Viral Video: ಮಕ್ಕಳನ್ನು ಅಕ್ಕರೆಯಿಂದ ಶಾಲೆಗೆ ಕರೆದೊಯ್ಯುವ ಅಪ್ಪ! ಪ್ರೀತಿ ಮುಂದೆ ವಿಕಲಾಂಗತೆ ಸಮಸ್ಯೆಯೇ ಅಲ್ಲ

ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಇದನ್ನು ನೋಡಿದವರಿಗೆ ‘ಅಯ್ಯೋ..ಪಾಪ ಎಂತಹ ಅದ್ಬುತ ತಂದೆ ಇವರು” ಎಂದನಿಸದೆ ಇರದು. ಹೌದು.. ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿಯೊಬ್ಬರು ಹಂಚಿಕೊಂಡ ಇತ್ತೀಚಿನ ವೀಡಿಯೋ ನೋಡಿ ಹೇಗಿದೆ.

ತ್ರಿಚಕ್ರವಾಹನದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿರುವ ತಂದೆ

ತ್ರಿಚಕ್ರವಾಹನದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿರುವ ತಂದೆ

  • Share this:
ಸಾಮಾನ್ಯವಾಗಿ ತಂದೆ ತಾಯಂದಿರು (Father and Mother) ತಮ್ಮ ಮಕ್ಕಳನ್ನು (Children) ಚೆನ್ನಾಗಿ ಬೆಳೆಸಬೇಕು, ಅವರಿಗೆ ಕಿಂಚಿತ್ತೂ ಯಾವುದರಿಂದಲೂ ತೊಂದರೆಯಾಗಬಾರದು ಎಂದು ಎಷ್ಟೇ ಕಷ್ಟವಾದರೂ ಸರಿ ಅವರೇ ಆ ಕಷ್ಟವನ್ನು ಮನಸ್ಸಿನಲ್ಲಿ ನುಂಗಿಕೊಂಡು ಹಗಲಿರುಳು ನೋಡದಂತೆ ದುಡಿಯುತ್ತಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ಪ್ರತಿದಿನ ಬೆಳಿಗ್ಗೆ (Morning) ಈ ಶಾಲೆಗಳ (School) ಗೇಟಿನ ಮುಂದೆ ನಿಂತುಕೊಂಡು ನೋಡಿದರೆ ಅರ್ಥವಾಗುತ್ತದೆ. ಹೇಗೆ ತಂದೆ ತಾಯಂದಿರು ತಮ್ಮ ಮಕ್ಕಳ ಶಾಲೆಯ ಬ್ಯಾಗ್ ಗಳು (Bags) ಅವರಿಗೆ ಭಾರವಾಗುತ್ತವೆ ಎಂದು ತಾವೇ ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ತಮ್ಮ ಮಕ್ಕಳ ಕೈಯನ್ನು ಹಿಡಿದುಕೊಂಡು ಶಾಲೆಗೆ ಬಿಟ್ಟು ತಾವು ಮುಂದಿನ ಕೆಲಸಗಳಿಗೆ ತೆರಳುತ್ತಾರೆ ಎಂದು.

ಅಲ್ಲಿಂದ ಶುರುವಾದ ಕೆಲಸ ಸಂಜೆ ಆ ಮಕ್ಕಳನ್ನು ಮತ್ತೆ ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಬಿಟ್ಟು, ನಂತರ ಅವರನ್ನು ಮತ್ತೆ ಯಾವುದಾದರೂ ಟ್ಯೂಷನ್ ಅಥವಾ ಸಂಗೀತ ಕಲಿಯಲು ಕರೆದುಕೊಂಡು ಹೋಗುತ್ತಾರೆ. ಇಷ್ಟೇ ಅಲ್ಲದೆ ತಮ್ಮ ಕೆಲಸವನ್ನು ಮಾಡಿಕೊಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು ಈಗಿನ ದಿನಗಳಲ್ಲಿ ಅಷ್ಟೊಂದು ಸುಲಭದ ಕೆಲಸವೇನಲ್ಲ ಬಿಡಿ.

ಅಯ್ಯೋ..ಪಾಪ ಎಂತಹ ಅದ್ಬುತ ತಂದೆ ಇವರು
ಹೀಗೆ ಒಂದೇ ಎರಡೇ.. ದಿನ ಶುರುವಾದಾಗಿನಿಂದ ಹಿಡಿದು ದಿನ ಮುಗಿಯುವವರೆಗೂ ತಂದೆ ತಾಯಂದಿರು ತಮ್ಮ ಮಕ್ಕಳ ಸಲುವಾಗಿ ತುಂಬಾನೇ ಸಮಯವನ್ನು ಮೀಸಲಿಡಬೇಕಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮವಾದುದನ್ನು ನೀಡಲು ಯಾವುದೇ ಸಮಯದಲ್ಲೂ ಎಂತಹ ದೊಡ್ಡ ತ್ಯಾಗಗಳನ್ನು ಮಾಡುವುದಕ್ಕೂ ತಯಾರಿರುತ್ತಾರೆ.

ಇದನ್ನೂ ಓದಿ:  Viral Video: ಸೆಕೆಂಡ್​ ಹ್ಯಾಂಡ್ ಸೈಕಲ್ ತಗೊಂಡ ಅಪ್ಪ-ಮಗನ ಖುಷಿ ನೋಡಿ!

ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಇದನ್ನು ನೋಡಿದವರಿಗೆ ‘ಅಯ್ಯೋ..ಪಾಪ ಎಂತಹ ಅದ್ಬುತ ತಂದೆ ಇವರು” ಎಂದನಿಸದೆ ಇರದು. ಹೌದು.. ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿಯೊಬ್ಬರು ಹಂಚಿಕೊಂಡ ಇತ್ತೀಚಿನ ವೀಡಿಯೋ ನೋಡಿ ಹೇಗಿದೆ.

ಟ್ರೈ ಸೈಕಲ್ ಮೇಲೆ ಕುಳಿತುಕೊಂಡು ಶಾಲೆಗೆ ಹೋಗುತ್ತಿರುವ ಮಕ್ಕಳು
ದಿನಾಂಕವಿಲ್ಲದ ಈ ವೀಡಿಯೋದಲ್ಲಿ, ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಮಕ್ಕಳು ತನ್ನ ತಂದೆಯ ಟ್ರೈ ಸೈಕಲ್ (ಮೂರು ಚಕ್ರದ ಸೈಕಲ್) ಮೇಲೆ ಕುಳಿತುಕೊಂಡು ಶಾಲೆಗೆ ಹೋಗುತ್ತಿರುವುದನ್ನು ನಾವು ನೋಡಬಹುದು.



ಆ ಮೂರು ಚಕ್ರದ ಸೈಕಲ್ ಅನ್ನು ಒಬ್ಬ ವಿಕಲಚೇತನ ವ್ಯಕ್ತಿಯು ತನ್ನ ಕೈಯಿಂದ ಪೆಡಲ್ ಮಾಡುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಒಬ್ಬ ಹೆಣ್ಣು ಮಗು ಹಿಂದಿನ ಸೀಟಿನಲ್ಲಿ ಕುಳಿತರೆ, ಒಬ್ಬ ಚಿಕ್ಕ ಹುಡುಗ ಮುಂದಿನ ಸೀಟಿನಲ್ಲಿ ಆ ವ್ಯಕ್ತಿಯೊಂದಿಗೆ ಕುಳಿತಿರುವುದನ್ನು ನಾವು ನೋಡಬಹುದು.

ಮಗುವಿನ ಶಿಕ್ಷಣಕ್ಕಾಗಿ ಪೋಷಕರು ಮಾಡುವ ತ್ಯಾಗ
ಈ ವೀಡಿಯೋವನ್ನು ಐಎಎಸ್ ಅಧಿಕಾರಿ ಸೋನಾಲ್ ಗೋಯಲ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಟ್ವೀಟ್ ಮಾಡುವಾಗ, ಗೋಯಲ್ ಸರಳವಾಗಿ "ತಂದೆ” ಎಂದು ಬರೆದು ಪೋಷಕರು ತಮ್ಮ ಮಗುವಿನ ಶಿಕ್ಷಣಕ್ಕಾಗಿ ಮಾಡುವ ಅಪಾರ ತ್ಯಾಗವನ್ನು ತೋರಿಸುತ್ತದೆ ಈ ವೀಡಿಯೋ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಮೇ 23, 2022 ರಂದು ಪೋಸ್ಟ್ ಮಾಡಲಾದ ಈ ವೀಡಿಯೋ ಟ್ವಿಟ್ಟರ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 15,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಬಳಕೆದಾರರೊಬ್ಬರು "ಈ ವೀಡಿಯೋದಲ್ಲಿ ನೋಡುತ್ತಿರುವುದು ತುಂಬಾನೇ ಅಸಾಧಾರಣ ಮತ್ತು ಹೃದಯಸ್ಪರ್ಶಿಯಾಗಿ ನಮಗೆ ತೋರುತ್ತದೆ. ಈ ಕ್ಲಿಪ್ ನಲ್ಲಿರುವ ಜನರಿಗೆ ಇದು ತುಂಬಾನೇ ಸಾಮಾನ್ಯವಾಗಿರುತ್ತದೆ. ಹೌದು.. ಶ್ರೇಷ್ಠತೆ ಎನ್ನುವುದು ಸರಳತೆಯಲ್ಲಿಯೇ ಅಡಗಿರುತ್ತದೆ ಎಂಬುದನ್ನು ಈ ವೀಡಿಯೋ ತೋರಿಸುತ್ತದೆ" ಎಂದು ಬರೆದಿದ್ದಾರೆ.

ವೀಡಿಯೋದಲ್ಲಿ ತೋರಿಸಲಾದ ಭಾವನೆಯನ್ನು ಶ್ಲಾಘಿಸಿದ ಜನರು
ವೀಡಿಯೋದಲ್ಲಿ ತೋರಿಸಲಾದ ಭಾವನೆಯನ್ನು ಅನೇಕ ಜನರು ಶ್ಲಾಘಿಸಿದರೆ, ಅಪ್ರಾಪ್ತ ವಯಸ್ಕರನ್ನು ಒಳಗೊಂಡ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬಾರದು ಎಂದು ಕೆಲವರು ವಾದಿಸಿದರು.

ಇದನ್ನೂ ಓದಿ:  Viral Video: ಬಡವನಾದರೆ ಏನು ಪ್ರಿಯೆ 90 ಸಾವಿರದ ಬೈಕ್ ಕೊಡಿಸುವೆ! ಹೆಂಡತಿಗೆ ಮೊಪೆಡ್ ಗಿಫ್ಟ್ ಕೊಟ್ಟ ಭಿಕ್ಷುಕ

ಈ ಆಲೋಚನೆಯನ್ನು ಪ್ರತಿಧ್ವನಿಸಿದ ಟ್ವಿಟ್ಟರ್ ಬಳಕೆದಾರರೊಬ್ಬರು "ಇದು ತುಂಬಾ ಹೃದಯ ವಿದ್ರಾವಕವಾಗಿದೆ, ಅವರ ಅನುಮತಿಯಿಲ್ಲದೆ ಯಾರೋ ಈ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಅದನ್ನು ಇಂಟರ್ನೆಟ್ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ತಕ್ಷಣಕ್ಕೆ ಇದು ವೈರಲ್ ಆಗುತ್ತದೆ ಮತ್ತು ಅವರಿಗೆ ಏನು ಸಿಗುತ್ತದೆ? ಒಂದು ರೀತಿಯ ಗಮನ, ಆದರೆ ಎಷ್ಟು ದಿನ. 2 ದಿನಗಳ ನಂತರ ಈ ವೀಡಿಯೋ ಯಾರಿಗೂ ನೆನಪಿರುವುದಿಲ್ಲ” ಎಂದು ಬರೆದಿದ್ದಾರೆ.
Published by:Ashwini Prabhu
First published: