Teachers: ಭಾರತದಲ್ಲಿ ಪುರಷರಿಗಿಂತ ಮಹಿಳಾ ಶಿಕ್ಷಕಿಯರ ಸಂಖ್ಯೆಯೇ ಅಧಿಕ; ಆದರೆ, ಬೇರೆ ದೇಶದಲ್ಲಿ ಹೀಗಿಲ್ಲ ಯಾಕೆ?

ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ, ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯರ ಸಂಖ್ಯೆ ಅಧಿಕವಿದೆ.

ಖಾಸಗಿ ಶಾಲೆ (ಸಾಂದರ್ಭಿಕ ಚಿತ್ರ)

ಖಾಸಗಿ ಶಾಲೆ (ಸಾಂದರ್ಭಿಕ ಚಿತ್ರ)

  • Share this:

ಕಳೆದ ವಾರ ಬಿಡುಗಡೆಯಾದ, 2019-20ನೇ ಸಾಲಿನ ಏಕೀಕೃತ ಜಿಲ್ಲಾ ಮಾಹಿತಿ ಶೈಕ್ಷಣಿಕ ವರದಿಯ ಪ್ರಕಾರ, ದೇಶದಲ್ಲಿ ಪ್ರಥಮ ಬಾರಿಗೆ, ಶಾಲಾ ಶಿಕ್ಷಕರಲ್ಲಿ, ಪುರುಷ ಶಿಕ್ಷಕರ ಸಂಖ್ಯೆಗಿಂತ ಮಹಿಳಾ ಶಿಕ್ಷಕರ ಸಂಖ್ಯೆ ಅಧಿಕವಿದೆ. ಪ್ರಸ್ತುತ ದೇಶದಲ್ಲಿರುವ 96.8 ಲಕ್ಷ ಶಾಲಾ ಶಿಕ್ಷಕರಲ್ಲಿ, 49.2 ಲಕ್ಷ ಶಿಕ್ಷಕಿಯರಿದ್ದಾರೆ. 2012-13ರಲ್ಲಿ ಇಡೀ, ಪುರುಷ ಶಿಕ್ಷಕರ ಸಂಖ್ಯೆ 42.4 ಲಕ್ಷ ಇದ್ದರೆ, ಮಹಿಳಾ ಶಿಕ್ಷಕಿಯರ ಸಂಖ್ಯೆ 35.8 ಲಕ್ಷ ಇತ್ತು. ಶಾಲಾ ಶಿಕ್ಷಕಿಯರ ಸಂಖ್ಯೆ ಇದೀಗ ಏಳು ವರ್ಷಗಳಲ್ಲಿ 13 ಲಕ್ಷದಷ್ಟು ಹೆಚ್ಚಿದೆ. ಇದೇ ಅವಧಿಯಲ್ಲಿ ಪುರುಷ ಶಿಕ್ಷಕರ ಸಂಖ್ಯೆ 42.47 ಲಕ್ಷದಿಂದ, 47.7 ಲಕ್ಷಕ್ಕೆ ಏರಿದೆ.
ಆದರೆ ಶಿಕ್ಷಕಿಯರ ಸಂಖ್ಯೆ ಹೆಚ್ಚಿರುವುದು ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ. ಆದರೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯರಿಗಿಂತ , ಪುರುಷ ಶಿಕ್ಷಕರ ಸಂಖ್ಯೆಯೇ ಅಧಿಕವಿದೆ.ಪೂರ್ವ ಪ್ರಾಥಮಿಕ ಮಟ್ಟದಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಸುಮಾರು 27,000 ಇದ್ದರೆ, ಶಿಕ್ಷಕಿಯರ ಸಂಖ್ಯೆ 1 ಲಕ್ಷಕ್ಕೂ ಅಧಿಕವಿದೆ. ಪ್ರಾಥಮಿಕ ಮಟ್ಟದಲ್ಲಿ 19.6 ಲಕ್ಷ ಶಿಕ್ಷಕಿಯರು ಮತ್ತು 15.7 ಲಕ್ಷ ಪುರುಷ ಶಿಕ್ಷಕರಿದ್ದು, ಹೆಚ್ಚು ಸಮತೋಲಿತ ಅನುಪಾತವಿದೆ. ಹಿರಿಯರ ಪ್ರಾಥಮಿಕ ಮಟ್ಟದಲ್ಲಿ 11.5 ಲಕ್ಷ ಶಿಕ್ಷಕರು ಮತು ಶಿಕ್ಷಕಿಯರ ಸಂಖ್ಯೆ 10.6 ಲಕ್ಷ ಶಿಕ್ಷಕಿಯರು ಇದ್ದಾರೆ. ಸೆಕೆಂಡರಿ ಶಾಲೆಗಳಲ್ಲಿ , 6.3 ಲಕ್ಷ ಪುರುಷ ಶಿಕ್ಷಕರು ಮತ್ತು 5.2 ಲಕ್ಷ ಶಿಕ್ಷಕಿಯರು ಇದ್ದಾರೆ. ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಪುರುಷ ಶಿಕ್ಷಕರ ಸಂಖ್ಯೆ 3.7 ಲಕ್ಷ ಮತ್ತು 2.8 ಲಕ್ಷ ಶಿಕ್ಷಕಿಯರು ಇದ್ದಾರೆ.ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಹೆಚ್ಚಿದ್ದರೆ, ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯರ ಸಂಖ್ಯೆ ಅಧಿಕವಿದೆ. ಕೇರಳ, ದೆಹಲಿ, ಮೇಘಾಲಯ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ, ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಶಿಕ್ಷಕಿಯರ ಸಂಖ್ಯೆ , ಪುರುಷ ಶಿಕ್ಷಕರ ಸಂಖ್ಯೆಗಿಂತ ಅಧಿಕವಾಗಿದೆ.


ಇದನ್ನು ಓದಿ: ಮದುವೆ ವಾರ್ಷಿಕೋತ್ಸವದಂದು ಹೆಂಡತಿಗೆ ದುಬಾರಿ ಗಿಫ್ಟ್ ನೀಡಿದ ಧೋನಿ


“ಯಾವುದೇ ಕ್ರಿಯಾತ್ಮಕ ಮತ್ತು ಪ್ರಮುಖ ವೃತ್ತಿಯಲ್ಲಿ, ಅಂದರೆ ಶಿಕ್ಷಕ ವೃತ್ತಿಯಲ್ಲಿ ಮಹಿಳೆಯರು ಮತ್ತು ಪುರುಷರ ಸಂಖ್ಯೆ ಸಮಾನವಾಗಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಪುರುಷ ಮತ್ತು ಮಹಿಳೆ ಇಬ್ಬರ ದೃಷ್ಟಿಕೋನದಿಂದಲೂ ಮಕ್ಕಳು ಕಲಿಯಬೇಕು. ನಿಸ್ಸಂದೇಹವಾಗಿ, ದೇಶದ ಹೆಚ್ಚಿನ ಭಾಗಗಳಲ್ಲಿ ಕಿರಿಯ ತರಗತಿಗಳಲ್ಲಿ ಪುರುಷ ಶಿಕ್ಷಕರಿಗಿಂತ , ಶಿಕ್ಷಕಿಯರೇ ಹೆಚ್ಚಿರುತ್ತಾರೆ, ಏಕೆಂದರೆ ಅವರಲ್ಲಿ ಪೋಷಣೆಯ ಗುಣ ಹೆಚ್ಚಿರುತ್ತದೆ. ಪುರುಷ ಶಿಕ್ಷಕರು ಕೂಡ ತಮ್ಮ ಪೋಷಣೆಯ ಗುಣವನ್ನು ತೋರಿಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಇಲ್ಲವಾದಲ್ಲಿ ನಾವು ಶಿಕ್ಷಕಿಯರ ಪರವಾಗಿ ಪಕ್ಷಪಾತದ ಪ್ರದರ್ಶನ ತೋರಿದಂತಾಗುತ್ತದೆ” ಎನ್ನುತ್ತಾರೆ ಶಿಕ್ಷಕರ ಫೌಂಡೇಶನ್‍ನ ಸಂಸ್ಥಾಪಕ ನಿರ್ದೇಶಕಿ ಮಾಯಾ ಮೆನನ್.


ಇದನ್ನು ಓದಿ: ಅನ್​​ ಲಾಕ್ ನಂತರ ದೇವಸ್ಥಾನಗಳಿಗೆ ಮುಗಿಬಿದ್ದ ಜನ; ಬಸ್, ಮಾಲ್ ಗಳು ಖಾಲಿ ಖಾಲಿ...


ಬೇರೆ ದೇಶಗಳಲ್ಲಿ ಹೀಗಿಲ್ಲ


ಯಾವುದೇ ಮಟ್ಟದ ತರಗತಿಗೆ ಕಲಿಸಿದರೂ ಒಂದೇ ರೀತಿಯ ಅರ್ಹತೆ ಮತ್ತು ಸಂಬಳ ಹೊಂದಿರುತ್ತಾರೆ.
“ಹೆಚ್ಚು ಸಂಬಳವನ್ನು ಪಡೆಯುವ ಉದ್ದೇಶದಿಂದ, ಭಾರತದಲ್ಲಿ ಪುರುಷ ಶಿಕ್ಷಕರು ಸೆಕೆಂಡರಿ ಶಾಲೆಗಳಲ್ಲಿ, ಸರಕಾರಿ ಶ್ರೇಣಿಯ ಸಂಬಳದ ಶಾಲೆಗಳಲ್ಲಿ ಕಲಿಸಲು ಇಷ್ಟ ಪಡುತ್ತಾರೆ. ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಇತರ ಖಾಸಗಿ ಶಾಲೆಗಳಿಗಿಂತ ಹೆಚ್ಚು ಸಂಬಳ ನೀಡುವುದರಿಂದ ಅಲ್ಲಿ ಪುರುಷ ಶಿಕ್ಷಕರ ಸಂಖ್ಯೆ ಹೆಚ್ಚಿರುತ್ತದೆ“ ಎನ್ನುತ್ತಾರೆ ಅವರು.
ಕೇಂದ್ರ ಸರಕಾರದ ಅಡಿಯಲ್ಲಿ ಇರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದಿಂದ ವಾರ್ಷಿಕವಾಗಿ ಏಕೀಕೃತ ಜಿಲ್ಲಾ ಮಾಹಿತಿ ಶೈಕ್ಷಣಿಕ ವರದಿಯು ಬಿಡುಗಡೆ ಆಗುತ್ತದೆ.


First published: