Viral Video: ಸೆಕೆಂಡ್​ ಹ್ಯಾಂಡ್ ಸೈಕಲ್ ತಗೊಂಡ ಅಪ್ಪ-ಮಗನ ಖುಷಿ ನೋಡಿ!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ ನಂತರ ವ್ಯಕ್ತಿಯೊಬ್ಬರು ಮತ್ತು ಅವರ ಮಗನ ಅಮೂಲ್ಯ ಪ್ರತಿಕ್ರಿಯೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೈರಲ್ ಕ್ಲಿಪ್ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಸೈಕಲ್ ಪೂಜೆ ಮಾಡುತ್ತಿರುವ ತಂದೆ-ಮಗ

ಸೈಕಲ್ ಪೂಜೆ ಮಾಡುತ್ತಿರುವ ತಂದೆ-ಮಗ

  • Share this:
ಕಷ್ಟಪಟ್ಟು ಖರೀದಿಸಿದ ವಸ್ತುಗಳಿಗೆ  ಹೆಚ್ಚಿನ ಬೆಲೆ ಇರುತ್ತದೆ. ಕಷ್ಟಪಟ್ಟು ಗಳಿಸಿದ್ದು, ಪಡೆದದ್ದೂ ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಮೌಲ್ಯಗಳಿರುತ್ತವೆ. ಅವು ವಿಶೇಷ ಖುಷಿಯನ್ನು, ಸಂತೋಷವನ್ನು (Happy) ತುಂಬಿಕೊಂಡಿರುವ ಸಂಗತಿಗಳು. ಮನಸಿಗೆ ಆಪ್ತ ಮತ್ತು ಅಗಾಧ ಪ್ರೀತಿ ಸಂಭ್ರಮ, ಸಂತೃಪ್ತಿಯನ್ನೂ ನೀಡುತ್ತವೆ. ಇಲ್ಲೊಂದು ಕಡೆ ತಂದೆ ಹಾಗೂ ಮಗ ಸೆಕೆಂಡ್ ಹ್ಯಾಂಡ್ ಸೈಕಲ್ (Cycle) ಖರೀದಿಸಿ ಸಂಭ್ರಮಿಸಿದ್ದಾರೆ. ಇವರ ಚಿಕ್ಕ ಸಂಭ್ರಮ ಸೋಷಿಯಲ್ ಮೀಡಿಯಾ (Social Media) ಮಂದಿಗೆ ಖುಷಿಯ ದೊಡ್ಡ ಅರ್ಥವನ್ನು ತಿಳಿಸಿಕೊಟ್ಟಿದೆ. ಈ ವಿಡಿಯೋ (Video) ಈಗ ಎಲ್ಲೆಡೆ ವೈರಲ್ ಆಗಿದ್ದು ನೆಟ್ಟಿಗರನ್ನು ಇದನ್ನು ಎಲ್ಲೆಡೆ ಶೇರ್ ಮಾಡಿಕೊಂಡು ಕಮೆಂಟ್ ಮಾಡುತ್ತಿದ್ದಾರೆ.

ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ದೊಡ್ಡ ವಿಚಾರ. ಅದನ್ನು ಯಾವಾಗಲೂ ಪಾಲಿಸಬೇಕು. ನಾವು ಇದ್ದಕ್ಕಿದ್ದಂತೆ ಈ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬೇಕು.

ಸಂತೋಷದಿಂದ ಜಿಗಿಯುವ ಹುಡುಗ

ಐಎಎಸ್ ಅಧಿಕಾರಿ ಅವನೀಶ್ ಶರಣ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಚಿಕ್ಕ ಹುಡುಗ ತನ್ನ ತಂದೆ ಮನೆಗೆ ಸೆಕೆಂಡ್ ಹ್ಯಾಂಡ್ ಸೈಕಲ್ ತೆಗೆದುಕೊಂಡು ಬಂದಾಗ ಸಂತೋಷದಿಂದ ಜಿಗಿಯುತ್ತಿರುವುದನ್ನು ಕಾಣಬಹುದು. ಕ್ಲಿಪ್ ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಸೈಕಲ್​ಗೆ ಅಪ್ಪ ಮಗನ ಪೂಜೆ

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೊಸ ಸೆಕೆಂಡ್ ಹ್ಯಾಂಡ್ ಸೈಕಲ್‌ಗೆ ಹಾರ ಹಾಕಿ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಎಲ್ಲಾ ಸಮಯದಲ್ಲಿ, ಅವರ ಮಗ ಸಂತೋಷದಿಂದ ಮೇಲಕ್ಕೆ ಮತ್ತು ಕೆಳಗೆ ಜಿಗಿಯುವುದನ್ನು ಕಾಣಬಹುದು. ಚಿಕ್ಕವನೂ ತನ್ನ ತಂದೆಯೊಂದಿಗೆ ಸೈಕಲ್‌ಗೆ ಪೂಜೆ ಸಲ್ಲಿಸಿದ ಕ್ಷಣವು ಕೇವಲ ಹೃದಯಸ್ಪರ್ಶಿಯಾಗಿದೆ.





“ಇದು ಕೇವಲ ಸೆಕೆಂಡ್ ಹ್ಯಾಂಡ್ ಬೈಸಿಕಲ್. ಅವರ ಮುಖದಲ್ಲಿನ ಸಂತೋಷವನ್ನು ನೋಡಿ.  ಅವರು ಹೊಸ ಮರ್ಸಿಡಿಸ್ ಬೆಂಜ್ ಖರೀದಿಸಿದ್ದಾರೆ ಅವರ ಅಭಿವ್ಯಕ್ತಿ ಹೇಳುತ್ತದೆ, ”ಎಂದು ಪೋಸ್ಟ್‌ ಗೆ ಕ್ಯಾಪ್ಶನ್ ನೀಡಲಾಗಿದೆ.

3 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಸರಳವಾಗಿ ಸಂತೋಷಪಟ್ಟಿದ್ದಾರೆ. ತಂದೆ-ಮಗನ ಸಂತೋಷದಿಂದ ಭಾವುಕರಾಗಿದ್ದಾರೆ. “ಮಗುವಿನ ಸಂತೋಷವು ತುಂಬಾ ಅದ್ಭುತವಾಗಿದೆ. ನನ್ನ ದಿನ ಸಂಪೂರ್ಣವಾಯ್ತು. ಧನ್ಯವಾದಗಳು ಎಂದು ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: Cashew Shaped Egg: ಗೋಡಂಬಿ ಆಕಾರದ ಮೊಟ್ಟೆ ಇಟ್ಟ ಕೋಳಿ, ಫೋಟೋಸ್ ವೈರಲ್

ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, ಇದು ಸ್ವರ್ಗೀಯವಾಗಿದೆ. ದೇವರು ಅವರಿಗೆ ಜೀವನದಲ್ಲಿ ಹೆಚ್ಚು ನಗು ಮತ್ತು ಸಂತೋಷವನ್ನು ನೀಡಲಿ ಎಂದು ಬರೆದಿದ್ದಾರೆ.

ಮೌಸ್ ಹಿಡಿದು ಮೊಬೈಲ್ ಎಂದುಕೊಂಡಿದ್ದ ಪುಟ್ಟ ಹುಡುಗಿ

ಪುಟ್ಟ ಮಗಳಿಗೆ ಮೌಸ್ ಹಿಡಿಯಲು ತಂದೆ ಹೇಳಿಕೊಡುತ್ತಿದ್ದರೆ, ಮಗಳು ಅದನ್ನು ಮೊಬೈಲ್ (Mobile) ಎಂದೇ ಭಾವಿಸುತ್ತಾಳೆ. ಇದೊಂಥರಾ ಮಜವಾಗಿರುವ ವಿಡಿಯೋ ಆಗಿದ್ದು ನೆಟ್ಟಿಗರು ಮಗುವಿನ ಮುಗ್ಧತೆಗೆ ಫಿದಾ ಆಗಿದ್ದಾರೆ. ಕಂಪ್ಯೂಟರ್ (Computer) ಸೆಟಪ್ ಅನ್ನು ಹೊಂದಿರುವ ತಂದೆ ತನ್ನ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ತನ್ನ ಪುಟ್ಟ ಮಗಳನ್ನು ಜೊತೆ ಕೂರಿಸಿಕೊಂಡಿರುತ್ತಾರೆ. ಈ ಚಂದದ Instagram ವೀಡಿಯೊದಲ್ಲಿ ಏನಾಗುತ್ತದೆ ಎಂಬುದು ಜನರನ್ನು ನಗುವಂತೆ ಮಾಡುತ್ತದೆ.

ಇದನ್ನೂ ಓದಿ: Python Story: ಹೆಬ್ಬಾವು ಮೊಟ್ಟೆಗಳ ಮರಿ ಮಾಡಲು 50 ದಿನ ಹೈವೇ ಕಾಮಗಾರಿಯೇ ಸ್ಟಾಪ್!

ನಿಮ್ಮ ಮೇಲೆ ಅದೇ ಪರಿಣಾಮವನ್ನು ಬೀರುತ್ತದೆ. ಈ ವ್ಯಕ್ತಿಯು ಕಂಪ್ಯೂಟರ್ ಮಾನಿಟರ್‌ನ ಮುಂದೆ ತನ್ನ ಮಗಳನ್ನು ತನ್ನ ತೊಡೆಯ ಮೇಲೆ ಕೂರಿಸುತ್ತಿರುವುದನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ಪುಟ್ಟ ಹುಡುಗಿ ತನ್ನ ತಂದೆಯ ಕೆಲಸದ ಮೇಜಿನ ಸುತ್ತಲೂ ಆಸಕ್ತಿಯಿಂದ ನೋಡುತ್ತಾಳೆ.
Published by:Divya D
First published: