• Home
  • »
  • News
  • »
  • trend
  • »
  • Mumbai Market: ತರಕಾರಿ ಬಿಲ್ ಹಿಂಬದಿಯಲ್ಲಿ ಫಿಲ್ಮ್‌ ಸ್ಕ್ರಿಪ್ಟ್, ಇದು ಕನಸುಗಳನ್ನು ಮಾರುವ ಜಾಗ

Mumbai Market: ತರಕಾರಿ ಬಿಲ್ ಹಿಂಬದಿಯಲ್ಲಿ ಫಿಲ್ಮ್‌ ಸ್ಕ್ರಿಪ್ಟ್, ಇದು ಕನಸುಗಳನ್ನು ಮಾರುವ ಜಾಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಣ್ಣದ ಲೋಕಕ್ಕೆ ಕನಸುಗಳನ್ನು ಹೊತ್ತು ಬರುವವರು ಅನೇಕ. ಆದರೆ ಅವರೆಲ್ಲರಲ್ಲಿ ಕೆಲವೊಬ್ಬರ ಕನಸುಗಳು ಮಾತ್ರ ನನಸಾಗುತ್ತವೆ ಅನ್ನೋದು ವಿಪರ್ಯಾಸ.

  • Share this:

ಮುಂಬೈಯನ್ನು ‘ಕನಸುಗಳ ನಗರ’ ಅಂತ ಕರೆಯಲಾಗುತ್ತೆ. ವಾಣಿಜ್ಯ ನಗರಿಯೆಂದು ಕರೆಯಿಸಿಕೊಂಡರೂ ಇದು ಬಾಲಿವುಡ್‌ ನ ತವರು. ಭಾರತದ ಚಲನಚಿತ್ರ ರಾಜಧಾನಿಯೆಂದೇ ಕರೆಯಿಸಿಕೊಳ್ಳುವ ಮುಂಬೈನಲ್ಲಿ ವರ್ಷದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತವೆ. ಇಡೀ ಜಗತ್ತಿನಲ್ಲಿ ಮಾರುಕಟ್ಟೆ ಹೊಂದಿರುವ ಈ ಚಿತ್ರೋದ್ಯಮದಲ್ಲಿ ಸಹಸ್ರಾರು ಜನರು ಕೆಲಸ ಮಾಡ್ತಾರೆ. ನಟ, ನಿರ್ದೇಶಕ, ನಿರ್ಮಾಪಕರಿಂದ ಹಿಡಿದು ಮ್ಯೂಸಿಕ್‌, ಸ್ಕ್ರಿಪ್ಟ್‌ ರೈಟರ್‌ ನಿಂದ ಹಿಡಿದು ಲೈಟ್‌ ಬಾಯ್ಸ್‌ ತನಕವೂ ಸಾಕಷ್ಟು ಜನರಿಗೆ ಈ ಉದ್ಯಮ ಅನ್ನ ನೀಡುತ್ತದೆ. ಈ ಬಣ್ಣದ ಲೋಕಕ್ಕೆ ಕನಸುಗಳನ್ನು ಹೊತ್ತು ಬರುವವರು ಅನೇಕ. ಆದರೆ ಅವರೆಲ್ಲರಲ್ಲಿ ಕೆಲವೊಬ್ಬರ ಕನಸುಗಳು ಮಾತ್ರ ನನಸಾಗುತ್ತವೆ ಅನ್ನೋದು ವಿಪರ್ಯಾಸ. ಮಹತ್ವಾಕಾಂಕ್ಷೆ ಹೊತ್ತು ಬಹುವವರು ಬಹಳವಾದ್ದರಿಂದ ಇಲ್ಲಿ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ.


ಎಲ್ಲರ ಕನಸೂ ಈಡೇರದು!


ಇಂದು ಚಿತ್ರೋದ್ಯಮದಲ್ಲಿ ಜನಪ್ರಿಯರಾದವರ ಒಂದೊಂದು ಕಥೆಗಳೂ ಸ್ಪೂರ್ತಿ ನೀಡುತ್ತವೆ. ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌, ರಾಜ್‌ ಕುಮಾರ್‌ ರಾವ್‌, ಪಂಕಜ್‌ ತ್ರಿಪಾಠಿ ಹೀಗೆ ಬಹಳಷ್ಟು ಜನ ಕಲಾವಿದರು ತುಂಬ ಕಷ್ಟಪಟ್ಟು ಮೇಲೇರಿದ್ದಾರೆ. ಇನ್ನೊಂದೆಡೆ ಅನೇಕ ಮಹತ್ವಾಕಾಂಕ್ಷಿ ನಟ ನಟಿಯರು ಅನೇಕ ಏಜನ್ಸಿ ಎದುರು, ಪ್ರೊಡಕ್ಷನ್‌ ಹೌದು ಎದುರು ಕಾಯುತ್ತಿರುವುದನ್ನು ಕಾಣ್ತೇವೆ. ಮತ್ತೊಂದೆಡೆ ಬರಹಗಾರರು ತಮ್ಮ ಸ್ಕ್ರಿಪ್ಟ್‌ಗಳನ್ನು ಪ್ರೊಡಕ್ಷನ್ ಹೌಸ್‌ಗಳಿಗೆ ನೀಡುತ್ತಾರೆ. ಹಾಗೆ ನೀಡುವಾಗ ಮುಂದೊಂದು ದಿನ ಅದನ್ನೇ ಚಿತ್ರವಾಗಿ ನೋಡುವ ಭರವಸೆ ಇರುತ್ತೆ. ಅದರಲ್ಲಿ ಕೆಲವು ಒಕೆ ಆದ್ರೆ, ಇನ್ನೂ ಹಲವು ಜಂಕ್‌ ಎಂದು ಡಸ್ಟ್‌ ಬಿನ್‌ ಸೇರಿರುತ್ತವೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ವೈರಲ್‌ ಆಗಿರೋ ಟ್ವಿಟ್ಟರ್‌ ಪೋಸ್ಟ್‌.ದೀಪ್ತಿ ಡಿಕುನ್ಹಾ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಫಿಲ್ಮ್ ಸ್ಕ್ರಿಪ್ಟ್ ಪುಟದ ಫ್ಲಿಪ್ ಸೈಡ್‌ನಲ್ಲಿ ಬರೆದ ತರಕಾರಿ ಬಿಲ್ ಅನ್ನು ಹಂಚಿಕೊಂಡಿದ್ದಾರೆ. ತರಕಾರಿಯವನು ಫಿಲ್ಮ್‌ ಸ್ಕ್ರಿಪ್ಟ್‌ ಪುಟದ ಹಿಂಬದಿಯಲ್ಲಿ ಬಿಲ್‌ ಬರೆಯುವಾಗ ನೀವು ವರ್ಸೋವಾದಲ್ಲಿ ವಾಸಿಸುತ್ತೀದ್ದೀರೆಂದು ತಿಳಿದಿದೆ. ಫಿಲ್ಮ್‌ ಡ್ರಾಫ್ಟ್‌ ಅನ್ನು ಪುನಃ ರೂಪಿಸಲಾಗುತ್ತಿದೆ ಎಂದು ಬರೆದಿದ್ದು ಹ್ಯಾಷ್‌ ಟ್ಯಾಗ್‌ ಮುಂಬೈ ಎಂದು ಹಾಕಿದ್ದಾರೆ.


ಇದನ್ನೂ ಓದಿ: ಗ್ರಾಹಕರಿಗೆ ತಲುಪದ 4 ಲಕ್ಷ ರೂಪಾಯಿಯ 61 ಗ್ಯಾಜೆಟ್‌! ಡೆಲಿವರಿ ಕೊಡೋಕೆ ಹೋದ ಹುಡುಗನೇ ಎಸ್ಕೇಪ್!


ಇನ್ನು ಆಕೆಯ ತರಕಾರಿ ಮಾರಾಟಗಾರ ತಮಿಳುನಾಡಿನವರಾಗಿದ್ದರಿಂದ ಬಿಲ್ ತಮಿಳಿನಲ್ಲಿದೆ ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ ನೆಟ್ಟಿಗರ ಗಮನ ಸೆಳೆದಿದ್ದರಿಂದ ಸಾಕಷ್ಟು ಕಾಮೆಂಟ್‌ ಗಳು ಬಂದಿವೆ. ಅಲ್ಲದೇ ಇಲ್ಲಿ ಕುತೂಹಲಕಾರಿ ಚರ್ಚೆಗಳೂ ನಡೆದಿವೆ. ಕೆಲವೊಬ್ಬರು ಇದು ದುಃಖಕರ ಎಂದರೆ, ಇನ್ನೂ ಕೆಲವರು ಇದನ್ನು ರದ್ದಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಕೆಲ ಪ್ರೊಡಕ್ಷನ್‌ ಹೌಸ್‌ ಗಳ ಪಾಲಿಗೆ ಇದು ರದ್ದಿಯಾಗಿರಬಹುದು ಎಂದ್ದಾರೆ, ಇದಕ್ಕುತ್ತರವಾಗಿ ದೀಪ್ತಿ ಯಾರಿಗೆ ಗೊತ್ತು..ಬಹುಶಃ ಇದು ಚಿತ್ರವೇ ಆಗಿರಬದುಹು. ಇದು ಕೇವಲ ಆರಂಭಿಕ ಡ್ರಾಫ್ಟ್ ಆಗಿದ್ದಿರಬಹುದು ಎಂದಿದ್ದಾರೆ.


ಇನ್ನು ಇಂಟೆರೆಸ್ಟಿಂಗ್‌ ವಿಚಾರ ಎಂದರೆ ಈ ಪೋಸ್ಟ್‌ ಮಾಡಿರುವ ಅದೇ ಟ್ವಿಟ್ಟರ್‌ ಬಳಕೆದಾರರು ಇಂಥದ್ದೇ ಒಂದು ವಿಷಯವನ್ನು ಹಳೆಯ ಪೋಸ್ಟ್‌ ನಲ್ಲಿ ಹಂಚಿಕೊಂಡಿದ್ದರು. ಅಲ್ಲಿ ಶೇವ್ ಪುರಿಯನ್ನು ಚಲನಚಿತ್ರ ಸ್ಕ್ರಿಪ್ಟ್‌ನಲ್ಲಿ ಸುತ್ತಿಡಲಾಗಿದೆ ಎಂದಿದ್ದರು. ಇನ್ನು ಈ ಪೋಸ್ಟ್‌ನಲ್ಲಿ ನಡೆದ ಚರ್ಚೆಯ ಪ್ರಕಾರ, ಚಲನಚಿತ್ರ ಕಥೆ - ಚಿತ್ರಕಥೆಯಲ್ಲಿ ಸುತ್ತುವ ಬೀದಿ ಆಹಾರವನ್ನು ಪಡೆಯುವುದು ವರ್ಸೋವಾದಲ್ಲಿ ಸಾಮಾನ್ಯ ಘಟನೆಯಾಗಿದೆ.


ಇದನ್ನೂ ಓದಿ: ಈ ಮೇಕೆ ಮರಿಗಿಂತ ಅದರ ಕಿವಿಗಳೇ ಉದ್ದ! ಮುದ್ದು ಪ್ರಾಣಿ ಫೋಟೋ ಸಖತ್ ವೈರಲ್


ಆದ್ರೆ, ಪ್ರತಿ ದಿನ ಒಂದೊಂದು ಪ್ರೊಡಕ್ಷನ್‌ ಹೌಸ್‌ ಗಳಿಗೆ ಅದೆಷ್ಟು ಸ್ಕ್ರಿಪ್ಟ್ ಗಳು ಬರುತ್ತವೆಯೋ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಚಿತ್ರಕಥೆಗಳ ಮೊದಲ ಡ್ರಾಫ್ಟ್‌ ಗಳ ಸಂಖ್ಯೆಯನ್ನು ಗಣನೆಗೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ವಿಷಯದಲ್ಲಿ ನಾವು ನಿರ್ಮಾಣ ಸಂಸ್ಥೆಗಳನ್ನೂ ದೂರಲು ಆಗೋದಿಲ್ಲ ಅನ್ನೋದು ಸತ್ಯವಾದ ಮಾತು.

First published: