HOME » NEWS » Trend » FIGHT BROKE OUT ON MRS SRI LANKA STAGE DURING THE CROWNING CEREMONY SESR

Video: ವಿಚ್ಛೇದಿತೆ ಎಂದು ಮಿಸಸ್​ ಶ್ರೀಲಂಕಾ ಕಿರೀಟ ಕಿತ್ತುಕೊಂಡ ಮಾಜಿ ಸುಂದರಿ; ವೇದಿಕೆ ಮೇಲೆ ನಾರಿಯರ ಕಿತ್ತಾಟ

ಮದುವೆಯಾದವರು ಮಾತ್ರ ಭಾಗಿಯಾಗಬೇಕು. ವಿಚ್ಛೇದಿತರು ಅಲ್ಲ. ಈ ಹಿನ್ನಲೆ ನಾನು ಈ ಕಿರೀಟವನ್ನು ಫಸ್ಟ್​ ರನ್ನರ್​ ಅಪ್​ಗೆ ನೀಡುತ್ತಿದ್ದೇನೆ ಎಂದು ವಿಜೇತೆ ಮುಡಿಗೇರಿದ್ದ ಕಿರೀಟ ಕಿತ್ತುಕೊಂಡಿದ್ದಾರೆ.

news18-kannada
Updated:April 7, 2021, 7:19 PM IST
Video: ವಿಚ್ಛೇದಿತೆ ಎಂದು ಮಿಸಸ್​ ಶ್ರೀಲಂಕಾ ಕಿರೀಟ ಕಿತ್ತುಕೊಂಡ ಮಾಜಿ ಸುಂದರಿ; ವೇದಿಕೆ ಮೇಲೆ ನಾರಿಯರ ಕಿತ್ತಾಟ
ಮಿಸೆಸ್​ ಶ್ರೀಲಂಕಾ ಸ್ಪರ್ಧೆ
  • Share this:
ಶ್ರೀಲಂಕಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಇಡೀ ವಿಶ್ವದ ಗಮನಸೆಳೆದಿದೆ. ಮಾಜಿ ಸುಂದರಿಯ ನಡೆಗೆ ಹಲವರು ಆಕ್ಷೇಪವ್ಯಕ್ತಪಡಿಸಿದ್ದು, ಖಂಡನೆ ವ್ಯಕ್ತವಾಗಿದೆ. ಶ್ರೀಲಂಕಾದಲ್ಲಿ ಕಳೆದ ಭಾನುವಾರ ಮಿಸೆಸ್​ ಶ್ರೀಲಂಕಾ 2021 ಸೌಂದರ್ಯ ಸ್ಪರ್ಧೆ ವಿಜೇತರನ್ನು ಘೋಸಿಲಾಗಿದೆ. ಈ ವೇಳೆ ಪುಷ್ಪಿಕ ಡೆ ಸಿಲ್ವಾ ಮಿಸೆಸ್​ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಿರೀಟ ಮುಡಿಗೇರಿಸಿಕೊಂಡ ಅವರು ಕ್ಷಣ ಮಾತ್ರದಲ್ಲಿ ಕಣ್ಣೀರಾಗಿ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಇದಕ್ಕೆ ಕಾರಣ ಈಕೆ ವಿಚ್ಚೇದಿತ ಎಂಬ ಆರೋಪ. ಮಿಸೆಸ್​ ಶ್ರೀಲಂಕಾ 2021 ಪ್ರಶಸ್ತಿ ಗೆದ್ದ ಈಕೆಗೆ ಮಾಜಿ ಮಿಸೆಸ್​ ಶ್ರೀಲಂಕಾ ಪ್ರಶಸ್ತಿ ಗೆದ್ದ ಕ್ಯಾರೋಲಿನ್​ ಜೂರಿ ಈಕೆ ವಿಚ್ಛೇದಿತ ಈಕೆಗೆ ಈ ಪ್ರಶಸ್ತಿ ಸಲ್ಲಬಾರದು ಎಂದು ಸೌಂದರ್ಯವತಿ ಮುಡಿಗೇರಿದ್ದ ಕಿರೀಟ ಕಿತ್ತುಕೊಂಡಿದ್ದಾರೆ.

ಡಿ ಸಿಲ್ವಾ ಆಯ್ಕೆಯಾಗುತ್ತಿದ್ದಂತೆ ಮೈಕ್​ ಪಡೆದು ಮಾತನಾಡಿದ ಕ್ಯಾರೋಲಿನ್ ಜೂರಿ, ಈ ಸೌಂದರ್ಯ ಸ್ಪರ್ಧೆಯಲ್ಲಿ ಒಂದು ನಿಯಮವಿದೆ. ಮದುವೆಯಾದವರು ಮಾತ್ರ ಭಾಗಿಯಾಗಬೇಕು. ವಿಚ್ಛೇದಿತರು ಅಲ್ಲ. ಈ ಹಿನ್ನಲೆ ನಾನು ಈ ಕಿರೀಟವನ್ನು ಫಸ್ಟ್​ ರನ್ನರ್​ ಅಪ್​ಗೆ ನೀಡುತ್ತಿದ್ದೇನೆ ಎಂದು ವಿಜೇತೆ ಮುಡಿಗೇರಿದ್ದ ಕಿರೀಟ ಕಿತ್ತುಕೊಂಡಿದ್ದಾರೆ. ಬಳಿಕ ಮೊದಲ ರನ್ನರ್​ ಅಪ್​ಗೆ ಕಿರೀಟ ತೊಡಿಸಲಾಗಿದ್ದು, ಈ ಘಟನೆಗೆ ಜಗತ್ತಿನೆಲ್ಲೆಡೆ ಖಂಡನೆ ವ್ಯಕ್ತವಾಗಿದೆ.



ಅಸಲಿ ವಿಷಯವೇ ಬೇರೆ

ಘಟನೆ ಕುರಿತು ಬಿಬಿಸಿಯೊಂದಿಗೆ ಮಾತನಾಡಿರುವ ಸೌಂದರ್ಯ ಸ್ಪರ್ಧೆ ಸಂಘಟಕರು, ಡಿ ಸಿಲ್ವಾ ವಿಚ್ಛೇದಿತೆ ಅಲ್ಲ. ಈ ಬಗ್ಗೆ ನಾವು ಆಕೆಯನ್ನು ಕ್ಷಮೆಯಾಚಿಸುತ್ತೇವೆ ಎಂದು ಮಿಸಸ್​ ಶ್ರೀಲಂಕಾ ವರ್ಲ್ಡ್​ ರಾಷ್ಟ್ರೀಯ ನಿರ್ದೇಶಕ ಚಂಡಿಮಲ್​ ಜಯಸಿಂಘೆ ತಿಳಿಸಿದ್ದಾರೆ. ಅಲ್ಲದೇ ಡಿಸೆಲ್ವಾಗೆ ವಿಜೇತ ಕಿರೀಟವನ್ನು ಮರಳಿಸಲಾಗಿದೆ. ಕ್ಯಾರೋಲಿನ್​ ಜೂರಿ ವರ್ತನೆ ಖಂಡನೀಯ. ಈ ವಿಷಯದ ಕುರಿತು ತನಿಖೆಗೆ ಮುಂದಾಗಿದ್ದೇವೆ ಎಂದಿದ್ದಾರೆ.

ಇದನ್ನು ಓದಿ: ಮರಿಯಾನೆಯನ್ನು ಹೊತ್ತು ಸಾಗಿದ ಬಾಹುಬಲಿ; ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಡಿ ಸೆಲ್ವಾ ಗಂಡನಿಂದ ದೂರಾಗಿದ್ದು, ವಿಚ್ಛೇದನಾ ಪಡೆದಿಲ್ಲ ಎಂದು ತಿಳಿದುಬಂದಿದೆ.ಡಿ ಸೆಲ್ವಾ ಅವರ ಮುಡಿಯಿಂದ ಕಿರೀಟವನ್ನು ಕಿತ್ತುಕೊಳ್ಳುವ ಬರದಲ್ಲಿ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಡಿ ಸಿಲ್ವಾ, ತಮ್ಮ ಈ ಪ್ರಶಸ್ತಿಯನ್ನು ಸಿಂಗಲ್​ ಮದರ್​ಗಳಿಗೆ ಅರ್ಪಿಸುತ್ತಿರುವುದಾಗಿ ತಿಳಿಸಿದರು. ಶ್ರೀಲಂಕಾದಲ್ಲಿ ನನ್ನಂತೆ ಹಲವು ಒಂಟಿ ಮಹಿಳಯರು ಕಷ್ಟಪಡುತ್ತಿದ್ದಾರೆ. ಅವರಿಗೆ ಈ ಕಿರೀಟವನ್ನು ಸಮರ್ಪಿಸುತ್ತಿದ್ದೇನೆ. ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಲು ಕಷ್ಟಪಡುತ್ತಿರುವ ತಾಯಿಯರಿಗೆ ಈ ಗೌರವ ಎಂದಿದ್ದಾರೆ.
Published by: Seema R
First published: April 7, 2021, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories