• Home
  • »
  • News
  • »
  • trend
  • »
  • Viral Video: ಮಗಳನ್ನು ಕಾಲೇಜಿಗೆ ಬಿಡುವಾಗ ತಂದೆ ಮಾಡಿದ್ದಾದ್ರೂ ಏನು ಗೊತ್ತಾ? ನೀವೆ ನೋಡಿ

Viral Video: ಮಗಳನ್ನು ಕಾಲೇಜಿಗೆ ಬಿಡುವಾಗ ತಂದೆ ಮಾಡಿದ್ದಾದ್ರೂ ಏನು ಗೊತ್ತಾ? ನೀವೆ ನೋಡಿ

ಮಗಳನ್ನು ಹೊಸ ಕಾಲೇಜಿಗೆ ತಂದೆ ಸೇರಿಸುವ ದೃಶ್ಯ

ಮಗಳನ್ನು ಹೊಸ ಕಾಲೇಜಿಗೆ ತಂದೆ ಸೇರಿಸುವ ದೃಶ್ಯ

Trending Video: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಅಥವಾ ಕಾಲೇಜಿಗೆ ಸೇರಿಸುವಾಗ ಒಂದಷ್ಟು ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಆದರೆ ಇಲ್ಲಿ ಒಬ್ಬರ ತಂದೆ ತನ್ನ ಮಗಳನ್ನು ಹೊಸ ಕಾಲೇಜಿಗೆ ಸೇರಿಸುವಾಗ ಏನು ಮಾಡಿದ್ದಾರೆ ನೋಡಿ.

  • Trending Desk
  • Last Updated :
  • Delhi, India
  • Share this:

ರೆಕ್ಕೆ ಬಂದ ಪಕ್ಷಿ ಒಂದು ದಿನ ತನ್ನ ತಾಯಿಯನ್ನು ಮತ್ತು ಗೂಡನ್ನು ಬಿಟ್ಟು ಆಕಾಶದಲ್ಲಿ ತನ್ನ ರೆಕ್ಕೆಗಳನ್ನು (Feather) ಅಗಲವಾಗಿ ಬಿಚ್ಚಿಕೊಂಡು ಹಾರಾಡಲೇ ಬೇಕು.. ಈ ಮಾತು ಮನುಷ್ಯರಾದ ನಮಗೆ ಅರ್ಥವಾದರೂ ಸಹ ನಾವು ನಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ಬೇರೆ ಊರಿನಲ್ಲಿರುವ ಕಾಲೇಜಿಗೆ ಹೋಗಬೇಕಾದರೆ ಅಥವಾ ಅವರಿಗೆ ಒಳ್ಳೆಯ ಶಿಕ್ಷಣ ಸಿಗಲಿ ಅನ್ನೋ ಒಂದು ಉದ್ದೇಶದಿಂದ ದೂರದ ಹಾಸ್ಟೆಲ್ ನಲ್ಲಿ ಬಿಟ್ಟು ಬರಬೇಕಾದರೆ ನಾವು ಒಂದು ಕ್ಷಣ ತುಂಬಾನೇ ಭಾವುಕರಾಗುತ್ತೇವೆ. ಮನುಷ್ಯರಲ್ಲವೇ ನಾವು ನಮ್ಮನ್ನು ತುಂಬಾ ಪ್ರೀತಿ (Love) ಮಾಡುವ ಜೀವ ಸ್ವಲ್ಪ ಕಾಲ ನಮ್ಮಿಂದ ದೂರವಾಗುತ್ತಿದೆ ಅಂತ ಗೊತ್ತಾದಾಗ ಭಾವುಕರಾಗುವುದು ಸಹಜ. ಆದರೆ ಇಲ್ಲಿ ಯಾವುದು ನಮ್ಮ ಜೊತೆ ಕೊನೆ ತನಕ ಬರುವುದಿಲ್ಲ ಎನ್ನೋ ಸತ್ಯ ಗೊತ್ತಿದ್ದರೂ ಸಹ ಇದ್ದಷ್ಟು ದಿನ ನಮ್ಮ ಪ್ರೀತಿ ನಮ್ಮ ಹತ್ತಿರವಿರಲಿ ಅನ್ನೋ ಬಯಕೆ. ಅದರಲ್ಲೂ ಈ ತಂದೆ ಮತ್ತು ಮಗಳ ಸಂಬಂಧ, ತಾಯಿ ಮತ್ತು ಮಗನ ಸಂಬಂಧಗಳು ಬೇರೆ ಎಲ್ಲಾ ಸಂಬಂಧಗಳಿಗಿಂತಲೂ (Relationship) ಒಂದು ಕೈ ಜಾಸ್ತಿನೆ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಇಂತಹ ಭಾವುಕ ಕ್ಷಣಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿರುತ್ತವೆ ಮತ್ತು ಅವುಗಳನ್ನು ನೋಡಿ ನಾವು ಎಷ್ಟೋ ಸಾರಿ ಭಾವುಕರಾಗಿರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಇದೆ ನೋಡಿ. ಇದನ್ನು ನೋಡಿದರೆ ನಿಮಗೆ ಅರಿವಿಲ್ಲದೆಯೇ ನಿಮ್ಮ ಕಣ್ಣುಗಳೆರಡು ತುಂಬಿಕೊಳ್ಳುವುದು ಗ್ಯಾರೆಂಟಿ.


ಏನಿದೆ ಈ ಭಾವುಕರನ್ನಾಗಿಸುವ ವೀಡಿಯೋದಲ್ಲಿ?


ತನ್ನ ಮಗಳನ್ನು ಆಕೆಯ ಹೊಸ ಕಾಲೇಜಿಗೆ ತಂದು ಬಿಡುವಾಗ ತಂದೆಯೊಬ್ಬ ಭಾವುಕರಾಗಿ ಕಣ್ಣೀರಿಡುತ್ತಿರುವ ಹೃದಯಸ್ಪರ್ಶಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಪ್ರೇಕ್ಷಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಸುಮಾರು ಎಂಟು ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,054,208 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.


ಇದನ್ನೂ ಓದಿ: ಮಗನಿಗೆ ಹೊಸ ಬಂಗಲೆ ತೋರಿಸಿ ಸಪ್ರೈಸ್ ಕೊಟ್ಟ ತಾಯಿ! ಮಗನ ರಿಯಾಕ್ಷನ್ ವೈರಲ್


"ಅವರು ನನ್ನನ್ನು ದೆಹಲಿ ವಿಶ್ವವಿದ್ಯಾಲಯದ ನನ್ನ ಕನಸಿನ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಬಿಡುತ್ತಿದ್ದರು. ಇದು ನನ್ನ ಕಾಲೇಜಿನ ಮೊದಲ ದಿನವಾಗಿತ್ತು, ಆದ್ದರಿಂದ ನಾವು ಕ್ಯಾಂಪಸ್ ಅನ್ನು ಒಂದು ರೌಂಡ್ ನೋಡಿಕೊಂಡು ಬರೋಣ ಅಂತ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ತಂದೆಯ ಆ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿರುವುದನ್ನು ನಾನು ಗಮನಿಸಿದೆ" ಎಂದು ಪ್ರೇಕ್ಷಾ ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.


ಇದಲ್ಲದೆ, ಪ್ರೇಕ್ಷಾ "ನನ್ನ ತಂದೆ ಕಾಲೇಜ್ ನೋಡಿದಾಗ ತುಂಬಾನೇ ಸಂತೋಷಗೊಂಡಿದ್ದರು. ಆದರೆ ಒಂದು ಕ್ಷಣಕ್ಕೆ ತನ್ನ ಹೃದಯಕ್ಕೆ ಹತ್ತಿರವಾದ ಮಗಳು ತನ್ನಿಂದ ತುಂಬಾ ದೂರವಿರುವ ಊರಿನಲ್ಲಿ ಇರುತ್ತಾಳೆ ಇನ್ಮುಂದೆ ಅನ್ನೋ ಕಹಿ ಸತ್ಯವೂ ಅವರಿಗೆ ಕಣ್ಣೀರಿಡುವಂತೆ ಮಾಡಿತು. ಆದರೆ ಅವರಿಟ್ಟ ಕಣ್ಣೀರು ನನಗೆ ಅವರು ನನಗಾಗಿ ಮಾಡಿದ ಎಲ್ಲಾ ತ್ಯಾಗಗಳು, ಅವರು ಜೀವನದುದ್ದಕ್ಕೂ ಹಾಕಿದ ಕಠಿಣ ಪರಿಶ್ರಮ, ನನ್ನ ಕನಸನ್ನು ನನಸು ಮಾಡಿಕೊಳ್ಳಲು ನನಗೆ ಪ್ರತಿಯೊಂದು ಹಂತದಲ್ಲಿಯೂ ನನ್ನ ಜೊತೆಗಿದ್ದದ್ದನ್ನು ಹಾಗೆ ನನ್ನ ಕಣ್ಮುಂದೆ ಬಂತು. ಮಕ್ಕಳ ಮುಗುಳುನಗೆಯ ಮುಖಗಳು ಮತ್ತು ಹೊಳೆಯುವ ಆ ಕಣ್ಣುಗಳನ್ನು ನೋಡಲು ಪೋಷಕರು ಏನು ಬೇಕಾದರೂ ಮಾಡುತ್ತಾರೆ! ಧನ್ಯವಾದಗಳು ಅಮ್ಮಾ ಅಪ್ಪಾ! ನಾನು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.

View this post on Instagram


A post shared by Preksha (@pre.xsha)

ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಸೆಲೆಬ್ರಿಟಿಗಳು


ಈ ಕ್ಲಿಪ್ ನಲ್ಲಿ ಪ್ರೇಕ್ಷಾ ಅವರ ಪೋಷಕರು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನ ತನ್ನ ಕಾಲೇಜಿನಲ್ಲಿ ಅವಳನ್ನು ಡ್ರಾಪ್ ಮಾಡುತ್ತಿರುವುದನ್ನು ನೋಡಬಹುದು. ಈ ಹೃದಯಸ್ಪರ್ಶಿ ಕ್ಷಣವು ನೆಟ್ಟಿಗರನ್ನು ಸಹ ಭಾವುಕರನ್ನಾಗಿ ಮಾಡಿದೆ. ನಟ ರೋಹಿತ್ ಶರಾಫ್ ಮತ್ತು ಪ್ರಸಿದ್ಧ ವೆಬ್ ಸಿರೀಸ್ ನಟ ಆಯುಷ್ ಮೆಹ್ರಾ ಸೇರಿದಂತೆ ಸೆಲೆಬ್ರಿಟಿಗಳು ಸಹ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.


"ಇದು ಇಂಟರ್ನೆಟ್ ನಲ್ಲಿ ಅತ್ಯುತ್ತಮ ವೀಡಿಯೋವಾಗಿದೆ, ನನಗೆ ತುಂಬಾ ಇಷ್ಟವಾಯಿತು. ನಿಮಗೆ ಅಭಿನಂದನೆಗಳು" ಎಂದು ಶರಾಫ್ ಹೇಳಿದರು.


ಇದನ್ನೂ ಓದಿ: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!


ನೆಟ್‌ಫ್ಲಿಕ್ಸ್ ಇಂಡಿಯಾದ ಅಧಿಕೃತ ಖಾತೆ ಕೂಡ ಈ ವೀಡಿಯೋಗೆ ಕಾಮೆಂಟ್ ಮಾಡಿ "ಅಂತಹ ಸುಂದರ ಕ್ಷಣಕ್ಕಾಗಿ ಸಂಪೂರ್ಣವಾಗಿ ಹೊಂದಿಕೆಯಾಗುವ ಹಾಡು ಸಹ ಇದೆ. ಈ ಭಾವುಕ ಕ್ಷಣದಲ್ಲಿ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ" ಎಂದು ಬರೆದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ "ಅಯ್ಯೋ, ಇದನ್ನು ನೋಡಿದ ನಂತರ ನನ್ನ ಕಣ್ಣುಗಳಲ್ಲಿ ಸಹ ನೀರು ಬಂತು" ಎಂದು ಹೇಳಿದರು.

First published: