Anti Ageing: ಸೌಂದರ್ಯ ಕಾಪಾಡಿಕೊಳ್ಳಲು ಕೊರಿಯನ್ ಮಹಿಳೆಯರು ಪಾಲಿಸುವ ನಿಯಮಗಳನ್ನು ನೀವೂ ಫಾಲೋ ಮಾಡಿ..!

ನಿಯಮಿತವಾದ ಸೌಂದರ್ಯ ಅಭ್ಯಾಸವನ್ನು ನಿರ್ವಹಿಸುವ ಕೊರಿಯನ್ ಮಹಿಳೆಯರು ಸೌಂದರ್ಯವನ್ನು ಸಂರಕ್ಷಿಸುವ ವಿಧಾನಗಳಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರಿಯನ್ ಮಹಿಳೆಯರು ಸೌಂದರ್ಯದ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಎಂಬುದು ಜನಜನಿತವಾದ ವಿಷಯವಾಗಿದ್ದು, ಆರು ವರ್ಷವಿರುವಾಗಲೇ ಇವರು ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರಂತೆ. ನಿಯಮಿತವಾದ ಸೌಂದರ್ಯ ಅಭ್ಯಾಸವನ್ನು ನಿರ್ವಹಿಸುವ ಕೊರಿಯನ್ ಮಹಿಳೆಯರು ಸೌಂದರ್ಯವನ್ನು ಸಂರಕ್ಷಿಸುವ ವಿಧಾನಗಳಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ. ಸೌಂದರ್ಯ ತಜ್ಞೆ ಶಾರ್ಲೆಟ್​ ಚೊ ಕೆಲವೊಂದು ಸಲಹೆಗಳನ್ನು ನೀಡಿದ್ದು ಅವುಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿ ಬೆಳೆದಿರುವ ಶಾರ್ಲೆಟ್​ ಅತ್ಯಂತ ಕಟ್ಟುನಿಟ್ಟಾದ ಸೌಂದರ್ಯ ಸಲಹೆಗಳನ್ನು ಪಾಲಿಸುವುದಿಲ್ಲ ಎಂದು ತಿಳಿಸುತ್ತಾರೆ. ಅವರ ಸ್ಕಿನ್​ ಕೇರ್​ ರೂಟಿನ್​ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

International Makeup Day 2021 Cosmetic items you must have in your vanity case
ಸಾಂದರ್ಭಿಕ ಚಿತ್ರ


ತ್ವಚೆ ಮೊದಲು, ಮೇಕಪ್ ನಂತರ: ಮೊದಲೆಲ್ಲ ಆಕೆ ಮೇಕಪ್ ಮಾಡಿಕೊಂಡು ಅದನ್ನು ತೊಳೆಯದೆಯೇ ಹಾಗೆಯೇ ಮಲಗುತ್ತಿದ್ದರಂತೆ ಆದರೆ ಡಬಲ್ ಕ್ಲೆನ್ಸಿಂಗ್‌ನ ಹಿಂದಿರುವ ವೈಜ್ಞಾನಿಕ ಅಂಶಗಳನ್ನು ಅರಿತುಕೊಂಡ ನಂತರ ಹೈಡ್ರೇಟಿಂಗ್ ಟೋನರ್, ಹಗುರವಾದ ಮಾಯಿಶ್ಚರೈಸರ್ ಅನ್ನು ಸನ್‌ಸ್ಕ್ರೀನ್ ಜೊತೆಗೆ ಹಚ್ಚಿಕೊಳ್ಳುತ್ತಾರೆ.

ಆ್ಯಂಟಿ ಏಜಿಂಗ್ ಸ್ಕ್ರೀನ್‌ಕೇರ್ ಅನ್ನು ಬಳಸುವುದು: ಕೊರಿಯನ್​ ಬ್ಯೂಟಿ ಶಾರ್ಲೆಟ್​ ಚರ್ಮದ ಕಾಳಜಿಯ ಮೇಲೆ ಹೆಚ್ಚು ಗಮನ ನೀಡಬೇಕೆಂಬ ಶಾಸ್ತ್ರಕ್ಕೆ ಬದ್ಧರಾಗಿದ್ದಾರೆ. ಮುಗ್ವರ್ಟ್ ಮತ್ತು ಜಿನ್ಸೆಂಗ್‌ನಂತಹ ಶಾಂತಗೊಳಿಸುವ ಮತ್ತು ಪೋಷಿಸುವ ಅಂಶಗಳೊಂದಿಗೆ ತ್ವಚೆಯನ್ನು ಮುನ್ನೆಚ್ಚರಿಕೆಯ ವಿಧಾನವನ್ನು ಅಭ್ಯಾಸ ಮಾಡಲಾಗುತ್ತದೆ ಎಂದು ಆಕೆ ತಿಳಿಸುತ್ತಾರೆ.

ಇದನ್ನೂ ಓದಿ: Undercut Hairstyle: Shilpa Shetty ಹೊಸ ಹೇರ್ ಸ್ಟೈಲ್​: ಕಾಲೆಳೆದ ನೆಟ್ಟಿಗರು..!

ತ್ವಚೆಯ ಕುರಿತು ಶಿಕ್ಷಣ: ಕೊರಿಯನ್ನರು ಹದಿಹರೆಯದ ವಯಸ್ಸಿನಿಂದಲೇ ತ್ವಚೆಯ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೇಕಪ್ ಹಚ್ಚುವ ಮುನ್ನ ಸನ್‌ಸ್ಕ್ರೀನ್ ಲೋಶನ್ ಅನ್ನು ಹಚ್ಚುತ್ತಾರೆ. ಅದೇ ರೀತಿ ತ್ವಚೆಯ ಆರೋಗ್ಯವನ್ನು ಆಗಾಗ್ಗೆ ಪರಿಶೀಲಿಸಿಕೊಳ್ಳುತ್ತಾರೆ.

ತ್ವಚೆ ರಕ್ಷಣೆಗೆ ವಯಸ್ಸಿನ ನಿರ್ಬಂಧವಿರುವುದಿಲ್ಲ: ಚೊ ಹೇಳುವ ಪ್ರಕಾರ ಆರರ ಹರೆಯದಿಂದಲೇ ಸನ್‌ಸ್ಕ್ರೀನ್ ಬಳಕೆ ಹಾಗೂ ತ್ವಚೆಯ ಕಾಳಜಿಯನ್ನು ಕೊರಿಯನ್ನರು ಮಾಡುತ್ತಾರೆ ಎಂದಾಗಿದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆಯನ್ನು ನೀಡುವುದು ಮಾತ್ರವಲ್ಲದೆ ವಯಸ್ಸಾದ ನಂತರ ತ್ವಚೆಗೆ ಉಂಟುಮಾಡುವ ಹಾನಿಕಾರಕ ಕಿರಣಗಳಿಂದ ರಕ್ಷಣೆಯನ್ನು ನೀಡುತ್ತದೆ. ಇದರಿಂದ ಸುಕ್ಕಿನ ಗೆರೆಗಳು ಉಂಟಾಗುವುದಿಲ್ಲ ಎಂಬುದು ಕೊರಿಯನ್ನರ ವಿಶ್ವಾಸವಾಗಿದೆ.

ಆರ್ದ್ರಕಗಳು ಪ್ರತಿಯೊಬ್ಬರಿಗೂ ಸಾಮಾನ್ಯ: ವಾತಾವರಣದಲ್ಲಿರುವ ತೇವಾಂಶ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಗಾಳಿಯು ಒಣಗಿರುವಾಗ ಹವಾನಿಯಂತ್ರಿತ ಕೋಣೆಯಲ್ಲಿ ಹೆಚ್ಚುವರಿ ಸಮಯ ಕಳೆದಾಗ ಎಪಿಡರ್ಮಿಸ್‌ನಿಂದ ನೀರು ಸುಲಭವಾಗಿ ಆವಿಯಾಗುತ್ತದೆ. ಇದರಿಂದ ತ್ವಚೆಯಲ್ಲಿ ಶುಷ್ಕ, ಬಿರುಕುಗಳು ಹಾಗೂ ನಿರ್ಜಲೀಕರಣ ಉಂಟಾಗುತ್ತದೆ.

ಪ್ರಕೃತಿ ವರ್ಸಸ್ ಪೋಷಣೆ: ತ್ವಚೆಯ ಸಂರಕ್ಷಣೆಯೊಂದಿಗೆ ನೀವು ಪೋಷಣೆಯನ್ನು ಮಾಡಬೇಕಾಗುತ್ತದೆ. ನಿಮ್ಮ ತ್ವಚೆಯ 30% ಕಾಳಜಿಯನ್ನು ನಿಮ್ಮ ಜೀವನಶೈಲಿಯಿಂದ ರೂಪಿಸಿಕೊಳ್ಳಬಹುದು ಎಂಬುದು ಸೌಂದರ್ಯ ತಜ್ಞರ ವಾದವಾಗಿದೆ. ತ್ವಚೆಯ ಸಂರಕ್ಷಣೆಯಲ್ಲಿ ಸ್ವಲ್ಪ ಹಣ ಖರ್ಚು ಮಾಡಬಹುದು ಇದರಿಂದ ಮುಂದಿನ ದಿನಗಳಲ್ಲಿ ಸುಂದರವಾದ ತ್ವಚೆಯನ್ನು ನೀವು ಪಡೆಯಬಹುದು. ಚರ್ಮದ ಆರೈಕೆಯನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ. ತ್ವಚೆಯ ಕಾಳಜಿಯಲ್ಲಿ ಪ್ರಾಕೃತಿಕ ಪೋಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂಬುದು ಚೊ ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: Health Tips: ಮಕ್ಕಳ ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಪದಾರ್ಥಗಳು ಸೂಕ್ತ: ಮಾಹಿತಿ ಇಲ್ಲಿದೆ..!

ಕೊರಿಯನ್ನರು ಮೇಕಪ್‌ನೊಂದಿಗೆ ಸನ್‌ಸ್ಕ್ರೀನ್ ಲೋಶನ್ ಬಳಸಿಕೊಳ್ಳುವುದನ್ನು ಅಭ್ಯಾಸ ಮಾಡುವುದರಿಂದ ಅವರ ತ್ವಚೆ ಸುಂದರವಾಗಿರುತ್ತದೆ. ಹಿಂದಿನಿಂದಲೂ ತ್ವಚೆಯ ಕಾಳಜಿಗೆ ಅವರು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ ಎಂಬುದು ಚೊ ಅವರ ಅಭಿಪ್ರಾಯವಾಗಿದೆ.
Published by:Anitha E
First published: