ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪ್ರತಿದಿನ ಹರಿದಾಡುವ ಸಾವಿರಾರು ಹೊಸ ಹೊಸ ವೀಡಿಯೋಗಳನ್ನು ನೋಡುವುದೇ ಒಂದು ಮಜಾ ಅಂತ ಹೇಳಬಹುದು. ಹೌದು, ಚಿಕ್ಕ ಮಕ್ಕಳ ತುಂಟಾಟಗಳಿಂದ ಹಿಡಿದು ಸಾಕು ಪ್ರಾಣಿಗಳ ಮುದ್ದಾದ ವೀಡಿಯೋಗಳು, ಮದುವೆ ಸಮಾರಂಭದಲ್ಲಿ ವಧು-ವರರು ಮಾಡುವ ಡ್ಯಾನ್ಸ್, ಕಾಡು ಪ್ರಾಣಿಗಳ ವೀಡಿಯೋಗಳು, ತಮಾಷೆಯ ವೀಡಿಯೋಗಳು ಮತ್ತು ಭಯ ಹುಟ್ಟಿಸುವ ಹಾವಿನ ವೀಡಿಯೋಗಳು (Vieo) ಹೀಗೆ ಒಂದೇ ಎರಡೇ, ಹೇಳುತ್ತಾ ಹೋದಂಗೆಲ್ಲಾ ಈ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಹೋಗುತ್ತದೆ ಅಂತ ಹೇಳಬಹುದು. ಇವೆಲ್ಲದರಲ್ಲಿ ಜನರ ಮನಸ್ಸಿಗೆ ಹೆಚ್ಚು ಮುದ ನೀಡುವ ವೀಡಿಯೋಗಳು ಎಂದರೆ ಮುದ್ದಾದ ಮಕ್ಕಳ ವೀಡಿಯೋ, ಸಾಕುಪ್ರಾಣಿಗಳ ತುಂಟಾಟದ ವೀಡಿಯೋಗಳು ಮತ್ತು ಈ ಡ್ಯಾನ್ಸ್ ವೀಡಿಯೋಗಳು ಅಂತ ಹೇಳಬಹುದು.
ಯಾವುದೇ ಮದುವೆ ಸಮಾರಂಭಕ್ಕೆ ಅಥವಾ ಹುಟ್ಟುಹಬ್ಬದ, ಮದುವೆ ವಾರ್ಷಿಕೋತ್ಸವದ ಚಿಕ್ಕ ಪಾರ್ಟಿ ಇದ್ದರೂ ಸಹ ಜನರು ತಮ್ಮ ಇಷ್ಟದ ಹಾಡಿಗೆ ಒಂದೆರಡು ಸ್ಟೆಪ್ಸ್ ಹಾಕಿಯೇ ಬಿಡುತ್ತಾರೆ. ಇಷ್ಟೇ ಅಲ್ಲದೆ ಅದರ ವೀಡಿಯೋ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಜನರು ಸಹ ನೋಡಿ ಆನಂದಿಸಲಿ ಅಂತ ಹಂಚಿಕೊಳ್ಳುತ್ತಾರೆ.
ಡ್ಯಾನ್ಸ್ ವೀಡಿಯೋಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ..
ನೀವು ಎಂತಹದೇ ವೀಡಿಯೋ ನೋಡಲು ಬಯಸಿದರೂ ಸಹ ಆ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತಿನ ದಿನಗಳಲ್ಲಿ ನೋಡಲು ಸಿಗುತ್ತದೆ. ಈ ವೈವಿಧ್ಯಮಯ ವಿಷಯಗಳ ನಡುವೆ, ಸಾಮಾಜಿಕ ಮಾಧ್ಯಮವು ಈ ಮದುವೆಗಳು ಮತ್ತು ಪಾರ್ಟಿಗಳಲ್ಲಿ ಜನರು ತಮ್ಮ ನೆಚ್ಚಿನ ಹಾಡಿಗೆ ಹೃದಯ ತುಂಬಿ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಸಂತೋಷದ ವಿಚಾರ.
ಕೆಲವರು ತಮ್ಮ ನೆಚ್ಚಿನ ಹಾಡಿಗೆ ತಮ್ಮದೇ ಆದ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಸಂಯೋಜಿಸಿಕೊಂಡು ಮಾಡಿದರೆ, ಇನ್ನೂ ಕೆಲವರು ಈ ವೈರಲ್ ಆದ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಅನುಕರಿಸುತ್ತಾರೆ ಅಂತ ಹೇಳಬಹುದು. ಇಲ್ಲೊಂದು ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ನೋಡಿ.
ಈ ತಂದೆ-ಮಗಳ ಜೋಡಿ ಮದುವೆಯಲ್ಲಿ ಹೇಗೆ ಮೋಡಿ ಮಾಡಿದೆ ನೋಡಿ..
ಅಲಿಸ್ಸಾ ಮೆಂಡೋನ್ಸಾ ಮತ್ತು ಶಂಕರ್ ಮಹಾದೇವನ್ ಅವರ ‘ಉಫ್ ತೇರಿ ಅದಾ’ ಹಾಡಿಗೆ ತಂದೆ-ಮಗಳು ಇಬ್ಬರು ಜೋಡಿಯಾಗಿ ಡ್ಯಾನ್ಸ್ ಮಾಡಿದ್ದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು.
ಈ ಹಾಡು ‘ಕಾರ್ತಿಕ್ ಕಾಲಿಂಗ್ ಕಾರ್ತಿಕ್’ ಎಂಬ ಹಿಂದಿ ಚಿತ್ರದ್ದು. ಇವರಿಬ್ಬರು ವೇದಿಕೆಯ ಮೇಲೆ ಹತ್ತಿ ಡ್ಯಾನ್ಸ್ ಮಾಡಲು ಶುರು ಮಾಡಿದಾಗ ಹೊಳೆಯುವ ಲೈಟ್ ಗಳು, ಪಟಾಕಿಗಳು ಅವರ ಡ್ಯಾನ್ಸ್ ಗೆ ಇನ್ನಷ್ಟು ಮೆರುಗು ತಂದು ಕೊಟ್ಟಿದೆ. ಈ ವೀಡಿಯೋವನ್ನು ಶಾದಿಬಿಟಿಎಸ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ತಂದೆ-ಮಗಳ ಡ್ಯಾನ್ಸ್ ನೋಡಿ ವಾವ್ ಎಂದ ನೆಟ್ಟಿಗರು..
ತಂದೆ ಮತ್ತು ಮಗಳ ಈ ಡ್ಯಾನ್ಸ್ ವೀಡಿಯೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ವಾವ್" ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿಯು "ಲವ್ ಲವ್" ಎಂದು ಹೇಳಿದರು. "ತುಂಬಾನೇ ಚೆನ್ನಾಗಿದೆ" ಎಂದು ಮೂರನೆಯವರು ಹೇಳಿದ್ದಾರೆ. ಇನ್ನೂ ಅನೇಕರು ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಬಳಸಿಕೊಂಡು ವೀಡಿಯೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ