ಪಾಕ್​ ಯುವತಿಯರನ್ನು ಮದುವೆಯಾಗಿ ಚೀನಿಯರು ಮಾಡ್ತಿದ್ದಾರೆ ಈ ಕೆಲಸ

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚೀನಿಯರು ಆಗಮಿಸುತ್ತಿದ್ದಾರೆ. ಇವರ ಮೂಲ ಉದ್ದೇಶ ಬಡ ಹುಡುಗಿಯರನ್ನು ಮದುವೆಯಾಗುವುದು.

zahir
Updated:May 7, 2019, 4:32 PM IST
ಪಾಕ್​ ಯುವತಿಯರನ್ನು ಮದುವೆಯಾಗಿ ಚೀನಿಯರು ಮಾಡ್ತಿದ್ದಾರೆ ಈ ಕೆಲಸ
ಚೀನಿ ವರ- ಪಾಕ್ ವಧು
  • Share this:
ಪಾಕಿಸ್ತಾನ ಯುವತಿಯರು ಚೀನಾ ಯುವಕರನ್ನು ಮದುವೆಯಾಗಬೇಡಿ ಎಂದು ಅಲ್ಲಿನ ಸರ್ಕಾರ ಎಚ್ಚರಿಸಿದೆ. ಪಾಕ್​ನಲ್ಲಿ ಪ್ರಮುಖ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು ಇತ್ತೀಚಿನ ದಿನಗಳಲ್ಲಿ ಪಾಕ್ ಹುಡುಗಿಯರನ್ನು ವಿವಾಹವಾಗುತ್ತಿದ್ದರು. ಇದಕ್ಕೆ ಒಂದು ಕಾರಣ ಚೀನಾದಲ್ಲಿನ ಲಿಂಗ ತಾರತಮ್ಯ ಎನ್ನಲಾಗಿದ್ದರೂ, ಇದೀಗ ಪಾಕ್​ ಗುಪ್ತಚರ ಇಲಾಖೆ ಆಘಾತಕಾರಿ ವರದಿಯೊಂದನ್ನು ಮುಂದಿಟ್ಟಿದೆ.

ಪಾಕಿಸ್ತಾನದ ಬಡ ಹುಡುಗಿಯರನ್ನು ಮದುವೆಯಾಗಿ ಚೀನಾಕ್ಕೆ ಕರೆದುಕೊಂಡು ಹೋಗುವ ಚೀನಿಯರು ಬಳಿಕ ಅವರನ್ನು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದಾರೆ ಎಂಬ ವಿಷಯ ಜಗಜ್ಜಾಹೀರಾಗಿದೆ. ಮದುವೆ ಹೆಸರಲ್ಲಿ ಚೀನಿಯರು ಪಾಕ್​ ಹುಡುಗಿಯರಿಗೆ ಮೋಸ ಮಾಡುತ್ತಿದ್ದು, ಹೊಸ ಬದುಕಿನ ಕನಸು ತೋರಿಸಿ ಕರೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಬಡವರೇ ಟಾರ್ಗೆಟ್:

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚೀನಿಯರು ಆಗಮಿಸುತ್ತಿದ್ದಾರೆ. ಇವರ ಮೂಲ ಉದ್ದೇಶ ಬಡ ಹುಡುಗಿಯರನ್ನು ಮದುವೆಯಾಗುವುದು. ಏಕೆಂದರೆ ಪಾಕಿಸ್ತಾನದಲ್ಲಿ ಬಡತನ ಹೆಚ್ಚಿರುವ ಕಾರಣ ಅಲ್ಲಿನ ಕ್ರಿಶ್ಚಿಯನ್- ಮುಸ್ಲಿಂ ಯುವತಿಯರನ್ನು ವಿವಾಹವಾಗುವುದು ಸುಲಭ. ಈ ಯುವಕರ ನೆರವಿಗೆ ಪಾಕಿಸ್ತಾನದ ಮದುವೆ ಏಜೆಂಟರು ಕೂಡ ಸಹಾಯ ಮಾಡುತ್ತಿದ್ದಾರೆ. ಇವರ ಮೂಲಕ ನಕಲಿ  ದಾಖಲೆಗಳನ್ನು ಸಲ್ಲಿಸಿ ಸಹ ಅಲ್ಲಿನ ಬಡ ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.ಒಂದು ವಿವಾಹ ಮಾಡಿಸಿದರೆ 50 ರಿಂದ 60 ಸಾವಿರ ರೂ. ಪಡೆಯುತ್ತಿರುವ ಏಜೆಂಟರುಗಳು, ವಿವಾಹ ಮಾಡಿಸಿಕೊಡುವ ಗುರುಗಳಿಗೂ 50 ರಿಂದ 1 ಲಕ್ಷ ರೂ. ಕೊಡಿಸುತ್ತಾರೆ. ಅಂದರೆ ಚೀನಿಯರು ಎರಡರಿಂದ ಮೂರು ಲಕ್ಷ ರೂ. ಖರ್ಚು ಮಾಡಿ ಯುವತಿಯರನ್ನು ವರಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮದುವೆ ಎಂಬ ದಂಧೆ:ವಿವಾಹಿತರಾದ ಬಳಿಕ ಪಾಕ್ ಯುವತಿಯರನ್ನು ಚೀನಾಗೆ ಕರೆದೊಯ್ಯುವ ಚೀನಿಯರು ಕೆಲ ತಿಂಗಳುಗಳ ಬಳಿಕ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಬಳಿಕ ಕೆಲವರನ್ನು ಮನೆಕೆಲಸಕ್ಕೆ ದೂಡಿದರೆ, ಮತ್ತೆ ಕೆಲವರನ್ನು ವೇಶ್ಯಾವಾಟಿಕೆಯ ಜಾಲಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ (ಎಫ್ಐಎ) ತಿಳಿಸಿದೆ.

ಇಂತಹದೊಂದು ಜಾಲವನ್ನು ಬೇಧಿಸಿರುವ ಎಫ್​ಐಎ ಅಧಿಕಾರಿಗಳು ಈಗಾಗಲೇ ಏಳು ಚೀನಿಯರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಏಜೆಂಟ್​ಗಳ ಸಹಾಯದಿಂದ ನಕಲಿ ಪ್ರಮಾಣ ಪತ್ರ ನೀಡಿ ವಿವಾಹವಾಗಿದ್ದರು ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದು ತಿಳಿಸಿದೆ.

ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾದ ಹುಡುಗಿಯರು ಸಹ ಟಾರ್ಗೆಟ್:
ಪಾಕಿಸ್ತಾನದ ಹೊರತಾಗಿ, ಚೀನಿ ಹುಡುಗರು ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾದ ಹುಡುಗಿಯರನ್ನು ವರಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದವರನ್ನು ಟಾರ್ಗೆಟ್ ಮಾಡುವ ಇವರು ಹಣದ ಪ್ರಭಾವ ಬಳಸಿ ವಿವಾಹವಾಗುತ್ತಿದ್ದಾರೆ.

ಇದನ್ನೂ ಓದಿ: 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ತರಕಾರಿ ಮಾರುತ್ತಿದ್ದ ಬಾಲಕಿ

ಆದರೆ 2013 ರಲ್ಲಿ ಚೀನಾ ಸರ್ಕಾರ ಪಾಕಿಸ್ತಾನದಲ್ಲಿ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈ ಬಳಿಕ ಚೀನಿಯರು ಉದ್ಯೋಗಕ್ಕಾಗಿ ಪಾಕ್​ನತ್ತ ಮುಖ ಮಾಡಿದ್ದರು. ಅಂಕಿಅಂಶಗಳ ಪ್ರಕಾರ 2013 ರಿಂದ 2017 ರವರೆಗೆ 91,000 ಚೀನಿಯರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. 2017 ರಲ್ಲಿ 12,287 ಚೀನಿಯರಿಗೆ ವೀಸಾಗಳನ್ನು ನೀಡಲಾಗಿತ್ತು. ಪಾಕ್​ ಮಾಹಿತಿ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ 750 ರಿಂದ 1000 ಪಾಕಿಸ್ತಾನಿ ಹುಡುಗಿಯರನ್ನು ಚೀನಾ ಯುವಕರು ವಿವಾಹವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪೊಲೀಸರೇ ಕಳ್ಳರಾದರೆ ಹೇಗೆ..? ಸಿಸಿ ಟಿವಿಯಲ್ಲಿ ಸೆರೆಯಾಯ್ತು ರಕ್ಷಕರ ಕಳ್ಳತನದ ಕೈ ಚಳಕ..!

First published:May 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ