಕಣ್ಕಟ್ಟು

ಕಣ್ಕಟ್ಟು

  • Share this:
Solve the Puzzle: ನಿಮಗೆ ಒಗಟುಗಳನ್ನು ಬಿಡಿಸೋದು, ಚಿತ್ರಗಳೊಳಗೆ ಅಡಗಿ ಕುಳಿತಿರುವ ನಿರ್ದಿಷ್ಟವಾದ ವಸ್ತುವನ್ನು ಹುಡುಕುವುದು ಇದೆಲ್ಲಾ ಇಷ್ಟವಾ? ಹಾಗಿದ್ರೆ ಈ ವಿಚಾರ ನಿಮಗೆ ಬಹಳ ಇಷ್ಟ ಆಗೋದ್ರಲ್ಲಿ ಅನುಮಾನವೇ ಇಲ್ಲ. ಇದೊಂದು ಸರಳವಾದ ಫೋಟೋ.. ಆ ಫೋಟೋದೊಳಗೆ ಅಡಗಿ ಕುಳಿತಿರುವುದು ಏನು ಅನ್ನೋದನ್ನ ನೀವು ಹುಡುಕಬೇಕು. ಇದು ಕೇವಲ ನಿಮ್ಮ ಕಣ್ಣಿಗೆ ಮಾತ್ರ ಸಿಗುವ ಕಸರತ್ತಲ್ಲ, ಇದು ನಿಮ್ಮ ಮೆದುಳಿಗೂ ಕಸರತ್ತು. ಚಿತ್ರದಲ್ಲಿ ಮೇಲ್ನೋಟಕ್ಕೆ ಕಾಣೋ ಹಚ್ಚಹಸಿರಿನ ಸಿರಿಯ ನಡುವೆ ಹುದುಗಿರುವ ಜೀವಿಗಳನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಆದ್ರೆ ಸೂಕ್ಷ್ಮವಾಗಿ ನೋಡಿ, ಗಮನಿಸಿ, ಗುರುತಿಸಿದರೆ ಇದು ಅಷ್ಟೊಂದು ಕಷ್ಟದ ವಿಚಾರ ಕೂಡಾ ಅಲ್ಲ. ಒಟ್ಟಿನಲ್ಲಿ ನಿಮ್ಮ ಕಣ್ಣು ಮತ್ತು ಮೆದುಳಿಗೆ ಸಖತ್ ಟೆಸ್ಟ್ ಕೊಡುತ್ತೆ ಈ ಕಸರತ್ತು.

ತುಂಬಾ ಸಲ ನಾವು ಯಾವುದನ್ನೋ ಗುರುತಿಸಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ಅದು ಸರಿಯಾದ ಉತ್ತರ ಆಗಿರುವುದಿಲ್ಲ. ಸರಿಯಾದ ಉತ್ತರವನ್ನು ಇನ್ಯಾರೋ ಹೇಳಿದಾಗ, ಛೆ ನಮಗಿದು ಗೊತ್ತಿತ್ತಲ್ವಾ ಎನಿಸುತ್ತದೆ ಅಥವಾ ಅರೇ… ಇಷ್ಟೇನಾ ಎನಿಸಿಬಿಡುತ್ತೆ. ಈ ಚಿತ್ರ ನೋಡಿದ ನಂತರ ನಿಮಗೂ ಹಾಗನ್ನಿಸಿದರೆ ಆಶ್ಚರ್ಯವಿಲ್ಲ. ಯಾವುದಕ್ಕೂ ಒಂದು ಸಲ ಗಮನವಿಟ್ಟು ಈ ಚಿತ್ರ ನೋಡಿಬಿಡಿ.

ಹಾಗಂತ ಇದೇನೂ ಯಾರಿಗೂ ಪರಿಚಯ ಇಲ್ಲದ ಹುಳವಲ್ಲ. ಎಲ್ಲರಿಗೂ ಪರಿಚಿತವಿರುವ ಹುಳವೇ. ಅದರ ನೂರಾರು ತಳಿಗಳು ಪ್ರಪಂಚದ ನಾನಾ ಭಾಗಗಳಲ್ಲಿ ಇದ್ದರೂ ಅದರಲ್ಲೇ ಸಾಕಷ್ಟು ವೈವಿಧ್ಯತೆ ಇರುವುದು ನಿಜಕ್ಕೂ ಅಚ್ಚರಿಯ ವಿಚಾರವೇ. ಆದ್ರೆ ಇದೆಲ್ಲಾ ಮಾಹಿತಿಯನ್ನೂ ಒರೆಗೆ ಹಚ್ಚೋ ಚಿತ್ರ ಇಲ್ಲಿದೆ.










View this post on Instagram






A post shared by Bronx Zoo (@bronxzoo)






ಒಂದು ವೇಳೆ ಚಿತ್ರವನ್ನು ಎಷ್ಟೇ ಗಮನಿಸಿದ್ರೂ ನಿಮಗೆ ಹುಳ ಎಲ್ಲಿದೆ ಅಥವಾ ಎಷ್ಟು ಹುಳಗಳಿವೆ ಅನ್ನೋದು ಗೊತ್ತಾಗದಿದ್ರೆ ಅದನ್ನ ತಿಳಿಸೋ ವಿಡಿಯೋ ಕೂಡಾ ಇಲ್ಲಿದೆ. ಈ ವಿಡಿಯೋ ನೋಡಿ ನಿಮ್ಮ ಅನುಮಾನ ಪರಿಹರಿಸಿಕೊಳ್ಳಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: