ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರ್ತಿಗೆ ಮುತ್ತಿಡಲು ಯತ್ನಿಸಿದ ದಾರಿಹೋಕ!: ಮುಂದೇನಾಯ್ತು?


Updated:June 26, 2018, 5:24 PM IST
ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವರದಿಗಾರ್ತಿಗೆ ಮುತ್ತಿಡಲು ಯತ್ನಿಸಿದ ದಾರಿಹೋಕ!: ಮುಂದೇನಾಯ್ತು?

Updated: June 26, 2018, 5:24 PM IST
ನ್ಯೂಸ್ 18 ಕನ್ನಡ

ಬ್ರೆಜಿಲ್​(ಜೂ.26): ಬ್ರೆಜಿಲ್​ನ ಸ್ಟೋರ್ಟ್ಸ್​ ವರದಿಗಾರ್ತಿಗೆ ಬಂದೊದಗಿದ ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳಿಸುವಂತದ್ದು. ಟಿವಿ ಗ್ಲೋಬ್ ಹಾಗೂ ಸ್ಪೋರ್ಟ್ಸ್​ ಟಿವಿಯ ವರದಿಗಾರ್ತಿ ಜೂಲಿಯಾ ಗುಯೀಮಾರೀಸ್, ಪೀಫಾ ವಿಶ್ವ ಕಪ್​ನ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ದಾರಿಹೋಕನೊಬ್ಬ ಅವರಿಗೆ ಮತ್ತು ನೀಡಲು ಯತ್ನಿಸಿದ್ದಾನೆ.

ರಷ್ಯಾದ ಯೆಕಾತೆರೀನ್​ಬರ್ಗ್​ನಲ್ಲಿ ಜಪಾನ್ ಹಾಗೂ ಸೆನೆಗಾಲ್ ನಡುವೆ ಪಂದ್ಯ ನಡೆಯುತ್ತಿದ್ದು, ಈ ವೇಳೆ ಜೂಲಿಯಾ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗಾಗಮಿಸಿದ ದಾರಿಹೋಕನೊಬ್ಬ ವರದಿಗಾರ್ತಿಗೆ ಕಿಸ್​ ನೀಡಲು ಯತ್ನಿಸಿದ್ದಾನೆ. ಆದರೆ ಆತ ಹತ್ತಿರ ಬರುತ್ತಿದ್ದಂತೆಯೇ ವರದಿ ಮಾಡುವುದನ್ನು ನಿಲ್ಲಿಸಿ ದೂರ ಸರಿದ ಜೂಲಿಯಾ, ಆತನ ಮೇಲೆ ರೇಗಾಡಿದ್ದಾರೆ. ವರದಿಗಾರ್ತಿಯ ಈ ದಿಟ್ಟತನಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದಾರಿಹೋಕನ ಮೇಲೆ ರೇಗಾಡಿದ ಜೂಲಿಯಾ 'ಈ ರೀತಿ ವರ್ತಿಸಬೇಡಿ. ಈ ರೀತಿ ಸಮ್ಮತಿ ಇಲ್ಲದೆ ವರ್ತಿಸುವುದು ಸರಿಯಲ್ಲ. ಮುಂದೆ ಯಾವ ಮಹಿಳೆಯೊಂದಿಗೂ ಈ ರೀತಿ ವರ್ತಿಸಬೇಡಿ. ಮರ್ಯಾದೆ ಕಾಪಾಡಿಕೊಳ್ಳಿ" ಎಂದಿದ್ದಾರೆ.


Loading...


ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...