ಈಗಂತೂ ಈ ಆಪ್ಟಿಕಲ್ ಇಲ್ಯೂಶನ್ (Optical Illusion) ಚಿತ್ರಗಳದ್ದೆ ಟ್ರೆಂಡ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮೊದಲೆಲ್ಲಾ ಜನರ ಬುದ್ದಿಮತ್ತೆಯನ್ನು ಪರೀಕ್ಷಿಸಲು ಒಗಟುಗಳನ್ನು ಬಿಡಿಸಲು ಹೇಳಲಾಗುತ್ತಿತ್ತು. ಆದರೆ ಈಗ ಭ್ರಮೆ ಹುಟ್ಟಿಸುವಂತಹ ಚಿತ್ರಗಳನ್ನು ತೋರಿಸಿ ಅದರಲ್ಲಿ ಒಂದನ್ನು ನಿರ್ದಿಷ್ಟವಾದ ಪ್ರಾಣಿ (Animal), ಮನುಷ್ಯ ಅಥವಾ ಚಿತ್ರವನ್ನು ಹುಡುಕಲು ಹೇಳುತ್ತಾರೆ ಅಂತ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ವ್ಯಕ್ತಿಯ ವಿಶ್ಲೇಷಣಾತ್ಮಕ ಮತ್ತು ಅವಲೋಕನ ಕೌಶಲ್ಯಗಳನ್ನು(Skill) ಪರಿಶೀಲಿಸಲು ನೀವು ಬಯಸುವುದಾದರೆ, ಈ ರೀತಿಯ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಲ್ಲಿ ಅಡಗಿರುವ ಚಿತ್ರವನ್ನು (Picture) ಹುಡುಕಲು ಹೇಳಿ.
ಈ ಆಪ್ಟಿಕಲ್ ಇಲ್ಯೂಶನ್ ಚಿತ್ರದಲ್ಲಿ ಕಪ್ಪೆ ಇದೆಯಂತೆ ನೋಡಿ..
ನೀವು ಕೆಲವು ಆಪ್ಟಿಕಲ್ ಭ್ರಮೆಗಳ ಚಿತ್ರಗಳ ಸವಾಲುಗಳನ್ನು ಬೇಗನೆ ಪರಿಹರಿಸಬಹುದು, ಆದರೆ ಇನ್ನೂ ಕೆಲವನ್ನು ಅಷ್ಟೊಂದು ಸುಲಭವಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ. ಇಂತಹದೇ ಒಂದು ಚಿತ್ರದ ಸವಾಲು ಇಲ್ಲಿದೆ ನೋಡಿ. ನಮ್ಮ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಈ ಚಿತ್ರದ ಸವಾಲನ್ನು ಬಿಡಿಸುವಾಗ ಚೆನ್ನಾಗಿ ತಿಳಿದುಕೊಳ್ಳಬಹುದು.
ಈ ಬಾರಿ ಇಲ್ಲಿ ತಂದಿರುವಂತಹ ಆಪ್ಟಿಕಲ್ ಇಲ್ಯೂಶನ್ ಚಿತ್ರದ ಸವಾಲು ಮಾತ್ರ ನಿಮ್ಮ ಮೆದುಳಿಗೆ ಒಂದೊಳ್ಳೆಯ ಕಸರತ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ.ಈ ಚಿತ್ರದಲ್ಲಿ ನೀವು ದಟ್ಟವಾದ ಕಾಡೊಂದನ್ನು ನೋಡಬಹುದು, ಆ ಹಸಿರು ಕಾಡಿನಲ್ಲಿ ಒಂದು ಕಪ್ಪೆ ಕುಳಿತಿದೆಯಂತೆ. ಅದನ್ನು ನೀವು ಕೇವಲ 5 ಸೆಕೆಂಡುಗಳಲ್ಲಿ ಗುರುತಿಸಿ ನೋಡೋಣ. ಕೇವಲ 5 ಸೆಕೆಂಡುಗಳಲ್ಲಿ ಈ ಸವಾಲಿಗೆ ಪರಿಹಾರ ಹುಡುಕಿದವರನ್ನು ನಿಜಕ್ಕೂ ಮೇಧಾವಿಗಳು ಅಂತ ಹೇಳಬಹುದು.
ಇದನ್ನೂ ಓದಿ: Education: ಉನ್ನತ ಶಿಕ್ಷಣದಲ್ಲಿ ChatGPT ಮತ್ತು VR ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ
ಈ ಕಾಡಿನೊಳಗೆ ಕಪ್ಪೆಯನ್ನು ಕಂಡು ಹಿಡಿಯುವುದು ಅಷ್ಟೊಂದು ಸುಲಭದ ಕೆಲಸವಲ್ಲ
ಈ ಚಿತ್ರದಲ್ಲಿರುವ ಹಸಿರು ತುಂಬಿದ ಕಾಡಿನೊಳಗೆ ಚಿಕ್ಕ ಕಪ್ಪೆಯನ್ನು ಕಂಡು ಹಿಡಿಯುವುದು ಕೆಲವು ಬಳಕೆದಾರರಿಗೆ ಸುಲಭದ ಕೆಲಸವಲ್ಲ ಬಿಡಿ, ವಿಶೇಷವಾಗಿ ಉಭಯಚರವು ಮರಗಳು ಮತ್ತು ಹುಲ್ಲಿನಂತ ಬಣ್ಣವನ್ನು ಹೊಂದಿದ್ದರೆ ಅಂತೂ ಮುಗಿದೇ ಹೋಯ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಉತ್ತರವನ್ನು ಕಂಡು ಹಿಡಿಯಲು ಈ ಫೋಟೋದ ಪ್ರತಿಯೊಂದು ಮೂಲೆ ಮೂಲೆಯನ್ನು ಬಿಡದೆ ನೋಡಿದ್ದಾರೆ. ಆದರೆ ಸ್ವಲ್ಪ ತಾಳ್ಮೆಯನ್ನು ಹೊಂದಿರುವ ವ್ಯಕ್ತಿಗೆ ಇದು ಸ್ವಲ್ಪ ಬೇಗನೆ ಕಾಣಬಹುದು.
ವರದಿಗಳಲ್ಲಿ ಹೇಳಿರುವಂತೆ, ಕೇವಲ 1 ಪ್ರತಿಶತದಷ್ಟು ಬಳಕೆದಾರರು ಈ ಕ್ಲಿಷ್ಟಕರ ಭ್ರಮೆಯನ್ನು ಪರಿಹರಿಸಲು ಸಮರ್ಥರಾಗಿದ್ದಾರೆ. ಕಪ್ಪೆಯು ಹುಲ್ಲು ಮತ್ತು ಮರಗಳಂತೆಯೇ ಒಂದೇ ಬಣ್ಣವನ್ನು ಹೊಂದಿದೆ ಎಂಬ ಸುಳಿವು ಈ ಸವಾಲನ್ನು ಪರಿಹರಿಸಲು ಸಾಕಷ್ಟು ಸಾಕಾಗಿತ್ತು ಅಂತ ಅನ್ನಿಸುತ್ತದೆ.
ಈ ಚಿತ್ರದ ಎಡ ಭಾಗದ ಮೂಲೆಯಲ್ಲಿ ಕಪ್ಪೆ ಇದೆ ನೋಡಿ..
ಕೆಲವು ಬಳಕೆದಾರರು ಈ ಚಿತ್ರದಲ್ಲಿ ಕಪ್ಪೆಯನ್ನು ಹುಡುಕಲು ವಿಫಲರಾಗಿರಬಹುದು ಮತ್ತು ಅವರಿಗೆ, ನಾವು ಅಂತಿಮವಾಗಿ ಉತ್ತರವನ್ನು ಬಹಿರಂಗಪಡಿಸುತ್ತೇವೆ ನೋಡಿ.
ಬಳಕೆದಾರರು ಚಿತ್ರದ ಎಡ ಮೂಲೆಯನ್ನು ಎಚ್ಚರಿಕೆಯಿಂದ ನೋಡಬೇಕು ಮತ್ತು ಅಲ್ಲಿ ಕುಳಿತಿರುವ ಕಪ್ಪೆಯನ್ನು ನೀವು ನೋಡಬಹುದು. ಕಪ್ಪೆಯ ಚಿತ್ರವನ್ನು ಎಲ್ಲಿಂದಲೋ ಎಡಿಟ್ ಮಾಡಲಾಗಿದೆ ಮತ್ತು ಫೋಟೋದಲ್ಲಿ ಎಚ್ಚರಿಕೆಯಿಂದ ಮರೆಮಾಡಲಾಗಿದೆ ಎಂದು ತೋರುತ್ತದೆ.
ಇದೇ ರೀತಿಯ ಆಪ್ಟಿಕಲ್ ಇಲ್ಯೂಶನ್ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಆ ಭ್ರಮೆ ಹುಟ್ಟಿಸುವ ಚಿತ್ರದಲ್ಲಿ ಬಳಕೆದಾರರು ಕಮಲಗಳಿಂದ ತುಂಬಿದ ಕೊಳದಲ್ಲಿ ಅಡಗಿರುವ ಕಪ್ಪೆಯನ್ನು ಕಂಡು ಹಿಡಿಯಬೇಕಾಗಿತ್ತು.
ಸವಾಲಿನ ಕಷ್ಟದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಇದು ಪ್ರಯಾಸಕರ ಕೆಲಸವೆಂದು ತೋರಿತು ಮತ್ತು ಸಮಯದ ಮಿತಿ ಸಹ 36 ಸೆಕೆಂಡುಗಳಾಗಿತ್ತು.
ಹಸಿರು ಬಣ್ಣದ ಉಭಯಚರವು ತನ್ನನ್ನು ಮರೆಮಾಚಿಕೊಂಡಿತ್ತು. ನಿಗದಿತ ಸಮಯದ ಮಿತಿಯೊಳಗೆ ಅದನ್ನು ಕಂಡು ಹಿಡಿಯಲು ಸಾಧ್ಯವಾಗದವರಿಗೆ ಮೂರು ಕಮಲದ ಹೂವುಗಳ ನಡುವೆ ಅದನ್ನು ಹುಡುಕಲು ಸಲಹೆ ನೀಡಲಾಯಿತು. ಹತ್ತಿರದಿಂದ ನೋಡಿದಾಗ ಎಲೆಯೊಳಗೆ ಮರೆಮಾಚಲ್ಪಟ್ಟ ಕಪ್ಪೆಯ ಕಣ್ಣುಗಳು ಕಂಡು ಬಂದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ