ಸದ್ಯ ಸಾಮಾಜಿಕ ಮಾಧ್ಯಮದಲ್ಲಿ(Social Media) ವಿಡಿಯೋ ಒಂದು ವೈರಲ್(Viral Video) ಆಗುತ್ತಿದ್ದು, ಅದರಲ್ಲಿ ಶ್ವೇತ ವರ್ಣದ ಲೆಹೆಂಗಾ ತೊಟ್ಟ ಪುಟ್ಟ ಹುಡುಗಿಯೊಬ್ಬಳು ಮದುವೆ ಸಮಾರಂಭವೊಂದರಲ್ಲಿ(Wedding Ceremony) ಎತ್ತರವಾಗಿರುವ ತಮ್ಮ ತಂದೆಯ ಜೊತೆ ಸೇರಿಕೊಂಡು ಅಮರ್ ಜಲಾಲ್ ಗ್ರೂಪ್ ಹಾಗೂ ಫರೀದ್ ಕೋಟಿನ ಜನಪ್ರಿಯ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿರುವುದನ್ನು ನೋಡಬಹುದು.
ಇಂದಿನ ಸಭೆ-ಸಮಾರಂಭಗಳೆಂದರೇನೆ ಹಾಗೆ....ಮದುವೆ ಇರಲಿ, ರಿಸೆಪ್ಷನ್ ಇರಲಿ ಏನಾದರೊಂದು ವಿಶೇಷತೆ ಎಂಬುದು ಅಲ್ಲಿ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಶಕ್ತಿ ಗೊತ್ತಾದಾಗಿನಿಂದ ಸಾಕಷ್ಟು ಜನರು ಏನಾದರೊಂದು ವಿಶೇಷತೆಯನ್ನು ಮಾಡಿ ಅದನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಹಾಗಾಗಿ, ಇಂದಿನ ಸಾಮಾಜಿಕ ಮಾಧ್ಯಮಗಳ ಮೇಲೆ ಒಂದೊಮ್ಮೆ ಕಣ್ಣಾಡಿಸಿ ಸಾಕು, ನಿಮಗೆ ಹಲವು ಬಗೆಯ ವಿಶಿಷ್ಟ ವಿಡಿಯೋಗಳು ನಿತ್ಯ ಸಿಗುತ್ತಲೇ ಇರುತ್ತವೆ.
ಅದ್ರಲ್ಲೂ ಪ್ರಾಣಿಗಳ ವಿಶೇಷತೆ ಇರುವ, ಮಕ್ಕಳ ಪ್ರತಿಭೆಗಳು ಅನಾವರಣಗೊಂಡಿರುವ ಹಾಗೂ ಅದ್ಭುತವಾಗಿ ನೃತ್ಯ ಮಾಡಿರುವ ನೂರಾರು ವಿಡಿಯೋಗಳು ಕಾಣಸಿಗುತ್ತವೆ. ಅಲ್ಲದೆ, ವಿಡಿಯೋ ಅದ್ಭುತವಾಗಿದ್ದಾಗ ಜನರಿಂದ ಅವು ಹಂಚಲ್ಪಡುತ್ತ ಬೇಗನೆ ವೈರಲ್ ಕೂಡ ಆಗುತ್ತವೆ.
ಸದ್ಯ ಈಗ ವೈರಲ್ ಆಗಿರುವ ವಿಡಿಯೋ ಒಂದು ಅದ್ಭುತವಾದ ಡ್ಯಾನ್ಸ್ ಅನ್ನು ನಿಮಗೆ ಉಣಬಡಿಸುತ್ತದೆ. ನೀವು ಯಾವುದಾದರೂ ಸಮಾರಂಭದಲ್ಲಿ ಅಥವಾ ಮದುವೆಯ ಸಂಗೀತ್ ಕಾರ್ಯಕ್ರಮದಲ್ಲಿ ಕುಣಿಯುವ ಹುಮ್ಮಸ್ಸಿನಲ್ಲಿದ್ದರೆ ಈ ವಿಡಿಯೋ ನಿಜಕ್ಕೂ ನಿಮಗೆ ನೆರವಾಗಬಹುದು.
ವಿಡಿಯೋದಲ್ಲಿ, ಪಾಕಿಸ್ತಾನಿ ತಂದೆ ಹಾಗೂ ಮಗಳು ಇಬ್ಬರೂ ಸೇರಿ ಅದ್ಭುತವಾದ ಸ್ಟೆಪ್ ಗಳನ್ನು ಹಾಕಿರುವುದನ್ನು ನೋಡಬಹುದಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಮದುವೆಗಳಲ್ಲಿ ಬಾಲಿವುಡ್ ಸಂಗೀತಕ್ಕೆ ಎಲ್ಲರೂ ಕುಪ್ಪಳಿಸುತ್ತ ಕುಣಿಯುವುದನ್ನು ನೋಡುತ್ತೇವೆ. ಈ ವಿಷಯದಲ್ಲಿ ಪಾಕಿಸ್ತಾನವೂ ಹೊರತಾಗಿಲ್ಲ ಎಂದಷ್ಟೇ ಹೇಳಬಹುದು.
ಹವಾ ಎಬ್ಬಿಸುತ್ತಿರುವ ವಿಡಿಯೋ
ವಸಿಲಾ ಎಂಬ ಮದುವೆ ಚಿತ್ರಣ ವ್ಯವಹಾರ ಹೊಂದಿರುವ ಸ್ಟುಡಿಯೋ, ಈ ಒಂದು ಕ್ಲಿಪ್ಪನ್ನು ಹಂಚಿಕೊಂಡಿದ್ದು ಸದ್ಯ ಅದು ಇಂಟರ್ನೆಟ್ ಬಳಕೆದಾರರ ಸಾಕಷ್ಟು ಗಮನಸೆಳೆಯುತ್ತಿದೆ. ಕ್ಲಿಪ್ ನಲ್ಲಿ ಅದ್ದೂರಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದಾಗ ವೇದಿಕೆಯ ಮೇಲೆ ಪುಟ್ಟ ಹುಡುಗಿಯೊಬ್ಬಳು ಫಳಫಳಿಸುವ ಬೆಳ್ಳಿ ಬಣ್ಣದ ಲೆಹೆಂಗಾ ತೊಟ್ಟು ತನ್ನ ಅಪ್ಪನ ಜೊತೆ ಸೇರಿಕೊಂಡು ಬರುತ್ತಾಳೆ.
View this post on Instagram
ಈ ಸಂದರ್ಭದಲ್ಲಿ ಅಪ್ಪ-ಮಗಳ ಜೋಡಿಯು ಫರೀದ್ಕೋಟಿನ ಜನಪ್ರಿಯ ಹಾಗೂ ಅಮರ್ ಜಲಾಲ್ ಗ್ರೂಪ್ಪಿನ "ಜೆಹ್ದಾ ನಶಾ" ಎಂಬ ಗೇತೆಗೆ ನೃತ್ಯ ಮಾಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಲತಾ ಮಂಗೇಶ್ಕರ್ ಅವರ ದಿಲ್ ಯೆ ಪುಕಾರೆ ಎಂಬ ಗೀತೆಗೆ ಸ್ಟೆಪ್ ಹಾಕಿದ್ದು ಅದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಿಂದ ಪ್ರಭಾವಿತವಾಗಿ ಇತ್ತೀಚೆಗೆ ಸಾಕಷ್ಟು ಜನರು ಈ ರೀತಿಯ ಸ್ಟೆಪ್ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ 80 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಇನ್ನು ಈ ಅಪ್ಪ-ಮಗಳ ಜೋಡಿ ಕೇವಲ ನೃತ್ಯ ಮಾಡಿದ್ದಲ್ಲದೆ, ಎಲ್ಲ ಬಂಧು-ಬಳಗದ ಮುಂದೆ ಸಾಹಸಮಯ ಸ್ಟೆಪ್ ಗಳನ್ನೂ ಸಹ ಹಾಕಿ ಎಲ್ಲರಿಂದಲೂ ಹರ್ಷೋದ್ಗಾರವನ್ನು ಪಡೆದರು.
ಇದನ್ನೂ ಓದಿ: Viral Story: ಮುದ್ದು ನಾಯಿಗೆ ವಿಮಾನದಲ್ಲಿಲ್ವಂತೆ ಪ್ರವೇಶ! ಫ್ಲೈಟ್ ಜರ್ನಿಯನ್ನೇ ಕ್ಯಾನ್ಸಲ್ ಮಾಡಿದ ಫ್ಯಾಮಿಲಿ!
ಒಟ್ಟಿನಲ್ಲಿ ಈ ಸಾಮಾಜಿಕ ಮಾಧ್ಯಮಗಳು ಇಂದು ಸಾಕಷ್ಟು ಆಕರ್ಷಣೆಯ ಮಾಧ್ಯಮಗಳಾಗಿದ್ದು ನಿತ್ಯವೂ ಏನಾದರೊಂದು ವಿಶೇಷತೆ ಇದ್ದೆ ಇರುತ್ತದೆ. ನಿಮಗೆ ಡ್ಯಾನ್ಸ್ ನೋಡುವ ಅಥವಾ ಕಲಿಯುವ ಮನಸ್ಸಿದ್ದರೆ ಈ ವಿಡಿಯೋ ನಿಮ್ಮ ಬಯಕೆಯನ್ನು ಈಡೇರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ