(VIDEO): ಥರ್ಡ್​​​​​ ಅಂಪೈರ್ ಔಟ್ ನೀಡಿದರು ಬ್ಯಾಟ್ ಮಾಡು ಎಂದ ಎದುರಾಳಿ ನಾಯಕ

ರನೌಟ್​ಗಾಗಿ ಮನವಿ ಮಾಡಿದಾಗ, ಫೀಲ್ಡ್​​ ಅಂಪೈರ್ ತೀರ್ಪನ್ನು ಥರ್ಡ್​ ಅಂಪೈರ್​ಗೆ ಸಲ್ಲಿಸಿದ್ದು, ನಾಟೌಟ್ ಆಗಿದ್ದರೂ ಥರ್ಡ್​ ಅಂಪೈರ್​ನಿಂದ ಔಟ್ ತೀರ್ಪುಬಂದಿದೆ. ಇದು ಉಭಯ ತಂಡಗಳ ಆಟಗಾರರಿಗೆ ಅಚ್ಚರಿ ಮೂಡಿಸಿತು.

Vinay Bhat | news18
Updated:December 20, 2018, 11:42 AM IST
(VIDEO): ಥರ್ಡ್​​​​​ ಅಂಪೈರ್ ಔಟ್ ನೀಡಿದರು ಬ್ಯಾಟ್ ಮಾಡು ಎಂದ ಎದುರಾಳಿ ನಾಯಕ
(Image: Twitter/Fox Sports)
Vinay Bhat | news18
Updated: December 20, 2018, 11:42 AM IST
ಅಡಿಲೇಡ್: ಆಸ್ಟ್ರೇಲಿಯಾದಲ್ಲಿ 8ನೇ ಆವೃತ್ತಿಯ ಬಿಗ್​​ಬ್ಯಾಶ್ ಲೀಗ್ ಆರಂಭವಾಗಿದ್ದು, ಮೊದಲ ಪಂದ್ಯವೆ ಸಾಕಷ್ಟು ಕುತೂಹಲಕಾರಿಯಾಗಿತ್ತು. ಥರ್ಡ್​ ಅಂಪೈರ್​​ನ ತಪ್ಪು ತೀರ್ಪಿನಿಂದಾಗಿ ಬ್ಯಾಟ್ಸ್​ಮನ್​ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರೆ, ಎದುರಾಳಿ ತಂಡದ ನಾಯಕ ಬ್ಯಾಟ್ಸ್​ಮನ್​​ಗೆ ಮತ್ತೆ ಬ್ಯಾಟ್ ಮಾಡುವಂತೆ ಹೇಳಿ ಕ್ರೀಡಾ ಸ್ಪೂರ್ತಿ ಮೆರೆದ ಘಟನೆ ನಡೆದಿದೆ.

ಬಿಗ್​ಬ್ಯಾಶ್ ಲೀಗ್​​ನ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಹಾಗೂ ಅಡಿಲೇಡ್ ಸ್ಟ್ರೈಕರ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬ್ರಿಸ್ಬೇನ್ ತಂಡ 12.1 ಓವರ್​ ಆಗುವ ಹೊತ್ತಿಗೆ 92 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭ ಕ್ರೀಸ್​ನಲ್ಲಿ ಜಿಮ್ಮಿ ಪೇರ್ಸನ್ ಹಾಗೂ ಜೇಮ್ಸ್​ ಪ್ಯಾಟಿನ್​ಸನ್​​​ ಇದ್ದರು. 12ನೇ ಓವರ್​ನ 2ನೇ ಎಸೆತದಲ್ಲಿ ಜಿಮ್ಮಿ ಅವರು ಸಿಂಗಲ್ ರನ್ ಕಲೆಹಾಕಲು ಮುಂದಾದರು. ಅಂತೆಯ ನಾನ್​​ಸ್ಟ್ರೈಕರ್​​​ನಲ್ಲಿದ್ದ ಜೇಮ್ಸ್ ಅವರು ಓಡಿ ಬಂದು ಕ್ರೀಸ್ ಹತ್ತಿರ ಡೈ ಹೊಡೆಯುತ್ತಾರೆ. ಇದೇವೇಳೆ ರನೌಟ್​ಗಾಗಿ ಚೆಂಡು ಕೂಡ ವಿಕೆಟ್​ಗೆತಾಗಿತ್ತು.

ಇದನ್ನೂ ಓದಿ(VIDEO): 4.2 ಕೋಟಿಗೆ ಆರ್​ಸಿಬಿ ಸೇರುತ್ತಿದ್ದಂತೆ ವಿಂಡೀಸ್​​​ ಬ್ಯಾಟ್ಸ್​ಮನ್​​​ ಮಾಡಿದ್ದೇನು ನೋಡಿ

ಅಡಿಲೇಡ್​ ತಂಡದ ಆಟಗಾರರು ರನೌಟ್​ಗಾಗಿ ಮನವಿ ಮಾಡಿದಾಗ ಫೀಲ್ಡ್​​ ಅಂಪೈರ್ ತೀರ್ಪನ್ನು ಥರ್ಡ್​ ಅಂಪೈರ್​ಗೆ ಸಲ್ಲಿಸಿದರು. ಈ ಸಂದರ್ಭ ವಿಡಿಯೋ ವೀಕ್ಷಿಸಿ ಥರ್ಡ್​ ಅಂಪೈರ್ ಔಟ್ ಎಂಬ ತೀರ್ಪು ನೀಡಿದೆ. ಆದರೆ, ಚೆಂಡು ವಿಕೆಟ್​ಗೆ ತಾಗುವ ಮುನ್ನ ಬ್ಯಾಟ್ ಕೀಸ್​​ ಒಳಗೆ ತಲುಪಿರುವುದು ಸರಿಯಾಗಿಯೆ ಗೋಚರಿಸುತ್ತದೆ. ಹೀಗಾಗಿಯು ಮೂರನೇ ಅಂಪೈರ್ ಔಟ್ ನೀಡಿದ್ದು, ಉಭಯ ತಂಡಗಳ ಆಟಗಾರರಿಗೆ ಅಚ್ಚರಿ ಮೂಡಿಸಿತು.

ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ ಎಂಬಂತೆ ಜೇಮ್ಸ್​ ಅವರು ಆಕ್ರೋಶದಿಂದ ಪೆವಿಲಿಯನ್​ನತ್ತ ಹೊರಟರು. ಆದರೆ ಎದುರಾಳಿ ತಂಡದ ನಾಯಕ ಕಾಲಿನ್ ಇಂಗ್ರಾಮ್ ಅವರು ಜೇಮ್ಸ್​ ಅವರನ್ನು ಮತ್ತೆ ಕರೆದು ಬ್ಯಾಟಿಂಗ್ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 
Loading...
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ತಂಡ 19.4 ಓವರ್​ನಲ್ಲಿ 146 ರನ್​ಗೆ ಆಲೌಟ್ ಆಯಿತು. ಇತ್ತ ಅಡಿಲೇಡ್ ತಂಡ 19.1 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕುವ ಮೂಲಕ 5 ವಿಕೆಟ್​​ಗಳ ಜಯ ಸಾಧಿಸಿತು. ಬ್ರಿಸ್ಬೇನ್ ತಂಡದ 3 ವಿಕೆಟ್ ಕಿತ್ತ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

First published:December 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ