ನೀವು ಬಸ್ಸಿನಲ್ಲಿ (Bus) ಯಾವ ರೀತಿಯಾಗಿ ಎಲ್ಲಾ ಸೀಟುಗಳನ್ನು ಹಿಡಿದಿದ್ದೀರಾ? ಕರ್ಚೀಫ್ ಹಾಕಿ, ಬ್ಯಾಗ್ಗಳನ್ನು ಹಾಕಿ ಅಥವಾ ಇನ್ನೊಬ್ಬರಿಗೆ ಹೇಳಿ ಬಸ್ಗಳಲ್ಲಿ ಸೀಟು ಹಿಡಿಯುವುದು ಕಾಮನ್. ಇನ್ನು ರೈಲಿನಲ್ಲಿ ಮೊದಲೇ ಸೀಟುಗಳನ್ನು ಬುಕ್ ಮಾಡಿರುತ್ತೀರ ಅಥವಾ ಓಡಿ ಹೋಗಿ ಮೂಟೆಗಳ್ನು ಹಾಕಿ ಸೀಟ್ಗಳನ್ನು ಹಿಡಿಯುತ್ತೀರ. ಆದರೆ ಈಗ ಈ ಪ್ರಕಾರವು ನೆಲದಿಂದ ಸಾವಿರಾರು ಮೀಟರ್ ಎತ್ತರದಲ್ಲಿಯೂ ಕಾಣಲಾರಂಭಿಸಿದೆ. ಹೌದು, ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದರಲ್ಲಿ ಭಾರತೀಯ ಪ್ರಯಾಣಿಕರು ಜಗಳವಾಡಿದ್ದು ಮಾತ್ರವಲ್ಲದೆ ಬ್ಯಾಂಕಾಕ್ (Bankak) ನಿಂದ ಬರುತ್ತಿದ್ದ ವಿಮಾನದಲ್ಲಿ ತೀವ್ರ ಜಗಳವಾಡಿದ್ದಾರೆ. ಫ್ಲೈಟ್ ಅಟೆಂಡೆಂಟ್ಗಳು (Flight Attendent) ಅವರನ್ನು ಶಾಂತಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು.
ವಿಮಾನದಲ್ಲಿ ಪ್ರಯಾಣಕರು ಇದ್ದಕ್ಕಿದ್ದಂತೆ ಜಗಳ ಆರಂಭ ಮಾಡುತ್ತಾರೆ. ಅಲ್ಲಿ ಇದ್ದವರಿಗೆ ಎಲ್ಲರೂ ಶಾಕ್ ಆಗ್ತಾರೆ. ವೈರಲ್ ಆಗುತ್ತಿರುವ ಹೊಡೆದಾಟದ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಜಗಳವಾಡುತ್ತಿರುವುದು ಕಂಡು ಬಂದಿದೆ. ಏತನ್ಮಧ್ಯೆ, ವಿಮಾನದ ಸಿಬ್ಬಂದಿಗಳು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಇಬ್ಬರಲ್ಲಿ ಒಬ್ಬರು ಇನ್ನೊಬ್ಬರಿಗೆ, "ಶಾಂತಿ ಸೆ ಬೈಟ್" (ಸದ್ದಿಲ್ಲದೆ ಕುಳಿತುಕೊಳ್ಳಿ) ಎಂದು ಹೇಳುವುದು ಕಂಡುಬರುತ್ತದೆ, ಆದರೆ ಇನ್ನೊಬ್ಬರು, "ಹಾಥ್ ನೆಜೆಹ್ ಕರ್" (ಕೈ ಕೆಳಗೆ) ಹೇಳುತ್ತಾರೆ. ಕೆಲವೇ ಸೆಕೆಂಡ್ಗಳಲ್ಲಿ ಈ ಜಗಳ ಜಗಳಕ್ಕೆ ತಿರುಗಿ ಒಬ್ಬ ವ್ಯಕ್ತಿ ತನ್ನ ಸಹಚರರೊಂದಿಗೆ ಸೇರಿ ಮತ್ತೊಬ್ಬರನ್ನು ಹೊಡೆಯಲು ಆರಂಭಿಸುತ್ತಾನೆ. ವೀಡಿಯೊದಲ್ಲಿ, ವ್ಯಕ್ತಿ ತನ್ನ ಕನ್ನಡಕವನ್ನು ತೆಗೆದು ನಂತರ ಇನ್ನೊಬ್ಬ ವ್ಯಕ್ತಿಗೆ ಹೊಡೆಯುತ್ತಿರುವುದನ್ನು ಕಾಣಬಹುದು. ಆಗ ಅಲ್ಲಿದ್ದ ಇತರ ಯುವಕರು ಕೂಡ ತಮ್ಮ ಸ್ನೇಹಿತನೊಂದಿಗೆ ಸೇರಿ ಈ ವ್ಯಕ್ತಿಗೆ ಥಳಿಸಲು ಆರಂಭಿಸಿದ್ದಾರೆ. ಇನ್ನೊಬ್ಬ ವ್ಯಕ್ತಿಯು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾತ್ರ ಪ್ರಯತ್ನ ಪಡುತ್ತಾನೆ.
ಇದನ್ನೂ ಓದಿ: ಕಾಳಗಕ್ಕೆ ರೆಡಿಯಾಗಿದ್ದ ಹುಂಜಗಳು ಲಾಕ್, ಟ್ರೀಟ್ಮೆಂಟ್ಗೆ ಅಂತ 5 ಸಾವಿರ ಖರ್ಚು ಮಾಡಿದ ಖಾಕಿ ಪಡೆ!
ವೀಡಿಯೊದಲ್ಲಿ, ಸಹ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಜಗಳವನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಬ್ಯಾಂಕಾಕ್ನಿಂದ ಕೋಲ್ಕತ್ತಾಗೆ ಬರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿಯವರೆಗೆ, ಈ ವಿಷಯದಲ್ಲಿ ಥಾಯ್ ಸ್ಮೈಲ್ ಏರ್ವೇಸ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅದೇ ವೇಳೆ ಈ ಯುವಕನ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
We've taken cognizance of the viral video which is showing a fight between passengers on a Thai Airways flight to Kolkata. Bureau of Civil Aviation Security (BCAS) has sought a detailed report from the concerned authority. Further action to be taken: Zulfiquar Hasan, DG BCAS pic.twitter.com/u8jjaRYaFj
— AH Siddiqui (@anwar0262) December 29, 2022
ಇದು ತಣ್ಣಗಾಗುತ್ತಲೇ ಇದೀಗ ಭಾರೀ ವಿಮಾನದಲ್ಲಿ ಹೊಡೆದಾಟ ನಡೆದಿದೆ. ಅಲ್ಲಿ ಇದ್ದವರು ಇದನ್ನು ತಪ್ಪಿಸಲು ಹರಸಾಹನೇ ಪಡಬೇಕಾಗುತ್ತದೆ. ನೀವು ಒಂದು ಬಾರಿ ಈ ವಿಡಿಯೋ ನೋಡಿ ಪಕ್ಕಾ ಶಾಕ್ ಆಗ್ತೀರಾ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ