Viral video: ಮಗಳೆಂದರೆ ಅದೇನು ಪ್ರೀತಿ....ಹೊಸ ವ್ಯವಹಾರ ಶುರು ಮಾಡುವಾಗ ಈ ತಂದೆ ಏನು ಮಾಡಿದ್ದಾರೆ ನೋಡಿ..

Video Viral: ಇಂತಹ ವಿಡಿಯೋಗಳು ನಿಜಕ್ಕೂ ಮನಸ್ಸಿಗೆ ಮುದವನ್ನು ನೀಡುವುದಲ್ಲದೇ, ಇಂತಹ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ಹೊಸ ಕೆಲಸಗಳನ್ನು ಶುರು ಮಾಡಬಹುದು ಎಂದು ತಿಳಿಸಿಕೊಡುತ್ತವೆ. ಆನ್‌ಲೈನ್‌ನಲ್ಲಿ ಇಂತಹದೇ ಒಂದು ಆರೋಗ್ಯಕರ ವಿಷಯದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ.

ತಂದೆ-ಮಗಳ ಫೋಟೋ

ತಂದೆ-ಮಗಳ ಫೋಟೋ

 • Share this:
  ಸಾಮಾನ್ಯವಾಗಿ ಕೆಲವರು ತಮ್ಮ ಹೊಸ ಮನೆಯನ್ನು (New House) ಕಟ್ಟಿದ ಮೇಲೆ ಅದರ ಗೃಹ ಪ್ರವೇಶದ (House-warming) ದಿನದಂದು ಅವರ ಗುರುತಿಗೆ ಇರಲಿ ಎಂದು ಗಂಡನ ಒಂದು ಪಾದ (Foot) ಮತ್ತು ಹೆಂಡತಿಯ ಒಂದು ಪಾದದ ಗುರುತನ್ನು ಒಂದು ಸಿಮೆಂಟಿನ ಹಲಗೆಯ ಮೇಲೆ ತೆಗೆದುಕೊಂಡು ಆ ಮನೆಯನ್ನು ಪ್ರವೇಶಿಸಿಲು ಇಟ್ಟ ಮೊದಲ ಹೆಜ್ಜೆಗಳು ಇವು ಎಂಬ ನೆನಪಿಗಾಗಿ ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಕೆಲವರು ತಮ್ಮ ಯಾವುದೇ ಹೊಸ ವ್ಯವಹಾರಗಳನ್ನು (Business) ಶುರು ಮಾಡುವಾಗಲೂ ಸಹ ತಮ್ಮ ಹೆಣ್ಣು ಮಕ್ಕಳ (Baby Girl) ಕೈಯಿಂದ ಅದನ್ನು ಶುರು ಮಾಡಿಸುವ ಮತ್ತು ಅವರ ಹೆಣ್ಣು ಮಗುವಿನ ಪುಟ್ಟ ಪಾದಗಳ ಗುರುತನ್ನು ಅಲ್ಲಿ ಇರಿಸಿಯೇ ಶುರು ಮಾಡುತ್ತಾರೆ. ಇದು ಅವರಿಗೆ ಒಂದು ರೀತಿಯ ಅದೃಷ್ಟವನ್ನು ತಂದು ಕೊಡುತ್ತದೆ ಎಂಬುದು ಅವರ ನಂಬಿಕೆಯಾಗಿರುತ್ತದೆ. ಈ ರೀತಿಯ ಅನೇಕ ಘಟನೆಗಳ ವಿಡಿಯೋಗಳನ್ನು (Video) ನಾವು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ.

  ಇಂತಹ ವಿಡಿಯೋಗಳು ನಿಜಕ್ಕೂ ಮನಸ್ಸಿಗೆ ಮುದವನ್ನು ನೀಡುವುದಲ್ಲದೇ, ಇಂತಹ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ಹೊಸ ಕೆಲಸಗಳನ್ನು ಶುರು ಮಾಡಬಹುದು ಎಂದು ತಿಳಿಸಿಕೊಡುತ್ತವೆ. ಆನ್‌ಲೈನ್‌ನಲ್ಲಿ ಇಂತಹದೇ ಒಂದು ಆರೋಗ್ಯಕರ ವಿಷಯದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ.

  ಇಲ್ಲಿ ನಾವು ಹೇಳಲು ಹೊರಟಿರುವ ಒಂದು ವಿಡಿಯೋ ನಿಮ್ಮ ಮುಖದ ಮೇಲೆ ನಗುವನ್ನು ತರಿಸುತ್ತದೆ. ಅದೇನಪ್ಪಾ ಅಂತಹ ವಿಡಿಯೋ ಅಂತೀರಾ? ಈ 30 ಸೆಕೆಂಡಿನ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ತನ್ನ ಹೊಸ ಟ್ರಕ್ ವ್ಯವಹಾರ ಪ್ರಾರಂಭಿಸುವ ಮೊದಲು ತನ್ನ ಪುಟ್ಟ ಮಗಳ ಪಾದದ ಗುರುತನ್ನು ಅಲ್ಲಿ ನಿಲ್ಲಿಸಲಾಗಿರುವ ಎಲ್ಲಾ ಟ್ರಕ್‌ಗಳ ಮೇಲೆ ಹಾಕುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಹರ್ಷ ಎಂಬ ಬಳಕೆದಾರರು ಏಪ್ರಿಲ್ 7 ರಂದು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅಂದಿನಿಂದ ಇಂದಿನವರೆಗೂ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

  ಇದನ್ನೂ ಓದಿ: Guinness World Record: ಇದು ಕಣ್ಣು ಕಳೆದುಕೊಂಡವರ ರೇಸಿಂಗ್! ಅಂಧ ಕಣ್ಣಿನಲ್ಲೇ ಕಾರು ಚಲಾಯಿಸಿ ಗಿನ್ನಿಸ್‌ ದಾಖಲೆ

  ಈಗ ಸಿಕ್ಕಾಪಟ್ಟೆ ವೈರಲ್ ಆಗಿರುವ ವಿಡಿಯೋದಲ್ಲಿ, ಕೆಂಪು ಬಣ್ಣದಿಂದ ತುಂಬಿದ ತಟ್ಟೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ನಿಂತಿರುವುದನ್ನು ಕಾಣಬಹುದು. ಅವಳ ತಂದೆ ಅವಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ತನ್ನ ಹೊಸ ಟ್ರಕ್ಕುಗಳ ಮೇಲೆ ಅವಳ ಪಾದಗಳನ್ನು ಒತ್ತಲು ಪ್ರಾರಂಭಿಸಿದರು. ಆ ಮಗುವಿನ ತಾಯಿ ಅಲ್ಲೇ ಪಕ್ಕದಲ್ಲಿ ನಿಂತುಕೊಂಡು ಈ ತಂದೆ ಮತ್ತು ಮಗಳು ಮಾಡುತ್ತಿರುವುದನ್ನು ನೋಡಿ ವಿಡಿಯೋ ಉದ್ದಕ್ಕೂ ನಗುತ್ತಲೇ ನೋಡುತ್ತಿದ್ದರು. ಈ ಅಮೂಲ್ಯವಾದ ಕ್ಷಣವು ನಮ್ಮಂತೆಯೇ ಅನೇಕ ನೋಡುಗರ ಹೃದಯಗಳಿಗೂ ಸಹ ಖಂಡಿತವಾಗಿ ಮುದ ನೀಡಿರುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡದೆ ಸುಮ್ಮನಿರಲು ಸಾಧ್ಯವಾಗಲಿಲ್ಲ.

  ಇದನ್ನೂ ಓದಿ: Viral Story: ದೇಹದಲ್ಲಿ ಬೆಳೆಯುವ ಕೂದಲಿನ ಫೋಟೋ ಮಾರಿ ಆದಾಯ ಗಳಿಸುವ ಮಹಿಳೆ! ಈಕೆಯ ವಾರ್ಷಿಕ ಆದಾಯ ಎಷ್ಟು ಗೊತ್ತಾ?

  "ಹೆಣ್ಣು ಮಕ್ಕಳ ಆಶೀರ್ವಾದ" ಎಂದು ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ನೆಟ್ಟಿಗರಂತೂ ತುಂಬಾನೇ ಭಾವುಕರಾಗಿ ಟನ್‌ಗಟ್ಟಲೆ ಪ್ರತಿಕ್ರಿಯೆಗಳಿಂದ ಕಾಮೆಂಟ್ ವಿಭಾಗವನ್ನು ತುಂಬಿಸಿದ್ದಾರೆ ಎಂದು ಹೇಳಬಹುದು. "ಎಷ್ಟು ಸುಂದರವಾಗಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಇದು ಮುದ್ದಾಗಿದೆ ಎಂದು ಹೇಳುವುದನ್ನು ಸಹ ಮೀರಿಸಿದೆ" ಎಂದು ಬರೆದಿದ್ದಾರೆ.

  “ಹೆಣ್ಣು ಮಕ್ಕಳನ್ನು ಲಕ್ಷ್ಮೀ ಎಂದು ತಿಳಿದುಕೊಳ್ಳುವ ಎಲ್ಲಾ ಪೋಷಕರಿಗೆ ನನ್ನ ಹೃತ್ಪೂರ್ವಕವಾದ ನಮನಗಳು” ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. “ತುಂಬಾನೇ ಮುದ್ದಾಗಿರುವ ವಿಡಿಯೋವನ್ನು ನೀವು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ, ತುಂಬಾ ಧನ್ಯವಾದಗಳು ನಿಮಗೆ” ಎಂದು ಸಹ ಕಾಮೆಂಟ್ ಮಾಡಿರುವುದನ್ನು ನಾವು ಇಲ್ಲಿ ನೋಡಬಹುದು.
  Published by:Harshith AS
  First published: