ಲೈವ್​ ಮಾಡುತ್ತಿದ್ದ ರಿಪೋರ್ಟರ್ ಮುಖಕ್ಕೇ ಹೊಗೆ ಬಿಟ್ಟ ದಾರಿಹೋಕ!: ವೈರಲ್ ಆಯ್ತು ವಿಡಿಯೋ


Updated:June 14, 2018, 9:36 AM IST
ಲೈವ್​ ಮಾಡುತ್ತಿದ್ದ ರಿಪೋರ್ಟರ್ ಮುಖಕ್ಕೇ ಹೊಗೆ ಬಿಟ್ಟ ದಾರಿಹೋಕ!: ವೈರಲ್ ಆಯ್ತು ವಿಡಿಯೋ

Updated: June 14, 2018, 9:36 AM IST
ನ್ಯೂಸ್ 18 ಕನ್ನಡ

ಮಾಸ್ಕೋ(ಜೂ.13): ಫೀಫಾ ವಿಶ್ವಕಪ್​ಗೆ ಕ್ಷಣಗಣನೆ ಆರಂಭವಾಗಿದ್ದು, ಸದ್ಯ ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಲೈವ್​ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರನೊಂದಿಗೆ ವ್ಯಕ್ತಿಯೊಬ್ಬ ನಡೆದುಕೊಂಡ ವರ್ತನೆ ದಾಖಲಾಗಿದ್ದು, ಇದನ್ನು ವೀಕ್ಷಿಸಿದರೆ ನಗುವಿನೊಂದಿಗೆ ಸಿಟ್ಟು ಬರುವುದರಲ್ಲಿ ಅನುಮಾನವೇ ಇಲ್ಲ. ಯಾರೇ ಆಗಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಕೀಟಲೆ ಮಾಡಿದರೆ ಕೆಟ್ಟ ಕೋಪ ಬರುತ್ತದೆ. ಹೀಗಿರುವಾಗ ವರದಿಗಾರನೊಬ್ಬ ಲೈವ್ ರಿಪೋರ್ಟಿಂಗ್ ಮಾಡುವಾಗ ತೊಂದರೆ ನೀಡಿದರೆ ಹೇಗಿರಬೇಡ?

ಹೌದು ಸ್ಪೋರ್ಟ್ಸ್​ ಆಸ್ಟ್ರೇಲಿಯಾದ ವರದಿಗಾರ ಡೇನಿಯಲ್ ಗ್ರ್ಯಾಬ್ ಫೀಫಾ ವಿಶ್ವಕಪ್​ನ ಲೈವ್​ ರಿಪೋರ್ಟಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿಗರೇಟ್​ ಸೇದುಕೊಂಡಿದ್ದ ವ್ಯಕ್ತಿಯೊಬ್ಬ ಕ್ಯಾಮರಾದೆದುರು ಬಾಲಿಷವಾಗಿ ವರ್ತಿಸಿದ್ದಾನೆ. ಅಲ್ಲದೇ ಇದನ್ನೇ ಮುಂದುವರೆಸಿದ ಆತ ಕೊನೆಯದಾಗಿ ವರದಿಗಾರನಿಗೆ ಬಳಿ ಬಂದು ಮುಖಕ್ಕೆ ಸಿಗರೇಟ್​ ಹೊಗೆ ಬಿಟ್ಟಿದ್ದಾನೆ. ಈ ದೃಶ್ಯಾವಳಿಗಳೆಲ್ಲವೂ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಆವ್ಯಕ್ತಿಯ ವರ್ತನೆ ಕಂಡು ವರದಿಗಾರ ಬೆಚ್ಚಿ ಬಿದ್ದಿದ್ದರೂ ಬಳಿಕ ಸುಧಾರಿಸಿಕೊಂಡು ನಗು ಮುಖದಿಂದಲೇ ಆತನನ್ನು ಕಳುಹಿಸಿಕೊಟ್ಟಿದ್ದಾನೆ.


ಒಟ್ಟಾರೆಯಾಗಿ ಗಂಭೀರವಾಗಿ ವರದಿ ಮಾಡುತ್ತಿದ್ದ ವರದಿಗಾರನೊಬ್ಬ ತನ್ನ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ರೇಗಾಡದೇ ಆತನನ್ನು ನಗುಮುಖದಿಂದಲೇ ಎದುರಿಸಿರುವುದು ಆತನ ಸಹನೆ ಎಷ್ಟಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೇ ವರದಿಗಾರನ ತಾಳ್ಮೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಸಿಗರೇಟ್​ ಸೇದುತ್ತಿದ್ದ ವ್ಯಕ್ತಿಯ ಕುರಿತಾಗಿ ಆಕ್ರೋಶವೂ ಕಂಡು ಬಂದಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ