• Home
  • »
  • News
  • »
  • trend
  • »
  • Illusion Art: 11 ಸೆಕೆಂಡಿನೊಳಗೆ ಈ ಚಿತ್ರದಲ್ಲಿರುವ ರಾಜಕುಮಾರನನ್ನು ಹುಡುಕಿ ನೋಡೋಣ!

Illusion Art: 11 ಸೆಕೆಂಡಿನೊಳಗೆ ಈ ಚಿತ್ರದಲ್ಲಿರುವ ರಾಜಕುಮಾರನನ್ನು ಹುಡುಕಿ ನೋಡೋಣ!

ರಾಜಕುಮಾರನನ್ನು ಹುಡುಕಿ

ರಾಜಕುಮಾರನನ್ನು ಹುಡುಕಿ

ಮೇಲ್ನೋಟಕ್ಕೆ ಇಲ್ಲಿ ನಿಮಗೆ ಕೇವಲ ಮರ ಮತ್ತು ಗೂಬೆ ಕಾಣಿಸುತ್ತದೆ. ಆದರೆ ಖಂಡಿತವಾಗಿಯೂ ಇದರಲ್ಲಿ ರಾಜಕುಮಾರನ ಚಿತ್ರವಿದೆ. ಈ ಕೆಳಗಿನ ಚಿತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿ ರಾಜಕುಮಾರನನ್ನು ಗುರುತಿಸಿ. 

  • Share this:

ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ (Social media) ಹಲವಾರು  ಇಲ್ಯೂಷನ್ (Illusion) ಅಂದರೆ  ಭ್ರಮೆ ಹುಟ್ಟಿಸುವ ಚಿತ್ರಗಳನ್ನು ನಾವು ನೋಡುತ್ತಿದ್ದೇವೆ. ಈ ಕೆಳಗೆ ನೀಡಿರುವ ಚಿತ್ರವೂ (Picture) ಸಹ ಅಂತಹ ಚಿತ್ರಗಳಲ್ಲೂಂದು. ಕೇವಲ 11 ಸೆಂಕೆಂಡಿನೊಳಗೆ ನೀವು ಈ ಚಿತ್ರದಲ್ಲಿರುವ ರಾಜಕುಮಾರನನ್ನು(Prince) ಕಂಡುಹಿಡಿದರೆ ನೀವೆಷ್ಟು ಚುರುಕಾಗಿದ್ದೀರಾ (Active) ಎಂಬುದನ್ನು ನೀವೆ ಕಂಡುಕೊಳ್ಳಬಹುದು. ಮೇಲ್ನೋಟಕ್ಕೆ ಇಲ್ಲಿ ನಿಮಗೆ ಕೇವಲ ಮರ ಮತ್ತು ಗೂಬೆ ಕಾಣಿಸುತ್ತದೆ. ಆದರೆ ಖಂಡಿತವಾಗಿಯೂ ಇದರಲ್ಲಿ ರಾಜಕುಮಾರನ ಚಿತ್ರವಿದೆ. ಈ ಕೆಳಗಿನ ಚಿತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿ ರಾಜಕುಮಾರನನ್ನು ಗುರುತಿಸಿ. 


ಇಂತಹ ಚಿತ್ರಗಳು ಕೇವಲ ಮನರಂಜನೆ ಮಾತ್ರವಲ್ಲ ಅದರ ಹೊರತಾಗಿ ಮೆದುಳಿಗೆ ಚುರುಕು ಮುಟ್ಟಿಸುವ ಕಾರ್ಯವನ್ನೂ ಸಹ ಮಾಡುತ್ತದೆ. ನಿಮ್ಮ ಮೆದುಳಿಗೆ ಚುರುಕು ಮುಟ್ಟಿಸುವ ಸಂದರ್ಭ ಈಗ ನಿಮ್ಮೆದುರಿಗಿದೆ ಈ ಚಿತ್ರ ನೋಡಿ. ನೋಡಿದ ತಕ್ಷಣ ಗಮನಕ್ಕೆ ಬರುವ ಅಂಶಗಳನ್ನು ಕಡೆಗಣಿಸಿ ರಾಜಕುಮಾರ ಎಲ್ಲಿದ್ದಾನೆ ಎಂಬುದನ್ನು ಗಮನವಿಟ್ಟು ಹುಡುಕಿ.


ರಾಜಕುಮಾರನನ್ನು ಗುರುತಿಸಿ


ಈ ಚಿತ್ರದಲ್ಲಿ ನೀವು ಉದ್ಯಾನದ ದೃಶ್ಯವನ್ನು ಎಲೆಗಳು ಮತ್ತು ಎರಡು ಮರಗಳನ್ನು ಕಾಣಬಹುದು. ಪೊದೆ ಹಾಗೂ ಹುಲ್ಲು ಹಾಸು ಮರದ ಮೇಲೆ ಕೂತಿರುವ ಒಂದು ಗೂಬೆ ಮಾತ್ರ ಹೊರನೋಟಕ್ಕೆ ಕಾಣುತ್ತದೆ.


ಇದನ್ನೂ ಓದಿ: ಸೆರೆಬ್ರಲ್ ಪಾಲ್ಸಿ ಅಂದ್ರೇನು? ಇದರ ತಡೆಗಟ್ಟೋದು ಹೇಗೆ?


ನಿಮ್ಮ ಸಮಯ ಆಗಲೇ ಪ್ರಾರಂಭವಾಗಿದೆ ಇನ್ನೂ ಹುಡುಕುತ್ತಿದ್ದರೆ. ಕೆಲವು ಕ್ಲೂಗಳನ್ನು ನೀಡುತ್ತೇವೆ.


ಅತ್ಯುತ್ತಮ ಕೌಶಲ್ಯ ಹಾಗೂ ವೀಕ್ಷಣಾ ಶಕ್ತಿ ಉಳ್ಳವರಾಗಿದ್ದರೆ ನೀವು ಈಗಾಗಲೇ ಈ ಚಿತ್ರದಲ್ಲಿರುವ ರಾಜಕುಮಾರನನ್ನು ಹುಡುಕಿರುತ್ತೀರಿ. ಇದು ನಿಮ್ಮ ವೀಕ್ಷಣಾ ಕೌಶಲ್ಯದ ಪರೀಕ್ಷೆಗಾಗಿಯೇ ಇರುವ ಚಿತ್ರ ಎಂದರೂ ತಪ್ಪಾಗಲಾರದು. ಮೊದಲಬಾರಿ ಇದು ಖಂಡಿತವಾಗಿಯೂ ಸ್ವಲ್ಪ ಸವಾಲಿನ ಕೆಲಸವೇ ಆಗಿರುತ್ತದೆ. ಆದರೆ ಸರಿಯಾಗಿ ಗಮನಿಸುತ್ತಾ ಹೋದಂತೆ ನಿಮಗೆ ಚಿತ್ರದಲ್ಲಿ ಬೇರೆ ಬೇರೆ ಆಯಾಮಗಳು ತೆರೆದುಕೊಳ್ಳುತ್ತದೆ.


ಇನ್ನೂ ಪರಿಹಾರವನ್ನು ಹುಡುಕುತ್ತಿರುವವರು ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ.


ರಾಜಕುಮಾರ ಎಲ್ಲಿದ್ದಾನೆ?
ಹುಡುಕಿದ್ದೀರಾ?
ಸುಳಿವು ಬೇಕಾ?


ಸುಳಿವು:
* ರಾಜಕುಮಾರ ಚಿತ್ರದ ಎಡಭಾಗದಲ್ಲಿ ಅಡಗಿದ್ದಾನೆ.
* ರಾಜಕುಮಾರ ಗೂಬೆಗೆ ಅಂಟಿಕೊಂಡಿದ್ದಾನೆ.
* ರಾಜಕುಮಾರ ನಿಂತಿದ್ದಾನೆ.
* ರಾಜಕುಮಾರ ಎಲೆಗಳ ಕಿರೀಟ ತೊಟ್ಟಿದ್ದಾನೆ.


ಇದನ್ನೂ ಓದಿ: ಅಜಯ್ ದೇವಗನ್ - ಕಾಜೋಲ್ ಅವರ ಭವ್ಯ ಬಂಗಲೆ ಹೇಗಿದೆ ಗೊತ್ತಾ?


ಸುಳಿವು ನೋಡಿದ ಬಳಿಕ ನೀವು ಈ ಚಿತ್ರದಲ್ಲಿರುವ ರಾಜಕುಮಾರನನ್ನು ಗುರುತಿಸಿರುತ್ತೀರಿ ಎಂದು ಭಾವಿಸೋಣ ಇಷ್ಟು ಸುಳಿವು ನೀಡಿದ ನಂತರವೂ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಈ ಚಿತ್ರವನ್ನು ಸರಿಯಾಗಿ ಗಮನಿಸಿ ಈಗ ರಾಜಕುಮಾರ ಖಂಡಿತವಾಗಿ ಕಾಣಸಿಗುತ್ತಾನೆ.


ಈ ಚಿತ್ರ ನೋಡಿ


ಎರಡು ಮರಗಳ ನಡುವೆ ಕೂತಿರುವ ಪಕ್ಷಿಯನ್ನು ಮಾತ್ರ ಗಮನಿಸಬೇಡಿ ವೃತ್ತದೊಳಗಿನ ಎಲ್ಲಾ ಭಾಗವನ್ನು ಸರಿಯಾಗಿ ಗಮನಿಸಿ ಈಗ ಖಂಡಿತವಾಗಿ ರಾಜಕುಮಾರ ಕಾಣಿಸಿರುತ್ತಾನೆ.


ಇಂತಹ ಚಿತ್ರವನ್ನು ರಚಿಸುವಾಗ ರಚನಾಕಾರ ಎಷ್ಟು ಸಾಮರ್ಥ್ಯಹೊಂದಿರಬಹುದು ನೀವೇ ಯೋಚಿಸಿ. ಹನ್ನೆರಡು ಚೌಕಗಳನ್ನು ರಚಿಸಿ ಅದರಲ್ಲಿ ಸುಂದರ ಚಿತ್ರವನ್ನು ಬರೆದು ಮೇಲಿನ ನಾಲ್ಕು ಚೌಕಗಳಲ್ಲಿ ಮಾತ್ರ ರಾಜಕುಮಾರನ ಚಿತ್ರ ಬರುವಂತೆ ಮಾಡಿರುವ ಚಿತ್ರ ರಚನಾಕಾರನ ಸಾಮರ್ಥ್ಯ ಮೆಚ್ಚುವಂತದ್ದು. ಸುಂದರ ನಿಸರ್ಗದ ನಡುವೆ ಕೇವಲ ಮೂರೇ ಮೂರು ಬಣ್ಣಗಳನ್ನು ಬಳಸಿಕೊಂಡು ರಚಿಸಿರುವ ಈ ಚಿತ್ರ ಬುದ್ದಿಗೆ ಚುರುಕು ಮುಟ್ಟಿಸುವುದಂತೂ ನಿಜ. ಹಿಂದಿನ ಕಾಲದಿಂದಲೂ ಈ ತರದ ಚಿತ್ರಗಳನ್ನು ಬಿಡಿಸುವ ಮತ್ತು ಹಲವಾರು ಪ್ರಕಾರದ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಹಲವಾರು ಕಲಾವಿಧರು ನಮ್ಮ ನಡುವೆಯೇ ಇದ್ದಾರೆ.

First published: