Viral Video: ಪುಟ್ಟ ಮಗನಲ್ಲಿ ರೆಸ್ಟೋರೆಂಟ್​ನ ಬಿಲ್ ಪಾವತಿಸುವಂತೆ ಹೇಳಿದ ತಂದೆ! ನಗು ತರಿಸುವಂತಹ ಉತ್ತರ ನೀಡಿದ ಮಗ

ಈಗಂತೂ ಪೋಷಕರು ತಮ್ಮ ಮಕ್ಕಳ ಸಣ್ಣ ಸಣ್ಣ ತುಂಟಾಟ, ಮಾತಿನ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಹಾಗೆ ಇಲ್ಲೊಬ್ಬ ಪೋಷಕರು ತಮ್ಮ ಮಗನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಂದೆ, ತನ್ನ ಪುಟ್ಟ ಮಗನಿಗೆ ರೆಸ್ಟೋರೆಂಟ್ ಬಿಲ್ ಪಾವತಿಸಲು ಹೇಳುತ್ತಾನೆ. ಅದಕ್ಕೆ ಆ ಬಾಲಕ ಹೇಗೆ ಪ್ರತಿಕ್ರಿಯಿಸಿದ್ದಾನೆ ಎಂಬುವುದನ್ನು ಹಂಚಿಕೊಳ್ಳಲಾದ ವಿಡಿಯೋದಲ್ಲಿ ನಾವು ಕಾಣಬಹುದು.

ಮಗನಲ್ಲಿ ರೆಸ್ಟೋರೆಂಟ್‌ನ ಬಿಲ್ ಪಾವತಿಸುವಂತೆ ಹೇಳಿದ ತಂದೆ

ಮಗನಲ್ಲಿ ರೆಸ್ಟೋರೆಂಟ್‌ನ ಬಿಲ್ ಪಾವತಿಸುವಂತೆ ಹೇಳಿದ ತಂದೆ

  • Share this:
ಮುಗ್ದತೆಗೆ ಮತ್ತೊಂದು ಹೆಸರೇ ಈ ಮಕ್ಕಳು (Children). ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ ಮಕ್ಕಳು ಒಂದೊಂದು ಸಾರಿ ಮುಗ್ದವಾಗಿಯೇ (Innocent) ಬಾಯಿ ಮೇಲೆ ಬೆರಳಿಡುವಂತೆ ಮಾತನಾಡುತ್ತಾರೆ. ಈಗಿನ ಕಾಲದ ಮಕ್ಕಳಂತೂ ತುಂಬಾನೇ ಚೂಟಿ, ಬೆರಳು ಕೊಟ್ಟರೆ ಹಸ್ತ ನುಂಗುವಷ್ಟು ಬುದ್ಧಿವಂತರು (intelligent). ದೊಡ್ಡವರು ಕೀಟಲೆ ಮಾಡಿದರೆ ಮುದ್ದು ಮುದ್ದಾಗಿಯೇ ಅವರಿಗೆ ಸರಿಯಾದ ಜಾಣತನದ ಮಾತಿನ ಪೆಟ್ಟು ಕೊಡುತ್ತಾರೆ. ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ತುಂಬಾ ಚಾಣಾಕ್ಷರು. ಅವರಿಗೆ ಗ್ರಹಿಸುವ ಶಕ್ತಿ (Perceptive power), ಕಲಿಯುವ ಮನೋಭಾವ ಎಲ್ಲವೂ ತುಸು ಹೆಚ್ಚಾಗಿಯೇ ಇರುತ್ತದೆ. ಅಂತೆಯೇ ಮಾತಿನಲ್ಲೂ ಸಹ ಬಹಳ ಮುಂದಿರುತ್ತಾರೆ.

ಪುಟ್ಟ ಮಗನಿಗೆ ರೆಸ್ಟೋರೆಂಟ್ ಬಿಲ್ ಪಾವತಿಸುವಂತೆ ಹೇಳಿದ ತಂದೆ
ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಬುದ್ಧಿವಂತಿಕೆ, ಮುಗ್ಧತೆ ತೋರಿಸುವ ಅನೇಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಮಕ್ಕಳ ಮುದ್ದಾದ ವಿಡಿಯೋ ಅಂದರೆ ಕೇಳಬೇಕೆ, ಫೋನ್ ಅನ್ನು ಒಮ್ಮೆ ಸ್ಕ್ರೋಲ್ ಮಾಡುವ ಮುಂಚೆ ಪುಟಾಣಿಗಳ ವಿಡಿಯೋ ನೋಡುತ್ತೇವೆ. ಅಷ್ಟು ಮುದ್ದಾಗಿ, ಹಿತವಾಗಿ ಇರುತ್ತವೆ ಈ ವಿಡಿಯೋಗಳು. ಈಗಂತೂ ಪೋಷಕರು ತಮ್ಮ ಮಕ್ಕಳ ಸಣ್ಣ ಸಣ್ಣ ತುಂಟಾಟ, ಮಾತಿನ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಹಾಗೆ ಇಲ್ಲೊಬ್ಬ ಪೋಷಕರು ತಮ್ಮ ಮಗನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  7 ವರ್ಷದ ಬಾಲಕ Zomato ಡೆಲಿವರಿ ಬಾಯ್​, ವಿಡಿಯೋದಲ್ಲಿ ಬಯಲಾಯ್ತು ನೋವಿನ ಕತೆ!

@dereklipp ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ತಂದೆ, ತನ್ನ ಪುಟ್ಟ ಮಗನಿಗೆ ರೆಸ್ಟೋರೆಂಟ್ ಬಿಲ್ ಪಾವತಿಸಲು ಹೇಳುತ್ತಾನೆ. ಅದಕ್ಕೆ ಆ ಬಾಲಕ ಹೇಗೆ ಪ್ರತಿಕ್ರಿಯಿಸಿದ್ದಾನೆ ಎಂಬುವುದನ್ನು ಹಂಚಿಕೊಳ್ಳಲಾದ ವಿಡಿಯೋದಲ್ಲಿ ನಾವು ಕಾಣಬಹುದು.

ವಿಡಿಯೋದಲ್ಲಿ ಏನಿದೆ?
ತಂದೆ ಮತ್ತು ಮಗ ಇಬ್ಬರು ರೆಸ್ಟೋರೆಂಟ್‌ನಲ್ಲಿ ಊಟವನ್ನು ಆನಂದಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ವಾಡಿಕೆಯಂತೆ ಊಟ ಎಲ್ಲಾ ಆದ ಮೇಲೆ ಹೋಟೆಲ್ ಸಿಬ್ಬಂದಿ ಬಿಲ್ ತಂದು ನೀಡುತ್ತಾರೆ. ತಂದೆ ಆ ಬಿಲ್ ಅನ್ನು ಮಗನ ಕೈಗೆ ನೀಡಿ ನೀನು ಈ ಬಿಲ್ ಅನ್ನು ಕಟ್ಟಬಹುದೇ?, ನಿನ್ನ ಬಳಿ ಹಣವಿದೆಯೇ ಎನ್ನುತ್ತಾನೆ. ಈಗ್ಲೇ ನೋಡಿ ತಮಾಷೆ ಇರೋದು. ಪುಟ್ಟ ಹುಡುಗ ಅಪ್ಪನ ಕೈಯಿಂದ ಬಿಲ್ ತೆಗೆದುಕೊಂಡು ಒಂದು ಕ್ಷಣ ಕಂಗಾಲಾಗಿ, ಗೊಂದಲಕ್ಕೊಳಗಾಗಿರುವಂತೆ ಕಾಣುತ್ತಾನೆ. ಮತ್ತೆ ಅವನ ತಂದೆ “ನಾನು ನಿನ್ನನ್ನು ಬಿಲ್ ಪಾವತಿಸಲು ಕೇಳುತ್ತಿದ್ದೇನೆ. ನಿಮ್ಮ ಬಳಿ ಹಣವಿದೆಯೇ?, ಈ ಬಾರಿ ಬಿಲ್ ಪಾವತಿಸುವ ಸರದಿ ನಿನ್ನದು” ಎನ್ನುತ್ತಾನೆ. ಮತ್ತೆ ಯೋಚನೆ ಮಾಡಿದ ಬಾಲಕ ಜಾಣತನದಿಂದ ಅಪ್ಪನಿಗೆ ಉತ್ತರ ನೀಡುತ್ತಾನೆ.










View this post on Instagram






A post shared by Derek Lipp (@dereklipp_)




ಅಪ್ಪನಿಗೆ ಜಾಣತನದಿಂದ ಉತ್ತರಿಸಿದ ಮಗ
ರೆಸ್ಟೋರೆಂಟ್ ಬಿಲ್ ಹಿಡಿದು ಕುಳಿತಿದ್ದ ಬಾಲಕನಿಗೆ ನೀನು ಬಿಲ್ ಪಾವತಿಸುತ್ತೀಯಾ ಎಂದು ಮತ್ತೆ ಮತ್ತೆ ಕೇಳಿದಾಗ, ಹುಡುಗ ಅಪ್ಪನಿಗೆ "ನೀವು ಈಗ ಹಣ ಕೊಡಿ, ಮನೆಗೆ ಹೋದ ಮೇಲೆ ನಾನು ನಿಮಗೆ ಹಣ ಕೊಡುತ್ತೇನೆ" ಎಂದು ಹೇಳುತ್ತಾನೆ. ಮಗನ ಉತ್ತರ ಕೇಳಿ ತಂದೆ ಜೋರಾಗಿ ನಗುವುದನ್ನು ವಿಡಿಯೋದಲ್ಲಿ ಕೇಳಬಹುದು. ನಂತರ ಮಗನ ಬುದ್ಧಿವಂತಿಕೆಯ ಮಾತುಗಳನ್ನು ಕೇಳಿದ ತಂದೆ ನಾನು ತಮಾಷೆ ಮಾಡಿದೆ ಎಂದು ನಗುತ್ತಾನೆ.

ಇದನ್ನೂ ಓದಿ:  Sahib Singh: ಬರ್ಬೆರಿ ಫ್ಯಾಶನ್‌ ಹೌಸ್‌ನ ಮೊದಲ ಸಿಖ್ ಮಾಡೆಲ್ ಈ 4 ವರ್ಷದ ಪೋರ

ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದಾಗಿನಿಂದ, 7.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು 298K ಲೈಕ್ಸ್ ಮತ್ತು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಪುಟ್ಟ ಬಾಲಕನ ಪ್ರತಿಕ್ರಿಯೆಗೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವನು ತಂದೆಗೆ ಉತ್ತರಿಸಲು ಉತ್ತರ ಹುಡುಕುತ್ತಿದ್ದಾನೆ, ಮಕ್ಕಳು ಅಕ್ಷರಶಃ ಬುದ್ಧಿವಂತರು, ಹಣವಿಲ್ಲದಿದ್ದರೂ ಅವನು ಆ ಬಿಲ್ ತೆಗೆದುಕೊಳ್ಳುವ ಮತ್ತು ನಿರ್ವಹಿಸುವ ರೀತಿ ಉತ್ತಮ ಪೋಷಕರನ್ನು ಸೂಚಿಸುತ್ತದೆ, ತುಂಬಾ ಮುದ್ದಾಗಿದೆ ಎಂದು ಹೀಗೆ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: