ಚಳಿಗಾಲ(Winter) ಅಂದ್ರೆ ಎಲ್ಲರಿಗೂ ಅಸಡ್ಡೆಯ ಕಾಲ.. ಒಮ್ಮೆ ಮಲಗಿದ್ದೆ ಬೆಚ್ಚಗೆ ಯಾವಾಗಲೂ ಹೊಂದುಕೊಂಡು ಮಲಗಿ ಇರಬೇಕು ಎನ್ನುವ ಅನುಭವ ನೀಡುವ ಕಾಲ.. ಇಂತಹ ಚಳಿಗಾಲದಲ್ಲಿ ಬೇರೆ ಕಾಲದ ರೀತಿ ಸೂರ್ಯನ(Sun) ಕಿರಣಗಳು(Sunlight) ಮೈ ಚುಂಬಿಸಿದರೂ ಹಾಸಿಗೆ ಬಿಟ್ಟೇಳಲು ಆಗದ ಪರಿಸ್ಥಿತಿ. ಆಫೀಸು ನೆನಪಾದೊಡನೆ ಕೈಗೆ ಸಿಕ್ಕ ಉಡುಪು(Dress) ಧರಿಸಿ ಹೊರಡುವಂತಿಲ್ಲ. ಸಂಜೆ(Evening) ಬರುವ ವೇಳೆಗೆ ಚಳಿ ಪ್ರಾರಂಭವಾಗಿರುತ್ತದೆ. ಒಂದರ ಮೇಲೆ ಒಂದು ಬಟ್ಟೆ ಹಾಕಿಕೊಳ್ಳಲು ಕಿರಿಕಿರಿ.ಉಣ್ಣೆ ಬಟ್ಟೆ ಹಾಕಿಕೊಂಡು ಹೋದರೆ ಮೈ ನವೆ ಆಗುವುದಂತೂ ಖಂಡಿತ. ಆಸೆಯಿಂದ ಆರಿಸಿ ತಂದ ಫ್ಯಾಷನ್ ಉಡುಪುಗಳು ಚಳಿಗಾಲದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂಬ ಸಂಕಟ... ಜೊತೆಗೆ ನಾವು ಹಾಕುವ ಬಟ್ಟೆಗಳಿಂದ ನಮ್ಮ ಚರ್ಮವನ್ನು ಕಾಪಾಡಿಕೊಳ್ಳುವ ಸ್ಥಿತಿ ಚಳಿಗಾಲದಲ್ಲಿ ಇರುತ್ತದೆ.. ಇದಾಗಿ ಚಳಿಗಾಲಕ್ಕೆ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಅನ್ನು ಅರಿವು ಎಷ್ಟೋ ಜನಕ್ಕೆ ಇರುವುದಿಲ್ಲ.ಹೀಗಾಗಿ ಚಳಿಗಾಲದಲ್ಲಿ ಯಾವ ರೀತಿಯ ಉಡುಪುಗಳನ್ನು ಧರಿಸಬೇಕು ಅನ್ನೋ ಮಾಹಿತಿ ಇಲ್ಲಿದೆ..
1) 3 ಲೇಯರ್ ಬಟ್ಟೆ ಧರಿಸಿ : ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚು ಬಟ್ಟೆಗಳನ್ನು ಧರಿಸುವುದು ಕಷ್ಟ.. ಆದರೆ ಚಳಿಗಾಲದಲ್ಲಿ ಬಟ್ಟೆ ಎಷ್ಟೇ ದಪ್ಪ ಇದ್ದರೂ ಸಹ ಅದು ನಮಗೆ ಹೆಚ್ಚು ಚಳಿಯನ್ನು ತಂದು ನೀಡುತ್ತದೆ..ಹೀಗಾಗಿ ಚಳಿಗಾಲದಲ್ಲಿ 3 ಲೇಯರ್ ಗಳ ಬಟ್ಟೆ ಧರಿಸುವುದು ಉತ್ತಮ.. ನೀವು ಸಾಮಾನ್ಯವಾಗಿ ಧರಿಸುವ ಬಟ್ಟೆಗಳ ಜೊತೆಗೆ ಕೋಟ್ ಹಾಗೂ ಸ್ಪೇಟರ್ ನಂತಹ ವಸ್ತು ಬಳಸುವುದು ಉತ್ತಮ.
ಇದನ್ನೂ ಓದಿ :ಚಳಿಗಾಲದಲ್ಲಿ ಚರ್ಮದಷ್ಟೇ ಕೂದಲಿನ ಆರೈಕೆಯ ಕಡೆ ಇರಲಿ ಗಮನ
2) ನೀವು ಧರಿಸುವ ಬಟ್ಟೆ ಬಿಗಿಯಾಗಿ ಇರುವಂತೆ ನೋಡಿಕೊಳ್ಳಿ : ಬೇಸಿಗೆ ಕಾಲದಲ್ಲಿ ಆದರೆ ನಾವು ಗಾಳಿಯಾಡುವ ತೆಳು ಬಟ್ಟೆಗಳನ್ನು ಧರಿಸಬಹುದು.. ಆದರೆ ಈ ತಪ್ಪನ್ನು ಚಳಿಗಾಲದಲ್ಲಿ ಮಾಡಲು ಆಗುವುದಿಲ್ಲ... ಚಳಿಗಾಲದಲ್ಲಿ ದೇಹವನ್ನು ಬಿಗಿಯಾಗಿ ಹಿಡಿದು ಇಟ್ಟುಕೊಳ್ಳುವ ಬಟ್ಟೆಗಳನ್ನು ಧರಿಸುವುದು ಸೂಕ್ತ.
3)ಕೋಟ್ ಗಳನ್ನ ಧರಿಸಿ : ಗುಂಡಿ ಇರುವ ಟ್ರೆಂಟ್ ಕೋಟ್ಸ್ ಮತ್ತು ಬೆಲ್ಟ್ ಚಳಿಗಾಲದಲ್ಲಿ ಹೆಚ್ಚು ಫ್ಯಾಷನ್ ಆಗಿದೆ. ಇದು. ಕಡು ವರ್ಣದ ಈ ಕೋಟುಗಳು ಪ್ಯಾಂಟು, ಸ್ಕರ್ಟ್ ಮೇಲೆ ಧರಿಸಿದರೆ ಚೆಂದ. ನೀಲಿ ಕೆಂಪು, ಹಸಿರು ಬಣ್ಣದ ಟ್ರಿಂಚ್ ಕೋಟ್ಸ್ ಇಂದಿನ ಟ್ರೆಂಡ್.
4)ಸ್ಪೆಟರ್ : ತೆಳುವಾದ ಕಾಟನ್ ಬಟ್ಟೆ ಧರಿಸಿ ಅದರ ಮೇಲೆ ಸ್ವೆಟರ್ ಹಾಕಿಕೊಳ್ಳಬಹುದು. ಟೀಶರ್ಟ್ ಒಳಗೆ ಹಾಕಿ ಮೇಲೆ ಸ್ವೇಟರ್ ಹಾಕುವುದಾದರೆ ಅರ್ಧ ತೋಳಿನ ಸ್ವೆಟರ್ ಹಾಕಿಕೊಳ್ಳಿ. ಚೆಕ್ಸ್ ಸ್ವೆಟರ್ ಗಳು ಮಾರುಕಟ್ಟೆಯಲ್ಲಿ ತೆಳುವರ್ಣದ ಬಣ್ಣಗಳಲ್ಲಿ ದೊರಕುತ್ತವೆ.
5) ಉಣ್ಣೆ ಬಟ್ಟೆಗಳನ್ನು ಬಳೆಸಿ :ಚಳಿಗಾಲದಲ್ಲಿ ಸಾಮಾನ್ಯವಾದ ಬಟ್ಟೆ ಗಳಿಗಿಂತ ಉಣ್ಣೆ ಬಟ್ಟೆಗಳನ್ನು ತೊಡುವುದು ಸೂಕ್ತ.. ಮೆರಿನೊ ಮತ್ತು ಕ್ಯಾಶ್ಮೀರ್ ಉಣ್ಣೆಯು ಬಟ್ಟೆಗಳು ಸದಾ ನಮ್ಮನ್ನ ಬೆಚ್ಚಗೆ ಇರುವಂತೆ ಮಾಡುತ್ತವೆ. ಜೊತೆಗೆ ಸದಾ ಟ್ರೆಂಡಿಯಾಗಿವೆ ಕೂಡ ಕಾಣುವಂತೆ ಬಟ್ಟೆಗಳು ಮಾಡುತ್ತವೆ..
ಇದನ್ನೂ ಓದಿ :ಚಳಿಗಾಲದಲ್ಲಿ ಸೋಮಾರಿತನ ಕಾಡ್ತಾ ಇದ್ರೆ ಈ 5 ಟ್ರಿಕ್ಸ್ ಫಾಲೋ ಮಾಡಿ ತೂಕ ಇಳಿಸಿ
6)ಯಾವುದೇ ಕಾರಣಕ್ಕೂ ಹತ್ತಿ ಬಟ್ಟೆ ಧರಿಸಬೇಡಿ :ಸಾಮಾನ್ಯವಾಗಿ ಬೇಸಿಗೆ ಕಾಲಕ್ಕೆ ಹತ್ತಿ ಬಟ್ಟೆಗಳು ಹೇಳಿ ಮಾಡಿಸಿದ ಉಡುಪುಗಳು.. ಆದ್ರೆ ಹತ್ತಿ ಬಟ್ಟೆಗಳು ತೇವಾಂಶವನ್ನು ಬೇಗ ಹೀರಿಕೊಳ್ಳುವುದರಿಂದ ಚಳಿಗಾಲದಲ್ಲಿ ಇವುಗಳನ್ನು ಧರಿಸುವುದರಿಂದ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.ಹೀಗಾಗಿ ಚಳಿಗಾಲದಲ್ಲಿ ಹತ್ತಿ ಬಟ್ಟೆಗಳನ್ನು ಧರಿಸದೆ ಇರುವುದು ಸೂಕ್ತ..
7) ಟೋಪಿ, ಸ್ಕಾರ್ಫ್ ಮತ್ತು ಗ್ಲೋವ್ಸ್ ಬಗ್ಗೆ ಹೆಚ್ಚು ಜಾಗೃತಿ : ಚಳಿಗಾಲದಲ್ಲಿ ಧರಿಸುವ ಟೋಪಿ, ಕೈಗವಸುಗಳು ಮತ್ತು ಸ್ಕಾರ್ಫ್ ಅನ್ನು ಬಿಡಿಭಾಗಗಳಾಗಿ ಪರಿಗಣಿಸಿ. ನಾವು ಧರಿಸುವ ಬಟ್ಟೆಯ ಮೇಲೆ ಟೋಪಿ, ಸ್ಕಾರ್ಫ್ ಮತ್ತು ಗ್ಲೋವ್ಸ್ ಧರಿಸುವುದು ಚಳಿಗಾಲದಲ್ಲಿ ಹೆಚ್ಚು ಟ್ರೆಂಡಿಯಾಗಿ ಕಾಣುವಂತೆ ಮಾಡುವುದು..
8) ಬೂಟ್ ಗಳನ್ನು ಆಯ್ಕೆ ಮಾಡಿ : ಚಳಿಗಾಲದಲ್ಲಿ ಸಾಮಾನ್ಯ ರೀತಿಯ ಚಪ್ಪಲಿಗಳನ್ನು ಆದರಿಸಲು ಆಗುವುದಿಲ್ಲ.. ಹೆಚ್ಚು ತೇವಾಂಶ ಹಾಗೂ ಚರ್ಮ ಒಡೆಯುವ ಸ್ಥಿತಿ ಇರುವುದರಿಂದ ಪಾದಗಳ ರಕ್ಷಣೆ ಅತ್ಯಗತ್ಯ.. ಹೀಗಾಗಿ ಬೂಟುಗಳನ್ನು ಚಳಿಗಾಲದಲ್ಲಿ ಧರಿಸುವುದು ಸೂಕ್ತ.
9) ಚಳಿಗಾಲಕ್ಕೆ ತಕ್ಕ ಬಟ್ಟೆಗಳ ಆಯ್ಕೆ ಇರಲಿ :ಮಳೆಗಾಲ ಹಾಗೂ ಬೇಸಿಗೆಕಾಲದಲ್ಲಿ ಧರಿಸುವ ಉಡುಪುಗಳನ್ನು ಚಳಿಗಾಲದಲ್ಲಿ ದರಿಸಲು ಆಗುವುದಿಲ್ಲ.ಹೀಗಾಗಿ ಕೇಬಲ್ ಹೆಣೆದ ಕಾರ್ಡಿಗನ್ಸ್, ಫಾಕ್ಸ್ ಫರ್ ಕೋಟ್ಗಳು, ಶಿಯರ್ಲಿಂಗ್ ಕೋಟ್ಗಳು, ಲೆದರ್ ಪ್ಯಾಂಟ್ಗಳು ಮತ್ತು ಕ್ವಿಲ್ಟೆಡ್ ಪಫರ್ ಕೋಟ್ಗಳನ್ನು ಧರಿಸುವ ಮೂಲಕ ಚಳಿಗಾಲದಲ್ಲಿ ಟ್ರೆಂಡಿಯಾಗಿ ಕಾಣಬಹುದು..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ