Viral Video: ಶಾಲಾ ಸಮಾರಂಭದಲ್ಲಿ ಮಗನಿಗೆ ಸರ್ಪ್ರೈಸ್ ಕೊಟ್ಟ ತಂದೆ; ಇವರಿಬ್ಬರ ಬಾಂಧವ್ಯಕ್ಕೆ ಭಾವುಕರಾದ ನೆಟ್ಟಿಗರು

ನೀವು ಅಂತಹ ಭಾವುಕ ಕ್ಷಣಗಳನ್ನು ಯಾವತ್ತಾದರೂ ಕಂಡಿದ್ದೀರಾ? ಇಲ್ಲವಾದರೆ, ಶಾಲೆಯ ಸಮಾರಂಭಕ್ಕೆ ತನ್ನ ತಂದೆ ಬಂದು ಸರ್‍ಪ್ರೈಸ್ ಕೊಟ್ಟಾಗ ಮಗ ಭಾವುಕನಾಗುವ ದೃಶ್ಯವುಳ್ಳ ಈ ವಿಡಿಯೋವನ್ನು ನೀವು ಖಂಡಿತಾ ನೋಡಲೇಬೇಕು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ತಂದೆಯನ್ನು ಕಂಡು ಭಾವುಕನಾದ ಬಾಲಕ

ತಂದೆಯನ್ನು ಕಂಡು ಭಾವುಕನಾದ ಬಾಲಕ

  • Share this:
ಮಕ್ಕಳು (Children) ಎಷ್ಟೇ ದೊಡ್ಡವರಾಗಲಿ ಅವರ ಸಾಧನೆಯನ್ನು ಸದಾ ಕಣ್ಣಾರೆ ಕಾಣುವ ಹಂಬಲ ಹೆತ್ತವರಿಗೆ ಇದ್ದೇ ಇರುತ್ತದೆ. ಮಕ್ಕಳಿಗೂ ಕೂಡ ಅಷ್ಟೆ, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿ ದೆಸೆಯಲ್ಲಿ (Student), ತಾವು ಶಾಲಾ ಸಮಾರಂಭಗಳಲ್ಲಿ ಬಹುಮಾನ ಪಡೆದರೂ, ಡಾನ್ಸ್ (Dance) ಮಾಡಿದರೂ, ಹಾಡಿದರೂ ಅಥವಾ ಇನ್ನಾವುದೇ ರೀತಿಯ ಪ್ರತಿಭೆಗಳ (Talent) ಪ್ರದರ್ಶನ ತೋರಿದರೂ ಅದನ್ನು ಅಪ್ಪ ಅಮ್ಮ ಬಂದು ನೋಡಬೇಕು, ನೋಡಿ ಮೆಚ್ಚಬೇಕು ಎಂಬ ಆಸೆ ಇರುತ್ತದೆ. ಆದರಲ್ಲೂ, ಪೋಷಕರ (Parents) ಮೇಲೆ ಅಂತಹ ನಿರೀಕ್ಷೆಯೇ ಇರದ ಮಕ್ಕಳ ಪಾಲಿಗೆ ಆ ಅವಕಾಶ ಸಿಕ್ಕರಂತೂ, ಅದು ಜೀವನದ ಅಮೂಲ್ಯ ಕ್ಷಣವೆನಿಸಿಕೊಳ್ಳುತ್ತದೆ.

ಶಾಲೆಯ ಸಮಾರಂಭಕ್ಕೆ ಬಂದ ತಂದೆ
ನೀವು ಅಂತಹ ಭಾವುಕ ಕ್ಷಣಗಳನ್ನು ಯಾವತ್ತಾದರೂ ಕಂಡಿದ್ದೀರಾ? ಇಲ್ಲವಾದರೆ, ಶಾಲೆಯ ಸಮಾರಂಭಕ್ಕೆ ತನ್ನ ತಂದೆ ಬಂದು ಸರ್‍ಪ್ರೈಸ್ ಕೊಟ್ಟಾಗ ಮಗ ಭಾವುಕನಾಗುವ ದೃಶ್ಯವುಳ್ಳ ಈ ವಿಡಿಯೋವನ್ನು ನೀವು ಖಂಡಿತಾ ನೋಡಲೇಬೇಕು. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ತಂದೆಯನ್ನು ಕಂಡು ಭಾವುಕನಾದ ಬಾಲಕ
ಈ ವಿಡಿಯೋವನ್ನು ಮೂರು ದಿನಗಳ ಹಿಂದೆ ಕ್ಯಾಲಿಬಾರ್ನ್‍ಬ್ರೀ ಎಂಬ ಹೆಸರಿನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಆ ಹುಡುಗನ ತಾಯಿ ಹಂಚಿಕೊಂಡಿದ್ದಾರೆ. ಅಪ್ಪನ ಬರುವಿಕೆಯನ್ನು ಎದುರು ನೋಡದ ಮಗ ತಂದೆ ಬರುತ್ತಿದ್ದಂತೆ ಹೇಗೆ ಭಾವುಕನಾದ ಮತ್ತು ಯಾವುದನ್ನು ತೋರಿಸಿಕೊಳ್ಳದೇ ಸಮಾರಂಭ ಮುಗಿಯುತ್ತಿದ್ದಂತೆ ಅಪ್ಪನನ್ನು ಹೇಗೆ ಅಪ್ಪಿಕೊಂಡಿದ್ದಾನೆ ಎಂಬುದನ್ನು ನಾವಿಲ್ಲಿ ನೋಡಬಹುದು.

ವಿಡಿಯೋದಲ್ಲಿ ಏನಿದೆ?
ಈ ಭಾವುಕ ಕ್ಷಣದ ಬಗ್ಗೆ ಒಂದಿಷ್ಟು ಸಾಲುಗಳನ್ನು ಬರೆದುಕೊಂಡಿರುವ ಹುಡುಗನ ತಾಯಿ. “ಪ್ರತೀ ಹುಡುಗನಿಗೆ ಅವನ ತಂದೆಯ ಅಗತ್ಯವಿದೆ . ನಮ್ಮ ಮೊದಲ ಮಗ ಡ’ಕೋಟ 5 ನೇ ಗ್ರೇಡ್ ಮುಗಿಸಿದ . ನಾವು ಅವನ ಎಲ್ಲಾ ಗೆಲುವನ್ನು ಆಚರಿಸುತ್ತೇವೆ. ಅವನು ವೇದಿಕೆಯ ಮೇಲೆ ಎಷ್ಟು ಹೆಮ್ಮೆಯಿಂದ ನಡೆಯುತ್ತಿದ್ದ ಎಂಬುದನ್ನು ನೀವು ನೋಡಬಹುದು . ಅವನು ತಂದೆಯನ್ನು ನೋಡುವ ಮೊದಲು ಕೂಡ ಅವನು ಅಷ್ಟೇ ಧೈರ್ಯವಾಗಿದ್ದನು, ಕೋವಿಡ್ ನಮ್ಮ ಜೀವನದ ಬಹಳಷ್ಟನ್ನು ಕಿತ್ತುಕೊಂಡಿದೆ , ಆದರೆ ಈ ವರ್ಷ ನನ್ನ ಕಂದ ಮಿಂಚುತ್ತಿದ್ದಾನೆ. ಅವನು ನಮ್ಮ ಬದುಕಿನಲ್ಲಿರುವ ಕತ್ತಲಿಗೆ ಬೆಳಕಾಗಿದ್ದಾನೆ.” “ ಇವತ್ತು ಅವನ ತಂದೆ, ತನ್ನ ಕಂದ ಗ್ರಾಜುಯೇಟ್ ಆಗುವುದನ್ನು ನೋಡಲು ವೇಕ್ರಾಸ್ ಗಾ ದಿಂದ ಸ್ಟೀಬೋಟ್ ಸ್ಪ್ರಿಂಗ್ ಗೆ ಆಗಮಿಸಿದ್ದರು.

ಇದನ್ನೂ ಓದಿ:  Viral Video: ಇಷ್ಟೊಂದು ಸುಖಿ ಬೇರೆ ಯಾರಿದ್ದಾರೆ? ಮುದ್ದಾದ ಪಾಂಡಾದ ವಿಡಿಯೋ ವೈರಲ್

ನೀವು ಅವನ ಕಣ್ಣಲ್ಲಿರುವ ಶಾಕ್ ಅನ್ನು ಕಾಣಬಹುದು. ಅವನ ತಂದೆ ಹೇಳಿದಂತೆ, ನನ್ನ ಪತಿ ತಂದೆ ಬರುವ ವಿಚಾರವನ್ನು ಮಗನಿಗೆ ಹೇಳದೇ ರಹಸ್ಯವನ್ನು ಕಾಪಾಡಿಕೊಂಡಿದ್ದೆ. ಅಪ್ಪನ ಉಪಸ್ಥಿತಿ ನಿಜಕ್ಕೂ ನನ್ನ ಮಗನಿಗೆ ಖುಷಿ ಕೊಟ್ಟಿತು. ಇದು ಸಹ -ಪೋಷಕರ ಗೆಲುವು” ಎಂದು ಆಕೆ ಬರೆದುಕೊಂಡಿದ್ದಾರೆ.


View this post on Instagram


A post shared by Calibornbree (@calibornbree)
“ತಂದೆಯ ಜೊತೆ ಮತ್ತೊಂದು ಬೇಸಿಗೆ ಕಳೆಯಲು ಮಗ ಉತ್ಸುಕದಲ್ಲಿದ್ದಾನೆ. ನಾನು ಅವನನ್ನು ಪುಟ್ಟ ಟಾರ್ಜನ್ ಎಂದು ಕರೆಯಲು ಬಯಸುತ್ತೇನೆ . ಅವನಿಗೂ ತನ್ನ ತಂದೆಯಂತೆ ಮರ ಹತ್ತುವುದು ಎಂದರೆ ಬಹಳ ಇಷ್ಟ ! ಅವರು ಪ್ರತೀ ವರ್ಷ ಹೊರಡುವ ಮೊದಲು ಮತ್ತು ಅವರ ಶಾಲೆಯ ಮೊದಲ ದಿನಕ್ಕೂ ಮುನ್ನ ನಾನು ಟಾರ್ಜನ್ ಮತ್ತು ಈ ಹಾಡನ್ನು ನುಡಿಸುತ್ತೇನೆ. ಇದು ನಮ್ಮ ಪುಟ್ಟ ಕುಟುಂಬದ ಪಾಲಿಗೆ ತುಂಬಾ ಮಹತ್ವ ಹೊಂದಿದೆ” ಎಂದು ಆಕೆ ಬರೆದುಕೊಂಡಿದ್ದಾರೆ.

ಭಾವುಕ ಕ್ಷಣದ ವಿಡಿಯೋಗೆ ಪ್ರತಿಕ್ರಿಯೆಗಳು
ಈ ಪೋಸ್ಟ್ ಇದುವರೆಗೆ ಸುಮಾರು 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ ಮತ್ತು 700 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದೆ. ಬಹಳಷ್ಟು ಮಂದಿ ನೆಟ್ಟಿಗರು ತಂದೆ ಮಗನ ನಡುವಿನ ಈ ಭಾವುಕ ಕ್ಷಣದ ದೃಶ್ಯಕ್ಕೆ ಮನಸೋತಿದ್ದು, ನಾನಾ ಬಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ ಆಹ್, ಇದು ನನಗೆ ಕಣ್ಣೀರು ತರಿಸಿತು” ಎಂದು ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಬರೆದಿದ್ದರೆ, ಇನ್ನೊಬ್ಬರು “ಈ ವಿಡಿಯೋದಲ್ಲಿನ ಎಲ್ಲವೂ ಇಷ್ಟವಾಯಿತು” ಎಂದು ಬರೆದಿದ್ದಾರೆ.

ಇದನ್ನೂ ಓದಿ:  Viral Video: ಅಮ್ಮ ಅಂದ್ರೆ ಹಂಗೇನೆ! ಎಲ್ಲಾದಕ್ಕೂ ಸೊಲ್ಯೂಷನ್! ತಾಯಿ-ಮಗುವಿನ ಹ್ಯಾಪಿ ರೈಡ್

“ಬಾವ್ಲಿಂಗ್ !! ಅಪ್ಪ ಮತ್ತು ಅಮ್ಮ ಒಳ್ಳೆಯ ಕೆಲಸ !! ಪುಟಾಣಿಗೆ ಅಭಿನಂದನೆಗಳು “ ಎಂದು ಹೊಗಳಿದ್ದಾರೆ ಮತ್ತೊಬ್ಬ ನೆಟ್ಟಿಗ. “ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಮಗನಿಗಾಗಿ ಅಲ್ಲಿ ಸೇರಿದ್ದಕ್ಕೆ ಅಭಿನಂದನೆಗಳು” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Published by:Ashwini Prabhu
First published: