• Home
  • »
  • News
  • »
  • trend
  • »
  • Viral Video: 20 ವರ್ಷದಿಂದ ಪ್ರತಿದಿನ ತನ್ನ ಮಗಳ ಫೋಟೋ ತೆಗೆದ ತಂದೆ! ವೈರಲ್ ಆಯ್ತು ವಿಡಿಯೋ

Viral Video: 20 ವರ್ಷದಿಂದ ಪ್ರತಿದಿನ ತನ್ನ ಮಗಳ ಫೋಟೋ ತೆಗೆದ ತಂದೆ! ವೈರಲ್ ಆಯ್ತು ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎರಡು ನಿಮಿಷ ಮತ್ತು 18 ಸೆಕೆಂಡ್‌ಗಳ ಈ ವಿಡಿಯೋ ನೋಡಿ ಪುಟ್ಟ ಮಗು ಹೇಗೆ ಬೆಳೆದು ಇಷ್ಟು ದೊಡ್ಡ ಹುಡುಗಿಯಾದಳು ಎಂದು ನೀವು ಬೆರೆಗಾಗುತ್ತೀರಾ.

  • Share this:

ಈಗಂತೂ ಎಲ್ಲದ್ದಕ್ಕೂ ಫೋಟೋಶೂಟ್ (Photoshoot) ಫೋಟೋಶೂಟ್ ಮದುವೆ ಮುನ್ನ ಫ್ರೀವೆಡ್ಡಿಂಗ್‌, ಗರ್ಭಿಣಿಯಾದಾಗ ಬಂಪ್‌ ಶೂಟ್‌ (Bump Shoot), ಮಕ್ಕಳಾದ ಮೇಲೆ ಬೇಬಿ ಶೂಟ್‌ ಅಯ್ಯೋ ಒಂದಾ ಎರಡಾ ಹೇಳುತ್ತಾ ಹೋದರೆ ಫೋಟೋಶೂಟ್‌ಗಳ ಪಟ್ಟಿ ಉದ್ದ ಬೆಳೆಯುತ್ತಾ ಹೋಗುತ್ತದೆ. ವಿಶೇಷವಾಗಿ ನವಜಾತ ಮಕ್ಕಳ ಫೋಟೋಶೂಟ್‌ ತುಂಬಾ ವಿಶೇಷವಾಗಿರುತ್ತದೆ. ಈಗಂತೂ ಪೋಷಕರು ತಮ್ಮ ಮಗು (Baby) ಹುಟ್ಟಿದಾಗಿನಿಂದ ಹಿಡಿದು ಮಗು ದೊಡ್ಡ ಆಗುವವರೆಗೂ ದಿನಕ್ಕೆ ನೂರಾರು ಫೋಟೋಗಳನ್ನು ತೆಗೆದು ನೆನಪಿಗೆ (Memory) ಅಂತಾ ಇಟ್ಟುಕೊಂಡಿರುತ್ತಾರೆ.


ಮಗು ಅತ್ತರೂ ಫೋಟೋನೇ, ನಕ್ಕರೂ ಫೋಟೋನೆ, ನಿಂತ್ರು, ಕುಂತ್ರು ಹೀಗೆ ನೆನಪಿಗೆ ಅಂತಾ ಭಾವಚಿತ್ರವನ್ನು ತೆಗೆದು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಟ್ರೆಂಡ್ ಎನ್ನುವಂತೆ ತಾಯಂದಿರು ತಮ್ಮ ಮಗು ಒಂದು ವರ್ಷ ತಲುಪುವವರೆಗೂ ಪ್ರತಿ ತಿಂಗಳು ಒಂದೊಂದು ವಿಭಿನ್ನ ಥೀಮ್‌ನೊಂದಿಗೆ ಮಕ್ಕಳ ಭಾವಚಿತ್ರ ತೆಗೆಯುವುದನ್ನೂ ನಾವು ನೋಡಬಹುದು. ಇಷ್ಟೇ ಅಲ್ಲ ಹಬ್ಬ-ಹರಿದಿನ, ವಿಶೇಷ ದಿನ ಹೀಗೆ ಎಲ್ಲದಕ್ಕೂ ಮಕ್ಕಳನ್ನು ಅಲಂಕರಿಸಿ ಫೋಟೋ ತೆಗೆಯುತ್ತಾರೆ.


ಖಂಡಿತ ಈ ಪೋಟೋಗಳು ನಮ್ಮ ಮಕ್ಕಳ ಬೆಳವಣಿಗೆಯನ್ನು ತೋರಿಸುತ್ತದೆ ಮತ್ತು ನೆನಪಿನಲ್ಲಿ ಉಳಿಯುವಂತದ್ದು. ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಒಂದಲ್ಲ ಒಂದು ರೀತಿ ಬದಲಾವಣೆ ಹೊಂದುತ್ತಿರುತ್ತಾನೆ. ದೈಹಿಕವಾಗಿ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತವೆ. ನಮ್ಮ ಪುಟ್ಟ ಮಗುವಿನ ವಿಚಾರದಲ್ಲಿ ಈ ಫೋಟೋಗಳು ವಿಶೇಷವಾಗಿರುತ್ತವೆ. ಹಳೆಯ ಫೋಟೋಗಳನ್ನು ನೋಡಿ ನಮ್ಮ ಮಗ ಇಲ್ಲ ಮಗಳು ಎಷ್ಟು ಬೇಗ ದೊಡ್ಡವರಾದರೂ ಎಂದು ಹೋಲಿಕೆ ಮಾಡಿ ಪೋಷಕರು ಸಂಭ್ರಮಿಸೋದು, ಭಾವುಕರಾಗುವುದನ್ನು ಹಲವು ಬಾರಿ ನೋಡಿರುತ್ತೇವೆ.


‌ಮಗು ಹುಟ್ಟಿದಾಗಿನಿಂದ ಹಿಡಿದು 20 ವರ್ಷದವರೆಗೆ ತೆಗೆದ ಫೋಟೋಗಳಿಂದ ಮಗಳ ವೀಡಿಯೋ ಮಾಡಿದ ತಂದೆ
ಅಬ್ಬಾ, ಇಷ್ಟೆಲ್ಲಾ ಪೀಠಿಕೆಗೆ ಒಂದು ಸುಂದರ ಕಾರಣವಿದೆ ನೋಡಿ. ಇಲ್ಲೊಬ್ಬ ತಂದೆ ತಮ್ಮ ಮುದ್ದು ಮಗಳ ಫೋಟೋವನ್ನು ಅದು ಹುಟ್ಟಿದಾಗಿನಿಂದ ಹಿಡಿದು ಅವಳು ಎತ್ತರಕ್ಕೆ ಬೆಳೆಯುವವರೆಗೂ ಸೆರೆ ಹಿಡಿದಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಒಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ಸಾಕಷ್ಟು ವೈರಲ್‌ ಆಗಿದ್ದು, ಮಗಳ ಮೇಲಿನ ತಂದೆಯ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.


ಡಚ್ ನಿರ್ದೇಶಕ ಫ್ರಾನ್ಸ್ ಹಾಫ್‌ಮೀಸ್ಟರ್ ಮಾಡಿದ ಟೈಮ್‌ಲ್ಯಾಪ್ಸ್ ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಬಿಂದುವಾಗಿದೆ. ಫ್ರಾನ್ಸ್ ಹಾಫ್‌ಮೀಸ್ಟರ್ ಪೋಸ್ಟ್‌ ಮಾಡಿದ ವೀಡಿಯೋದಲ್ಲಿ 20 ವರ್ಷಗಳ ಕಾಲ, ಪ್ರತಿದಿನ ಒಬ್ಬ ತಂದೆ ಮಗಳು ಲೊಟ್ಟೆಯ ಮುದ್ದಾದ ಮಗುವಾಗಿದ್ದಾಗಿನಿಂದ ಹಿಡಿದು ಆಕೆ ಯುವತಿ ಆಗುವವರೆಗಿನ ಚಿತ್ರವನ್ನು ಸೆರೆಹಿಡಿದಿದ್ದಾರೆ.


ಈ ಎಲ್ಲಾ ಫೋಟೋಗಳನ್ನು ಒಂದೇ ವೀಡಿಯೋದಲ್ಲಿ ಜೋಡಿಸಿದ್ದಾರೆ. ಒಂದರ ನಂತರ ಒಂದು ಬೇಗ ಸರಿದು ಹೋಗುವ ಈ ಎಲ್ಲಾ ಫೋಟೋಗಳನ್ನು ವೀಡಿಯೋ ಮೂಲಕ ಕಟ್ಟಿಕೊಟ್ಟಿದ್ದಾರೆ.


ಮಗುವಿನ ಪ್ರತಿ ಹಂತದ ಬೆಳವಣಿಗೆ ತೋರಿಸಿದ ವೀಡಿಯೋ
ಎರಡು ನಿಮಿಷ ಮತ್ತು 18-ಸೆಕೆಂಡ್‌ಗಳ ವೀಡಿಯೋ, ಲೊಟ್ಟೆ ಮಗುವಿದ್ದಾಗಿನಿಂದ ಹಿಡಿದು ಅವಳು ಪುಟ್ಟ ಕಂದ, ಬಾಲಕಿ, ಎತ್ತರಕ್ಕೆ ಬೆಳೆಯುವರೆಗಿನ ಯುವತಿ ಆಗುವವರೆಗೂ ಎಲ್ಲಾ ಪೋಟೋ ತೋರಿಸಿದೆ. ಪ್ರತಿ ಮಗುವು ಅದೆಷ್ಟು ಬೇಗ ದೊಡ್ಡವರಾಗುತ್ತಾರೆ ಎಂದೇ ತಿಳಿಯುವುದಿಲ್ಲ. ನೋಡ ನೋಡುತ್ತಿದ್ದಂತೆ ಪೋಷಕರ ಎದೆ ಮಟ್ಟಕ್ಕೆ ಬೆಳೆದು ನಿಂತು ಬಿಡುತ್ತಾರೆ ಎಂಬುದನ್ನು ತೋರಿಸುತ್ತದೆ ಈ ವೀಡಿಯೋ. ಈ ವೀಡಿಯೋದಲ್ಲೂ ಸಹ ಲೊಟ್ಟೆ ಹೇಗೆ ಪ್ರತಿ ಹಂತದಲ್ಲೂ ಬೆಳೆದಿದ್ದಾಳೆ ಎಂದು ಈ ಫೋಟೋಗಳು ತೋರಿಸುವುದನ್ನು ವೀಡಿಯೋದ ಮೂಲಕ ಕಾಣಬಹುದಾಗಿದೆ.‌




ವೀಡಿಯೋಗೆ ಮನಸೋತ ನೆಟ್ಟಿಗರು
"ತಂದೆಯೊಬ್ಬರು ತಮ್ಮ ಮಗಳನ್ನು 20 ವರ್ಷ ವಯಸ್ಸಿನವರೆಗೆ ನಿಯಮಿತವಾಗಿ ತೆಗೆದ ಛಾಯಾಚಿತ್ರಗಳನ್ನು ಬಳಸಿಕೊಂಡು ರಚಿಸಲಾದ ವೀಡಿಯೋ" ಎಂದು ಶೀರ್ಷಿಕೆ ನೀಡಿ ಪೋಸ್ಟ್‌ ಮಾಡಲಾಗಿದೆ.


ಈ ವೀಡಿಯೋಗೆ ಹಲವಾರು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ, ಸಮಯ ಎಷ್ಟು ಬೇಗ ಹೋಗುತ್ತದೆ ಅಲ್ವಾ? ಎಂದು ಹಲವಾರು ಮಂದಿ ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ತಮ್ಮ ಮಕ್ಕಳ ಬೆಳವಣಿಗೆಯನ್ನು ಇಲ್ಲಿ ಉಲ್ಲೇಖಿಸಿ ವೀಡಿಯೋ ನಿಜಕ್ಕೂ ಅದ್ಭುತವಾಗಿದೆ ಎಂದು ಬರೆದಿದ್ದಾರೆ.

First published: