• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: 550 ಮಕ್ಕಳ ತಂದೆಗೆ ಎದುರಾಯ್ತು ಕಾನೂನಿನ ಸಂಕಷ್ಟ; ವೀರ್ಯಾಣು ದಾನಿಯಿಂದ ಮಹಾ ಎಡವಟ್ಟು!

Viral Story: 550 ಮಕ್ಕಳ ತಂದೆಗೆ ಎದುರಾಯ್ತು ಕಾನೂನಿನ ಸಂಕಷ್ಟ; ವೀರ್ಯಾಣು ದಾನಿಯಿಂದ ಮಹಾ ಎಡವಟ್ಟು!

ಜೊನಾಥನ್ ಜಾಕೋಬ್ ಮೈಜರ್

ಜೊನಾಥನ್ ಜಾಕೋಬ್ ಮೈಜರ್

ವಿಕ್ಕಿ ಡೋನರ್ ಸಿನಿಮಾ ಕ್ಲೈಮ್ಯಾಕ್ಸ್​ ಬಹುತೇಕರಿಗೆ ನೆನಪಿರಬಹುದು. ಅದರಲ್ಲಿ ತಾನು ದಾನ ಮಾಡಿದ ವೀರ್ಯದಿಂದ ಜನಿಸಿದ ನೂರಾರು ಮಕ್ಕಳನ್ನು ಒಟ್ಟಿಗೆ ಕಂಡು ದಾನಿಗೆ ಆಶ್ಚರ್ಯವಾಗುತ್ತದೆ. ಇದೇ ನಿಜ ಜೀವನದಲ್ಲಿ ನಡೆದರೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಹೌದು! ಈಗ ಡಚ್ ಸಂಗೀತಗಾರನೊಬ್ಬ ಇಂತಹ ಅನಾಹುತಕ್ಕೆ ಕಾರಣಕರ್ತನಾಗಿದ್ದಾನೆ.

ಮುಂದೆ ಓದಿ ...
  • Share this:

ವಿಕ್ಕಿ ಡೋನರ್ ಸಿನಿಮಾ (Vicky Donor Cinema) ಕ್ಲೈಮ್ಯಾಕ್ಸ್​ ಬಹುತೇಕರಿಗೆ ನೆನಪಿರಬಹುದು. ಅದರಲ್ಲಿ ತಾನು ದಾನ ಮಾಡಿದ ವೀರ್ಯದಿಂದ (Sperm) ಜನಿಸಿದ ನೂರಾರು ಮಕ್ಕಳನ್ನು ಒಟ್ಟಿಗೆ ಕಂಡು ದಾನಿಗೆ ಆಶ್ಚರ್ಯವಾಗುತ್ತದೆ. ಅವನೊಟ್ಟಿಗೆ ಪ್ರೇಕ್ಷಕರಿಗೂ ಕೂಡ ಅದ್ಭುತ ಅನಿಸುತ್ತೆ. ಇದೇ ನಿಜ ಜೀವನದಲ್ಲಿ ನಡೆದರೆ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಹೌದು! ಈಗ ಡಚ್ ಸಂಗೀತಗಾರನೊಬ್ಬ (Dutch musician) ಇಂತಹ ಅನಾಹುತಕ್ಕೆ ಕಾರಣಕರ್ತನಾಗಿದ್ದಾನೆ.


ನ್ಯಾಯಾಲಯದ ಮೊರೆ ಹೋದ ಡೋನರ್ ಕೈಂಡ್ ಸಂಸ್ಥೆ


ಹ್ಯಾಗ್ಯೂವಿನ 41 ವರ್ಷದ ಜೊನಾಥನ್ ಜಾಕೋಬ್ ಮೈಜರ್ (Jonathan Jacob Meijer) ಎನ್ನುವ ಸಂಗೀತಗಾರ ಮತ್ತು ಸರಣಿ ವೀರ್ಯಾಣು ದಾನಿಯೊಬ್ಬರು ಸದ್ಯ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.


ವೀರ್ಯ ದಾನದಿಂದ ಪಡೆದ ಮಕ್ಕಳನ್ನು ಪ್ರತಿನಿಧಿಸುವ ಡೋನರ್ ಕೈಂಡ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಸುಮಾರು 550 ಮಕ್ಕಳಿಗೆ ತಂದೆಯಾಗಿರುವ ಜೋನಾಥನ್ ಅವರಿಗೆ ನೆದರ್​​ಲ್ಯಾಂಡ್​ ಕೋರ್ಟ್ ಸಮನ್ಸ್​ ಜಾರಿಗೊಳಿಸಿದೆ.


ಜೊನಾಥನ್ ವೀರ್ಯ ದಾನಕ್ಕೆ ತಡೆ


ಜೊನಾಥನ್ ಇನ್ನು ಮುಂದೆ ವೀರ್ಯ ದಾನ ಮಾಡದಂತೆ ತಡೆಯಲು ಡೋನರ್ ಕೈಂಡ್ ಈ ನಿರ್ಧಾರ ಕೈಗೊಂಡಿದೆ. 100 ಮಹಿಳೆಯರಿಗೆ ವಂಚಿಸಿದ ಆರೋಪದ ಮೇಲೆ ಜೊನಾಥನ್ ಏಪ್ರಿಲ್ ನಲ್ಲಿ ಕಾನೂನಿನ ವಿಚಾರಣೆ ಎದುರಿಸಬೇಕಾಗಿದೆ.


ಇದನ್ನೂ ಓದಿ: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ


ಏನಿದು ಘಟನೆ?


ಜೊನಾಥನ್ 10 ಫರ್ಟಿಲಿಟಿ ಸೆಂಟರ್​ಗಳಲ್ಲಿ ವೀರ್ಯಾಣು ದಾನ ಮಾಡಿದ್ದರು. ಆ ಮೂಲಕ ನೆದರ್​ಲ್ಯಾಂಡ್​ನಲ್ಲಿ 102 ಮಕ್ಕಳ ಜನನಕ್ಕೆ ಕಾರಣಕರ್ತರಾಗಿದ್ದರು. ನಿಯಮಗಳ ಪ್ರಕಾರ ಜೋನಾಥನ್​ ವೀರ್ಯಾಣು ದಾನವನ್ನು ಇಲ್ಲಿಗೆ ನಿಲ್ಲಿಸಬೇಕಿತ್ತು. ಆದರೆ ಆತ ಬೇರೆ ಬೇರೆ ದೇಶಗಳಲ್ಲೂ ವೀರ್ಯಾಣು ದಾನ ಮಾಡಿ ಈಗ ಅವಾಂತರ ಸೃಷ್ಟಿಸಿದ್ದಾನೆ. ಪರಿಣಾಮ 550 ಮಕ್ಕಳ ಜನನ.


ಈ ಬಗ್ಗೆ ಮೊದಲ ಬಾರಿಗೆ ಡಚ್​ ಸೊಸೈಟಿ ಆಫ್ ಅಬ್​ಸ್ಟ್ರಿಕ್ಸ್ ಮತ್ತು ಗೈನಾಕಲಜಿಗೆ 2017 ರಲ್ಲಿ ವರದಿ ಕೂಡ ಮಾಡಲಾಗಿತ್ತು. ಇದೇ ಕಾರಣದಿಂದ ಜೊನಾಥನ್ ಹೆಸರು ಡಚ್​​ನಲ್ಲಿ ಬ್ಲ್ಯಾಕ್​ಲಿಸ್ಟ್​​ಗೂ ಸೇರಿಕೊಂಡಿತ್ತು. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೇ ಜೊನಾಥನ್ ವೀರ್ಯಾಣು ದಾನವನ್ನು ಮುಂದುವರಿಸಿದ್ದ.


ವೀರ್ಯಾಣು ನಾಶ ಮಾಡಲು ಕೋರಿಕೆ


ಇನ್ನು ಮುಂದೆ ಆತ ವೀರ್ಯಾಣು ದಾನ ಮಾಡಬಾರದು. ಈಗಾಗಲೇ ಆತನಿಂದ ಸಂಗ್ರಹಿಸಿರುವ ವೀರ್ಯಾಣುವನ್ನು ನಾಶಮಾಡಬೇಕು. ಈಗಾಗಲೇ ಆತನ ವೀರ್ಯಾಣುವಿನಿಂದ ಮಗುವನ್ನು ಹೊಂದಿರುವ ತಾಯಿ ಆನುವಂಶೀಕವಾಗಿ ಎರಡನೇ ಮಗುವನ್ನು ಹೊಂದುವ ಬಯಕೆಯಿಂದ ಮೀಸಲಿಟ್ಟಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ವೀರ್ಯಾಣು ಮಾದರಿಯನ್ನು ನಾಶ ಮಾಡಬೇಕು ಎಂದು ಕೇಳಿಕೊಂಡಿದೆ.


ಜೊನಾಥನ್ ಜಾಕೋಬ್ ಮೈಜರ್


ನೆದರ್​ಲ್ಯಾಂಡ್​​ನಲ್ಲಿ ಇದು ಮೊದಲ ಪ್ರಕರಣವಾಗಿದೆ. ಇಲ್ಲಿ ವೀರ್ಯ ದಾನಿಗಳು 25 ಕ್ಕಿಂತ ಹೆಚ್ಚಿನ ಸಂತಾನವನ್ನು ಹೊಂದಬಾರದು. ಜೊತೆಗೆ ಒಬ್ಬ ವ್ಯಕ್ತಿಯ ವೀರ್ಯಾಣುವಿನಿಂದ 12 ಕ್ಕಿಂತ ಹೆಚ್ಚು ತಾಯಂದಿರು ಗರ್ಭ ಧರಿಸಬಾರದು.


ಏಕೆ ಈ ಕಠಿಣ ನಿರ್ಧಾರ?


ಈ ರೀತಿ ಜನಿಸಿದ ಮಕ್ಕಳು ಮುಂದೆ ಸಾಕಷ್ಟು ಸಂಕಟ ಎದುರಿಸಬಹುದು. ಮಾಹಿತಿ ಕೊರತೆಯಿಂದ ದಾನಿ ಮಕ್ಕಳಲ್ಲಿ ಲೈಂಗಿಕ ಸಂಪರ್ಕ ಏರ್ಪಡುವ ಸಾಧ್ಯತೆ ಇರಬಹುದು.


ಇಲ್ಲವೇ ಸಂತಾನವನ್ನು ಹೊಂದಬಹುದು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ನೂರಾರು ಜನ ಒಡಹುಟ್ಟಿದವರ ಬಗ್ಗೆ ತಿಳಿದಾಗ ಅವರ ವರ್ತನೆ ಹೇಗಿರುವುದೋ ಊಹಿಸುವುದು ಕಷ್ಟ.


ಕಣ್ಣೀರಿಡುತ್ತಿರುವ ತಾಯಂದಿರು


ಈಗಾಗಲೇ ಜೊನಾಥನ್​ನಿಂದ ಮಗುವನ್ನು ಹೊಂದಿರುವ ಮಹಿಳೆಯರು ಆತಂಕಕ್ಕೀಡಾಗಿದ್ದಾರೆ. ಇವನ ಅಚಾತುರ್ಯದಿಂದ ಮುಂದಿನ ದಿನದ ಪರಿಣಾಮಗಳನ್ನು ನೆನೆದರೆ ಭಯವಾಗುತ್ತದೆ ಎನ್ನುತ್ತಿದ್ದಾರೆ. ಇವನು 100 ಮಕ್ಕಳನ್ನು ಹೊಂದಿದ್ದಾನೆ ಎಂದು ಮೊದಲೇ ತಿಳಿದಿದ್ದರೆ ನಾವು ಮುಂದುವರಿಯುತ್ತಿರಲಿಲ್ಲ. ಭವಿಷ್ಯವನ್ನು ನೆನೆದರೆ ಹೊಟ್ಟೆ ಕಿವುಚಿದಂತಾಗುತ್ತದೆ ಎಂದು ಮನನೊಂದುಕೊಳ್ಳುತ್ತಾರೆ.


top videos



    ಜೊನಾಥನ್ ಯೂಟೂಬರ್ ಕೂಡ ಆಗಿದ್ದು, ಈತನ ವಾಹಿನಿಗೆ 4000 ಜನ ಚಂದಾದಾರರಿದ್ದಾರೆ. ಕ್ರಿಪ್ಟೋ, ಡಿವಿಡೆಂಟ್ ಇನ್ವೆಸ್ಟ್​ಮೆಂಟ್​ ಬಗ್ಗೆ ತನ್ನ ಚಾನೆಲ್​ನಲ್ಲಿ ತಿಳಿಸಿಕೊಡುತ್ತಾನೆ.

    First published: